ವೀರಭದ್ರಾಸನ: ಕುರ್ಚಿ-ಮೇಜು ಆಧಾರಿತ ಉದ್ಯೋಗಿಗಳಿಗೆ ವರದಾನ

By Manu

ವೀರ ಎಂದರೆ ಧೈರ್ಯ, ಭದ್ರ ಎಂದರೆ ಶುಭಕರ ಮತ್ತು ಆಸನ ಎಂದರೆ ಭಂಗಿ ಎಂಬ ಮೂರು ಪದಗಳಿಂದ ಮೂಡಿದ ಈ ಆಸನ ಹೆಸರಿಗೆ ತಕ್ಕಂತೆ ಧೈರ್ಯವಂತರಾಗಲು ಉತ್ತಮ ಶರೀರ ಹೊಂದಲು ನೆರವಾಗುತ್ತದೆ.

ವಿಶೇಷವಾಗಿ ತೋಳು, ತೊಡೆ, ಭುಜ ಮತ್ತು ಬೆನ್ನಿನ ಸ್ನಾಯುಗಳನ್ನು ಹುರಿಗಟ್ಟಿಸುವ ಈ ಆಸನ ಅಪ್ರತಿಮ ವೀರ, ಶಿವನ ಅವತಾರ ವೀರಭದ್ರನ ಸ್ಮರಣಾರ್ಥವಾಗಿ ಇಡಲಾಗಿದೆ. ಶಿವನ ಶಕ್ತಿ ಮತ್ತು ಸ್ಥೈರ್ಯವನ್ನು ಪಡೆಯಲು ಸಹಾ ಈ ಆಸನ ಪ್ರೇರಣೆ ನೀಡಬಲ್ಲುದು.

 Virabhadrasana Or Warrior Pose For Desk-Bound Jobs

ಇಂದಿನ ಯುಗದಲ್ಲಿ ಹೆಚ್ಚು ಹೆಚ್ಚು ಜನರು ಮೇಜು ಕುರ್ಚಿಯಾಧಾರಿತ ಅಂದರೆ ಇಡಿಯ ದಿನ ಕುಳಿತೇ ಇರುವಂತಹ ಕೆಲಸಗಳನ್ನೇ ಹೆಚ್ಚು ಹೆಚ್ಚಾಗಿ ಪಡೆಯುತ್ತಿದ್ದು ಇದರಿಂದ ನಿಜವಾಗಿ ದೇಹಕ್ಕೆ ಸಿಗಬೇಕಾಗಿದ್ದ ಶಾರೀರಿಕ ವ್ಯಾಯಾಮ ಸಿಗದೇ ಹೋಗುತ್ತಿದೆ. ವಾತ ಪಿತ್ತ ಕಫಗಳಿಗಾಗಿ ಸೂಕ್ತ ಯೋಗಾಸನಗಳು

ಹಿಂದಿನ ದಿನಗಳಲ್ಲಿ ತಮ್ಮ ಗಮ್ಯಸ್ಥಾನಗಳನ್ನು ತಲುಪುವ ಸಲುವಾಗಿ ಅನಿವಾರ್ಯವಾಗಿಯಾದರೂ ಜನರು ನಡೆಯುವ, ಟ್ರೇನ್ ಬಸ್ಸುಗಳಲ್ಲಿ ಪ್ರಯಾಣಿಸುವ ಮೂಲಕ ಶರೀರಕ್ಕೆ ಅಗತ್ಯವಾದ ವ್ಯಾಯಾಮವನ್ನು ದೊರಕಿಸಿಕೊಳ್ಳುತ್ತಿದ್ದರು. ಆದರೆ ಇದು ಸವಲತ್ತು ಹೆಚ್ಚಿದಂತೆ ದೇಹಕ್ಕೆ ಲಭಿಸುತ್ತಿರುವ ಚಟುವಟಿಕೆ ಕಡಿಮೆಯಾಗಿ ದೇಹ ಸೋಮಾರಿಯಾಗುತ್ತಾ ಹೋಗುತ್ತಿದೆ.

