ಆರೋಗ್ಯವೇ ಮಹಾಭಾಗ್ಯ, ಎಂಬ ನಾಣ್ಣುಡಿ ಮರೆಯದಿರಿ

By Arshad

ನಮ್ಮ ದೇಹದ ಬಗ್ಗೆ ನಾವು ತಿಳಿದುಕೊಳ್ಳುವುದು ಇನ್ನೂ ಬಹಳಷ್ಟೇ ಇದೆ. ನಮ್ಮ ದೇಹದ ಎಲ್ಲಾ ಕ್ರಿಯೆಗಳೂ ಮೆದುಳಿನ ಆದೇಶದಂತೆಯೇ ನಡೆಯುತ್ತದೆ ತಾನೇ. ಅಂತೆಯೇ ನಮ್ಮ ಎಲ್ಲಾ ಅಂಗಗಳೂ ಮೆದುಳಿಗೆ ಕೆಲವು ಸೂಚನೆ ನೀಡುವ ಮೂಲಕ ತಮಗೇನು ಬೇಕು ಎಂದೂ ಕೇಳುತ್ತವಂತೆ. ಇದಕ್ಕೆ ಅಪ್ಪಟ ಉದಾಹರಣೆ ಎಂದರೆ ವ್ಯಾಯಾಮದ ಮೂಲಕ ಸ್ನಾಯುಗಳನ್ನು ಬೆಳೆಸುವುದು.

ಸತತವಾಗಿ ಕೆಲವು ಸ್ನಾಯುಗಳಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಚಟುವಟಿಕೆ ನೀಡುವ ಮೂಲಕ ಆ ಸ್ನಾಯು ತನ್ನ ಅವಶ್ಯಕತೆಗೂ ಮೀರಿದ ಭಾರ ಬೀಳುತ್ತಿದೆ, ನಮಗೆ ಹೆಚ್ಚಿನ ಸಾಮರ್ಥ್ಯ ನೀಡಿ ಎಂದು ಕೇಳಿಕೊಳ್ಳುತ್ತದೆ. ಇದನ್ನು ಮನ್ನಿಸಿದ ಮೆದುಳು ಆ ಸ್ನಾಯುವಿನ ಅಗತ್ಯಕ್ಕೆ ತಕ್ಕಂತೆ ಬೆಳೆಸಿಕೊಳ್ಳಲು ಆದೇಶವನ್ನು ನೀಡುತ್ತದೆ. ಇಂತಹ ಆದೇಶಗಳನ್ನು ಕೃತಕವಾಗಿ ನೀಡುವ ಔಷಧಿಗಳನ್ನೇ 'ಸ್ಟೆರಾಯ್ಡು' ಎಂದು ಕರೆಯುತ್ತೇವೆ. ಉತ್ತಮ ಆರೋಗ್ಯಕ್ಕೆ ಸಿಂಪಲ್‌ ಮನೆಮದ್ದು, ಎಂದಿಗೂ ನೆನಪಿರಲಿ

ದೇಹದ ಪ್ರತಿ ಅಂಗವೂ ಮೆದುಳಿನೊಂದಿಗೆ ಸತತವಾಗಿ ಸಂಪರ್ಕದಲ್ಲಿರುತ್ತದೆ ಹಾಗೂ ತನ್ನ ಕ್ಷೇಮಸಮಾಚಾರವನ್ನು ತಿಳಿಸುತ್ತಾ ಇರುತ್ತವೆ. ಒಂದು ವೇಳೆ ಚಿಕ್ಕಪುಟ್ಟ ತೊಂದರೆಯಾದರೆ ಈ ತೊಂದರೆಯನ್ನೂ ತಿಳಿಸುತ್ತವೆ. ಎಷ್ಟೋ ಸಲ ಈ ಸೂಚನೆಗಳು ನಮ್ಮ ಗಮನಕ್ಕೂ ಬರುತ್ತವೆ. ಆದರೆ ಕಟ್ಟಾ ಸೋಮಾರಿಗಳೂ, ಚಿಕ್ಕ ಪುಟ್ಟ ನೋವುಗಳಿಗೆ ಲೆಕ್ಕವೇ ಇಡದ ನಾವು ಈ ಸೂಚನೆಗಳನ್ನು ಗಮನಕ್ಕೇ ತೆಗೆದುಕೊಳ್ಳುವುದಿಲ್ಲ. ಈ ಕಡೆಗಣನೆ ಕಡೆಗೆ ಭಾರಿಯಾಗಿ ಪರಿಣಮಿಸಬಹುದು. ಇದಕ್ಕೆ ಜ್ವಲಂತ ಉದಾಹರಣೆ ಎಂದರೆ ಮೂತ್ರಪಿಂಡದಲ್ಲಿ ಕಲ್ಲು ಮೂಡುವುದು. ಅನಾರೋಗ್ಯದ ಕೂಪಕ್ಕೆ ತಳ್ಳುವ-ನಿತ್ಯ ಬಳಕೆಯ ವಸ್ತುಗಳು!

