Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಳಿಗಾಲದಲ್ಲಿ ದಿನಾ ಸ್ವಲ್ಪ ನೆಲಗಡಲೆ ತಿಂದ್ರೆ ಇಷ್ಟೊಂದು ಪ್ರಯೋಜನಗಳಿವೆ, ಗೊತ್ತಾ?
ಬಡವರ ಬಾದಾಮಿ ಎಂದು ಕರೆಯಲ್ಪಡುವ ನೆಲಗಡಲೆಯನ್ನು ಸಾಮಾನ್ಯವಾಗಿ ಎಲ್ಲಾ ಕಾಲದಲ್ಲಿ ತಿನ್ನುತ್ತೇವೆ, ಆದರೆ ಈ ಬೆಳೆ ಬರುವುದು ಚಳಿಗಾಲದಲ್ಲಿ. ಚಳಿಗಾಲದಲ್ಲಿ ನಿಮಗೆ ಹಸಿ ನೆಲಗಡಲೆ ಮಾರುಕಟ್ಟೆಯಲ್ಲಿ ಕಾಣ ಸಿಗುತ್ತದೆ. ನಮ್ಮ ಬೆಂಗಳೂರಿನಲ್ಲಿ ಕಡ್ಲೆಕಾಯಿ ಪರಿಷೆ ಕೂಡ ಮಾಡಲಾಗುವುದು. ಈ ನೆಲಗಡಲೆಯನ್ನು ಚಳಿಗಾಲದಲ್ಲಿ ನೀವು ಪ್ರತಿದಿನ ತಿನ್ನಬೇಕು, ಏಕೆ ಗೊತ್ತೇ?

ಚಳಿಗಾಲದಲ್ಲಿ ದಿನಾ ನೆಲಗಡೆಲೆ ತಿನ್ನುವುದರಿಂದ ಈ ಪ್ರಯೋಜನಗಳು ಸಿಗುವುದು:
ತೂಕ ನಿಯಂತ್ರಣ:
ಚಳಿಗಾಲದಲ್ಲಿ ವ್ಯಾಯಾಮ ಮಾಡಲು ಸೋಮಾರಿತನ ತೋರುತ್ತೇವೆ, ಅಲ್ಲದೆ ಸಂಜೆ ಹೊತ್ತಿನಲ್ಲಿ ಟೀ ಹೀರುತ್ತಾ ಕರಿದ ತಿಂಡಿಗಳನ್ನು ತಿನ್ನುವುದೆಂದರೆ ಖುಷಿಯೋ ಖುಷಿ, ಆದರೆ ಇವೆಲ್ಲಾ ನಮ್ಮ ತೂಕ ಹಾಗೂ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ದಿನಾ ವ್ಯಾಯಾಮ ತಪ್ಪದೆ ಮಾಡಿ, ಜೊತೆಗೆ ಸ್ನ್ಯಾಕ್ಸ್ ಆಗಿ ಕರಿದ ತಿಂಡಿ ಬದಲಿಗೆ ಹುರಿದ ಅಥವಾ ಬೇಯಿಸಿದ ನೆಲಗಡಲೆ ಬಳಸಿ. ಅಲ್ಲದೆ ನೆಲಗಡಲೆ ತಿಂದರೆ ಮತ್ತೊಂದು ಪ್ರಯೋಜನವೆಂದರೆ ಬೇಗನೆ ಹಸಿವು ಉಂಟಾಗುವುದಿಲ್ಲ, ಇದರಿಂದ ಅದಿಕ ತಿನ್ನುವುದನ್ನು ಕೂಡ ನಿಯಂತ್ರಿಸಬಹುದು.
ಪೋಷಕಾಂಶಗಳು: ಚಳಿಗಾಲದಲ್ಲಿ ದೊರೆಯುವ ಆಹಾರವಾಗಿರುವುದರಿಂದ ಇದನ್ನು ಚಳಿಗಾಲದಲ್ಲಿ ಹೆಚ್ಚಾಗಿ ಬಳಸುವುದರಿಂದ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.
ನೀವು 100 ಗ್ರಾಂ ನೆಲಗಡಲೆ ತಿಂದರೆ
567 ಕ್ಯಾಲೋರಿ, 49 ಗ್ರಾಂ ಕೊಬ್ಬು, 0 ಕೊಲೆಸ್ಟ್ರಾಲ್, 18mg ಸೋಡಿಯಂ, 705mg ಪೊಟಾಷ್ಯಿಯಂ, 16 ಗ್ರಾಂ, 9 ಗ್ರಾಂ ನಾರಿನಂಶ, 26 ಗ್ರಾಂ ಪ್ರೊಟೀನ್, ವಿಟಮಿನ್ ಸಿ, ಕಬ್ಬಿಣದಂಶ, ವಿಟಮಿನ್ ಬಿ6, ಮೆಗ್ನಿಷ್ಯಿಯಂ ದೊರೆಯುತ್ತದೆ.
