Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಈ ಜ್ಯೂಸ್ ಕುಡಿಯಿರಿ, ಬರೋಬ್ಬರಿ 5 ಕೆಜಿ ತೂಕ ಕಳೆದುಕೊಳ್ಳಿರಿ!
ಕೆಲ ತಿಂಗಳ ಹಿಂದೆ ನಿಮಗೆ ಇಷ್ಟವಾಗಿದ್ದ ಆ ಕಪ್ಪು ಡ್ರೆಸ್ ಈಗ ಹಾಕಿಕೊಳ್ಳಲು ಹೋದಾಗ ಇದು ನಿಮ್ಮ ಶರೀರಕ್ಕೆ ಅತಿ ಬಿಗಿಯಾಗಿದ್ದರೆ ಹೇಗೆನಿಸಬೇಕು? ಹೆಚ್ಚಿರುವ ತೂಕದ ಚಿಂತೆ, ಬದಲಾದ ದೇಹದ ಗಾತ್ರದ ಚಿಂತೆ ಒಂದು ಕಡೆಯಾದರೆ ನೆಚ್ಚಿನ ಉಡುಪನ್ನು ತೊಡಲಾಗದಿರುವ ಹಪಾಹಪಿ ಇನ್ನೊಂದೆಡೆ. ಇದಕ್ಕೆಲ್ಲಾ ಗೂಬೆ ಕೂರಿಸಲೇಬೇಕಾದರೆ ಇಂದಿನ ಜೀವನಶೈಲಿಯ ಮೇಲೆ ಧಾರಾಳವಾಗಿ ಕೂರಿಸಬಹುದು.
ಕಡಿಮೆಯಾದ ದೈಹಿಕ ವ್ಯಾಯಾಮ, ತಿನ್ನುವ ಸಿದ್ಧ ಆಹಾರಗಳಿಗೂ ಇನ್ನೊಂದು ಗೂಬೆ ಕೂರಿಸಬಹುದು. ಇದು ಕೇವಲ ನಿಮ್ಮೊಬ್ಬರ ಚಿಂತೆಯಲ್ಲ, ಭಾರತದ ಬಹುತೇಕ ಗೃಹಿಣಿಯರ ಕಥೆಯೇ ಆಗಿದೆ.

ವಿಶೇಷವಾಗಿ ಹೆಚ್ಚಿದ ಸೊಂಟದ ಅಳತೆ ಎಲ್ಲರ ಸಮಾನ ಚಿಂತೆಯ ವಿಷಯವಾಗಿದೆ. ಇಂದಿನ ದಿನಗಳಲ್ಲಿ ಬಿಗಿಯುಡುಪು ಮತ್ತೆ ಫ್ಯಾಷನ್ ಆಗುತ್ತಿದೆ. ಈ ಸಮಯದಲ್ಲಿ ಮೈತೂಕ ಹೆಚ್ಚಿರುವುದು ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಲ್ಲದೇ ಹೆಚ್ಚಿದ ತೂಕದ ಕಾರಣ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿರುವುದು ಚಿಂತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ದೇಹದ ತೂಕ ನಿಯಂತ್ರಿಸುವ ಡಯಟ್ ಸೂಪ್
ಈ ತೂಕವನ್ನು ಸಾಧ್ಯವಾದಷ್ಟು ಬೇಗ ಕಡಿಮೆಗೊಳಿಸಿ ನಿಮ್ಮ ನೆಚ್ಚಿನ ಉಡುಪನ್ನು ಮುಂದಿನ ವಾರದ ಪ್ರಮುಖ ಕಾರ್ಯಕ್ರಮಕ್ಕೆ ಹಾಕಿಕೊಳ್ಳಲೇಬೇಕೆಂಬ ಬಯಕೆ ನಿಮಗಿದ್ದರೆ ಕೊಂಚ ವ್ಯಾಯಾಮ ಮತ್ತು ನಿಮ್ಮ ನೆಚ್ಚಿನ ಸಿದ್ಧ ಆಹಾರಗಳಿಗೆ ವಿದಾಯ ಹೇಳುವುದು ಅನಿವಾರ್ಯ. ಇದರೊಂದಿಗೆ ಕೊಬ್ಬು ಶೀಘ್ರವಾಗಿ ಕರಗಿಸಬಲ್ಲ ಈ ಪೇಯವನ್ನು ನಿತ್ಯವೂ ಕುಡಿದರೆ ಒಂದೇ ವಾರದಲ್ಲಿ ಐದು ಕೇಜಿಯಷ್ಟು ಹೆಚ್ಚುವರಿ ಕೊಬ್ಬನ್ನು ಕಳೆದುಕೊಳ್ಳಲು ಸಾಧ್ಯ. ಹೌದೇ ಎಂದು ಹುಬ್ಬೇರಿಸಿದವರು ಕೇಳುವ ಪ್ರಶ್ನೆ "ಹೇಗೆ?" ಇದಕ್ಕೆ ಉತ್ತರ ಇಲ್ಲಿದೆ:
ಅಗತ್ಯವಿರುವ ಸಾಮಾಗ್ರಿಗಳು:
*ಕ್ಯಾರೆಟ್ ಜ್ಯೂಸ್: ಮೂರು ದೊಡ್ಡ ಚಮಚ
*ಸೌತೆಕಾಯಿ ಜ್ಯೂಸ್ - ಮೂರು ದೊಡ್ಡ ಚಮಚ
*ಅಗಸೆ ಬೀಜಗಳು - ಒಂದು ದೊಡ್ಡ ಚಮಚ ತೂಕವನ್ನು ಇಳಿಸಲು ಅನುಸರಿಸಿ ಆಯುರ್ವೇದ ಮಾರ್ಗ...
