For Quick Alerts
ALLOW NOTIFICATIONS  
For Daily Alerts

ನಿಮ್ಮ ಮೂಡ್ ಬದಲಾಯಿಸುವ 10 ಆಹಾರಗಳಿವು

|

ಡೊಪಾಮೈನ್ ಎನ್ನುವುದು ನಮಗೆ ಸಂತೋಷ ಕೊಡುವ ಹಾರ್ಮೋನ್ ಆಗಿದೆ. ಇದು ಬರೀ ನಮ್ಮನ್ನು ಖುಷಿಯಾಗಿಡುವುದು ಮಾತ್ರವಲ್ಲ ಮೆದುಳಿನ ಸಾಮಾರ್ಥ್ಯ ಹೆಚ್ಚಲು, ಏಕಾಗ್ರತೆ ಹೆಚ್ಚಲು, ಸಂತಾನೋತ್ಪತ್ತಿ ಸಾಮಾರ್ಥ್ಯಕ್ಕೆ ಹೆಚ್ಚಲು ಮತ್ತು ತೂಕ ನಿಯಂತ್ರಣದಲ್ಲಿಡಲು ಹಾಗೂ ಪಾರ್ಕಿನ್‌ಸನ್ಸ್‌ನಂಥ ಅಪಾಯ ತಡೆಗಟ್ಟಲು ಡೊಪಾಮೈನ್ ಹಾರ್ನೋನ್ ಅತ್ಯಾವಶ್ಯಕವಾಗಿದೆ.

Dopamine Boosting Foods You Should Include In Your Diet

ಕೋವಿಡ್ 19 ಕಾಯೊಲೆ ಬಂದಾಗಿನಿಂದ ನಮ್ಮೆಲ್ಲರ ತಲೆಯಲ್ಲಿ ಬರೀ ನೆಗೆಟಿವ್‌ ಚಿಂತನೆಗಳೇ ಹೆಚ್ಚುತ್ತಿವೆ. ಚಿಕ್ಕದಾಗಿ ಕೆಮ್ಮು ಬಂದರೂ ಅಯ್ಯೋ ನಂಗೆ ಕೋವಿಡ್‌ 19 ಬಂತಾ ಅಂತ ಭಯ ಪಡುವವರು ಹಲವಾರು ಜನರಿದ್ದಾರೆ. ಈ ಸಮಯದಲ್ಲಿ ನಾವು ಮಾಡಬೇಕಾಗಿರುವುದು ಮನೆಯಲ್ಲಿಯೇ ಇರುವುದು ಹಾಗೂ ನಮ್ಮಲ್ಲಿ ಪಾಸಿಟಿವ್ ತುಂಬುವುದು. ನಮ್ಮ ಮನಸ್ಸಿನ ಆರೋಗ್ಯವನ್ನು ವೃದ್ಧಿಸಬೇಕಾಗಿದೆ.

ಆದ್ದರಿಂದ ಮನಸ್ಸಿಗೆ ಖುಷಿ ಕೊಡುವ ಸಂಗೀತ ಕೇಳಿ, ಮನೆಮಂದಿಯೊಂದಿಗೆ ಆಟಗಳನ್ನು ಆಡಿ. ಜೊತೆಗೆ ನೀವು ತಿನ್ನುವ ಆಹಾರ ಕಡೆಯೂ ಗಮನ ನೀಡಿ. ಈ ಆಹಾರಗಳು ನಿಮ್ಮ ದೇಹದಲ್ಲಿ ಡೊಪಾಮೈನ್ ಹೆಚ್ಚಿಸಲು ಸಹಕಾರಿಯಾಗಿದೆ.

1. ಬಾದಾಮಿ

1. ಬಾದಾಮಿ

ನಮ್ಮ ದೇಹದಲ್ಲಿ ಡೊಪಾಮೈನ್ ಹೆಚ್ಚಲು ಪ್ರೊಟೀನ್ ಅವಶ್ಯಕ. ಟೈರೋಸಿನ್ ಎಂಬ ಅಮೈನೋ ಆಮ್ಲ ಪ್ರೊಟೀನ್ ಹೆಚ್ಚಿಸಿ ಡೊಪಾಮೈನಗ ಬಿಡುಗಡೆ ಮಾಡುವಲ್ಲಿ ಸಹಕಾರಿ.ಬಾದಾಮಿಯಲ್ಲಿ ಟೈರೋಸಿನ್ ಅಂಶಗಳಿವೆ. ಇದರಿಂದಾಗಿ ಸಂತೋಷದ ಹಾರ್ಮೋನ್ ಉತ್ಪತ್ತಿಯಾಗುತ್ತದೆ.

