Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ತೆಳ್ಳಗಾದ ಖುಷ್ಬೂ: ತಮ್ಮ ತೂಕ ಇಳಿಕೆಯ ರಹಸ್ಯ ತಿಳಿಸಿದ ನಟಿ
ಚಿತ್ರ ನಟಿ ಖುಷ್ಬೂ ಗೊತ್ತಿಲ್ಲದವರು ತುಂಬಾ ವಿರಳ, ದಕ್ಷಿಣ ಭಾರತದ ಖ್ಯಾತ ತಾರೆಯಾಗಿರುವ ಖುಷ್ಬೂ ಸ್ಯಾಂಡಲ್‌ವುಡ್‌ನ ಶಾಂತಿ ಕ್ರಾಂತಿ, ಜೀವನದಿ, ಹೃದಯ ಗೀತೆ, ರಣಧೀರ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಮೊದಲು ಬಳಕುವ ಬಳ್ಳಿಯಂತಿದ್ದ ಖುಷ್ಬೂ ಅವರು ನಂತರ ದಪ್ಪಗಾದರು. ಆದರೆ ಇತ್ತೀಚೆಗೆ ಖುಷ್ಬೂ ಅವರು ತಮ್ಮ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ಫೋಟೋಗಳನ್ನು ನೋಡಿದವರು ಅಚ್ಚರಿ ಪಡುವಷ್ಟು ಬದಲಾಗಿದ್ದಾರೆ. ತಮ್ಮ ಮೈ ಬೊಜ್ಜನ್ನು ಕರಗಿಸಿಕೊಂಡು ಇನ್ನೂ 20 ವರ್ಷ ಚಿಕ್ಕವರಂತೆ ಕಾಣಿಸುತ್ತಿದ್ದಾರೆ. ಗುಂಡು-ಗುಂಡಗೆ ಇದ್ದ ಖುಷ್ಬೂ ತೆಳ್ಳಗಾಗಿ ಕೆಲವರಿಗೆ ಸ್ಪೂರ್ತಿಯಾಗಿದ್ದಾರೆ.
ಖುಷ್ಬೂ ಕೆಲವು ತಿಂಗಳುಗಳ ಹಿಂದೆಯೇ ಒಂದು ಫೋಟೋ ಹಾಕಿ ನಾನು ತೆಳ್ಳಗಾಗಿರುವುದಕ್ಕೆ ಲಾಕ್‌ಡೌನ್ ಕಾರಣ ಎಂದು ಹೇಳಿದ್ದರು. ಲಾಕ್‌ಡೌನ್ ಸಮಯದಲ್ಲಿ ಮನೆ ಕೆಲಸಕ್ಕೆ ಸಹಾಯಕರು ಯಾರೂ ಇರಲಿಲ್ಲ , ಎಲ್ಲಾ ಕೆಲಸ ನಾನೊಬ್ಬಳೇ ಮಾಡಬೇಕಾಯಿತು, ಹಾಗಾಗಿ ತೆಳ್ಳಗಾದೆ ಎಂದು ಹೇಳಿದ್ದರು. ಇತ್ತೀಚೆಗೆ ಮತ್ತಷ್ಟು ತೆಳ್ಳಗಾಗಿರುವ ಫೋಟೋ ಹಾಕಿ, ನಾವು ತೂಕ ಕಳೆದುಕೊಂಡಿದ್ದರ ಹಿಂದಿನ 3 ಸೀಕ್ರೆಟ್ ಹೇಳಿದ್ದಾರೆ. ಆ ಸೀಕ್ರೆಟ್‌ಗಳೇನು ನೋಡೋಣ ಬನ್ನಿ:

