Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕಲ್ಲಂಗಡಿ ತುಂಬಾ ಕೆಂಪಗೆ ಅಥವಾ ಈ ರೀತಿ ಇದೆಯೇ?ತಿಂದ್ರೆ ಕ್ಯಾನ್ಸರ್ ಬರುತ್ತೆ ಹುಷಾರ್!
ಇನ್ನೇನು ಬೇಸಿಗೆ ಕಾಲ ಶುರುವಾಗುವುದು, ಈಗಲೇ ಕೆಲವು ಕಡೆ ಸೆಕೆ ಶುರುವಾಗಿದೆ. ಬಿಸಿಲಿನ ದಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ತುಂಬಾನೇ ಬೇಡಿಕೆ, ಕೆಂಪನೆ ನೀರು ತುಂಬಿರುವ ಆ ಹಣ್ಣು ಇತರ ಹಣ್ಣುಗಳಿಗಿಂತ ಬೇಗನೆ ಸೆಳೆಯುವುದು. ಒಂದು ಪೀಸ್ ಕಲ್ಲಂಗಡಿ ಹಣ್ಣು ತಿಂದರೆ ಸಾಕು ಬಾಯಾರಿಕೆ ನೀಗುವುದು, ಹೊಟ್ಟೆಯೂ ತುಂಬುವುದು. ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ನಾವು ತಂದು ತಿನ್ನುವ ಎಲ್ಲಾ ಕಲ್ಲಂಗಡಿ ಹಣ್ಣುಗಳೆಲ್ಲಾ ಆರೋಗ್ಯಕ್ಕೆ ಒಳ್ಳೆಯದಾ? ಖಂಡಿತ ಅಲ್ಲ...
ನಾವು ಆರೋಗ್ಯಕ್ಕೆ ಒಳ್ಳೆಯದು ಎಂದು ತಂದು ತಿನ್ನುವ ಆ ಹಣ್ಣಿನಿಂದಲೇ ಕ್ಯಾನ್ಸರ್ ಮತ್ತಿತರ ರೋಗ ಬರಬಹುದು. ಹೌದು ಈಗ ಮಾರುಕಟ್ಟೆಗೆ ಬರುತ್ತಿರುವ ಎಲ್ಲಾ ಹಣ್ಣುಗಳು ನೈಸರ್ಗಿಕವಾಗಿ ಹಣ್ಣಾಗುತ್ತಿಲ್ಲ, ಕೆಲವೊಂದು ಹಣ್ಣುಗಳನ್ನು ರಾಸಾಯನಿಕ ಹಾಕಿ ಹಣ್ಣು ಮಾಡಲಾಗುವುದು. ಅವುಗಳನ್ನು ತಿಂದರೆ ರೋಗ ಬರುವುದು.
ನಾವಿಲ್ಲಿ ಕೆಮಿಕಲ್ ಹಾಕಿ ಹಣ್ಣು ಮಾಡಿರುವ ಕಲ್ಲಂಗಡಿ ಹಣ್ಣನ್ನು ಕಂಡು ಹಿಡಿಯುವುದು ಹೇಗೆ, ಹಣ್ಣು ರೀತಿ ಇದ್ದರೆ ತಿನ್ನಬಾರದು ಎಂಬ ಮಾಹಿತಿ ನೀಡಿದ್ದೇವೆ, ಅದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ:

ಕೆಮಿಕಲ್ ಬಳಸಿ ಹಣ್ಣು ಮಾಡಿದ ಕಲ್ಲಂಗಡಿ ತುಂಬಾ ಅಪಾಯಕಾರಿ
ಕಲ್ಲಂಗಡಿ ಹಣ್ಣು ಕೆಂಪಾಗಿ ಕಾಣಬೇಕು, ಬೇಗನೆ ಹಣ್ಣಾಗಬೇಕು ಎಂಬ ಕಾರಣಕ್ಕೆ ನೈಟ್ರೇಟ್, ಕೃತಕ ಬಣ್ಣ ಬಳಸಲಾಗುವುದು.
* ಕಲ್ಲಂಗಡಿ ಬೇಗನೆ ಹಣ್ಣಾಗಲು ನೈಟ್ರೇಟ್ ಬಳಸಲಾಗುವುದು, ಇದು ದೇಹವನ್ನು ಸೇರಿದಾಗ ಆರೋಗ್ಯ ಹಾಳು ಮಾಡುವುದು.
* ಕ್ರೋಮೇಟ್, ಮೆಥನಾಲ್ ಯೆಲ್ಲೋ ಮುಂತಾದವು ಬಳಸಿ ಕಲ್ಲಂಗಡಿ ಹಣ್ಣು ತುಂಬಾ ಕಲರ್‌ಫುಲ್ ಆಗಿ ಕಾಣುವುದು, ಆದರೆ ಇವುಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಬರುವುದು.
* ಕಲ್ಲಂಗಡಿ ತಿಂದರೆ ರಕ್ತ ಹೆಚ್ಚುವುದು ಆದರೆ ವಿಷ ಹಾಕಿರುವ ಕಲ್ಲಂಗಡಿ ತಿನ್ನುವುದರಿಂದ ದೇಹದಲ್ಲಿ ರಕ್ತ ಕಡಿಮೆಯಾಗುವುದು, ಮೆದುಳಿಗೆ ಹಾನಿಯುಂಟು ಮಾಡುವುದು, ಕುರುಡುತನ ಉಂಟಾಗುವುದು.
* ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವುದು.

