Latest Updates
-
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ
ಸತುವಿನಂಶವಿರುವ ಈ ಆಹಾರಗಳನ್ನು ತಿಂದರೆ ಕಾಯಿಲೆ ಬೀಳುವುದು ಕಡಿಮೆಯಾಗುವುದು
ಮಕ್ಕಳಿಗಾಗಿರಲಿ-ದೊಡ್ಡವರಿಗಾಗಿರಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಕಡೆ ಗಮನ ನೀಡಬೇಕು. ಆಗ ಕಾಯಿಲೆ ಬೀಳುವುದು ತುಂಬಾನೇ ಕಡಿಮೆಯಾಗುವುದು. ನಾವು ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಮ್ಮ ಆಹಾರಶೈಲಿ, ಜೀವನಶೈಲಿ ಬದಲಾಯಿಸಬೇಕಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸು ವ ಪ್ರಮುಖ ಆಹಾರಗಳಲ್ಲಿ ಸತುವಿನಂಶವಿರುವ ಆಹಾರಗಳು ತುಂಬಾನೇ ಪಾತ್ರವಹಿಸುತ್ತದೆ. ನಮ್ಮ ದೇಹಕ್ಕೆ ಸತು ತುಂಬಾನೇ ಅವಶ್ಯಕ, ಅದು ನಮಗೆ ಆಹಾರದ ಮೂಲಕ ದೊರೆಯುತ್ತದೆ.
ಆರೋಗ್ಯವರ್ಧನೆಗೆ ದಿನದಲ್ಲಿ ಯಾರು ಎಷ್ಟು ಗ್ರಾಂ ಸತು ಸೇವಿಸಬೇಕು ಎಂದು ನೋಡೋಣ:

ಯಾರಿಗೆ ಎಷ್ಟು ಸತು ಬೇಕು?
0-6 ತಿಂಗಳ ಮಗುವಿಗೆ : 2 mg
7-12 ತಿಂಗಳ ಮಗುವಿಗೆ: 3 mg
1-3 ವರ್ಷದ ಮಕ್ಕಳಿಗೆ :3 mg
4-8 ವರ್ಷದ ಮಕ್ಕಳಿಗೆ: 5mg
9-13 ವರ್ಷದ ಮಕ್ಕಳಿಗೆ: 8 mg
18-18 ವರ್ಷದವರಿಗೆ: 11 mg
19 ವರ್ಷ ಮೇಲ್ಪಟ್ಟವರಿಗೆ: 11mg
ಗರ್ಭಿಣಿಯರಿಗೆ: 13mg

