Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತೂಕ ಇಳಿಸಿಕೊಳ್ಳಲು ಬಯಸುವವರಿಗೆ ವಿಭಿನ್ನ ಬಗೆಯ ಚಹಾಗಳು
ಯಾವುದೇ ಆದರೂ ಅತಿಯಾದರೆ ಅದು ಒಳ್ಳೆಯದು ಅಲ್ಲ ಎನ್ನುವುದನ್ನು ನಾವು ತಿಳಿದಿದ್ದೇವೆ. ದೇಹದ ಬೊಜ್ಜು ಕೂಡ ಹಾಗೆಯೇ. ಒಂದು ಸಲ ದೇಹದಲ್ಲಿ ಬೊಜ್ಜು ಆವರಿಸಿಕೊಂಡರೆ ಅದನ್ನು ಕಡಿಮೆ ಮಾಡಿಕೊಳ್ಳುವುದು ತುಂಬಾ ಕಷ್ಟ. ಹೀಗಾಗಿ ಇಂದಿನ ದಿನಗಳಲ್ಲಿ ಬೊಜ್ಜು ಕರಗಿಸಲು ಹಲವಾರು ರೀತಿಯ ವಿಧಾನಗಳು ಬಂದಿದೆ. ಇಂಟರ್ನೆಟ್ ನಲ್ಲಿ ಹುಡುಕಾಡಿದರೆ ನಿಮಗೆ ಹಲವಾರು ವಿಧಾನಗಳು ಸಿಗಬಹುದು. ಆದರೆ ಇದರಲ್ಲಿ ಯಾವುದು ನಿಮಗೆ ಹೊಂದಿಕೊಳ್ಳುವುದು ಮತ್ತು ನಿಜವಾಗಿಯೂ ಇದು ತೂಕ ಕಡಿಮೆ ಮಾಡುವುದೇ ಎಂದು ತಿಳಿಯಬೇಕು. ನಾವು ದಿನನಿತ್ಯವು ಕುಡಿಯುವ ಚಹಾ ಬಳಸಿಕೊಂಡು ತೂಕ ಇಳಿಸಿಕೊಳ್ಳಬಹುದು.
ತೂಕ ಇಳಿಕೆ ಮಾಡುವಂತಹ ಆಹಾರ ಕ್ರಮದಲ್ಲಿ ಚಹಾ ಬಳಸಿಕೊಂಡರೆ ಆಗ ವ್ಯಾಯಾಮ ಮಾಡಿಕೊಂಡು ತೂಕ ಕಡಿಮೆ ಮಾಡಬಹುದು. ಇಂದಿನ ದಿನಗಳಲ್ಲಿ ಹಲವಾರು ರೀತಿಯ ಚಹಾಗಳು ಮಾರುಕಟ್ಟೆಗೆ ಬಂದಿದ್ದು, ಇದೆಲ್ಲವೂ ತೂಕ ಕಡಿಮೆ ಮಾಡಿಕೊಡುತ್ತದೆ ಎಂದು ಹೇಳುತ್ತದೆ. ಚಹಾದಲ್ಲಿ ಇರುವಂತಹ ಫ್ಲಾವನಾಯ್ಡ್ ಗಳಿಂದಾಗಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಫ್ಲಾವನಾಯ್ಡ್ ಉರಿಯೂತ ಕಡಿಮೆ ಮಾಡುವುದು ಮತ್ತು ಹೃದಯ ಮತ್ತು ಮಧುಮೇಹದಿಂದ ಕಾಪಾಡುವುದು. ತೂಕ ಇಳಿಸಿಕೊಳ್ಳಲು ನೀವು ಬಳಸಬಹುದಾದ ವಿವಿಧ ರೀತಿಯ ಚಹಾದ ಬಗ್ಗೆ ನಾವು ಇಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಲು ತಯಾರಾಗಿ...

ವೈಟ್ ಟೀ
ವೈಟ್ ಟೀಯಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇವೆ ಮತ್ತು ಇದು ದೇಹದಲ್ಲಿ ಕೊಬ್ಬಿನ ಕೋಶಗಳನ್ನು ಇದು ವಿಘಟಿಸುವುದು. ಕೊಬ್ಬಿನ ಕೋಶಗಳು ಜಮೆಯಾಗದಂತೆ ಇದು ತಡೆಯುವುದು. ಇದರ ರುಚಿ ಲಘುವಾಗಿರುವುದು ಮತ್ತು ಕನಿಷ್ಠವಾಗಿ ಇದನ್ನು ಸಂಸ್ಕರಿಸಲಾಗಿದೆ. ಈ ಚಹಾವನ್ನು ಪ್ರತಿನಿತ್ಯವು ಕುಡಿದರೆ ಆಗ ಹೃದಯಾಘಾತ, ಚರ್ಮಕ್ಕೆ ವಯಸ್ಸಾಗುವುದು ಮತ್ತು ಬಾಯಿಯ ಆರೋಗ್ಯವನ್ನು ವೃದ್ಧಿಸುವುದು.