ಈ ಕೊರತೆಯನ್ನು ನೀಗಿಸಬಲ್ಲ ಸಾಮರ್ಥ್ಯ ವೀರಭದ್ರಾಸನಕ್ಕೆ ಇದೆ. ಇದನ್ನು ನಿಯಮಿತವಾಗಿ ಅನುಸರಿಸುವವರ ದೇಹ ಸುದೃಢ ಮತ್ತು ಆರೋಗ್ಯಕರವಾಗಿರುತ್ತದೆ. ಬನ್ನಿ, ಈ ಆಸನವನ್ನು ಅನುಸರಿಸುವ ಬಗೆಯನ್ನು ಹಂತಹಂತವಾಗಿ ಕಲಿಯೋಣ: ಮಿದುಳನ್ನು ಚುರುಕುಗೊಳಿಸುವ ಹೊಸ ಯೋಗ!

ಹಂತ 1
ನಮ್ಮಲ್ಲಿ ಬಹುತೇಕ ಜನರು ಬಲಗೈ ಅಭ್ಯಾಸವುಳ್ಳವರಾಗಿದ್ದಾರೆ. ನೀವು ಸಹಾ ಬಲಗೈ ಅಭ್ಯಾಸದವರಾಗಿದ್ದರೆ ಮೊದಲು ಬಲಗಾಲಿನಿಂದ ಮೊದಲು ಪ್ರಾರಂಭಿಸಿ. ಮೊದಲು ಎರಡೂ ಕಾಲುಗಳನ್ನು ಸುಮಾರು ಮೂರರಿಂದ ನಾಲ್ಕು ಅಡಿ ದೂರವಿರುವಂತೆ ಅಗಲಿಸಿ, ಕೈಗಳು ತೊಡೆಗಳಿಗೆ ತಾಕುವಂತೆ ನೆಟ್ಟಗೆ ನಿಲ್ಲಿ.
ಈ ಆಸನವನ್ನು ಅನುಸರಿಸಲು ಪ್ರಾರಂಭದಲ್ಲಿ ಗೋಡೆಯ ಸಹಾಯ ಪಡೆಯುವುದು ಉತ್ತಮ. ಬಲಗಾಲಿನ ಕಾಲುಬೆರಳುಗಳು ನೇರವಾಗಿ ಗೋಡೆಯ ತಳಕ್ಕೆ ತಾಕುವಂತೆ ನಿಲ್ಲಿ ವಾಕಿಂಗ್ ಮಾಡಿದರೆ ಸಾಲದು, ಯೋಗ ಬೇಕೇಬೇಕು

ಹಂತ 2
ಎಡಪಾದ ಬಲಪಾದಕ್ಕೆ ಸುಮಾರು ನಾಲ್ಕು ಅಡಿ ಹಿಂದೆ ಹದಿನೈದು ಡಿಗ್ರಿ ಕೋನದಲ್ಲಿರುವಂತೆ ಇರಿಸಿ. ಅಂದರೆ ಬಲಗಾಲಿನ ರೇಖೆ ಎಡಪಾದದ ಕಮಾನಿನ ನಡುವೆ ಬರುಂತಿರಬೇಕು. ಮುಖ ಗೋಡೆಗೆ ಅಡ್ಡವಾಗಿರಬೇಕು. ಈ ಹಂತದಲ್ಲಿ ಶರೀರ ಸಮತೋಲನದಲ್ಲಿರಬೇಕು. ಈಗ ಉಸಿರನ್ನು ಪೂರ್ಣವಾಗಿ ಒಳಗೆಳೆದುಕೊಳ್ಳಿ.

ಹಂತ 3
ಈಗ ಎರಡೂ ಕೈಗಳನ್ನು ಸೊಂಟದ ಮೇಲಿಟ್ಟುಕೊಂಡು ಮುಖ ಗೋಡೆಗೆ ಕಾಣುವಂತೆ ಬಲಕ್ಕೆ ತಿರುಗಿ.

ಹಂತ 4
ಇನ್ನೂ ಎರಡೂ ಕೈಗಳನ್ನು ಮುಂದಿನ ಗೋಡೆಗೆ ಬೆರಳುಗಳು ತಾಕುವಂತೆ ಇರಿಸಿ ಬಲಗಾಲನ್ನು ಕೊಂಚವೇ ಮಡಚಿ. ಕೈಗಳನ್ನು ಮಡಚಬೇಡಿ.