ದಿನಾ 100 ಗ್ರಾಂ ನೆಲಗಡಲೆ ತಿಂದರೆ ನಿಮ್ಮ ದೇಹಕ್ಕೆ ದಿನನಿತ್ಯ ಬೇಕಾಗುವ ಪೋಷಕಾಂಶಗಳಲ್ಲಿ ಬಹುಪಾಲು ಪೋಷಕಾಂಶ ಇದರಲ್ಲಿಯೇ ದೊರೆಯುತ್ತದೆ. ಆದ್ದರಿಂದಲೇ ಇದಕ್ಕೆ ಬಡವರ ಬಾದಾಮಿ ಹೇಳುವುದು.
ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು
ಚಳಿಯಲ್ಲಿ ಮೂಳೆಗಳ ಆರೋಗ್ಯಕ್ಕೆ ಸ್ವಲ್ಪ ಕಡಿಮೆಯಾಗುತ್ತದೆ, ಅದರಲ್ಲೂ ಸಂಧಿವಾತದ ಸಮಸ್ಯೆ ಇರುವವರಿಗೆ ಚಳಿಗಾಲದಲ್ಲಿ ನೋವು ಹೆಚ್ಚುವುದು. ಚಳಿಗಾಲದಲ್ಲಿ ಮೂಳೆಗಳ ಆರೋಗ್ಯ ಕಾಪಾಡಿ, ಮೂಳೆಗಳನ್ನು ಬಲಪಡಿಸಲು ಇದು ಸಹಕಾರಿಯಾಗಿದೆ.
ಮಧುಮೇಹಿಗಳಿಗೆ ರುಚಿಕರವಾದ ಸ್ನ್ಯಾಕ್ಸ್
ನೆಲಗಡಲೆಯನ್ನು ಮಧುಮೇಹಿಗಳು ಧೈರ್ಯವಾಗಿ ತಿನ್ನಬಹುದು, ಇದರಿಂದ ಬಾಯಿಗೆ ರುಚಿ ಆರೋಗ್ಯಕ್ಕೂ ಒಳ್ಳೆಯದು. ಮೈ ತೂಕ ನಿಯಂತ್ರಣಕ್ಕೆ, ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣಕ್ಕೆ ನೆಲಗಡಲೆ ಸಹಕಾರಿ.
ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು:
ಚಳಿಗಾಲದಲ್ಲಿ ತ್ವಚೆ ಡ್ರೈಯಾಗುವುದು, ತ್ವಚೆ ಕಾಂತಿ ಕಳೆ ಕುಂದುವುದು ಈ ಬಗೆಯ ಸಮಸ್ಯೆ ಕಂಡು ಬರುತ್ತದೆ, ನೆಲಗಡಲೆಯಲ್ಲಿರುವ ಕೊಬ್ಬಿನಂಶ ತ್ವಚೆಯನ್ನು ಆಂತರಿಕವಾಗಿ ಪೋಷಣೆ ಮಾಡಿ ತ್ವಚೆ ಕಾಂತಿಯನ್ನು ಹೆಚ್ಚಿಸುತ್ತದೆ.
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
ಪ್ರತಿದಿನ ನೆಲಗಡಲೆ ತಿಂದರೆ ಮೆದುಳಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಮೆದುಳು ತುಂಬಾ ಚುರುಕಾಗುವುದು.
ಗಾಲಾ ಸ್ಟೋನ್ ತಡೆಗಟ್ಟುತ್ತದೆ
ಗಾಲಾಸ್ಟೋನ್ ಸಮಸ್ಯೆ ಶೇ. 10ರಷ್ಟು ಜನರಲ್ಲಿದೆ. ದಿನಾ ನೆಲಗಡಲೆ ತಿಂದರೆ ಗಾಲಾಸ್ಟೋನ್ ಅಪಾಯ ಕಡಿಮೆಯಾಗುವುದು. ಇದರ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯುತ್ತಿದೆ ಎಂದು ಹೆಲ್ತ್ ಲೈನ್ ಹೇಳಿದೆ.
