For Quick Alerts
ALLOW NOTIFICATIONS  
For Daily Alerts

ರಾಸಾಯನಿಕ ಹಾಕಿದ ಕಲ್ಲಂಗಡಿ ಹಣ್ಣು ಕಂಡು ಹಿಡಿಯುವುದು ಹೇಗೆ?

|

ಕಲ್ಲಂಗಡಿ ಹಣ್ಣು, ಈ ಬೇಸಿಗೆಯಲ್ಲಿ ಅತೀ ಹೆಚ್ಚಾಗಿ ಇದು ದೊರೆಯುತ್ತದೆ. ಬಿಸಿಲಿನಲ್ಲಿ ಬಾಯಾರಿಕೆಯಾದಾಗ ಇದನ್ನು ನೋಡಿದ ತಕ್ಷಣ ಸವಿಯಬೇಕೆಂದು ಅನಿಸಿಯೇ ಅನಿಸುತ್ತದೆ. ಇನ್ನು ಇದರಲ್ಲಿರುವ ಆರೋಗ್ಯಕರ ಗುಣಗಳು ಒಂದಾ.. ಎರಡು.. ಮೆಗ್ನಿಷ್ಯಿಯಂ ಅಧಿಕವಿರುವ ಈ ಹಣ್ಣನ್ನು ಮಧುಮೇಬಹಿಗಳು ಕೂಡ ಸವಿಯಬಹುದಾಗಿದೆ.

How To Find Out Injected Watermelon With Chemicals | Boldskykannada
How To Find Out Injected Water melon

ಇದನ್ನು ತಿನ್ನುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬಹುದು, ಇದು ಹೃದಯದ ಆರೋಗ್ಯಕ್ಕೆ ಒಳ್ಲೆಯದು, ಸ್ನಾಯುಗಳಲ್ಲಿ ಊತ ಕಡಿಮೆ ಮಾಡುತ್ತದೆ, ಕ್ಯಾನ್ಸರ್ ತಡೆಗಟ್ಟುತ್ತದೆ, ಸಂತಾನೋತ್ಪತ್ತಿ ಸಾಮಾರ್ಥ್ಯ ಹೆಚ್ಚಿಸುತ್ತದೆ ಹೀಗೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ಇಷ್ಟೆಲ್ಲಾ ಪ್ರಯೋಜನವಿದೆ ಎಂದು ಕೊಂಡು ತಿನ್ನುವಾಗ ಆ ಹಣ್ಣು ಆ ಎಲ್ಲಾ ಗುಣಗಳನ್ನು ಹೊಂದಿದೆಯೇ? ಇಲ್ಲಾ ವಿಷಕಾರಿಯಾಗಿದೆಯೇ ಎಂದು ಪರೀಕ್ಷಿಸುವುದು ಒಳ್ಳೆಯದು. ಅದ್ಹೇಗೆ ಹಣ್ಣು ವಿಷಕಾರಿ ಅಂತೀರಾ? ಹಣ್ಣೇನು ನೈಸರ್ಗಿಕವಾಗಿ ಹಾನಿಕಾರಕವಾಗಿರುವುದಿಲ್ಲ, ಆದರೆ ಕೆಲವರ ದುರಾಸೆಯ ಫಲದಿಂದ ಅಂಥ ಪ್ರಯೋಜನಕಾರಿ ಹಣ್ಣನ್ನು ವಿಷಕಾರಿ ಮಾಡಿರುತ್ತಾರೆ.

ಕಲ್ಲಂಗಡಿ ಬೇಗನೆ ದೊಡ್ಡದಾಗಲಿ, ಅದರೊಳಗೆ ತಿರುಳು ಬಲಿತಿರದಿದ್ದರೂ ಕೆಂಪಗೆ ಕಾಣಲಿ ಎಂಬ ದುರುದ್ದೇಶದಿಂದ ಅದಕ್ಕೆ ಇಂಜೆಕ್ಷನ್‌ ನೀಡಿರುತ್ತಾರೆ. ಅಂಥ ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲಿ ನಾವು ಕಲ್ಲಂಗಡಿ ಹಣ್ಣನ್ನು ಕೊಳ್ಳುವಾಗ ಹೇಗೆ ಕೊಳ್ಳಬೇಕು, ತಂದ ಹಣ್ಣಿನಲ್ಲಿ ಏನು ವ್ಯತ್ಯಾಸ ಕಂಡು ಬಂದರೆ ಬಳಸಬಾರದು ಎಂಬ ಮಾಹಿತಿ ನೀಡಿದ್ದೇವೆ ನೋಡಿ.

