Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಅದ್ನಾನ್ ಸಾಮಿ 16 ತಿಂಗಳಿನಲ್ಲಿ 230 ಕೆಜಿಯಿಂದ 75 ಕೆಜಿಗೆ ಇಳಿದಿದ್ದು ಹೇಗೆ ಗೊತ್ತಾ?
ಅದ್ನಾನ್ ಸಾಮಿ ಎಂಬ ಈ ಪ್ರಸಿದ್ಧ ಗಾಯಕನ ಮಾಲ್ಡೀವ್ಸ್ ಫೋಟೋಗಳು ಸಕತ್ ವೈರಲ್ ಆಗುತ್ತಿವೆ, ಅದಕ್ಕೆ ಅವರು ಗುರುತೇ ಸಿಗದಷ್ಟೂ ಬದಲಾಗಿರುವ ರೀತಿ. ಅವರೇ ಸೇರ್ ಮಾಡಿರುವ ಅವರ ಫೋಟೋಗಳನ್ನು ನೋಡಿದವರು ತಮ್ಮನ್ನು ಕಣ್ಣನ್ನು ಉಜ್ಜಿಕೊಂಡು ನಿಜವಾಗಲೂ ಇದು ಅದ್ನಾನ್ ಸಾಮಿಯ ಫೋಟೋನಾ ಅಥವಾ ಏರೆ ಯಾರದಾದರೂ ಫೋಟೋನಾ ಎಂದು ಮತ್ತೊಮ್ಮೆ ಆ ಫೋಟೋದತ್ತ ಕಣ್ಣಾಡಿಸುತ್ತಿದ್ದಾರೆ, ಅಷ್ಟೊಂದು ಬದಲಾವಣೆ ಅವರ ದೇಹದಲ್ಲಾಗಿದೆ. ಒಂದು ಕಾಲದಲ್ಲಿ ಬೊಜ್ಜು ಮೈ ಹೊಂದಿದ್ದ ಅದ್ನಾನ್ ಸಾಮಿ ಈಗ ಸಕತ್ ಹಾಟ್-ಹಾಟ್ ಆಗಿ ಕಾಣಿಸುತ್ತಿದ್ದಾರೆ.
220 ಕೆಜಿಯಿಂದ 65 ಕೆಜಿಗೆ ಇಳಿಯುವುದು, ಅದೂ 50ನೇ ವಯಸ್ಸಿನಲ್ಲಿ 30ರ ಲುಕ್‌ಗೆ ಮರಳುವುದು ಏನೂ ಸಾಮಾನ್ಯವಾದ ಮಾತಲ್ಲ, ಅದಕ್ಕೆ ಎಷ್ಟೇ ಎಫರ್ಟ್ ಮತ್ತು ಡೆಡಿಕೇಷನ್ ಬೇಕಾಗುತ್ತೆ.
ಅವರು ಮಾಲ್ಡೀವ್ಸ್ ಪ್ರವಾಸದಲ್ಲಿರುವ ಫೋಟೋ ಶೇರ್ ಮಾಡಿ ಜಸ್ಟ್ ಚಿಲ್ಲಿಂಗ್ ಅಂತ ಬರೆದಿದ್ದಾರೆ, ಆದರೆ ಅವರ ಶೇರ್ ಮಾಡಿದ ಮರು ಕ್ಷಣ ಅವರ ಫೋಟೋ ನೋಡಿದ ಫ್ಯಾನ್ಸ್ ಸಕತ್ ಥ್ರಿಲ್ಡ್ ಆಗಿದ್ದಾರೆ, ಹೀಗೂ ಬದಲಾಗಬಹುದಾ ಎನ್ನುವಷ್ಟರ ಮಟ್ಟಿಗೆ ಅದ್ನಾನ್ ಸಾಮಿ ಬದಲಾಗಿದ್ದಾರೆ.
ಹೌದು, ಅವರು ಇಷ್ಟು ಬದಲಾಗಿರುವುದು ಬರೀ 16 ತಿಂಗಳಿನಲ್ಲಿ. ಅಲ್ಲದೆ ಇವರು ತೂಕ ಇಳಿಸಲು ಯಾವುದೇ ಶಾರ್ಟ್ ಕಟ್ ಬಳಸಿಲ್ಲ, ಅಂದರೆ ಸರ್ಜರಿ ಅಂತೆಲ್ಲಾ ಮಾಡಿಸಿಲ್ಲ, ಅದ್ನಾನ್ ಸಾಮಿಯ ತೂಕ ಇಳಿಕೆಯ ಸೀಕ್ರೆಟ್ ಏನು ನೋಡೋಣ ಬನ್ನಿ:

ಅದ್ನಾನ್ ಸಾಮಿಯ ತೂಕ ಇಳಿಕೆಯ ರಹಸ್ಯವೇನು?
ಒಂದು ಸಂದರ್ಶನದಲ್ಲಿ ಅವರೇ ಹೇಳಿಕೊಂಡಂತೆ ತೂಕ ಇಳಿಕೆಗೆ ಪ್ರಮುಖ ಕಾರಣ ಶೇ. 80ರಷ್ಟು ಮಾನಸಿಕ ಸಿದ್ಧತೆ ಹಾಗೂ ಶೇ. 20ರಷ್ಟು ದೈಹಿಕ ವ್ಯಾಯಾಮ. ಯಾವುದೇ ಸಕ್ಕರೆ, ಸಿಹಿ ಪದಾರ್ಥ ಸೇವಿಸಲ್ಲ, ಜೊತೆಗೆ ಅಧಿಕ ಪ್ರೊಟೀನ್‌ನ ಆಹಾರಕ್ರಮ ಜೊತೆಗೆ ವ್ಯಾಯಾಮ ಮಾಡುತ್ತೇನೆ ಎಂದಿದ್ದಾರೆ.

