Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ನೇರಳೆ ಹಣ್ಣು ತಿಂದ ತಕ್ಷಣ ಈ ಆಹಾರಗಳನ್ನು ಸೇವಿಸಲೇಬಾರದು
ಇದೀಗ ನೇರಳೆ ಹಣ್ಣಿನ ಸಮಯ, ನೇರಳೆ ಹಣ್ಣು ನೋಡುವಾಗ ಬಾಯಲ್ಲಿ ನೀರೂತ್ತೆ, ಅದರ ಬಣ್ಣ-ಅದರ ರುಚಿ.. ಆಹಾ... ಮಕ್ಕಳನ್ನು ಇದನ್ನು ತಿಂದ ಮೇಲೆ ನಾಲಗೆಯ ಬಣ್ಣ ನೇರಳೆ ಬಣ್ಣಕ್ಕೆ ತಿರುಗಿರುವುದನ್ನು ನೋಡಿ ತುಂಬಾನೇ ಸಂಭ್ರಮಿಸುತ್ತಾರೆ.
ಸೀಸನ್ ಫ್ರೂಟ್ಸ್ ಆರೋಗ್ಯಕ್ಕೆ ಒಳ್ಳೆಯದು, ಅದರಲ್ಲೂ ಇದು ಮಳೆಗಾಲದಲ್ಲಿ ಸಿಗುವುದರಿಂದ ತಿನ್ನಲು ಮಿಸ್ ಮಾಡಲೇಬರದು. ಕೆಲವರು ನೇರಳೆ ತಿಂದರೆ ಶೀತ ಆಗುತ್ತೆ, ಗಂಟಲು ಕೆರೆತ ಉಂಟಾಗುತ್ತದೆ ಎಂದೆಲ್ಲಾ ಹೇಳುತ್ತಾರೆ, ಆದರೆ ಅದು ನಿಜವಲ್ಲ. ಈ ಹಣ್ಣು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ಅದನ್ನು ಸರಿಯಾದ ರೀತಿಯಲ್ಲಿ ತಿನ್ನಬೇಕು ಅಷ್ಟೇ..
ಸರಿಯಾದ ರೀತಿಯಲ್ಲಿ ತಿನ್ನುವುದು ಎಂದರೇನು ಎಂದು ನೀವು ಕೇಳಬಹುದು. ಹೌದು ನೇರಳೆ ತಿಂದ ಮೇಲೆ ಕೆಲವೊಂದು ಆಹಾರಗಳನ್ನು ತಿನ್ನಬಾರದು, ಇಲ್ಲದಿದ್ದರೆ ಅಡ್ಡಪರಿಣಾಮ ಉಂಟಾಗುವುದು.
ಬನ್ನಿ ನೇರಳೆ ತಿಂದ ಮೇಲೆ ಯಾವ ಆಹಾರಗಳನ್ನು ಸೇವಿಸಬಾರದು ಎಂದು ನೋಡೋಣ:

ಮೊದಲಿಗೆ ಇದರ ಪ್ರಯೋಜನಗಳನ್ನು ನೋಡೋಣ:
* ನೇರಳೆ ರಕ್ತ ಹೀನತೆ ಇರುವವರಿಗೆ ಸೂಪರ್ ಫುಡ್. ಏಕೆಂದರೆ ಈ ಹಣ್ಣು ತಿಂದರೆ ಹಿಮೋಗ್ಲೋಬಿನ್ ಹೆಚ್ಚಾಗುವುದು.
* ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು
* ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಹಾಗೂ ಮಲಬದ್ಧತೆ ಸಮಸ್ಯೆ ಹೋಗಲಾಡಿಸುತ್ತೆ.
* ತೂಕ ಇಳಿಕೆಗೆ ಅತ್ಯುತ್ತಮವಾದ ಹಣ್ಣಾಗಿದೆ.
* ತ್ವಚೆಗೆ ತುಂಬಾ ಒಳ್ಳೆಯದು
ನೇರಳೆ ತಿಂದ ಬಳಿಕ ಆಹಾರಗಳನ್ನು ತಕ್ಷಣ ಸೇವಿಸಬೇಡಿ.