1. ಮಿತಿಯಲ್ಲಿ ಆಹಾರ ಸೇವನೆ
ಖಷ್ಬೂ ತುಂಬಾನೇ ಫುಡ್ಡೀ.. ಅವರು ತಮ್ಮ ನೆಚ್ಚಿನ ಭಕ್ಷ್ಯಗಳನ್ನು ಸೇವಿಸುವಾಗ ತೂಕದ ಚಿಂತನೇ ಮಾಡುತ್ತಿರಲಿಲ್ಲ, ಆದರೆ 'ಇತ್ತೀಚಿನ ದಿನಗಳಲ್ಲಿ ನಾನು ಆಹಾರವನ್ನು ಮಿತಿಯಲ್ಲಿ ಸೇವಿಸುತ್ತಿದ್ದೇನೆ' ಎಂದು ಹೇಳಿದ್ದಾರೆ. ಆರೋಗ್ಯಕರ ಆಹಾರವನ್ನು ಮಿತಿಯಲ್ಲಿ ಸೇವಿಸುತ್ತಿರುವ ಮೈ ತೂಕ ಇಳಿಕೆಗೆ ಒಂದು ಕಾರಣವಾಗಿದೆ.

2. ಮೈ ಬಗ್ಗಿಸಿ ಕೆಲಸ ಮಾಡಿದ್ದು
ಲಾಕ್‌ಡೌನ್ ಸಮಯದಲ್ಲಿ ಕೆಲಸಕ್ಕೆ ಹೊರಗಿನಿಂದ ಯಾರೂ ಮನೆಗೆ ಬರುತ್ತಿರಲಿಲ್ಲ, ಮನೆ ಕ್ಲೀನಿಂಗ್, ಅಡುಗೆ ಎಲ್ಲವೂ ನಾನೇ ಮಾಡಬೇಕಾಗಿತ್ತು, ಯಾರೂ ಸಹಾಯಕ್ಕೆ ಇರಲಿಲ್ಲ, ಮನೆಯ ಟಾಯ್ಲೆಟ್ ಕೂಡ ತೊಳೆಯುತ್ತಿದ್ದೆ ಹಾಗಾಗಿ ಮೈ ಮೈ ತೂಕ ಕಡಿಮೆಯಾಗಲು ಸಹಾಯವಾಯ್ತು ಎಂದಿದ್ದಾರೆ.

3. ಯೋಗ
ಖುಷ್ಬೂ ಅವರು ಮೈ ತೂಕ ಕಡಿಮೆಯಾಗಲು ಪ್ರತಿನಿತ್ಯ ಯೋಗ ಅಭ್ಯಾಸ ಮಾಡುತ್ತಿದ್ದರು, ಫುಶ್ ಅಪ್, ದಂಡಾಸನ ಇವೆಲ್ಲಾ ಅವರ ಮೈ ಬೊಜ್ಜು ಕರಗಿಸುವಲ್ಲಿ ಸಹಕಾರಿಯಾಗಿದೆ.
ಖುಷ್ಬೂ ತೂಕ ಇಳಿಕೆಯ ಹಿಂದಿರುವ ಪ್ರಮುಖ ಸೀಕ್ರೇಟ್ ಮಿತ ಆಹಾರ, ಮೈ ಬಗ್ಗಿಸಿ ಕೆಲಸ ಮಾಡಿದ್ದು ಹಾಗೂ ಯೋಗಾಭ್ಯಾಸ.

4. ಖುಷ್ಬೂ ಅವರ ಮಗಳು ತೆಳ್ಳಗಾಗುವ ಮೂಲಕ ಗಮನ ಸೆಳೆದಿದ್ದಾರೆ
ಖುಷ್ಬೂ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಇತ್ತೀಚೆಗೆ ಅವರ ಮಗಳು ಕೂ ತುಂಬಾ ತೆಳ್ಳಗಾಗುವ ಮೂಲಕ ಗಮನ ಸೆಳೆದಿದ್ದಾರೆ.
ತಾಯಿ, ಮಗಳು ಇಬ್ಬರೂ ಬೊಜ್ಜು ಮೈ ಕರಗಿಸಿ ತೆಳ್ಳಗಾಗಿದ್ದಾರೆ, ಖುಷ್ಬೂ ಅವರು hardwork finally shows results ಎಂದು ತುಂಬಾನೇ ಖುಷಿಯಾಗಿದ್ದಾರೆ.



Click it and Unblock the Notifications
