Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
’ಪೋಕೆಮನ್ ಗೋ’ ಆಟವಾಡಿ, ದೇಹದ ತೂಕ ಕಳೆದುಕೊಳ್ಳಿ!
ತೂಕ ಕಳೆದುಕೊಳ್ಳಬೇಕು ಆದರೆ ವ್ಯಾಯಾಮ ಮಾಡಬಾರದು ಎಂದುಕೊಳ್ಳುವವರಿಗೆ ಈಗ ಒಂದು ಅದ್ಭುತ ತಂತ್ರಜ್ಞಾನ ಬಂದಿದೆ. ಯಾವುದೇ ವ್ಯಾಯಾಮ ಮಾಡದೆ ನೀವು ತೂಕವನ್ನು ಕಳೆದುಕೊಳ್ಳಬಹುದು. ಅರೆ ನಿಜಾನಾ? ಹೌದು, ನೀವು ಓದುತ್ತಿರುವುದು ಸತ್ಯ!
ಪೋಕೆಮನ್ ಗೋ ಎಂಬ ಒಂದು ಗೇಮ್ ಬಂದಿದೆ. ಇದನ್ನು ನೀವು ಆಡುತ್ತಿದ್ದರೆ, ನಿಮಗೆ ಗೊತ್ತಿಲ್ಲದೆ ನೀವು ತೂಕವನ್ನು ಕಳೆದುಕೊಳ್ಳುತ್ತೀರಿ. ತೂಕ ಕಳೆದು ಹೋದ ಮೇಲೆಯೇ ಗೊತ್ತಾಗುವುದು ಅರೆ ನನ್ನ ತೂಕ ಇಷ್ಟು ಕಡಿಮೆಯಾಯಿತೆ! ಎಂದು. ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?
ಈಗ ಗೇಮ್ ಪ್ರಿಯರ ಬಾಯಲ್ಲಿ ಒಂದೇ ಮಾತು ಪೋಕೆಮನ್ ಗೋ ಎಂದು, ಬರೀ ನಮ್ಮ ನಿಮ್ಮ ನಡುವಿನ ಜನರ ಬಾಯಲ್ಲಷ್ಟೇ ಅಲ್ಲದೆ ಇಡೀ ವಿಶ್ವದಲ್ಲಿಯೇ ಇದರ ಬಗ್ಗೆ ಹೆಚ್ಚಿನ ಮಾತುಕತೆಗಳು ಈಗ ನಡೆಯುತ್ತಿವೆ. ಇದು ಮಕ್ಕಳು, ಯುವಕರು, ಮುದುಕರು ಎಂಬ ಭೇದ ಭಾವವಿಲ್ಲದೆ ಎಲ್ಲಾ ವಯೋಮಾನದವರನ್ನು ಆಕರ್ಷಿಸುತ್ತಿದೆ.

ಬಹುತೇಕ ಮಂದಿ ಈಗಾಗಲೇ ಈ ಗೇಮ್ ಅನ್ನು ಆಡಲು ಆರಂಭಿಸಿಬಿಟ್ಟಿದ್ದಾರೆ, ಇನ್ನೂ ಕೆಲವರು ಈ ಆಟದಲ್ಲಿ ಮುಳುಗಿ ಹೋಗಿದ್ದಾರೆ. ಪೋಕೆಮನ್ ಗೋ ಎಂಬುದು ಒಂದು ಬಗೆಯ ವಾಸ್ತವಿಕವಾದ ಗೇಮ್ ಆಗಿದೆ. ಈ ಗೇಮ್ ಪೋಕೆಮನ್ ಎಂಬ ಕಾರ್ಟೂನ್ ಪಾತ್ರವನ್ನು ವಾಸ್ತವ ಪ್ರಪಂಚದಲ್ಲಿ ಹುಡುಕುವ ಕೆಲಸವನ್ನು ಮಾಡುತ್ತದೆ.
ಇದಕ್ಕಾಗಿ ನಿಮ್ಮ ಬಳಿ ಒಂದು ಜಿಪಿಎಸ್ ಇರುವ ಆಂಡ್ರಾಯ್ಡ್ ಅಥವಾ ಐಓಎಸ್ ಸಾಧನವು ಇರಬೇಕು ಹಾಗು ಅದರಲ್ಲಿ ಪೋಕೆಮನ್ ಗೋ ಅಪ್ಲಿಕೇಶನ್ ಡೌನ್‌ಲೋಡ್ ಆಗಿರಬೇಕು. ಹಾಗೆಂದು ಇದನ್ನು ಹಣ ನೀಡಿ ಡೌನ್‍ಲೋಡ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಇದು ಸಂಪೂರ್ಣ ಉಚಿತ!.