1. ನೇರಳೆ ತಿಂದ ತಕ್ಷಣ ನೀರು ಕುಡಿಯಬೇಡಿ
ನೇರಳೆ ತಿಂದ ತಕ್ಷಣ ನೀರು ಕುಡಿಯಬಾರದು. ನೇರಳೆ ತಿಂದ ತಕ್ಷಣ ನೀರು ಕುಡಿದರೆ ಆರೋಗ್ಯ ಸಮಸ್ಯೆ ಉಂಟಾಗುವುದು. ಬೇಧಿ, ಅಜೀರ್ಣ ಈ ಸಮಸ್ಯೆ ಉಂಟಾಗುವುದು. ಆದ್ದರಿಂದ ನೇರಳೆ ತಿಂದ ಬಳಿಕ 30-40 ನಿಮಿಷ ನೀರು ಕುಡಿಯಬೇಡಿ.

2. ಖಾಲಿ ಹೊಟ್ಟೆಯಲ್ಲಿ ನೇರಳೆ ತಿನ್ನಬೇಡಿ
ಖಾಲಿ ಹೊಟ್ಟೆಯಲ್ಲಿ ನೇರಳೆ ತಿನ್ನಬಾರದು. ಅಲ್ಲದೆ ನೇರಳೆ ಸ್ವಲ್ಪ ಹುಳಿ ಇರುವುದರಿಂದ ಇದನ್ನು ಖಾಲಿ ಹೊಟ್ಟೆಯಲ್ಲಿ ತಿಂದಾಗ ಅಸಿಡಿಟಿ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಇದನ್ನು ಊಟದ ಬಳಿಕ ಸೇವಿಸಿ.

3. ನೇರಳೆ ತಿಂದ ತಕ್ಷಣ ಅರಿಶಿಣ ಹಾಕಿದ ಯಾವುದೇ ಆಹಾರ ಸೇವಿಸಬೇಡಿ
ನೀವು ನೇರಳೆ ಹಣ್ಣು ತಿಂದ ಬಳಿಕ ಅರಿಶಿಣ ಹಾಕಿದ ಯಾವುದೇ ಆಹಾರ ಸೇವಿಸಬೇಡಿ. ಏಕೆಂದರೆ ಫುಡ್ ಪಾಯಿಸನ್ ಆಗಬಹುದು. ಆದ್ದರಿಂದ ನೇರಳೆ ತಿಂದು 30 ನಿಮಿಷದ ಬಳಿಕವಷ್ಟೇ ಅಂಥ ಆಹಾರ ಸೇವಿಸಿ.

4. ಹಾಲು ಸೇವಿಸಬೇಡಿ
ನೇರಳೆ ತಿಂದ ಬಳಿಕ ಹಾಲು ಕುಡಿಯುವುದು, ಹಾಲಿನ ಉತ್ಪನ್ನಗಳನ್ನು ಸೇವಿಸುವುದು ಮಾಡಬೇಡಿ. ಇಲ್ಲದಿದ್ದರೆ ಅಜೀರ್ಣ ಸಮಸ್ಯೆ ಉಂಟಾಗುವುದು.

5. ಉಪ್ಪಿನಕಾಯಿ ತಿನ್ನಬೇಡಿ
ಜಾಮೂನು ತಿನ್ನುವ ಮೊದಲು ಅಥವಾ ನಂತರ ಉಪ್ಪಿನಕಾಯಿ ಸೇವಿಸಬೇಡಿ. ಇಲ್ಲದಿದ್ದರೆ ಹೊಟ್ಟೆ ಸಂಬಂಧಿತ ಸಮಸ್ಯೆ ಉಂಟಾಗಬಹುದು.

ನೇರಳೆ ಯಾವ ಸಮಯದಲ್ಲಿ ಸೇವಿಸುವುದು ಒಳ್ಳೆಯದು?
ಯಾವ ಸಮಯದಲ್ಲಿ ನೇರಳೆ ತಿನ್ನುವುದು ಒಳ್ಳೆಯದು ಎಂದು ನೋಡುವುದಾದರೆ ಯಾವುದೇ ಸಮಯದಲ್ಲಿ ತಿನ್ನಬಹುದು, ಆದರೆ ಅಹಾರ ಸೇವಿಸಿದ ಬಳಿಕವಷ್ಟೇ ಸೇವಿಸಬೇಕು.
ನೇರಳೆ ಬೀಜ ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು
ನೇರಳೆ ಬೀಜ ಸಂಗ್ರಹಿಸಿಟ್ಟು ಒಣಗಿಸಿ ಪುಡಿ ಮಾಡಿ, ಈ ಪುಡಿ ಮಧುಮೇಹ ನಿಯಂತ್ರಣಕ್ಕೆ ತುಂಬಾನೇ ಒಳ್ಳೆಯದು.



Click it and Unblock the Notifications