ಕೆಮಿಕಲ್ ಹಾಕಿದ ಕಲ್ಲಂಗಡಿ ಹಣ್ಣನ್ನು ಕಂಡು ಹಿಡಿಯುವುದು ಹೇಗೆ?
ಕಲ್ಲಂಗಡಿ ಹಣ್ಣಿನ ಮೇಲೆ ಬಿಳಿ ಅಥವಾ ಹಳದಿ ಪೌಡರ್ ಇದ್ದರೆ ಅದಕ್ಕೆ ರಾಸಾಯನಿಕ ಹಾಕಲಾಗಿದೆ ಎಂದು ಹೇಳಬಹುದು. ಬೇಗ ಹಣ್ಣಾಗಲು ರಾಸಾಯನಿಕಗಳನ್ನು ಹಾಕಲಾಗಿರುತ್ತೆ, ಈ ಕಾರ್ಬೈಡ್‌ಗಳನ್ನು ಮಾವಿನಕಾಯಿ ಹಾಗೂ ಬಾಳೆಕಾಯಿ ಹಣ್ಣು ಮಾಡಲು ಬಳಸುತ್ತಾರೆ. ಈ ರೀತಿ ಹುಡಿ ಇರುವ ಕಲ್ಲಂಗಡಿ ಹಣ್ಣನ್ನು ಖರೀದಿಸಬೇಡಿ.

ಕಲ್ಲಂಗಡಿ ಹಣ್ಣು ತುಂಬಾ ಕೆಂಪಗಿದೆಯೇ?
ಕಲ್ಲಂಗಡಿ ಕಟ್ ಮಾಡುವಾಗ ತುಂಬಾ ಕಲರ್ ಅಥವಾ ಸಿಹಿ ಇದೆ ಎಂದಾದರೆ ಅದರ ಮಧ್ಯದಲ್ಲಿ ಸ್ವಲ್ಪ ಬಿಳಿ-ಬಿಳಿಯಿದ್ದರೆ ಸಂಶಯವೇ ಇಲ್ಲ, ಅದಕ್ಕೆ ರಾಸಾಯನಿಕ ಹಾಕಲಾಗಿದೆ.

ಕಲ್ಲಂಗಡಿ ಹಣ್ಣು ಕತ್ತರಿಸಿದಾಗ ಅದು ಒಡೆದಂತೆ ಇದ್ದರೆ ಅಥವಾ ರಂಧ್ರ ಇದ್ದರೆ
ನೀವು ಕಲ್ಲಂಗಡಿ ಹಣ್ಣು ಕೊಂಡು ಕತ್ತರಿಸಿದಾಗ ಅದರ ಒಳಭಾಗ ಒಡೆದಂತೆ ಅಥವಾ ಮಧ್ಯಭಾಗದಲ್ಲಿ ರಂಧ್ರ ಅಂದರೆ ಆ ಭಾಗದಲ್ಲಿ ಕಲ್ಲಂಗಡಿ ಇರುವುದೇ ಇಲ್ಲ, ಕರಗಿ ಹೋಗಿರುತ್ತದೆ, ಈ ರೀತಿ ಇದ್ದರೆ ಆ ಕಲ್ಲಂಗಡಿಗೆ ರಾಸಾಯನಿಕ ಹಾಕಲಾಗಿದೆ ಎಂದರ್ಥ.

ಕಲ್ಲಂಗಡಿಯನ್ನು ಟಿಶ್ಯೂನಿಂದ ಒರೆಸಿ
ಕಲ್ಲಂಗಡಿ ಕತ್ತರಿಸಿ ಅದನ್ನು ವೈಟ್ ಶೀಟ್ ಅಥವಾ ಟಿಶ್ಯೂವಿನಿಂದ ಒರೆಸಿದರೆ ಅದರಲ್ಲಿ ಬಣ್ಣ ಹಿಡಿದರೆ ಅದರಲ್ಲಿ ರಾಸಾಯನಿಕ ಬಳಿಸಲಾಗಿದೆ ಎಂದರ್ಥ. ಆದ್ದರಿಂದ ಇಂಥ ಹಣ್ಣುಗಳನ್ನು ತಿನ್ನಬೇಡಿ.

ಕಲ್ಲಂಗಡಿ ಖರೀದಿಸುವಾಗ ಹೀಗೆ ಮಾಡಿ?
ನೀವು ಕಲ್ಲಂಗಡಿ ಖರೀದಿಸುವಾಗ ಮೇಲೆ ಹೇಳಿದಂತೆ ಅದರ ಮೇಲ್ಬಾಗದಲ್ಲಿ ಪುಡಿ ಇದ್ದರೆ ಖರೀದಿಸಬೇಡಿ. ಇನ್ನು ಅವರಲ್ಲಿ ಕತ್ತರಿಸಿ ಕೊಡಲು ಹೇಳಿ, ಕತ್ತರಿಸಿದಾಗ ಅದರಲ್ಲಿ ರಾಸಾಯನಿಕ ಹಾಕಿದೆ ಎಂಬ ಸಂಶಯ ಬಂದರೆ ಖರೀದಿಸಬೇಡಿ.



Click it and Unblock the Notifications