ಕಲ್ಲಂಗಡಿ ನೀಡಲಾಗುತ್ತಿದೆ ಕೆಂಪು ಬಣ್ಣದ ಇಂಜೆಕ್ಷನ್‌

ಕಲ್ಲಂಗಡಿ ನೀಡಲಾಗುತ್ತಿದೆ ಕೆಂಪು ಬಣ್ಣದ ಇಂಜೆಕ್ಷನ್‌

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಿಗುವ ಕಲ್ಲಂಗಡಿ ಹಣ್ಣುಗಳು ಈ ಮೊದಲೇ ನಾವು ಹೇಳಿದಂತೆ ಎಲ್ಲವೂ ಆರೋಗ್ಯಕರ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ನೋಡಲು ತುಂಬಾ ಕೆಂಪಗೆ ಕಾಣುತ್ತಿರುತ್ತದೆ, ಅದನ್ನು ನೋಡುತ್ತಿದ್ದಂತೆ ತಿನ್ನಬೇಕು ಅನಿಸುತ್ತದೆ. ತಿಂದು ನೋಡಿದರೆ ಕಲ್ಲಂಗಡಿ ಹಣ್ಣಿನ ಸಿಹಿಯೇ ಇರುವುದಿಲ್ಲ. ಇದಕ್ಕೆ ಪ್ರಮಾಣ ಕಾರಣ ಅದಕ್ಕೆ ಕೃತಕ ಬಣ್ಣವನ್ನು ಸೇರಿಸಿರುವುದು.

ಕಲ್ಲಂಗಡಿ ಕೆಂಪು ಬಣ್ಣ ಬರುವಂತೆ ರಾಸಾಯನಿಕಗಳನ್ನು ಚುಚ್ಚಿರುತ್ತಾರೆ. ಆದ್ದರಿಂದಾಗಿ ಅದು ತುಂವಾ ಕೆಂಪಗೆ ಕಾಣುತ್ತದೆ. ಅವುಗಳು ಆರೋಗ್ಯಕ್ಕೆ ಹಾನಿಕಾರಕ ಎನ್ನುವುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ.

ಕಲ್ಲಂಗಡಿ ಬೇಗ ಹಣ್ಣಾಗುವಂತೆ ರಾಸಾಯನಿಕ ಬಳಸಲಾಗುವುದು

ಕಲ್ಲಂಗಡಿ ಬೇಗ ಹಣ್ಣಾಗುವಂತೆ ರಾಸಾಯನಿಕ ಬಳಸಲಾಗುವುದು

ಬಹುತೇಕ ಹಣ್ಣುಗಳು ಬೇಗನೆ ಹಣ್ಣಾಗಲು ರಾಸಾಯನಿಕಗಳನ್ನು ಬಳಸುತ್ತಿದ್ದಾರೆ. ಇದಕ್ಕೆ ಕಾರ್ಬೈಡ್ ಹಾಕಿದಾಗ ಈಥೆನಾಲ್ ಗ್ಯಾಸ್ ಉತ್ಪತ್ತಿಯಾಗುವುದು, ಇದರಿಂದ ಹಣ್ಣುಗಳು ಬೇಗನೆ ಹಣ್ಣಾಗುವುದು ಎಂದು FDA ಮೂಲಗಳು ಹೇಳುತ್ತವೆ.

ಆಹಾರ ತಜ್ಜರ ಪ್ರಕಾರ ಆಹಾರಗಳು ಬೇಗನೆ ಹಣ್ಣಾಗಲು, ಬಣ್ಣದಿಂದ ಕೂಡಿರಲು ಸುಡನ್ ರೆಡ್, ಮೆಥೆನಾಲ್ ಯೆಲ್ಲೋ, ಪಾದರಸ ಕ್ರೊಮೇಟ್ ಇವುಗಳನ್ನು ಬಳಸುತ್ತಾರೆ.

