Latest Updates
-
ಭಾಯಿ ದೂಜ್ 2026: ಹಬ್ಬದ ಸಂಭ್ರಮಕ್ಕೆ ಪ್ಲಾನಿಂಗ್, ಬಜೆಟ್ ಮತ್ತು ಸಮಯ ನಿರ್ವಹಣೆಯ ಸರಳ ಟಿಪ್ಸ್ -
ಹಬ್ಬದ ಸಂಭ್ರಮದಲ್ಲಿ ಬೀದಿಬದಿ ಆಹಾರ ಸೇವಿಸುವ ಮುನ್ನ ಎಚ್ಚರ: ಆರೋಗ್ಯ ಸುರಕ್ಷತೆಗೆ ಇಲ್ಲಿದೆ 5 ಸರಳ ಸೂತ್ರಗಳು -
ಬಿಗ್ ಬಾಸ್ ಕನ್ನಡ 13: ಈ ವಾರ ಯಾರೂ ಎಲಿಮಿನೇಟ್ ಇಲ್ಲ! ಕಿಚ್ಚ ಸುದೀಪ್ ನೀಡಿದ ಅಚ್ಚರಿಯ ಟ್ವಿಸ್ಟ್ ಏನು? -
ದೀಪಾವಳಿ ನಂತರ ದೆಹಲಿಯಲ್ಲಿ ದಟ್ಟ ಹೊಗೆ: ಮಕ್ಕಳ ಆರೋಗ್ಯ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ -
ಲಕ್ಷ್ಮಿ ಪೂಜೆಯ ಮುಹೂರ್ತದ ಗೊಂದಲ: ಕುಟುಂಬದ ಶಾಂತಿಗಾಗಿ ಇಲ್ಲಿದೆ ಸರಳ ಪರಿಹಾರಗಳು -
ದೀಪಾವಳಿ ಹಬ್ಬದ ಸಂಭ್ರಮ: ಡಯಾಬಿಟಿಸ್ ಇದ್ದರೂ ಸಿಹಿ ಸವಿಯಲು ಈ ಟಿಪ್ಸ್ ಫಾಲೋ ಮಾಡಿ -
ಅಯೋಧ್ಯೆ ದೀಪೋತ್ಸವ 2026: 36 ಲಕ್ಷ ದೀಪಗಳ ಬೆಳಕಿನ ವೈಭವ, ಸಂಚಾರ ಮಾರ್ಗ ಮತ್ತು ವೀಕ್ಷಣೆಯ ಟಿಪ್ಸ್ -
ದೀಪಾವಳಿ ಸಂಭ್ರಮದಲ್ಲಿ ಬೆನ್ನು ನೋವಾ? ಲಕ್ಷ್ಮಿ ಪೂಜೆಗೂ ಮುನ್ನ ಈ 7 ನಿಮಿಷದ ಸ್ಟ್ರೆಚಿಂಗ್ ಟ್ರೈ ಮಾಡಿ! -
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ!
Dragon fruit : ಡ್ರ್ಯಾಗನ್ ಫ್ರೂಟ್ ಸೇವಿಸುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭವಿದೆಯಾ...!
ಡ್ರ್ಯಾಗನ್ ಫ್ರೂಟ್ ಹೆಸರು ಕೇಳೋಕೆ ವಿಚಿತ್ರವಾಗಿದೆ. ಭಾರತದ ದೇಸಿ ಹಣ್ಣು ಇದಲ್ಲ ಆದ್ರೆ ಮಾರ್ಕೆಟ್ನಲ್ಲಿ ಇದು ಎಲ್ಲರ ಕಣ್ಣು ಕುಕ್ಕುವ ಹಣ್ಣು. ಇದನ್ನ ನೋಡಿದ ತಕ್ಷಣ ಖರೀದಿಸಲು ಮನಸಾಗುತ್ತೆ. ಹಣ್ಣು ಕೊಂಚ ದುಬಾರಿ.

ಅನೇಕರು ಕ್ಯೂರಿಯಾಸಿಟಿಗಾದರೂ ಒಮ್ಮೆ ಇದನ್ನು ಖರೀದಿಸುತ್ತಾರೆ. ಆದ್ರೆ ಇದರ ಸೇವನೆಯಿಂದ ಅನೇಕ ಆರೋಗ್ಯಕರ ಉಪಯೋಗಗಳು ಇದೆ.