ಗ್ರೀನ್ ಟೀ
ಗ್ರೀನ್ ಟೀ ತೂಕ ಕಳೆದುಕೊಳ್ಳಲು ನೆರವಾಗುವುದು ಮಾತ್ರವಲ್ಲದೆ ಮತ್ತೆ ತೂಕ ಹೆಚ್ಚಹಾಗದಂತೆ ನೋಡಿಕೊಳ್ಳುವುದು. ಬ್ಲ್ಯಾಕ್ ಟೀ ಗೆ ಹೋಲಿಸಿದರೆ ಇದರಲ್ಲಿ ತುಂಬಾ ಕಡಿಮೆ ಕೆಫಿನ್ ಇದೆ ಮತ್ತು ಇದನ್ನು ದಿನದ ಯಾವುದೇ ಸಮಯದಲ್ಲೂ ಕುಡಿಯಬಹುದು. ವಿಶ್ವದೆಲ್ಲೆಡೆಯಲ್ಲಿ ಗ್ರೀನ್ ಟೀಯನ್ನು ಹೆಚ್ಚಹಾಗಿ ಕುಡಿಯಲಾಗುತ್ತದೆ ಮತ್ತು ಇದು ದೇಹದಲ್ಲಿ ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು.

ಯೆರ್ಬಾ ಮ್ಯಾಟೆ ಟೀ
ಯೆರ್ಬಾ ಮ್ಯಾಟೆ ಟೀಯನ್ನು ಎಲೆಗಳು ಮತ್ತು ಅದನ್ನು ತೊಗಟೆಯಿಂದ ಮಾಡಲಾಗುತ್ತದೆ. ಈ ಚಹಾವನ್ನು ನಿಯಮಿತವಾಗಿ ಕುಡಿಯುವ ಜನರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಆಗುವುದು ಮತ್ತು ತೂಕ ಹೆಚ್ಚಿಸಿಕೊಳ್ಳದಂತೆ ತಡೆಯುವುದು.

ಊಲಾಂಗ್ ಟೀ
ಊಲಾಂಗ್ ಟೀ ಕಡು ಮತ್ತು ಒಳ್ಳೆಯ ರುಚಿ ಹೊಂದಿರುವುದು. ಕೊಬ್ಬನ್ನು ಚಯಾಪಚಯಗೊಳಿಸಲು ಇದು ದೇಹಕ್ಕೆ ನೆರವಾಗುವುದು. ಈ ಚಹಾ ತೂಕ ಇಳಿಸಲು, ಟೈಪ್ 2 ಮಧುಮೇಹ ನಿವಾರಿಸಲು, ಕ್ಯಾನ್ಸರ್ ತಡೆಯಲು ಮತ್ತು ಹೃದಯದ ಆರೋಗ್ಯಕ್ಕೆ ನೆರವಾಗುವುದು.

ಶುಂಠಿ ಚಹಾ
ಶುಂಠಿ ಚಹಾ ಉರಿಯೂತ ಕಡಿಮೆ ಮಾಡುವುದು ಮತ್ತು ರಕ್ತದಲ್ಲಿನ ಒತ್ತಡ ನಿಯಂತ್ರಿಸಲು ಇದು ನೆರವಾಗುವುದು. ಶುಂಠಿ ಚಹಾವನ್ನು ಬೆಳಗ್ಗೆ ಉಪಾಹಾರದೊಂದಿಗೆ ಕುಡಿದರೆ, ಆಗ ದಿನವಿಡಿ ಹಸಿವು ಕಡಿಮೆ ಆಗುವುದು ಮತ್ತು ಹೊಟ್ಟೆ ತುಂಬಿದ ಭಾವನೆಯಿಂದಾಗಿ ಹೆಚ್ಚು ತಿನ್ನುವುದು ಕಡಿಮೆ ಆಗುವುದು.

ಪುದೀನಾ ಚಹಾ
ಪುದೀನಾ ಚಹಾವನ್ನು ತೂಕ ಇಳಿಸಿಕೊಳ್ಳುವ ಆಹಾರ ಕ್ರಮದಲ್ಲಿ ಬಳಸಿಕೊಳ್ಳಬಹುದು ಅಥವಾ ಅದರ ಸುವಾಸನೆ ತೆಗೆದುಕೊಳ್ಳಬಹುದು. ವೀಲಿಂಗ್ ಜೆಸ್ಯೂಟ್ ಯೂನಿವರ್ಸಿಟಿ ಮಾಡಿರುವಂತಹ ಸಂಶೋಧನೆ ಪ್ರಕಾರ ಪ್ರತಿನಿತ್ಯ ಎರಡು ಗಂಟೆಗೊಮ್ಮೆ ಐದು ದಿನಗಳ ಕಾಲ ತಾಜಾ ಪುದೀನಾದ ಸುವಾಸನೆ ಪಡೆದರೆ ಆಗ ಕೆಲವು ಕ್ಯಾಲರಿ ಮತ್ತು ಸಕ್ಕರೆ ದೇಹದಲ್ಲಿ ಕಡಿಮೆ ಆಗುವುದು ಎಂದು ಹೇಳಿದೆ.

ಬ್ಲ್ಯಾಕ್ ಟೀ
ನೀವು ಅಧಿಕ ಕೊಬ್ಬು ಇರುವಂತಹ ಆಹಾರ ಸೇವನೆ ಮಾಡಿದರೆ ಆಗ ಬ್ಲ್ಯಾಕ್ ಟೀ ತೂಕ ಏರಿಕೆಯಾಗದಂತೆ ತಡೆಯುವುದು. ಜೀರ್ಣಕ್ರಿಯೆ ವೇಳೆ ಕೊಬ್ಬು ಹೀರಿಕೊಳ್ಳದಂತೆ ಇದು ತಡೆಯುವುದು. ಇದು ಹೃದಯದ ಆರೋಗ್ಯ ವೃದ್ಧಿಸುವುದು, ಮಧುಮೇಹದ ಅಪಾಯ ತಗ್ಗಿಸುವುದು ಮತ್ತು ಒತ್ತಡದ ಮಟ್ಟ ಕಡಿಮೆ ಮಾಡುವುದು.



Click it and Unblock the Notifications