2. ಬಾಳೆಹಣ್ಣು

2. ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಟೈರೋಸಿನ್ ಜೊತೆಗೆ ಕ್ವಿರೆಸಿಟಿನ್ ಎಂಬ ಫ್ಲೇವೋನಾಯ್ಡ್ ಇದ್ದು ಇವೆರಡು ಡೊಪಾಮೈನ್ ಉತ್ಪತ್ತಿಗೆ ತುಂಬಾ ಸಹಕಾರಿ. ಅಲ್ಲದೆ ಇದರಲ್ಲಿರುವ ಇತರ ವಿಟಮಿನ್‌ ಕೂಡ ಮೆದುಳು ಹಾಗೂ ದೇಹದ ಆರೋಗ್ಯಕ್ಕೆ ಒಳ್ಳೆಯದು.

3. ಹಾಲಿನ ಉತ್ಪನ್ನಗಳು

3. ಹಾಲಿನ ಉತ್ಪನ್ನಗಳು

ಹಾಲು, ಮೊಸರು ಇವುಗಳಲ್ಲಿ ಅಮೈನೋ ಆಮ್ಲಗಳಾದ ಫೀನಾಲ್‌ಅಲಾನೈನ್ , ಟೈರೋಸಿನ್, ಪ್ರೆಗ್ನೋಲೊನ್ ಮುಂತಾದ ಅಂತಾದ ಅಂಶಗಳಿವೆ. ಇವುಗಳು ದೇಹದಲ್ಲಿ ಅಗ್ಯತವಾದ ಡೊಪಾಮೈನ್ ಹಾರ್ಮೋನ್ ಉತ್ಪತ್ತಿ ಮಾಡಲು ಸಹಕಾರಿ.

4. ಮೀನು

4. ಮೀನು

ಮೀನುಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲ ಇರುತ್ತದೆ. ಇವುಗಳು ಮರೆವು, ADHD ಮುಂತಾದ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟುವಲ್ಲಿಯೂ ಸಹಕಾರಿ. ಮೀನು ದೇಹಕ್ಕೆ ಅಗ್ಯತವಾದ ವಿಟಮಿನ್ ಇ ಕೂಡ ನೀಡುವುದರಿಂದ ತ್ವಚೆಯ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

5. ಕಾಫಿ

5. ಕಾಫಿ

ಕಾಫಿ ನರಗಳು ಚಟುವಟಿಕೆಯಿಂದ ಇರುವಂತೆ ಮಾಡಲು ಸಹಕಾರಿ. ಏಕೆಂದರೆ ಇದು ಡೊಪಾಮೈನ್ ಹಾರ್ಮೋನ್ ಉತ್ಪತ್ತಿ ಮಾಡುವುದರಿಂದ ಇದು ಮೆದುಳಿಗೆ ಅಲರ್ಟ್‌ ನೀಡುತ್ತದೆ. ಡಾರ್ಕ್‌ಚಾಕೋಲೆಟ್, ಕಾಫಿ, ಟೀ ಇವುಗಳು ಡೊಪಾಮೈನ್ ಹೆಚ್ಚಿಸುತ್ತದೆ.

6. ದ್ರಾಕ್ಷಿ

6. ದ್ರಾಕ್ಷಿ

ದ್ರಾಕ್ಷಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿರುವುದರಿಂದ ಇದನ್ನು ತಿನ್ನುವುದರಿಂದ ಕೂಡ ದೇಹದಲ್ಲಿ ಡೊಪಾಮೈನ್‌ ಹಾರ್ಮೋನ್ ಹೆಚ್ಚಾಗುವುದು. ಅಲ್ಲದೆ ಆ್ಯಂಟಿಆಕ್ಸಿಡೆಂಟ್ ಜೀವ ಕಣಗಳು ಸಾಯುವುದನ್ನು ತಡೆಯುತ್ತದೆ ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡುವುದು.

7. ನೇರಳೆಹಣ್ಣು

7. ನೇರಳೆಹಣ್ಣು

ನೇರಳೆಹಣ್ಣಿನಲ್ಲಿ ಫ್ಲೇವೋನಾಯ್ಡ್ ಅಂಶ ಹಾಗೂ ಆ್ಯಂಟಿಆಕ್ಸಿಡೆಂಟ್‌ ಅಂಶ ಅಧಿಕವಿರುತ್ತದೆ. ಇದು ಮೆದುಳಿನ ಆರೋಗ್ಯ ಹೆಚ್ಚಿಸುತ್ತದೆ ಹಾಗೂ ಡೊಪಾಮೈನ್ ಹಾರ್ಮೋನ್‌ಗಳು ಬಿಡುಗಡೆಯಾಗುವಂತೆ ಮಾಡುತ್ತದೆ. ನೇರಳೆಹಣ್ಣು ತಿನ್ನುವುದರಿಂದ ಪಾರ್ಕಿನ್‌ಸನ್ಸ್ ತಡೆಗಟ್ಟಬಹುದು.