ದೇಹದ ಮೇಲೆ ಬೀರುವ ಅಡ್ಡ ಪರಿಣಾಮಗಳು

ದೇಹದ ಮೇಲೆ ಬೀರುವ ಅಡ್ಡ ಪರಿಣಾಮಗಳು

  • ಕಾರ್ಬೈಡ್: ಕಾರ್ಬೈಡ್ ಹಾಕಿ ಹಣ್ಣು ಮಾಡಿರುವ ಹಣ್ಣುಗಳನ್ನು ತಿನ್ನುವುದರಿಂದ ಲಿವರ್ ಹಾಗೂ ಕಿಡ್ನಿ ಆರೋಗ್ಯ ಹಾಳಾಗುವುದು.
  • ಮೆಥೆನಾಲ್ ಯೆಲ್ಲೋ ಕೂಡ ಲಿವರ್, ಕಿಡ್ನಿ ಆರೋಗ್ಯ ಹಾಳು ಮಾಡುವುದು.
  • ಕ್ರೊಮೇಟ್: ಕ್ರೊಮೇಟ್‌ನಿಂದಾಗಿ ಹೊಟ್ಟೆ ಸಮಸ್ಯೆ, ರಕ್ತ ಹೀನತೆ, ಮೆದುಳಿಗೆ ಹಾನಿ, ಸಂತಾನೋತ್ಪತ್ತಿ ಸಾಮಾರ್ಥ್ಯ ಕುಗ್ಗುವುದು ಮುಂತಾದ ಸಮಸ್ಯೆ ಕಂಡು ಬರುವುದು.
  • ರಾಸಾಯನಿಕ ಬಳಸಿದ ಹಣ್ಣುಗಳಿಂದ ಕ್ಯಾನ್ಸರ್ ರೋಗ ಬರುವುದು.
  • ಹಣ್ಣುಗಳಲ್ಲಿ ರಾಸಾಯನಿಕ ಬಳಸಿದ್ದಾರೆ ಎಂದು ಪತ್ತೆ ಹೇಗೆ?

    ಹಣ್ಣುಗಳಲ್ಲಿ ರಾಸಾಯನಿಕ ಬಳಸಿದ್ದಾರೆ ಎಂದು ಪತ್ತೆ ಹೇಗೆ?

    ಸೂಜಿ ಚುಚ್ಚಿದಂಥ ರಂಧ್ರ

    • ಸಾಮಾನ್ಯವಾಗಿ ಹಣ್ಣುಗಳನ್ನು ನೋಡುವಾಗ ಗೊತ್ತಾಗುವುದಿಲ್ಲ. ಆದರೆ ಸೂಕ್ಷ್ಮವಾಗಿ ನೋಡಿದರೆ ಗೊತ್ತಾಗುತ್ತದೆ. ಕಲ್ಲಂಗಡಿ ಹಣ್ಣಿನ ಮೇಲೆ ಸೂಜಿಯಿಂದ ಚುಚ್ಚಿದ ರಂಧ್ರವಿರುತ್ತದೆ. ಅದನ್ನು ನೀವು ಮಾರಾಟಗಾರರಲ್ಲಿ ಕೇಳಿದರೆ ಅವರು ಒಪ್ಪಿಕೊಳ್ಳುವುದಿಲ್ಲ.ಅಂಥ ಹಣ್ಣುಗಳು ಕಂಡರೆ ಕೊಳ್ಳಬೇಡಿ.
    • ಹಣ್ಣುಗಳ ಮೇಲೆ ಬಿಳಿ ಹುಡಿ

      ಹಣ್ಣುಗಳ ಮೇಲೆ ಬಿಳಿ ಹುಡಿ

      ಇನ್ನು ಕಲ್ಲಂಗಡಿ ಹಣ್ಣುಗಳ ಮೇಲೆ ಬಿಳಿ ರೀತಿಯ ಹುಡಿಗಳು ಕಂಡು ಬಂದರೆ ಅಂಥ ಹಣ್ಣುಗಳ ಮೇಲೆ ರಾಸಾಯನಿಕ ಸಿಂಪಡಿಸಿದ್ದಾರೆ ಎಂದು ಹೇಳಬಹುದು. ಅವುಗಳನ್ನು ಕೈಯಿಂದ ಮುಟ್ಟಿದಾಗ ಆ ಹುಡಿ ನಿಮ್ಮ ಕೈಗೆ ಅಂಟುತ್ತದೆ, ಅಂಥ ಹಣ್ಣುಗಳನ್ನು ಕೊಳ್ಳಬೇಡಿ.