ಹಂತ 5
ಇಲ್ಲಿ ಪೂರ್ಣವಾಗಿ ಉಸಿರುಬಿಟ್ಟು ಎಡಪಾದವನ್ನು ಮೇಲೆತ್ತದೇ ಸೊಂಟವನ್ನು ಎಷ್ಟು ಸಾಧ್ಯವೋ ಅಷ್ಟು ಕೆಳಕ್ಕೆ ತನ್ನಿ. ಈ ಹಂತದಲ್ಲಿ ತಲೆಯನ್ನು ಬಲಬದಿಗೆ ತಿರುಗಿಸಿ. ಕಚೇರಿಯಲ್ಲೇ ಮಾಡಬಹುದಾದ ಆರು ಯೋಗಾಸನಗಳು

ಹಂತ 6
ದೇಹವನ್ನು ನಿಮಗೆ ಎಷ್ಟು ಸಾಧ್ಯವೋ ಅಷ್ಟು ಹೊತ್ತು ದೀರ್ಘವಾಗಿ ಉಸಿರಾಡುತ್ತಾ ಈ ಹಂತದಲ್ಲಿ ಪೂರ್ಣ ಸೆಳೆತ ನೀಡಿ ಹಾಗೇ ಇರಿ. ಈ ಸಮಯದಲ್ಲಿ ಸುಮಾರು ಹತ್ತು ಸಲವಾದರೂ ಪೂರ್ಣವಾಗಿ ಉಸಿರು ಎಳೆದುಕೊಂಡು ಹೊರಬಿಡಿ.

ಹಂತ 7
ಪ್ರಾರಂಭದಲ್ಲಿ ಗೋಡೆಯ ಸಹಾಯ ಪಡೆದುಕೊಂಡರೂ ಕ್ರಮೇಣ ಈ ಆಸನವನ್ನು ಅಭ್ಯಾಸ ಮಾಡುತ್ತಾ ಹೋದಂತೆ ಕೋಣೆಯ ಮಧ್ಯಭಾಗದಲ್ಲಿಯೂ ಅನುಸರಿಸಬಹುದು. ಗೋಡೆಗೆ ಆನಿಸುತ್ತಿದ್ದ ಕೈಗಳಲ್ಲಿ ಈಗ ನಿಮ್ಮ ನೆಚ್ಚಿನ ಆಯುಧವಿದೆ ಎಂದು ಕಲ್ಪಿಸಿಕೊಂಡು ವೀರಯೋಧನ ಪಾತ್ರವನ್ನು ಕಲ್ಪಿಸಿಕೊಳ್ಳಿ.

ಹಂತ 8
ಸ್ನಾಯುಗಳು ಸಾಕು ಎಂದು ಕೊಂಚ ನೋವು ನೀಡುವ ಮೂಲಕ ಸೂಚನೆ ನೀಡುತ್ತವೆ. ಆ ಬಳಿಕ ಹೆಚ್ಚು ನಿಲ್ಲದೇ ಕೈಗಳನ್ನು ಮೇಲಕ್ಕೆತ್ತಿ ಮಡಚಿದ ಕಾಲನ್ನು ಮತ್ತೆ ನೆಟ್ಟಗೆ ಮಾಡಿ ಮೊದಲಿನ ಹಂತಕ್ಕೆ ಬನ್ನಿ.್

ಹಂತ 9
ಕೈಗಳನ್ನು ನಿಧಾನವಾಗಿ ಇಳಿಸುತ್ತಾ ಬಲಕ್ಕೆ ತಿರುಗಿಸಿದ್ದ ಕುತ್ತಿಗೆಯನ್ನು ಮುಂದೆ ತನ್ನಿ.

ಹಂತ 10
ಇದೇ ಪ್ರಕ್ರಿಯೆಯನ್ನು ಈಗ ಎಡಗಾಲಿನಿಂದ ಪ್ರಾರಂಭಿಸಿ ಇನ್ನೊಂದು ಬದಿಗೂ ಮೊದಲು ನೀಡಿದಷ್ಟೇ ಹೊತ್ತು ನೀಡಿ ಆಸನವನ್ನು ಅನುಸರಿಸಿ.

