Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಚಳಿಗಾಲದಲ್ಲಿ ಸ್ಟ್ರಾಬೆರ್ರಿ ತಿಂದರೆ ದೊರೆಯುವ ಪ್ರಯೋಜನಗಳು
ಸೀಸನಲ್ ಫುಡ್ ತಿನ್ನಬೇಕು ಎಂದು ಡಯಟಿಷಿಯನ್, ನ್ಯೂಟ್ರಿಷಿಯನಿಸ್ಟ್ ಹೇಳುತ್ತಾರೆ. ಸೀಸನಲ್‌ಫುಡ್ ಅಂದರೆ ಆಯಾ ಕಾಲಕ್ಕೆ ಸಿಗುವಂಥ ಹಣ್ಣುಗಳು. ಇದೀಗ ಚಳಿಗಾಲ, ಚಳಿಗಾಲದಲ್ಲಿ ಸಿಗುವ ಅನೇಕ ಹಣ್ಣುಗಳಲ್ಲೊಂದು ಸ್ಟ್ರಾಬೆರ್ರಿ.
ತನ್ನ ಕೆಂಪು ಬಣ್ಣದಿಂದ ಸೆಳೆಯುವ ಈ ಹಣ್ಣು ಕೆಂಪು-ಹುಳಿ ಮಿಶ್ರಿತ ರುಚಿಯನ್ನು ಹೊಂದಿದೆ. ಅಲ್ಲದೆ ಇದು ಅನೇಕ ಪೋಷಕಾಂಶಗಳನ್ನು ಹೊಂದಿದೆ. ಚಳಿಗಾಲದಲ್ಲಿ ತಿನ್ನಲು ಸೂಕ್ತವಾದ ಹಣ್ಣು ಇದಾಗಿದ್ದು ಇದನ್ನು ತಿನ್ನುವುದರಿಂದ ಈ ಪ್ರಯೋಜನಗಳನ್ನು ಪಡೆಯಬಹುದು.

1. ರೋಗ ನಿರೋಧಕ ಶಕ್ತಿ ಹೆಚ್ಚುವುದು
ಸ್ಟ್ರಾಬೆರ್ರಿಯಲ್ಲಿ ವಿಟಮಿನ್ ಸಿ ಹೆಚ್ಚಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಒಂದು ಕಪ್ ಸ್ಟ್ರಾಬೆರ್ರಿ ನಿಮ್ಮ ದೇಹಕ್ಕೆ ದಿನದಲ್ಲಿ ಅವಶ್ಯಕವಿರುವ ವಿಟಮಿನ್ ಸಿ ಸಿಗುವುದು. ಇದರಿಂದಾಗಿ ಹಲವು ಬಗೆಯ ಸೋಂಕು ತಡೆಯುವ ಸಾಮರ್ಥ್ಯ ದೇಹಕ್ಕೆ ದೊರೆಯುವುದು.

2. ಹೃದಯ ಸಮಸ್ಯೆ ತಡೆಗಟ್ಟುತ್ತೆ
ಸ್ಟ್ರಾಬೆರ್ರಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಫ್ಲೇವೋನಾಯ್ಡ್ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಗಟ್ಟುವುದು. ಧೂಮಪಾನಿಗಳು ಸ್ಟ್ರಾಬೆರ್ರಿ ತಿಂದರೆ ಹೃದಯಾಘಾತಕ್ಕೆ ಕಾರಣವಾಗುವ ಲಿಪಿಡ್ ಪೆರಾಕ್ಸಿಡೇಶನ್ ಕಡಿಮೆ ಮಾಡುವುದು.

3. ಮಧುಮೇಹ ತಡೆಗಟ್ಟುತ್ತೆ, ನಿಯಂತ್ರಿಸುತ್ತೆ
ಸ್ಟ್ರಾಬೆರ್ರಿಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ಮಧುಮೇಹಿಗಳು ಕೂಡ ಇದನ್ನು ತಿನ್ನಬಹುದು. ಇದನ್ನು ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ. ಇನ್ನು ಮಧುಮೇಹ ಇಲ್ಲದವರು ಇದನ್ನು ತಿಂದರೆ ಮಧುಮೇಹ ತಡೆಗಟ್ಟಬಹುದು. ದಿನಾ 2-3 ಸ್ಟ್ರಾಬೆರ್ರಿ ತಿಂದರೆ ಟೈಪ್ 2 ಮಧುಮೇಹದ ಅಪಾಯ ಕೂಡ ಕಡಿಮೆ ಎಂದು ಅಧ್ಯಯನ ವರದಿ ಹೇಳಿದೆ.