      ಕತ್ತರಿಸಿ ನೋಡಿ

      ಕತ್ತರಿಸಿ ನೋಡಿ

      ಹಣ್ಣುಗಳನ್ನು ಕತ್ತರಿಸಿದಾಗ ಕೆಲವೊಮ್ಮೆ ಅದು ಒಡೆದು ಹೀದ ರೀತಿಯಲ್ಲಿ ಒಳಭಾಗದಲ್ಲಿ ಬಿರುಕು ಬಿಟ್ಟಿರುತ್ತದೆ. ಆದರೆ ನಾವು ಅದರ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಇಂಥ ಹಣ್ಣುಗಳಿಗೆ ಇಂಜೆಕ್ಷನ್‌ ನೀಡಿ ಬೇಗನೆ ಬೆಲೆಯುವಂತೆ ಮಾಡಲಾಗಿರುತ್ತದೆ. ಆದ್ದರಿಂದ ಆ ರೀತಿ ಉಂಟಾಗಿರುತ್ತದೆ. ಕತ್ತರಿಸಿದಾಗ ಒಡೆದ ರೀತಿಯಲ್ಲಿ ಕಂಡು ಬಂದರೆ ಅವುಗಳನ್ನು ತಿನ್ನಬೇಡಿ.

      ಬೀಜ ನೋಡಿ ಹೇಳಬಹುದು

      ಬೀಜ ನೋಡಿ ಹೇಳಬಹುದು

      ಕಲ್ಲಂಗಡಿ ಹಣ್ಣುಗಳು ಬಲಿತಿದಿದ್ದರೆ ಅದರ ಬೀಜಗಳು ಕೂಡ ಕಪ್ಪು ಬಣ್ಣಕ್ಕೆ ತಿರುಗಿರುತ್ತವೆ. ಆದರೆ ಬೀಜಗಳು ತುಂಬಾ ಎಳೆಯದ್ದಾಗಿದ್ದು ಹಣ್ಣು ಮಾತ್ರ ಕೆಂಪು ಬಣ್ಣಕ್ಕೆ ತಿರುಗಿದ್ದರೆ ಅವುಗಳಿಗೆ ಇಂಜೆಕ್ಷನ್‌ ನೀಡಿ ಕೆಂಪು ಬಣ್ಣಕ್ಕೆ ಮಾಡಲಾಗಿದೆ.

      ವಿಷಮುಕ್ತ ಕಲ್ಲಂಗಡಿ ಹಣ್ಣುಗಳು ಹೇಗಿರುತ್ತವೆ?

      ವಿಷಮುಕ್ತ ಕಲ್ಲಂಗಡಿ ಹಣ್ಣುಗಳು ಹೇಗಿರುತ್ತವೆ?

      ಇವುಗಳ ಮೇಲೆ ಯಾವುದೇ ಇಂಜೆಕ್ಷನ್ ಮಾರ್ಕ್ ಇರುವುದಿಲ್ಲ, ಆಕಾರದಲ್ಲಿ ಸ್ವಲ್ಪ ವಕ್ರವಾಗಿದ್ದರೂ ಒಳಗಡೆ ಕತ್ತರಿಸಿದಾಗ ಬೀಜಗಳು ಕಪ್ಪು ಬಣ್ಣದಲ್ಲಿರುತ್ತವೆ, ಕೆಂಪು ಬಣ್ಣದಲ್ಲಿರುತ್ತವೆ, ಸಿಹಿಯನ್ನೂ ಹೊಂದಿರುತ್ತವೆ. ಕೆಲವೊಂದು ಹಣ್ಣುಗಳು ಸಿಹಿ ಸ್ವಲ್ಪ ಕಮ್ಮಿಯಿರುತ್ತವೆ.

English summary

How To Find Out Injected Water melon

When we buy water melon from the market we must careful while selecting watermelon, some are may be contaminated poision. Yes Some vendor or farmer may put chemical to grow fast and get good colors, these are very much dangerous to health.Here we have given tips to how to find out injected water melon, Read on.
X
Desktop Bottom Promotion