Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ತೂಕ ಇಳಿಸಲು ರಾತ್ರಿ ವೇಳೆ 'ಲಘು ಉಪಹಾರ' ಸೇವಿಸಿ
ರಾತ್ರಿ ವೇಳೆ ಲಘು ಉಪಹಾರ ಸೇವಿಸುವುದು ಕೆಟ್ಟ ಅಭ್ಯಾಸವೇನು ಅಲ್ಲ. ಒಳ್ಳೆ ಪೌಷ್ಟಿಕವಾದ ಉಪಹಾರ ತೆಗೆದುಕೊಂಡರೆ ಅದರಿಂದಾಗುವ ಪ್ರಯೋಜನಗಳೇ ಹೆಚ್ಚು. ಇವೆಲ್ಲವೂ ಕಡಿಮೆ ಬಿಸಿಯಳತೆಯದ್ದಾಗಿದ್ದು (ಕ್ಯಾಲರಿ) ತೂಕ ಇಳಿಸಲು ಸಹಾಯಕಾರಿಯಾಗಿರುತ್ತದೆ. ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು!

ದಿನ ನಿತ್ಯವೂ ಆಹಾರದಲ್ಲಿನ ವಿಟಮಿನ್ಸ್, ಪ್ರೊಟೀನ್ಸ್ ಮತ್ತು ಖನಿಜಾಂಶಗಳಿರುವ ಪೌಷ್ಟಿಕಾಂಶ ಸೇವನೆ ಹೆಚ್ಚಿಸುತ್ತದೆ. ರಾತ್ರಿ ಹೊತ್ತು ಖಾಲಿ ಹೊಟ್ಟೆಯಲ್ಲಿ ಮಲಗಿ ನಿದ್ರೆ ಬಾರದೇ ವೇದನೆ ಪಡುವುದಕ್ಕಿಂತ, ಲಘುವಾದ ಉಪಹಾರ ಸೇವಿಸುವುದರಿಂದ ಹೊಟ್ಟೆಯೂ ತುಂಬಿ, ನಿದ್ರೆಯೂ ಚೆನ್ನಾಗಿ ಬರುತ್ತದೆ. ಅದರ ಜೊತೆಗೆ ದೇಹಕ್ಕೆ ಬೇಕಾದ ಪೌಷ್ಠಿಕಾಂಶವೂ ಲಭಿಸುತ್ತದೆ.
ಒಂದು ಬೌಲ್ ತುಂಬ ಕಾಳುಗಳುಳ್ಳ ಆಹಾರಕ್ಕೆ, ಓಟ್ಸ್, ಅಥವಾ ಗೋಧಿ ಅಥವಾ ಹೊಟ್ಟು ಪದರಗಳುಳ್ಳ ದವಸ ದಾನ್ಯವನ್ನು ಮಿಶ್ರಣ ಮಾಡಿಕೊಳ್ಳಿ. ಇವುಗಳಲ್ಲಿ ಕಾರ್ಬೋಹೈಡ್ರೇಟ್‌ಗಳಿದ್ದು, ಇದಕ್ಕೆ ಹಾಲನ್ನು ಸೇರಿಸಿಕೊಂಡರೆ ಪ್ರೋಟೀನ್ ಅಂಶವೂ ಕೂಡ ದೇಹಕ್ಕೆ ಒದಗಿದಂತಾಗುತ್ತದೆ. ಆದರೆ ಸಕ್ಕರೆಯನ್ನು ಮಾತ್ರ ಸೇರಿಸಬಾರದು. ಇದರಿಂದ ನಿದ್ರೆಗೂ ಅಡಚಣೆಯಾಗಿ ತೂಕವನ್ನೂ ಕೂಡ ಹೆಚ್ಚಿಸುತ್ತದೆ. ಅತ್ಯುತ್ತಮ ಗಿಡಮೂಲಿಕೆಗಳನ್ನು ಬಳಸಿ ತೂಕ ಇಳಿಸಿ
ಒಂದು ಬಟ್ಟಲು ತಂಬಾ ಮೊಸರು ಸೇವಿಸಿದರೆ, ಟ್ರಿಪ್ಟೋಫಾನ್ ಇರುವುದರಿಂದ ನಿದ್ರೆಯೂ ಚೆನ್ನಾಗಿ ಬರುತ್ತದೆ ಪಚನಕ್ರಿಯೆಗೂ ಸಹಾಯ ಮಾಡುತ್ತದೆ. ಎದೆ ಉರಿತ, ಅಜೀರ್ಣವನ್ನು ನಿವಾರಿಸಿ ಒಳ್ಳೆಯ ನಿದ್ರೆ ಬರುತ್ತದೆ.
ಬಾಳೆಹಣ್ಣು, ಸೇಬು ಮುಂತಾದ ಹಣ್ಣುಗಳನ್ನು ರಾತ್ರಿಯ ಲಘು ಉಪಹಾರವಾಗಿ ಸೇವಿಸಬೇಕು. ಇದರಿಂದ ಬಹಳ ಕಾಲದವರೆಗೆ ಹೊಟ್ಟೆಯು ತುಂಬಿರುತ್ತದೆ ಮತ್ತು ಒಳ್ಳೆ ನಿದ್ದೆಯೂ ಬರುವಂತೆ ಮಾಡುತ್ತದೆ. ಈ ಹಣ್ಣುಗಳಲ್ಲಿ ಜೀರ್ಣಕಾರಿ ಅಂಶವು ಹೆಚ್ಚಾಗಿ ಇರುವುದರಿಂದ ದೇಹದಲ್ಲಿನ ಟಾಕ್ಸಿನ್‌ಗಳನ್ನು ತೆಗೆದುಹಾಕಿ ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಒಂದು ವೇಳೆ ನಿಮಗೆ ಕ್ಯಾರೆಟ್ ಇಷ್ಟವಾಗಿದ್ದರೆ, ಅದನ್ನೂ ಸಹ ರಾತ್ರಿಯ ಲಘು ಉಪಹಾರವಾಗಿ ತೆಗೆದುಕೊಳ್ಳಬಹುದು. ಇದೂ ಸಹ ಬಹಳ ಸಮಯದವರೆಗೆ ಹೊಟ್ಟೆ ತುಂಬಿರಿಸುತ್ತದಷ್ಟೇ ಅಲ್ಲದೇ ದೇಹಕ್ಕೆ ಅಗತ್ಯವಿರುವ ವಿಟಮಿನ್ಸ್, ಖನಿಜಾಂಶ, ಜೀರ್ಣಕಾರಿ ಅಂಶಗಳನ್ನು ಒದಗಿಸುತ್ತದೆ.
ಮೀನು ಮತ್ತು ಪ್ರೋಟೀನ್ ಇರುವ ಆಹಾರ ಪದಾರ್ಥಗಳನ್ನೂ ಸಹ ರಾತ್ರಿಯ ಲಘು ಉಪಹಾರವಾಗಿ ತೆಗೆದುಕೊಳ್ಳಬಹುದು. ಇದರಲ್ಲಿ ಟ್ರಿಪ್ಟೋಫಾನ್ ಮತ್ತು ಪ್ರೋಟೀನ್ ಹೇರಳವಾಗಿರುತ್ತದೆ ಮತ್ತು ಕೊಬ್ಬಿನಾಂಶ ಕಡಿಮೆ ಇರುತ್ತದೆ. ಇದರಿಂದ ತೂಕ ಇಳಿಯುವುದಷ್ಟೇ ಅಲ್ಲದೇ ನಿದ್ರೆಯೂ ಚೆನ್ನಾಗಿ ಬರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