4. ಮಲಬದ್ಧತೆ ಹೋಗಲಾಡಿಸುತ್ತೆ
ಸ್ಟ್ರಾಬೆರ್ರಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ಇದನ್ನು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಹೋಗಲಾಡಿಸಬಹುದು ಸ್ಟ್ರಾಬೆರ್ರಿ ಜೀರ್ಣಕ್ರಿಯೆ ಒಳ್ಳೆಯದು.

5. ಕ್ಯಾನ್ಸರ್ ತಡೆಗಟ್ಟುತ್ತೆ
ಸ್ಟ್ರಾಬೆರ್ರಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿರುವುದರಿಂದ ಇದು ಕ್ಯಾನ್ಸರ್ ಕಣಗಳನ್ನು ನಾಶ ಪಡಿಸುತ್ತೆ, ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಕ್ಯಾನ್ಸರ್ ಚಿಕಿತ್ಸೆ ಪಡೆಯುವವರು ಸ್ಟ್ರಾಬೆರ್ರಿ ತಿಂದರೆ ಒಳ್ಳೆಯದು.

6. ತ್ವಚೆಗೆ ಒಳ್ಳೆಯದು
ಸ್ಟ್ರಾಬೆರ್ರಿಯನ್ನು ತಿಂದರೆ ಅದು ತ್ವಚೆಯನ್ನು ಒಳಗಿನಿಂದ ಪೋಷಿಸುತ್ತದೆ, ಇದರಿಂದ ಫೇಶಿಯಲ್, ಪೇಸ್‌ಮಾಸ್ಕ್ ಮಾಡಿದರೆ ತ್ವಚೆಯ ಹೊಳಪು ಹೆಚ್ಚುವುದು. ಸ್ಟ್ರಾಬೆರ್ರಿ ತಿನ್ನುವುದರಿಂದ, ತ್ವಚೆಯ ಹೊಳಪು ಹೆಚ್ಚುವುದು, ಅಕಾಲಿಕ ನೆರಿಗೆ ಬೀಳುವುದಿಲ್ಲ.
ಸ್ಟ್ರಾಬೆರ್ರಿ ಕೂದಲಿನ ಆರೋಗ್ಯಕ್ಕೂ ಒಳ್ಳೆಯದು.

7. ಗರ್ಭಿಣಿಯರಿಗೆ ಒಳ್ಳೆಯದು
ಮಗುವಿನ ಮೆದುಳಿನ ಬೆಳವಣಿಗೆಗೆ, ಬೆನ್ನು ಮೂಳೆಯ ಬೆಳವಣಿಗೆಗೆ ಇದರಲ್ಲಿರುವ ಪೋಷಕಾಂಶಗಳು ಸಹಕಾರಿ. ಇದರಲ್ಲಿರುವ ಫಾಲಿಕ್ ಆಮ್ಲ ಹೊಟ್ಟೆಯಲ್ಲಿರುವ ಮಗುವಿಗೆ ದೈಹಿಕ ನ್ಯೂನ್ಯತೆ ಉಂಟಾಗದಂತೆ ತಡೆಗಟ್ಟಲು ಸಹಕಾರಿ.

8. ನೆನಪಿನ ಶಕ್ತಿಗೂ ಒಳ್ಳೆಯದು
ಸ್ಟ್ರಾಬೆರ್ರಿಯಲ್ಲಿ ಫ್ಲೇವೋನಾಯ್ಡ್ ಅಂಶ ಇರುವುದರಿಂದ ನೆನಪಿನ ಶಕ್ತಿಗೂ ಒಳ್ಳೆಯದು. ವಾರದಲ್ಲಿ 3-4 ಸ್ಟ್ರಾಬೆರ್ರಿ ತಿನ್ನುವವರಿಗೆ ಮರೆವಿನ ಸಮಸ್ಯೆ ಉಂಟಾಗುವುದಿಲ್ಲ.



Click it and Unblock the Notifications