ಸಸ್ಯಾಹಾರಿಗಳಿಗೆ ಸತುವಿನಂಶವಿರುವ ಆಹಾರಗಳು
* ಬಟಾಣಿ (ಒಂದು ಕಪ್‌ನಲ್ಲಿ 2.3 ಮಿಗ್ರಾಂ ಸತುವಿನಂಶ ಇದೆ)
* ಧಾನ್ಯಗಳು (ಒಂದು ಕಪ್ ಧಾನ್ಯದಲ್ಲಿ 4.7ಮಿಗ್ರಾಂ ಸತುವಿನಂಶ ಇದೆ)
* ಸಿಹಿಕುಂಬಳಕಾಯಿ ಬೀಜ (ಒಂದು ಮುಷ್ಠಿಯಷ್ಟು ಸಿಹಿ ಕುಂಬಳಕಾಯಿ ಬೀಜದಲ್ಲಿ 2.2 ಮಿಗ್ರಾಂ ಸತು ಹಾಗೂ 8.5 ಮಿಗ್ರಾಂ ಪ್ರೊಟೀನ್ ಇದೆ)
* ಕಲ್ಲಂಗಡಿ ಬೀಜ
ನೀವು ಒಂದು ಮುಷ್ಠಿ ಕಲ್ಲಂಗಡಿ ಬೀಜ ತಿಂದರೆ 4 ಮಿಗ್ರಾಂ ಸತುವಿನಂಶ ದೊರೆಯುತ್ತದೆ.
ಬೀನ್ಸ್ (ಒಂದು ಕಪ್ ಬೇಯಿಸಿದ ಬೀನ್ಸ್‌ನಲ್ಲಿ 2 ಮಿಗ್ರಾಂ ಸತು ಇದೆ)
* ಓಟ್‌ಮೀಲ್ (ಓಟ್‌ಮೀಲ್‌ನಲ್ಲಿ ಸತು, ನಾರಿನಂಶ, ಫೋಲೆಟ್,ವಿಟಮಿನ್ ಬಿ6, ಬೀಟಾ ಅಮಶವಿದೆ)
* ಗೋಡಂಬಿ (ಗೋಡಂಬಿ ತಿಂದರೆ 1.5 ಮಿಗ್ರಾಂ ಸತುವಿನಂಶ ದೊರೆಯುತ್ತದೆ)
* ಮೊಸರು: ಒಂದು ಕಪ್ ಮೊಸರು ಸೇವಿಸಿದರೆ 1.5 ಮಿಗ್ರಾಂ ಸತುವಿನಂಶ ದೊರೆಯುತ್ತದೆ
* ಡಾರ್ಕ್ ಚಾಕೋಲೆಟ್:100 ಗ್ರಾಂ ಡಾರ್ಕ್ ಚಾಕೋಲೆಟ್‌ನಿಂದ 3.3 ಮಿಗ್ರಾಂ ಸತುವಿನಂಶ ದೊರೆಯುತ್ತದೆ.
* ಕೆಂಪಕ್ಕಿ: ಪ್ರತಿ 100 ಗ್ರಾಂಗೆ 1 ಮಿಗ್ರಾಂ ಸತುವಿನಂಶ ದೊರೆಯುತ್ತದೆ.
* ಪಾಲಾಕ್ : ಒಂದು ಕಪ್ ಪಾಲಾಕ್‌ನಿಂದ ನಿಮಗೆ 7 ಮಿಗ್ರಾಂ ಸತುವಿನಂಶ ದೊರೆಯುತ್ತದೆ.
* ಗೋಧಿ: ಗೋಧಿಯಿಂದ ತಯಾರಿಸಿದ ಆಹಾರ ಸೇವನೆಯಿಂದ ಸತುವಿನಂಶ ದೊರೆಯುತ್ತದೆ.
* ಉದ್ದಿನ ಬೇಳೆ: ಪ್ರತಿ 100 ಗ್ರಾಂಗೆ 2.6 ಮಿಗ್ರಾಂ ಸತುವಿನಂಶ ದೊರೆಯುತ್ತದೆ.
* ಬೆಣ್ಣೆ ಹಣ್ಣು
* ಬಾದಾಮಿ, ಟೋಫು ಈ ಆಹಾರಗಳಲ್ಲಿ ನಿಮಗೆ ಸತುವಿನಂಶ ದೊರೆಯುತ್ತದೆ
* ಅಣಬೆ ಸೇವನೆಯಿಂದ ಕೂಡ ಸತು ದೊರೆಯುತ್ತದೆ.

ಮಾಂಸಾಹಾರಗಳಲ್ಲಿ ಸತುವಿನಂಶ
* ಕುರಿ: 100 ಗ್ರಾಂ ಕುರಿ ಮಾಂಸದಲ್ಲಿ 5 ಮಿಗ್ರಾಂ ಸತುವಿನಂಶವಿದೆ
* ಪೋರ್ಕ್: 100ಗ್ರಾಂ ಪೋರ್ಕ್‌ನಲ್ಲಿ 14.2 ಮಿಗ್ರಾಂ ಸತುವಿನಂಶವಿದೆ.
* ಟರ್ಕಿ: 100 ಗ್ರಾಂ ಟರ್ಕಿ ಮಾಂಸದಲ್ಲು 3.09 ಮಿಗ್ರಾಂ ಸತುವಿನಂಶವಿದೆ
* ಮೃದ್ವಂಗಿಗಳು: 100 ಗ್ರಾಂನಲ್ಲಿ 16ಮಿಗ್ರಾಂ ಸತುವಿನಂಶವಿದೆ.
* ಏಡಿಗಳು: 100 ಗ್ರಾಂ ಏಡಿ ಮಾಂಸದಲ್ಲಿ 4.7 ಮಿಗ್ರಾಂ ಸತುವಿನಂಶವಿದೆ
* ಸಾಲಮೋನ್: 100ಗ್ರಾಂನಲ್ಲಿ 0.64 ಮಿಗ್ರಾಂ ಸತುವಿನಂಶವಿದೆ.
* ಸೀಗಡಿ: 100 ಗ್ರಾಂನಲ್ಲಿ 1.34 ಮಿಗ್ರಾಂ ಸತುವಿನಂಶ ದೊರೆಯುತ್ತದೆ.



Click it and Unblock the Notifications