ತೂಕ ಇಳಿಸಿಕೊಳ್ಳದಿದ್ದರೆ ಬದುಕಲ್ಲ ಎಂದಿದ್ದರು ವೈದ್ಯರು
ಅದ್ನಾನ್ ಸಾಮಿಗೆ 2005ರಲ್ಲಿ ಲಿಂಪಿಡೆಮಾ ( lymphedema) ಎಂಬ ಸರ್ಜರಿ ಮಾಡಲಾಗಿತ್ತು, ಸರ್ಜರಿ ಬಳಿಕ ಅವರು ಸಂಪೂರ್ಣ ಬೆಡ್ ರೆಸ್ಟ್‌ನಲ್ಲಿ ಇರಬೇಕಾಯ್ತು, ಇದರಿಂದಾಗಿ ಮೈ ತೂಕ ತುಂಬಾನೇ ಹೆಚ್ಚಾಯ್ತು, ಉಸಿರಾಟಕ್ಕೆ ಕೂಡ ತೊಂದರೆ ಉಂಟಾಯ್ತು, ಆಗ ವೈದ್ಯರು ಮೈ ತೂಕ ಕಡಿಮೆ ಮಾಡಿಕೊಳ್ಳಲಿಲ್ಲ ಎಂದಾದರೆ 6 ತಿಂಗಳು ಬದುಕುವುದೂ ಕಷ್ಟ ಎಂದಿದ್ದಾರೆ, ಆಗ ಅದ್ನಾನ್ ಸಾಮಿ ತೂಕ ಇಳಿಕೆಗೆ ಮನಸ್ಸು ಮಾಡಿದರು.

ಅದ್ನಾನ್ ಸಾಮಿ ಡಯಟ್
ಅವರಿಗೆ ಅವರ ಟ್ರೈನರ್ ತುಂಬಾ ಕಡಿಮೆ ಕ್ಯಾಲೋರಿಯ ಆಹಾರ ಸೇವಿಸಲು ಹೇಳಿದ್ದಾರೆ, ಹಾಗಾಗಿ ಇವರು ಅನ್ನ, ಬ್ರೆಡ್, ಜಂಕ್ ಫುಡ್ ಈ ರೀತಿಯ ಆಹಾರಗಳನ್ನು ತಿನ್ನುವುದೇ ಇಲ್ಲ. ಸಲಾಡ್, ಮೀನು, ಬೇಳೆ ಈ ಬಗೆಯ ಆಹಾರ ಸೇವಿಸುತ್ತಾರೆ.
ಇವರು ಬೆಳಗ್ಗೆ ಶುಗರ್‌ಲೆಸ್ ಟೀ ಕುಡಿಯುತ್ತಾರೆ, ಲಂಚ್‌ಗೆ ವೆಜ್ ಸಲಾಡ್ ಹಾಗೂ ಮೀನುಸೇವಿಸುತ್ತಾರೆ. ಡಿನ್ನರ್‌ಗೆ ಬೇಯಿಸಿದ ದಾಲ್ ಹಾಗೂ ರೊಟ್ಟಿ ಸೇವಿಸುತ್ತಾರೆ. ಇವರು ಕೆಲವೊಮ್ಮೆ ಮನೆಯಲ್ಲಿ ಮಾಡಿದ ಪಾಪ್‌ಕಾರ್ನ್ ಹಾಗೂ ಸ್ನ್ಯಾಕ್ಸ್ ಸೇವಿಸುತ್ತಾರೆ.

ವರ್ಕೌಟ್
ಅದ್ನಾನ್ ಸಾಮಿ ಒಬೆಸಿಟಿಯಿಂದ ಬಳಲುತ್ತಿದ್ದಾಗ ಜಿಮ್‌ಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. 40 ಕೆಜಿ ತೂಕ ಕಳೆದುಕೊಂಡ ಬಳಿಕ ಥ್ರೆಡ್‌ಮಿಲ್‌ನಲ್ಲಿ ನಡೆಯಲಾರಂಭಿಸಿದರು, ನಂತರ ಲೈಟ್ ಎಕ್ಸಸೈಜ್ ಮಾಡುತ್ತಿದ್ದರು, ಇವರ ಎಕ್ಸಸೈಜ್‌ನಲ್ಲಿ ಮಸಲ್ ಟೈಟ್ನಿಂಗ್ ಹಾಗೂ ಕಾರ್ಡಿಯೋ ಒತ್ತು.
ಇದೀಗ ಅವರ ತೂಕ 65 ಆಗಿದೆ.



Click it and Unblock the Notifications