ನೆಲಗಡಲೆ ತಿನ್ನುವುದರಿಂದ ಮಕ್ಕಳಿಗೆ ಈ ಪ್ರಯೋಜನಗಳು ದೊರೆಯಲಿದೆ
* ಮಕ್ಕಳ ಬೆಳವಣಿಗೆಗೆ ಸಹಕಾರಿ
ನೆಲಗಡಲೆಯಲ್ಲಿರುವ ಪೋಷಕಾಂಶಗಳು ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ. ಮಕ್ಕಳ ಬೆಳವಣಿಗೆಗೆ ಪೋಷಕಾಂಶವಿರುವ ಆಹಾರ ನೀಡಬೇಕು. ಪೀನಟ್ ಬಟರ್, ಬೇಯಿಸಿದ ನೆಲಗಡಲೆ ಇವುಗಳನ್ನು ನೀಡಿ.
* ಪೋಷಕಾಂಶದ ಕೊರತೆ ತಡೆಗಟ್ಟುತ್ತದೆ
ಮಕ್ಕಳಲ್ಲಿ ಪೋಷಕಾಂಶದ ಕೊರತೆ ಉಂಟಾದರೆ ಅನೇಕ ತೊಂದರೆಗಳು ಉಂಟಾಗುತ್ತದೆ, ಇದರಿಂದ ಮಕ್ಕಳು ಆಗಾಗ ಕಾಯಿಲೆ ಬೀಳುತ್ತಾರೆ ಅಲ್ಲದೆ ಅವರ ಬೆಳವಣಿಗೆ ಕೂಡ ತಡೆಗಟ್ಟುತ್ತದೆ. ಇದರಲ್ಲಿರುವ ನಿಯಾಸಿನ್, ತಾಮ್ರದಂಶ, ಪೋಲೆಟ್, ಮ್ಯಾಂಗನೀಸ್, ಬಯೋಟಿನ್, ರಂಜಕ, ಮೆಗ್ನಿಷ್ಯಿಯಂಶ ಮಕ್ಕಳಲ್ಲಿ ಪೋಷಕಾಂಶದ ಕೊರತೆ ತಡೆಗಟ್ಟುತ್ತದೆ.
* ಮಕ್ಕಳ ಮೆದುಳು ಚುರುಕಾಗಿಸುತ್ತದೆ
* ಮಕ್ಕಳಲ್ಲಿ ಒಬೆಸಿಟಿ ಸಮಸ್ಯೆ ತಡೆಗಟ್ಟಲು ನೆಲಗಡಲೆ ಸಹಕಾರಿಯಾಗಿದೆ.
ಗರ್ಭಿಣಿಯರಿಗೂ ಒಳ್ಳೆಯದು
ನೆಲಗಡಲೆ ಗರ್ಭಿಣಿಯರಿಗೂ ಅತ್ಯುತ್ತಮವಾದ ಸ್ನ್ಯಾಕ್ಸ್ ಆಗಿದೆ. ಇದು ಭ್ರೂಣದಲ್ಲಿರುವ ಮಗುವಿನ ಬೆಳವಣಿಗೆಗೆ ಸಹಕಾರಿ, ದಿನಾ ಸ್ವಲ್ಪ ನೆಲಗಡಲೆಯನ್ನು ಸ್ನ್ಯಾಕ್ಸ್ ಆಗಿ ತೆಗೆದುಕೊಳ್ಳಿ.
ನೆಲಗಡಲೆಯಿಂದ ಅಡ್ಡಪರಿಣಾಮವಿದೆಯೇ?
ಸಾಮಾನ್ಯವಾಗಿ ನೆಲಗಡಲೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ, ಆದರೆ ಕೆಲವೊಮ್ಮೆ ಇದನ್ನು ತಿಂದಾಗ ಕೆಲವರಿಗೆ ಬೇಧಿ ಉಂಟಾಗುವುದು. ನೆಲಗಡಲೆಯನ್ನು ಸರಿಯಾಗಿ ಸಂಗ್ರಹಿಸಿಡದಿದ್ದರೆ ಅದನ್ನು ಬಳಸಿದಾಗ ಫುಡ್ ಪಾಯಿಸನ್ ಆಗಿ ಈ ರೀತಿಯಾಗುವುದು.
ನೆಲಗಡಲೆ ಅಲರ್ಜಿ ಇದ್ದರೆ: ಕೆಲವರಿಗೆ ಒಂದೊಂದು ಆಹಾರ ಆಗಿ ಬರಲ್ಲ, ನೆಲಗಡಲೆ ಅಲರ್ಜಿ ಸಮಸ್ಯೆಯಿದ್ದರೆ ತಿನ್ನಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


