Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಚಿಕನ್‌ಗುನ್ಯಾ ಕಾಯಿಲೆಯಿಂದ ಚೇತರಿಕೆಗೆ ತಿನ್ನಬೇಕಾದ ಆಹಾರಗಳು
ಚಿಕನ್‌ಗುನ್ಯಾ ಎಂಬುವುದು ಸೊಳ್ಳೆಗಳಿಂದ ಹರಡುವ ವೈರಲ್ ಸೋಂಕಾಗಿದೆ. ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಕಚ್ಚಿದಾಗ ಈ ಸೋಂಕು ಹರಡುವುದು. ಚಿಕನ್ ಗುನ್ಯಾ ಬಂದ್ರೆ, ಚಿಕನ್ ಗುನ್ಯಾದಿಂದ ಗುಣಮುಖವಾದ ಮೇಲೂ ಇದರ ತೊಂದರೆಗಳು ತುಂಬಾ ಸಮಯ ಇರುತ್ತದೆ. ಕೆಲವರಿಗೆ ಚಿಕನ್‌ಗುನ್ಯಾ ಬಂದು ವರ್ಷಗಳು ಕಳೆದರು ಮಂಡಿ ನೋವು, ಕಾಲು ನೋವು ಸಮಸ್ಯೆ ಕಾಡುವುದು, ಆದ್ದರಿಂದ ಚಿಕನ್‌ಗುನ್ಯಾ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡಬಾರದು.
ಚಿಕನ್‌ಗುನ್ಯಾ ಬಂದಾಗ ಸೂಕ್ತ ಔಷಧ ತೆಗೆದುಕೊಳ್ಳುವುದರ ಜೊತೆಗೆ ಆಹಾರಕ್ರಮದ ಕಡೆಗೂ ಗಮನ ನೀಡಬೇಕು. ಇಲ್ಲದಿದ್ದರೆ ಮೈಕೈ ನೋವು, ಮಂಡಿ ನೋವು ಇವೆಲ್ಲಾ ವರ್ಷ ಕಳೆದರೂ ಕಾಡುವುದು, ಅದರಲ್ಲೂ ಮಳೆಗಾಲ, ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗುವುದು.
ಪ್ರತೀವರ್ಷ ಭಾರತದಲ್ಲಿ ಸಾಕಷ್ಟು ಜನರಿಗೆ ಡೆಂಗ್ಯೂ ಕಾಯಿಲೆ ಬರುತ್ತಿದೆ. ವಿಶ್ವದಲ್ಲಿಯೇ 100-400 ಮಿಲಿಯನ್ ಜನರಿಗೆ ಡೆಂಗ್ಯೂ ಕಾಯಿಲೆ ಬರುತ್ತಿದೆ. ಡೆಂಗ್ಯೂಗೆ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ. ಪ್ರಾರಂಭದಲ್ಲಿಯೇ ಗುರುತಿಸಿದರೆ ಗುಣಪಡಿಸುವುದು ಸುಲಭವಾಗುವುದು. ಇದರ ಜೊತೆಗೆ ಡೆಂಗ್ಯೂ ಬಂದವರು ಬೇಗನೆ ಗುಣಮುಖರಾಗಲು ಈ ಆಹಾರಕ್ರಮಗಳನ್ನು ಅನುಸರಿಸುವುದು ಒಳ್ಳೆಯದು:

ಚಿಕನ್‌ಗುನ್ಯಾ ಲಕ್ಷಣಗಳು
* ಜ್ವರ
* ಮೈಯಲ್ಲಿ ಗುಳ್ಳೆಗಳು ಏಳುವುದು
* ಸಂಧಿ ನೋವು
* ಸ್ನಾಯುಗಳಲ್ಲಿ ನೋವು
* ಸಂಧಿಗಳಲ್ಲಿ ಊತ
* ಸುಸ್ತು
* ತಲೆನೋವು
* ವಾಂತಿ
* ತಲೆಸುತ್ತು
ಸೋಂಕು ಇರುವ ಸೊಳ್ಳೆ ಕಚ್ಚಿ 6 ದಿನವಾದ ಬಳಿಕ ಈ ಲಕ್ಷಣಗಳು ಖಂಡು ಬರುವುದು. ಹೀಗೆ ಲಕ್ಷಣಗಳು ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆಯಿರಿ ಜೊತೆಗೆ ಈ ಆಹಾರಗಳನ್ನು ಸೇವಿಸಿ.

1. ಎಳನೀರು
ಜ್ವರ ಬಂದಾಗ ಎಳನೀರು ಕುಡಿಯಬಾರದೆಂದೇ ಯೋಚಿಸುತ್ತಾರೆ, ಆದರೆ ಚಿಕನ್‌ಘುನ್ಯಾ ಬಂದಾಗ ಎಳನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬಹುದು, ಜೊತೆಗೆ ದೇಹದ ಒಳಗೆ ಇರುವ ಕಶ್ಮಲಗಳನ್ನು ಕೂಡ ಹೊರ ಹಾಕಲು ಸಹಕಾರಿ.