ಕ್ಯಾರೆಟ್, ಸೌತೆ ಜ್ಯೂಸ್ ಹಾಗೂ ಅಗಸೆ ಬೀಜಗಳ ಈ ಸಂಯೋಜನೆಯನ್ನು ನಿತ್ಯವೂ ಕುಡಿಯುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಕರಗಿಸಲು ಸಾಧ್ಯವಿದೆ. ಏಕೆಂದರೆ ಅಗಸೆ ಬೀಜಗಳಲ್ಲಿರುವ ಕಠಿಣ ನಾರು. ಇದನ್ನು ಅರಗಿಸಿಕೊಳ್ಳಲು ದೇಹಕ್ಕೆ ಅನಿವಾರ್ಯವಾಗಿ ಕೊಬ್ಬನ್ನು ದಹಿಸಲೇಬೇಕಾಗುತ್ತದೆ.
ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಈ ಜ್ಯೂಸ್ ಅನ್ನು ಕುಡಿದು ಮುಂದಿನ ಸುಮಾರು ಮುಕ್ಕಾಲು ಗಂಟೆಯವರೆಗೆ ಏನನ್ನೂ ಸೇವಿಸದಿದ್ದರೆ ಈ ಪೇಯದ ಪರಿಣಾಮ ಗರಿಷ್ಠ ಮಟ್ಟಕ್ಕೆ ಪಡೆಯಬಹುದು. ಅಲ್ಲದೇ ಇಡಿಯ ದಿನ ಹೊಟ್ಟೆ ತುಂಬಿದಂತೆ ಅನ್ನಿಸುವ ಕಾರಣ ಅನಗತ್ಯ ಆಹಾರಗಳನ್ನು ತಿನ್ನದಿರುವ ಮೂಲಕವೂ ಇಳಿದಿದ್ದ ತೂಕ ಮತ್ತೆ ಏರದಂತೆ ನೋಡಿಕೊಳ್ಳಬಹುದು. ದೇಹದ ತೂಕ ಇಳಿಸಲು ದಿನಕ್ಕೆರಡು ಚಮಚ ತುಪ್ಪ ಸಾಕು!
ತಯಾರಿಕಾ ವಿಧಾನ:
*ಪ್ರತಿದಿನ ಬೆಳಿಗ್ಗೆ ಈ ರಸಗಳನ್ನು ತಾಜಾ ಆಗಿ ತಯಾರಿಸಿಕೊಳ್ಳಬೇಕು.
*ಒಂದು ಕ್ಯಾರೆಟ್ ತುರಿದು ಮಿಕ್ಸಿಯ ಬ್ಲೆಂಡರ್‌ನಲ್ಲಿ ಹಾಕಿ ಅರೆದು ಹಿಂಡಿ ರಸ ಸಂಗ್ರಹಿಸಿ.
*ಇದೇ ರೀತಿಯಾಗಿ ಸೌತೆಯ ರಸವನ್ನೂ ಸಂಗ್ರಹಿಸಿ.
*ಬಳಿಕ ಚಿಕ್ಕ ಜಾರ್‌ನಲ್ಲಿ ಒಂದು ಚಿಕ್ಕ ಚಮಚ ಅಗಸೆ ಬೀಜ ಹಾಕಿ ಒಣದಾಗಿ ಪುಡಿಮಾಡಿ.
*ಒಂದು ಕಪ್‌ನಲ್ಲಿ ಮೇಲೆ ತಿಳಿಸಿದ ಪ್ರಮಾಣವನ್ನು ಚೆನ್ನಾಗಿ ಮಿಶ್ರಣ ಮಾಡಿ.
*ಅದ್ಭುತ ಜ್ಯೂಸ್ ಈಗ ತಯಾರಾಗಿದೆ. ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ. ಅಗತ್ಯವಿದ್ದರೆ ಕೊಂಚ ಉಗುರುಬೆಚ್ಚನೆಯ ನೀರನ್ನು ಸೇರಿಸಬಹುದು.
ಎಚ್ಚರಿಕೆ
ಬರೇ ಈ ಪೇಯವನ್ನು ಕುಡಿದು ದಿನದ ಅವಧಿಯಲ್ಲಿ ಹಿಂದಿನಂತೆ ಬೇಕಾಬಿಟ್ಟಿ ತಿನ್ನುವುದು ತರವಲ್ಲ. ಬದಲಿಗೆ ಇಡಿಯ ವಾರ ನಿಮ್ಮಿಂದ ಸಾಧ್ಯವಾದಷ್ಟು ದೈಹಿಕ ಚಟುವಟಿಕೆ ಹೆಚ್ಚಿಸುವುದು ಹಾಗೂ ಎಣ್ಣೆ, ಕೊಬ್ಬಿನ, ಮೈದಾ ಆಹಾರಿತ ಆಹಾರಗಳಿಗೆಲ್ಲಾ ವಿದಾಯ ಹೇಳುವುದೂ ಅಗತ್ಯ. ಅನಂತ್ ಅಂಬಾನಿ 108 ಕೆ.ಜಿ ತೂಕ ಇಳಿಸಿಕೊಂಡ ಫಿಟ್ನೆಸ್ ಸೀಕ್ರೆಟ್
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