ಈ ಗೇಮ್ ಆಡುವುದರಿಂದ ನಿಮಗೆ ಒಂದು ಪ್ರಯೋಜನ ದೊರೆಯುತ್ತದೆ. ಅದೇನೆಂದರೆ, ಇದನ್ನು ಆಡುವುದರಿಂದ ನೀವು ಯಾವುದೇ ವ್ಯಾಯಾಮವಿಲ್ಲದೆ ನಿಮ್ಮ ದೇಹದ ತೂಕವನ್ನು ಕಳೆದುಕೊಳ್ಳಬಹುದು. ಗೂಗಲ್ ನಕಾಶೆಯಂತೆಯೇ ಪೋಕೆಮನ್ ಗೋ ಅಪ್ಲಿಕೇಶನ್‌ನಲ್ಲಿ ನೀವು ಅದರಲ್ಲಿ ಕಾಣಿಸುವ ವರ್ಚುವಲ್ ಪ್ರದೇಶದಲ್ಲಿ ಪೋಕೆಮನ್ ಎಲ್ಲಿ ಪಾಪ್ ಅಪ್ ಆಗುತ್ತದೆಯೋ ಅದನ್ನು ಕಂಡು ಹಿಡಿಯುವ ಕೆಲಸವನ್ನು ಮಾಡುತ್ತೀರಿ. ಅತಿ ಬೇಗನೆ ಬೊಜ್ಜು ಕರಗಿಸಲು ಐದೇ ಐದು ಮಾರ್ಗ
ಈ ವರ್ಚುವಲ್ ಭೂಭಾಗವನ್ನು ನೀವು ಹಿಂಬಾಲಿಸುವಾಗ, ನೀವು ನಡೆಯಲು ಆರಂಭಿಸುತ್ತೀರಿ. ಆಗ ನೀವು ಉದ್ಯಾನವನ, ಹುಲ್ಲು, ಪೊದೆ, ರಸ್ತೆ, ಕಾಂಕ್ರಿಟ್ ಬಿಲ್ಡಿಂಗ್‌ಗಳನ್ನು ಹಾದು ಹೋಗುವ ಸಂಭವ ಇರುತ್ತದೆ. ಇಲ್ಲವೇ ಅದನ್ನು ನಿಮ್ಮ ಅಪ್ಲಿಕೇಶನ್‌ನಲ್ಲಿ ನೋಡುತ್ತೀರಿ. ಆಮೇಲೆ ಪೋಕೆಮನ್ ಅನ್ನು ಹುಡುಕುವ ಪ್ರಯತ್ನದಲ್ಲಿ ಅವುಗಳ ಮೂಲಕ ಹಾದು ಹೋಗುತ್ತೀರಿ.
ಆಗ ಬಳಕೆದಾರರು ತಮಗೆ ಅರಿವಿಲ್ಲದೆಯೇ ಸ್ವಲ್ಪ ದೂರ ನಡೆಯುತ್ತೀರಿ. ನಡಿಗೆಯು ಅತ್ಯುತ್ತಮ ವ್ಯಾಯಾಮ ಎಂದು ವಿವರಿಸಿ ಹೇಳಬೇಕಾಗಿಲ್ಲ. ಪೋಕೆಮನ್ ಗೋ ಸೋಮಾರಿಗಳಿಗೆ ಮತ್ತು ಕುಳಿತಲ್ಲಿಯೇ ಗೇಮ್ ಆಡುವ ಮತ್ತು ಕೆಲಸ ಮಾಡುವವರಿಗೆ ಹೇಳಿ ಮಾಡಿಸಿದ ಗೇಮ್ ಆಗಿದೆ. ಏಕೆಂದರೆ ಇದು ಅವರನ್ನು ಕುರ್ಚಿಯಿಂದ ಹೊರಗೆ ಎಳೆದು ಓಡಾಡುವಂತೆ ಮಾಡುತ್ತದೆ. ನಿಮಗೆ ತೂಕ ಇಳಿಸಲು ಸಹಕಾರಿ ಈ 11 ವಿಧಾನಗಳು!
ವ್ಯಾಯಾಮ ಮಾಡಲು ಸೋಮಾರಿತನ ತೋರಿಸುವವರಿಗೆ ಈ ಗೇಮ್ ಒಳ್ಳೆಯ ವ್ಯಾಯಾಮವನ್ನು ನೀಡುತ್ತದೆ. ಅದೂ ಆನಂದಕರ ರೀತಿಯಲ್ಲಿ, ಅವರಿಗೇ ತಿಳಿಯದಂತೆ. ಆದರೂ ಗೇಮ್ ಆಡುವಾಗ ಮುನ್ನೆಚ್ಚರಿಕೆಯನು ತೆಗೆದುಕೊಳ್ಳುವುದು ಒಳ್ಳೆಯದು.
ಏಕೆಂದರೆ ಇದನ್ನು ಆಡುವಾಗ ಸುಮಾರು ಜನ ಬಿದ್ದು ಗಾಯ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಬಂದಿವೆ. ಆದರೆ ಆ ವಿಚಾರವನ್ನು ಪಕ್ಕಕ್ಕೆ ಇರಿಸಿದಲ್ಲಿ, ಈ ಗೇಮ್ ಆಡುವುದರಿಂದ ನೀವು ನಿಮ್ಮ ಪರಿಸರದಲ್ಲಿರುವ ಹಸಿರನ್ನು ಕಣ್ತುಂಬಿಕೊಳ್ಳಬಹುದು. ಜೊತೆಗೆ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