2. ಸೊಪ್ಪು ಹಾಗೂ ತರಕಾರಿಗಳು
ಸೊಪ್ಪಿನ ಆಹಾರ ಹೆಚ್ಚಾಗಿ ಶೇವಿಸಿ. ಜೊತೆಗೆ ತರಕಾರಿಗಳ ಸೂಪ್ ಜೀರ್ಣಕ್ರಿಯೆಗೆ ಸಹಕಾರಿ. ವಿಟಮಿನ್ ಎ ಅಧಿಕವಿರುವ ಆಹಾರ ಸೇವಿಸಿ.

3. ಸೂಪ್ ಸೇವಿಸಿ
ವೆಜ್ ಅಥವಾ ಚಿಕನ್ ಸೂಪ್ ಸುಸ್ತು ಕಡಿಮೆ ಮಾಡಿ ಬೇಗನೆ ಚೇತರಿಸಲು ಸಹಾಯ ಮಾಡುತ್ತದೆ. ಸೂಪ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಬ್ರೊಕೋಲಿ ಸೂಪ್ ಮಾಡಿ ಕೊಡಿ. ಇದರಲ್ಲಿ ವಿಟಮಿನ್ ಸಿ ಅಧಿಕವಿದೆ. ಜೊತೆಗೆ ಸೂಪ್ ಕುಡಿಯುವುದರಿಂದ ಚಿಕನ್‌ಗುನ್ಯಾದ ರೋಗ ಲಕ್ಷಣಗಳು ಕಡಿಮೆಯಾಗುವುದು.

4. ಪಪ್ಪಾಯಿ ಎಲೆಯ ರಸ
ಚಿಕನ್‌ಗುನ್ಯಾ ಅಥವಾ ಡೆಂಗ್ಯೂ ಬಂದಾಗ ಪಪ್ಪಾಯಿ ಎಲೆಯ ರಸ ಕುಡಿಯುವುದರಿಂದ ದೇಹದಲ್ಲಿ ಪ್ಲೇಟ್‌ಲೆಟ್ ಹೆಚ್ಚಾಗುವುದು. ಪ್ಲೇಟ್‌ಲೆಟ್ ಕಡಿಮೆಯಾದರೆ ಜೀವಕ್ಕೆ ಅಪಾಯ. ಪ್ಲೇಟ್‌ಲೆಟ್ ಹೆಚ್ಚಿಸುವುದರಲ್ಲಿ ಪಪ್ಪಾಯಿ ಎಲೆಯ ರಸ ಸಹಾಯ ಮಾಡುತ್ತದೆ. ಒಂದು ಚಮಚದಂತೆ ಮೂರು ಹೊತ್ತು ಕುಡಿಯಬೇಕು. ಹೆಚ್ಚು ಕುಡಿಯಬೇಡಿ ಬೇಧಿಯಾಗಬಹುದು.

5.ಹರ್ಬ್ಸ್
ತುಳಸಿ ಎಲೆ ಅಲೆಗೆದು ತಿನ್ನುವುದರಿಂದ ಜ್ವರ ಕಡಿಮೆಯಾಗುವುದು, ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇನ್ನು ಸೋಂಪು, ಅಜ್ವೈನ್, ಜೀರಿಗೆ, ಬೆಲ್ಲ, ನಿಂಬೆರಸ ಇವೆಲ್ಲಾ ಸಂಧಿ ನೋವು ಕಡಿಮೆ ಮಾಡಲು ಸಹಾಯ ಮಾಡುವುದು. ಇವುಗಳನ್ನು ಆಹಾರದಲ್ಲಿ ಸೇರಿಸಿ.

6. ವಿಟಮಿನ್ ಸಿ ಅತ್ಯಧಿಕ ಇರುವ ಆಹಾರಗಳು
* ಕಿತ್ತಳೆ
* ಕಿವಿ ಹಣ್ಣು
* ಸೀಬೆಕಾಯಿ
* ಬ್ರೊಕೊಲಿ
* ಟೊಮೆಟೊ
* ನಿಂಬೆರಸ
ಇವುಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು.

7. ಅಮೃತ ಬಳ್ಳಿಯ ರಸ
ಚಿಕನ್‌ಗುನ್ಯಾಗೆ ಅಮೃತ ಬಳ್ಳಿಯ ರಸ ರಾಮಬಾಣವಾಗಿದೆ. ಅಮೃತ ಬಳ್ಳಿ ರಸ ನೀರಿನಲ್ಲಿ ಹಾಕಿ ದಿನದಲ್ಲಿ ಎರಡು ಬಾರಿ ತೆಗೆದುಕೊಳ್ಳುವುದರಿಂದ ಒಳ್ಳೆಯ ಫಲಿತಾಂಶ ಉಂಟಾಗುವುದು. ಅಮೃತ ಬಳ್ಳಿ ದಂಟನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿಯಬಹುದು.
ನೆನಪಿಡಿ: ಅತಿಯಾಗಿ ಕುಡಿಯಬಾರದು

8. ಬಾರ್ಲಿ ಗಂಜಿ
ಬಾರ್ಲಿ ಗಂಜಿ ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದೆ. ಇದು ಲಿವರ್‌ನಲ್ಲಿರುವ ಕಶ್ಮಲವನ್ನು ಹೊರ ಹಾಕಲು ಕೂಡ ಸಹಕಾರಿ.