8. ಪಾಲಾಕ್‌

8. ಪಾಲಾಕ್‌

ಪಾಲಾಕ್‌ ಹಲವಾರು ರೀತಿಯಲ್ಲಿ ತುಂಬಾ ಪ್ರಯೋಜನಕಾರಿ. ಇದು ಸೆರೋಟಿನಿನ್‌ ಉತ್ಪತ್ತಿ ಹೆಚ್ಚಿಸಿ ಡೊಪಾಮೈನ್ ಹಾರ್ಮೋನ್‌ ಬಿಡುಗಡೆಯಾಗುವಂತೆ ಮಾಡುತ್ತದೆ. ಪಾಲಾಕ್‌ನಲ್ಲಿ ಟೈರೋಸಿನ್ ಪ್ರಮಾಣ ಕೂಡ ಅಧಿಕವಿರುತ್ತದೆ. ಇದು ಕೂಡ ನಮ್ಮ ಮೂಡ್‌ ಚೆನ್ನಾಗಿರುವಂತೆ ಮಾಡುತ್ತದೆ.

9. ಅಣಬೆ

9. ಅಣಬೆ

ಅಣಬೆ ತಿನ್ನುವುದರಿಂದ ಡೊಪಾಮೈನ್ ಮೆದುಳಿನಲ್ಲಿ ಸಂಗ್ರಹವಾಗುತ್ತದೆ. ಇನ್ನು ಖಿನ್ನತೆ, ಮೂಡ್‌ ಚೇಂಜ್‌ ಈ ಸಮಸ್ಯೆ ಇರುವವರು ಅಣಬೆ ತಿನ್ನುವುದರಿಂದ ಪ್ರಯೋಜನ ಪಡೆಯಬಹುದು. ಅಣಬೆಯಲ್ಲಿ ವಿಟಮಿನ್ ಡಿ ಕೂಡ ಇದೆ.

10. ಓಟ್ಸ್

10. ಓಟ್ಸ್

ಓಟ್ಸ್‌ನಲ್ಲಿ ಕಾರ್ಬೋಹೈಟ್ರೇಟ್ಸ್ ಇದ್ದು ಇದು ಟ್ರೈಪ್ಟೋಫಾನ್ ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ. ಇದರಿಂದ ಸೆರೋಟಿನಿನ್‌ ಉತ್ಪತ್ತಿಯಾಗಿ ಸಂತೋಷದ ಹಾರ್ಮೋನ್‌ ಆದ ಡೊಪಮೈನ್ ಉತ್ಪತ್ತಿಯಾಗುವುದು. ಆದ್ದರಿಂದ ನಿಮ್ಮ ಮೂಡ್‌ಗೂ ನೀವೂ ತಿನ್ನುವ ಆಹಾರಕ್ಕೂ ಸಂಬಂಧವಿದೆ ಎಂಬುವುದು ತಿಳಿಯುತ್ತೇ?

ಈ ಆಹಾರಗಳು ಕೂಡ ಸಹಕಾರಿ

ಈ ಆಹಾರಗಳು ಕೂಡ ಸಹಕಾರಿ

  • ಮೊಟ್ಟೆ
  • ಕಲ್ಲಂಗಡಿ
  • ನೆಲಗಡಲೆ, ಪಿಸ್ತಾ
  • ಕುಂಬಳಕಾಯಿ ಬೀಜ
  • ಸೋಯಾ ಉತ್ಪನ್ನಗಳು
  • ವೈನ್
  • ಹಣ್ಣಿನ ಜ್ಯೂಸ್
  • ಬ್ರೊಕೋಲಿ
  • ಅರಿಶಿಣ
  • ಅಭ್ಯಾಸಗಳು

    ಅಭ್ಯಾಸಗಳು

    • ಸ್ಯಾಚುರೇಟಡ್‌ ಅಂಶವಿರುವ ಎಣ್ಣೆ
    • ಪ್ರೊಟೀನ್ ಅಂಶವಿರುವ ಆಹಾರ
    • ಪ್ರತಿನಿತ್ಯ ಅಭ್ಯಾಸ
    • ಸರಿಯಾದ ನಿದ್ದೆ
    • ಸಂಗೀತ ಕೇಳುವುದು
    • ಮಸಾಜ್ ಮಾಡಿಸುವುದು
    • ಕ್ರಿಯೇಟಿವ್ ಚಟುವಟಿಕೆಯಲ್ಲಿ ಭಾಗಿಯಾಗುವುದು.
English summary

Dopamine Boosting Foods You Should Include In Your Diet

Dopamine is a neurotransmitter found in the brain that serves many purposes. It is linked to memory, attention, productivity and weight loss along with an important role in restricting impulsive behaviour and preventing Parkinson's disease.
Story first published: Wednesday, April 8, 2020, 13:30 [IST]
X
Desktop Bottom Promotion