ಇವತ್ತು ಕೆಲವೇ ಕೆಲವು ಮುಖ್ಯವಾದ ಉಪಯೋಗಗಳ ಬಗ್ಗೆ ತಿಳಿಯೋಣ ನಂತರ ಟೇಸ್ಟಿ ರೆಸಿಪಿ ಬಗ್ಗೆ ತಿಳಿಸಿ ಕೊಡ್ತೀವಿ
1. ಕ್ಯಾನ್ಸರ್ ನಿಯಂತ್ರಕ
ಡ್ರ್ಯಾಗನ್ ಹಣ್ಣಿನಲ್ಲಿ ಪಿಗ್ಮೆಂಟೆಡ್ ಕೆರೊಟಿನಾಯ್ಡ್ಗಳು ಮತ್ತು ವಿಟಮಿನ್ ಸಿ ಇರುವುದರಿಂದ ಇದು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಸಂಶೋಧನೆಗಳ ಪ್ರಕಾರ ಡ್ರ್ಯಾಗನ್ ಫ್ರೂಟ್ನಲ್ಲಿರುವ ಬೆಟಾಸಿಯಾನಿನ್ಸ್ (betacyanins) ಅಂಶ ಸ್ತನ ಕ್ಯಾನ್ಸರ್ನ ಕೋಶಗಳನ್ನು ಹರಡದಂತೆ ನಿಯಂತ್ರಿಸುತ್ತದೆ. ಜೊತೆಗೆ ಆ್ಯಂಟಿ ಆಕ್ಸಿಡೆಂಟ್ಗಳು (antioxidants) ಸೆಲ್ಯೂಲಾರ್ ಹಾನಿಕಾರಕಗಳನ್ನು ಸರಿಪಡಿಸುತ್ತದೆ.
2. ಗರ್ಭಿಣಿಯರ ಆರೋಗ್ಯಕ್ಕೆ ಉತ್ತಮ
ಡ್ರ್ಯಾಗನ್ ಹಣ್ಣಿನಲ್ಲಿ ಐರನ್ ಅಂಶ ಅಧಿಕವಾಗಿರುವುದರಿಂದ ಗರ್ಭಿಣಿಯರಿಗೆ ಅನಿಮಿಯಾ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟುತ್ತದೆ. ಹಾಗೂ ಇದರಲ್ಲಿ ಮಿನರಲ್ಗಳಾದ ಪೊಟ್ಯಾಷಿಯಂ, ಕ್ಯಾಲ್ಸಿಯಂ, ಮತ್ತು ಮ್ಯಾಗ್ನಿಷಿಯಂ ಸಮೃದ್ಧವಾಗಿದೆ. ಈ ಎಲ್ಲಾ ಪೋಷಕಾಂಶಗಳು ರಕ್ತ ಪರಿಚಲನೆ, ಮೆದುಳಿನ ಆರೋಗ್ಯ, ಮೂಳೆ ರಚನೆಯನ್ನು ಉತ್ತಮವಾಗಿಸುತ್ತದೆ.
3. ತೂಕ ನಿಯಂತ್ರಿಸುತ್ತದೆ
ಇಲಿಗಳ ಮೇಲೆ ಅಧ್ಯಯನ ನಡೆಸಲಾಗಿದ್ದು, ಕೆಂಪು ಡ್ರ್ಯಾಗನ್ ಹಣ್ಣಿನಲ್ಲಿರುವ ಬೆಟಾಸಯಾನಿನ್ಗಳು ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಕರುಳಿನಲ್ಲಿ ಪ್ರಯೋಜನಕಾರಿಯಾಗಿರುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಯಂತ್ರಿಸುವ ಮೂಲಕ ಬೊಜ್ಜು ತಡೆಯುತ್ತದೆ ಎಂದು ಸಾಬೀತುಪಡಿಸಲಾಗಿದೆ. ಡ್ರ್ಯಾಗನ್ ಫ್ರೂಟ್ನಲ್ಲಿರುವ ಹೆಚ್ಚಿನ ಫೈಬರ್ ಮತ್ತು ನೀರಿನ ಅಂಶವು ನಿಮ್ಮನ್ನು ದೀರ್ಘಕಾಲದವರೆಗೆ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ.
ಡ್ರ್ಯಾಗನ್ ಹಣ್ಣು ಆರೋಗ್ಯಕರ ಹಣ್ಣು. ಇದರಿಂದ ಅನೇಕ ಲಾಭಗಳಿದೆ. ಡ್ರ್ಯಾಗನ್ ಹಣ್ಣು ಇತರ ಹಣ್ಣುಗಳಂತಲ್ಲ ತಿನ್ನಲು ಅಷ್ಟೋದು ಟೇಸ್ಟಿ ಅನ್ನಿಸೋದಿಲ್ಲ. ಹಾಗಂತ ಸುಮ್ನೆ ಕೂರೋಕಾಗುತ್ತಾ? ಖಂಡಿತ ಇಲ್ಲ. ಡ್ರ್ಯಾಗನ್ ಫ್ರೂಟ್ನ ಟೇಸ್ಟಿಯಾಗಿ ತಿನ್ನಬೇಕಂದ್ರೆ ಈ ವಿಧಾನಗಳನ್ನ ಟ್ರೈ ಮಾಡಿ.
1. ಜೇನು ತುಪ್ಪದ ಜೊತೆಗೆ ಸೂಪರ್
ಡ್ರ್ಯಾಗನ್ ಹಣ್ಣು ಸಾಮಾನ್ಯವಾಗಿ ನೋಡೋದಕ್ಕೆ ಆಕರ್ಷಿತವಾಗಿದ್ದರೂ ಕೂಡ ತಿನ್ನಲು ಕೊಂಚ ಸಪ್ಪೆ. ಆಗ ನಾವು ಡ್ರ್ಯಾಗನ್ ಹಣ್ಣಿನ ಸಿಪ್ಪೆ ತೆಗೆದು ಒಳಗಿನ ತಿರುಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಜೇನು ತುಪ್ಪ ಸೇರಿಸಿ ತಿಂದರೆ ತುಂಬಾನೇ ರುಚಿಕರವಾಗಿರುತ್ತದೆ.