9. ಹಣ್ಣುಗಳು
ಮೂಸಂಬಿ
ಬಾಳೆಹಣ್ಣು
ಪಪ್ಪಾಯಿ
ಸೇಬು
ಕಿವಿಹಣ್ಣು
ದಾಳಿಂಬೆ
ಇವುಗಳನ್ನು ಹೆಚ್ಚಾಗಿ ಸೇವಿಸಿ.

ಚಿಕನ್‌ಗುನ್ಯಾ ಆದಾಗ ಯಾವ ಆಹಾರಗಳಿಂದ ದೂರವಿರಬೇಕು?
* ಸಿಹಿ ಪದಾರ್ಥಗಳು, ಟೀ, ಕಾಫಿ ಮುಟ್ಟಲೇಬೇಡಿ
* ಎಣ್ಣೆ ಪದಾರ್ಥಗಳು, ಖಾರ ಪದಾರ್ಥಗಳಿಂದ ದೂರವಿರಿ
* ಜಂಕ್ ಫುಡ್ಸ್, ಬೀದಿ ಬದಿಯ ಆಹಾರಗಳನ್ನು ದೂರವಿಡಿ
ಚಿಕನ್‌ಗುನ್ಯಾ ಸೋಂಕು ತಗುಲಿದ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಕಚ್ಚಿದಾಗ ಹರಡುವುದು. ಸೊಳ್ಳೆ ಚಿಕನ್‌ಗುನ್ಯಾ ಇರುವ ವ್ಯಕ್ತಿಗೆ ಕಚ್ಚಿ, ಆ ಸೊಳ್ಳೆ ಮತ್ತೊಬ್ಬರಿಗೆ ಕಚ್ಚಿದರೆ ಹರಡುವುದು.
ಚಿಕನ್‌ಗುನ್ಯಾ ಕಾಯಿಲೆಯ ಲಕ್ಷಣವೆಂದರೆ ಜ್ವರದ ಜೊತೆಗೆ ಸಂಧಿನೋವು ಕೂಡ ಇರುತ್ತದೆ. ಇದರ ಜೊತೆಗೆ ತಲೆನೋವು, ಸ್ನಾಯುಗಳಲ್ಲಿ ನೋವು, ಸಂಧಿಗಳಲ್ಲಿ ಊತ, ಮೈಯಲ್ಲಿ ಬೊಬ್ಬೆ ಮುಂತಾದ ಲಕ್ಷಣಗಳೂ ಕಂಡು ಬರುವುದು. ಚಿಕನ್‌ಗುನ್ಯಾ ಮಾರಾಣಾಂತಿಕವಲ್ಲ. ಬೇಗನೆ ಚಿಕಿತ್ಸೆ ಪಡೆದರೆ ಒಂದು ವಾರದೊಳಗೆ ಸುಧಾರಿಸಬಹುದು. ಚಿಕಿತ್ಸೆ ಪಡೆಉವುದು ತುಂಬಾ ತಡವಾದರೆ ಸಾವಿನ ಸಂಖ್ಯೆ ಶೇ. 1ರಷ್ಟು ಇದೆ.
ಚಿಕನ್‌ಗುನ್ಯಾಗೆ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ. ಚಿಕನ್‌ಗುನ್ಯಾ ಬಂದಾಗ ಸಾಕಷ್ಟು ನೀರು ಕುಡಿಯುವಂತೆ ವೈದ್ಯರು ಸಲಹೆ ನೀಡುತ್ತಾರೆ. ಚಿಕನ್‌ಗುನ್ಯಾ ಬಂದಾಗ ನೋವು ನಿವಾರಕ ಮಾತ್ರೆಗಳು, ಜ್ವರ ಕಡಿಮೆ ಮಾಡುವ ಮಾತ್ರೆಗಳನ್ನು ನೀಡಲಾಗುವುದು. ಆದರೆ ibuprofen ಮತ್ತು aspirin ಮಾತ್ರೆಗಳನ್ನು ನೀಡಬಾರದು. ಸ್ವಯಂ ಚಿಕಿತ್ಸೆ ಬೇಡ... ವೈದ್ಯರ ಬಳಿ ಹೋಗಿ ಅವರು ಸೂಚಿಸಿದ ಮಾತ್ರೆಗಳನ್ನು ತೆಗೆದುಕೊಳ್ಳಿ.



Click it and Unblock the Notifications