ಮೂತ್ರದಲ್ಲಿನ ಲವಣಗಳನ್ನು ಶುದ್ಧೀಕರಿಸುವ ವೇಳೆ ಮೂತ್ರಪಿಂಡಗಳೊಳಗೆ ಇವು ಸಾಂದ್ರೀಕೃತವಾಗಿ ಘನರೂಪ ಪಡೆಯುತ್ತವೆ. ನಂತರ ಈ ಚಿಕ್ಕ ಕಲ್ಲಿಗೆ ಇನ್ನೂ ಹೆಚ್ಚಿನ ಲವಣಗಳು ಅಂಟಿಕೊಳ್ಳುತ್ತಾ ಕ್ರಮೇಣ ದೊಡ್ಡಗಾತ್ರ ಪಡೆಯುತ್ತವೆ. ಎಲ್ಲಿಯವರೆಗೆ ಇವು ಒಂದು ಹಂತದಷ್ಟು ದೊಡ್ಡದಾಗುವುದಿಲ್ಲವೋ ಅಲ್ಲಿಯವರೆಗೆ ಇದರ ಇರವೇ ಗೊತ್ತಿರುವುದಿಲ್ಲ. ಬಳಿಕ ತಾಳಿಕೊಳ್ಳುವ ಗಾತ್ರಕ್ಕೂ ಹೆಚ್ಚಾದಾಗ ಇದು ಮೂತ್ರಪಿಂಡದ ಒಳಗೋಡೆಗಳ ಮೇಲೆ ಒತ್ತಡ ಹೇರಿ ನೋವನ್ನುಂಟುಮಾಡುತ್ತದೆ. ಬಳಿಕವೇ ನಾವು ವೈದ್ಯರ ಬಳಿ ಓಡುತ್ತೇವೆ. ಆರೋಗ್ಯಕಾರಿ ಜೀವನ ಶೈಲಿಗೆ ಪಂಚ ಸೂತ್ರ

ಆಗಲೇ ಸೂಕ್ತ ಔಷಧಿಗಳನ್ನು ಪಡೆದರೆ ಈ ಕಲ್ಲು ದೊಡ್ಡದಾಗುವುದನ್ನು ತಡೆದು ಸುಲಭವಾಗಿ ಕರಗಿಸಿಬಿಡಬಹುದು. ಬನ್ನಿ, ನಮ್ಮ ದೇಹ ನೀಡುವ ಇಂತಹ ಕೆಲವು ಸೂಚನೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಮೀನಿಗಾಗಿ ಹಪಾಹಪಿ

ಮೀನಿಗಾಗಿ ಹಪಾಹಪಿ

ಕೆಲವೊಮ್ಮೆ ಮೀನು ತಿನ್ನಬೇಕೆಂಬ ಆಸೆ ಮನದಲ್ಲಿ ಅತಿಯಾಗತೊಡಗುತ್ತದೆ. ಅದರಲ್ಲೂ ಮೀನಿನ ಅಥವಾ ಸಾಗರ ಉತ್ಪನ್ನಗಳ ಚಿತ್ರಗಳನ್ನು ನೋಡಿದಾಕ್ಷಣ ಈ ಬಯಕೆ ಭುಗಿಲೇಳುತ್ತದೆ. ವಾಸ್ತವವಾಗಿ ದೇಹದಲ್ಲಿ ಅಯೋಡಿನ್ ಪ್ರಮಾಣ ಕಡಿಮೆಯಾಗಿದೆ ಎಂಬುದನ್ನು ಮೆದುಳು ಸೂಚಿಸುವುದೇ ಈ ಬಯಕೆಯಾಗಿದೆ.