ಹಂತ 11
ಈ ಆಸನದ ಉತ್ತಮ ಪ್ರಯೋಜನ ಪಡೆದಲು ಪ್ರಾರಂಭದಲ್ಲಿ ನಾಲ್ಕೈದು ಬಾರಿಯಂತೆ ಬಳಿಕ ಹತ್ತು ಹನ್ನೆರಡು ಬಾರಿ ಪುನರಾವರ್ತಿಸಿ. ಬಳಿಕ ನಿರಾಳರಾಗಿ.

ಈ ಆಸನದ ಪ್ರಯೋಜನಗಳು
• ಈ ಆಸನದಿಂದ ವಿಶೇಷವಾಗಿ ತೋಳುಗಳು, ಕೆಳಬೆನ್ನು ಮತ್ತು ಕಾಲಿನ ಸ್ನಾಯುಗಳು ಹುರಿಗಟ್ಟುತ್ತವೆ.
• ದೇಹದ ದಾರ್ಢ್ಯತೆ ಹೆಚ್ಚುತ್ತದೆ.
• ದೇಹವನ್ನು ಸಮತೋಲನದಲ್ಲಿರಿಸುವ ಸಾಮರ್ಥ್ಯ ಹೆಚ್ಚುತ್ತದೆ.
• ಇಡಿಯ ದಿನ ಒಂದೇ ಭಂಗಿಯಲ್ಲಿ ಕುಳಿತು ಜಡಗಟ್ಟಿದ್ದ ಭುಜದ ಸ್ನಾಯುಗಳು ಸಡಿಲಗೊಳ್ಳುತ್ತವೆ.
• ಮಾನಸಿಕ ದುಗುಡ, ಉದ್ವೇಗ, ಒತ್ತಡಗಳಿಂದ ಹೊರಬರಲು ನೆರವಾಗುತ್ತದೆ.
• ದೇಹಕ್ಕೆ ನವತಾರುಣ್ಯ ನೀಡುತ್ತದೆ.
• ಈ ಆಸನ ಎಲ್ಲಾ ವಯಸ್ಸಿನವರಿಗೂ ಸೂಕ್ತವಾಗಿದೆ. ಗರ್ಭಿಣಿಯರು ಆರನೆಯ ತಿಂಗಳಿನಿಂದ ಹೆರಿಗೆಯ ದಿನ ಸಮೀಪಿಸುವವರೆಗೂ ಅನುಸರಿಸಿದಷ್ಟೂ ಲಾಭಕರ.

ಎಚ್ಚರಿಕೆ:
• ಈ ಆಸನದಲ್ಲಿ ಕೆಳಬೆನ್ನು ಮತ್ತು ಬೆನ್ನುಹುರಿ ಹೆಚ್ಚಿನ ಸೆಳೆತ ಪಡೆಯುವ ಕಾರಣ ಈ ಭಾಗಗಳಲ್ಲಿ ತೊಂದರೆ ಇದ್ದವರು ಯೋಗಶಿಕ್ಷಕರ ಸಲಹೆ ಮತ್ತು ನಿರ್ದೇಶನದ ಮೂಲಕವೇ ಈ ಆಸನವನ್ನು ಅನುಸರಿಸಬೇಕು. ಕೆಳಬೆನ್ನಿನ ನೋವು, ಸ್ಲಿಪ್ ಡಿಸ್ಕ್ ತೊಂದರೆ ಇದ್ದವರಿಗೆ ಈ ಆಸನ ಸೂಕ್ತವಲ್ಲ.
• ಅಧಿಕ ರಕ್ತದೊತ್ತಡ ಇರುವ ರೋಗಿಗಳಿಗೂ ಈ ಆಸನ ಸೂಕ್ತವಲ್ಲ
• ಮೊಣಗಂಟಿನ ನೋವು, ಸಂಧಿವಾತದ ರೋಗಿಗಳೂ ಈ ಆಸನವನ್ನು ವೈದ್ಯರ ಅನುಮತಿಯಿಲ್ಲದೇ ಅನುಸರಿಸಕೂಡದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Virabhadrasana Or Warrior Pose For Desk-Bound Jobs

"Veera" means warrior, courageous; "Bhadra" means good, auspicious; "Asana" means posture. This pose is considered to be the best in strengthening the arms, thighs, shoulders and back muscles. The pose is named after a fierce warrior Veerbhadra, an incarnation of Lord Shiva. You can relate this pose to strength and courage.
X
Desktop Bottom Promotion