2. ಫ್ರೂಟ್ ಸಲಾಡ್ ಮತ್ತು ಮ್ಯೂಸ್ಲಿ ತಯಾರಿಸಿ
ಹಣ್ಣಿನ ಸಲಾಡ್ ಅಥವಾ ಮ್ಯೂಸ್ಲಿ ಜೊತೆಗೆ ಕೂಡ ಡ್ರ್ಯಾಗನ್ ಹಣ್ಣನ್ನು ಸೇರಿಸಬಹುದು. ಮೊದಲು ಒಂದು ಬೌಲ್ನಲ್ಲಿ ಸಣ್ಣದಾಗಿ ಕತ್ತರಿಸಿದ ಡ್ರ್ಯಾಗನ್ ಹಣ್ಣು ಹಾಕಿ. ನಂತರ ಅದಕ್ಕೆ ಎಲ್ಲಾ ತರಹದ ಹಣ್ಣುಗಳು, ಡ್ರೈ, ಮ್ಯೂಸ್ಲಿ, ಜೇನು ತುಪ್ಪ, ಹಾಲು ಸೇರಿಸಿ ಸೇವಿಸಬಹುದು.
3. ಡ್ರ್ಯಾಗನ್ ಹಣ್ಣು ಸ್ಮೂಥಿ
ಅನೇಕ ಮಂದಿ ಹಣ್ಣುಗಳನ್ನು ಇಷ್ಟ ಪಡದಿದ್ದರೂ ಅದೇ ಹಣ್ಣಿನ ಸ್ಮೂಥಿ ಮಾಡಿ ಕೊಟ್ಟರೆ ಇಷ್ಟ ಪಟ್ಟು ತಿನ್ನುತ್ತಾರೆ. ಡ್ರ್ಯಾಗನ್ ಹಣ್ಣಿಗೆ ಮೊಸರು ಅಥವಾ ಯೋಗರ್ಟ್, ಸಕ್ಕರೆ(optional), ಐಸ್ಕ್ಯೂಬ್ ಸೇರಿಸಿ ಸ್ಮೂಥಿ ತಯಾರಿಸಿ ಕುಡಿಯಬಹುದು.
4. ಡ್ರ್ಯಾಗನ್ ಹಣ್ಣಿನ ಕಬಾಬ್
ಡ್ರ್ಯಾಗನ್ ಹಣ್ಣು ಈ ಹೆಸರು ಕೇಳಲು ವಿಚಿತ್ರವಾಗಿದೆಯಲ್ಲ. ಈ ರಿಸಿಪಿಯನ್ನು ಮನೆಯಲ್ಲಿ ಟ್ರೈ ಮಾಡಿದ್ರೆ ಖಂಡಿತ ಇಷ್ಟ ಪಡ್ತೀರ. ಮೊದಲಿಗೆ ಡ್ರ್ಯಾಗನ್ ಹಣ್ಣನ್ನು ಕ್ಯೂಬ್ ಆಕಾರದಲ್ಲಿ ತುಂಡು ಮಾಡಿಕೊಳ್ಳಿ. ನಂತರ ಒಂದು ಪ್ಯಾನ್ ಎಣ್ಣೆ ಹಚ್ಚಿ ಡ್ರ್ಯಾಗನ್ ಹಣ್ಣನ್ನು ಗ್ರಿಲ್ ಮಾಡುವ ವಿದಾನದಲ್ಲಿ ಸುಟ್ಟುಕೊಳ್ಳಿ. ಆಮೇಲೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಖಾರದ ಪುಡಿ ಚಿಮುಕಿಸಿ ತಿನ್ನಿ.
5. ಡ್ರ್ಯಾಗನ್ ಹಣ್ಣಿನ ಜ್ಯೂಸ್
ಡ್ರ್ಯಾಗನ್ ಹಣ್ಣು ಸಪ್ಪೆ ಅಂತ ಹೇಳುವವರು ಡ್ರ್ಯಾಗನ್ ಜೊತೆಗೆ ಇತರ ಹಣ್ಣುಗಳನ್ನು ಸೇರಿಸಿ ಜ್ಯೂಸ್ ತಯಾರಿಸಿ ನಂತರ ಅದಕ್ಕೆ ಬೆಲ್ಲ ಅಥವಾ ಜೇನುತುಪ್ಪ ಸೇರಿಸಿ ಕೆಲಕಾಲ ಫ್ರೀಜರ್ನಲ್ಲಿ ಇಟ್ಟು ನಂತರ ಕುಡಿಯಿರಿ.
ಹೀಗೆ ಅನೇಕ ವಿಧದಲ್ಲಿ ಬಾಯಿಗೆ ರುಚಿಸುವ ಹಾಗೆ ಡ್ರ್ಯಾಗನ್ ಹಣ್ಣುನ್ನು ತಿನ್ನಬಹುದುದಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