ಸಾಲಾಡ್ ತಿನ್ನಲು ಮೂಡುವ ಬಯಕೆ

ಸಾಲಾಡ್ ತಿನ್ನಲು ಮೂಡುವ ಬಯಕೆ

ಹಸಿ ತರಕಾರಿ ಹಣ್ಣುಗಳನ್ನು ಸಾಲಾಡ್ ರೂಪದಲ್ಲಿ ತಿನ್ನುವುದು ಆರೋಗ್ಯಕರ. ನಾವು ಸಾಲಾಡ್ ಎದುರಿಗೆ ಇದ್ದರೆ ಮಾತ್ರವೇ ತಿನ್ನುತ್ತೇವೆಯೇ ವಿನಃ ಸ್ವತಃ ತಯಾರಿಸಿಕೊಳ್ಳಲು ಉತ್ಸುಕತೆ ತೋರುವುದಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಾಲಾಡ್ ತಿನ್ನಲು ಮೂಡುವ ಬಯಕೆ

ಸಾಲಾಡ್ ತಿನ್ನಲು ಮೂಡುವ ಬಯಕೆ

ಆದರೆ ಸಾಲಾಡ್ ಎದುರಿಗೆ ಇಲ್ಲದಿದ್ದಾಗಲೂ ಇದನ್ನು ತಯಾರಿಸಿಕೊಂಡು ತಿನ್ನುವಂತೆ ಅಥವಾ ಹಸಿಯಾದ ತರಕಾರಿಯನ್ನು ಸುಮ್ಮನೇ ತಿನ್ನಲು ಬಯಕೆಯಾದರೆ ಇದರ ಹಿಂದೆ ಯಕೃತ್ ನ ತೊಂದರೆ ಇರಬಹುದು ಅಥವಾ ಹೊಟ್ಟೆಯಲ್ಲಿ ಗ್ಯಾಸ್ ಅಥವಾ ಅಪಾನವಾಯುವಿನ ತೊಂದರೆ ಇರಬಹುದು. ಯಾವುದಕ್ಕೂ ವೈದ್ಯರಿಂದ ತಪಾಸಣೆಗೊಳಪಡುವುದು ಉತ್ತಮ.

ಹುಳಿ ತಿನ್ನುವ ಬಯಕೆ ಕೇವಲ ಬಸುರಿಯರಿಗಲ್ಲ!

ಹುಳಿ ತಿನ್ನುವ ಬಯಕೆ ಕೇವಲ ಬಸುರಿಯರಿಗಲ್ಲ!

ಯಕೃತ್ ನಲ್ಲಿ ತೊಂದರೆ ಅಥವಾ ಪಿತ್ತಕೋಶದಲ್ಲಿ ಸೋಂಕು ಉಂಟಾಗಿದ್ದರೆ ಹುಳಿ ತಿನ್ನುವ ಬಯಕೆಯನ್ನು ಉಂಟುಮಾಡುತ್ತದೆ. ಅದೂ, ಬರೆಯ ಒಂದು ಬಾರಿಯಲ್ಲ, ದಿನವಿಡೀ ಹುಳಿಯನ್ನೇ ತಿನ್ನುತ್ತಿರುವಂತೆ ಬಯಕೆ ಉಂಟಾಗುತ್ತದೆ. ಈ ಹೊತ್ತಿನಲ್ಲಿ ಸಾಕಷ್ಟು ಲಿಂಬೆರಸದ ಶರಬತ್ತು ಅಥವಾ ಕ್ರ್ಯಾನ್ಬೆರಿ ಹಣ್ಣಿನ ರಸವನ್ನು ಸೇವಿಸುವುದೇ ಉತ್ತಮ.

ಒಸಡಿನಲ್ಲಿ ರಕ್ತ ಸೋರುವುದು

ಒಸಡಿನಲ್ಲಿ ರಕ್ತ ಸೋರುವುದು

ಹಲ್ಲುಗಳನ್ನು ಸ್ವಚ್ಛಗೊಳಿಸುವಾಗ ಕೊಂಚ ಒತ್ತಡ ನೀಡಿದರೂ ಒಸಡುಗಳು ಒಡೆದು ರಕ್ತ ಸೋರುತ್ತಿದರೆ ಇದಕ್ಕೆ ಒಸಡುಗಳ ಸೋಂಕು ಕಾರಣವಿರಬಹುದು. ಆದರೆ ಇದಕ್ಕೂ ಹೆಚ್ಚಾಗಿ ದೇಹದಲ್ಲಿ ವಿಟಮಿನ್ ಸಿ ಪ್ರಮಾಣ ಅಗತ್ಯಕ್ಕಿಂತಲೂ ಕಡಿಮೆಯಾದರೆ ಒಸಡುಗಳ ದೃಢತೆ ಕಡಿಮೆಯಾಗಿ ಸುಲಭವಾಗಿ ರಕ್ತನಾಳಗಳು ಒಡೆದು ರಕ್ತ ಒಸರುತ್ತದೆ. ಇದನ್ನು ಸರಿಪಡಿಸಲು ಬೆಳ್ಳುಳ್ಳಿ, ವಿಟಮಿನ್ ಸಿ ಹೆಚ್ಚಿರುವ ಹಸಿರು ತರಕಾರಿ, ಹಣ್ಣುಗಳು ಮತ್ತು ವಿಶೇಷವಾಗಿ ದಿನದಲ್ಲಿ ಕೆಲವು ಬಾರಿ ಲಿಂಬೆರಸವನ್ನು ಸೇವಿಸುವುದರಿಂದ ಒಸಡುಗಳಲ್ಲಿ ರಕ್ತ ಬರುವುದು ನಿಲ್ಲುತ್ತದೆ.

ನಿದ್ರಾಹೀನತೆ

ನಿದ್ರಾಹೀನತೆ

ಒಂದು ವೇಳೆ ನಿದ್ದೆ ಬರದೇ ಇದ್ದು ಇದಕ್ಕೆ ಮಾನಸಿಕ ಕಾರಣವಿಲ್ಲದಿದ್ದರೆ ದೇಹದಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಅಂಶಗಳ ಕೊರತೆ ಕಾರಣವಾಗಿರಬಹುದು. ಹೆಚ್ಚಿನ ಸಂದರ್ಭದಲ್ಲಿ ನಿದ್ದೆ ಬರದೇ ಇದ್ದಾಗ ಮೈಯಲ್ಲಿ ತುರಿಕೆಯೂ ಉಂಟಾಗುತ್ತದೆ. ಇದನ್ನು ಸರಿಪಡಿಸಲು ಸಾಕಷ್ಟು ಹಸಿರು ತರಕಾರಿ, ಬೀಟ್ರೂಟ್, ಒಣಅಂಜೂರ, ಬಾದಾಮಿ ಹಾಗೂ ಒಣಫಲಗಳನ್ನು ಸೇವಿಸಿ.

ಸುಲಭವಾಗಿ ಸೀಳುವ ಉಗುರುಗಳು

ಸುಲಭವಾಗಿ ಸೀಳುವ ಉಗುರುಗಳು

ಒಂದು ವೇಳೆ ದೇಹದಲ್ಲಿ ವಿಟಮಿನ್ ಬಿ ಕೊರತೆ ಇದ್ದರೆ ಅಥವಾ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾದರೆ ಇದರ ಪರಿಣಾಮ ಉಗುರು ಮತ್ತು ಕೂದಲ ಮೇಲಾಗುತ್ತದೆ. ಉಗುರುಗಳು ಸುಲಭವಾಗಿ ಸೀಳು ಬಿಟ್ಟರೆ ಅಥವಾ ಬುಡದಿಂದ ಎದ್ದು ಬಂದರೆ ಹಾಗೂ ಕೂದಲು ಸುಲಭವಾಗಿ ತುಂಡಾಗುತ್ತವೆ. ಇದಕ್ಕೆ ಸಾಕಷ್ಟು ಹಾಲು, ದ್ವಿದಳ ಧಾನ್ಯಗಳು, ಕಾಳುಗಳು ಮತ್ತು ಆಲುಗಡ್ಡೆಯನ್ನು ಹೆಚ್ಚಾಗಿ ಸೇವಿಸಬೇಕು.

English summary

Signals Of Your Body Not To Ignore

Do you know the fact that the human body communicates with the brain about its well being? Well, if you are able to listen to your body's signals, you can always stay updated about its actual health condition. Every minute and every day, your body keeps telling you something. Most often, we tend to ingore the signals. Sometimes, certain signals could actually indicate some other deeper problems but we tend to only notice what seems to be the issue on the surface. Well, here are some other signals that can't be ignored as they indicate some other issues in your body.
X
Desktop Bottom Promotion