Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
ಅನಂತ್ ಅಂಬಾನಿ 108 ಕೆ.ಜಿ ತೂಕ ಇಳಿಸಿಕೊಂಡ ಫಿಟ್ನೆಸ್ ಸೀಕ್ರೆಟ್
ಕ್ರಿಕೆಟ್ ಪ್ರೇಮಿಯಾಗಿದ್ದರೆ ಇತ್ತೀಚಿನ ದಿನಗಳಲ್ಲಿ ಮೈದಾನದಲ್ಲಿ ನೀವು ಒಂದು ಅದ್ಭುತವನ್ನು ನೋಡಿರುತ್ತೀರಿ. ಆ ಅಚ್ಚರಿಯನ್ನು ನೋಡಿ ನೀವು ಕೂಡ ಮೂಗಿನ ಮೇಲೆ ಬೆರಳಿಟ್ಟಿರಬಹುದು. ಅದೇ ಐಪಿಎಲ್ ನ ಮುಂಬಯಿ ಇಂಡಿಯನ್ಸ್ ತಂಡದ ಮಾಲಕ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ತನ್ನ ತೂಕವನ್ನು ಅರ್ಧಕರ್ಧ ಇಳಿಸಿರುವುದು. ಕೆಲವರಿಗೆ ಇದು ಅಚ್ಚರಿ ಮೂಡಿಸಿದರೂ, ಇಂಟರ್‌ನೆಟ್‌ನಲ್ಲಿ ಮಾತ್ರ ಇದು ವೈರಲ್ ಆಗಿ ಹರಿದಾಡುತ್ತಿದೆ.
ಪ್ರತಿಯೊಬ್ಬರ ಬಾಯಿಯಲ್ಲೂ ಈಗ ಅನಂತ್ ಅಂಬಾನಿ ಮಾತೇ. ಅನಂತ್ ಅಂಬಾನಿ ಕೇವಲ 18 ತಿಂಗಳಲ್ಲಿ 108 ಕೆ.ಜಿ. ಇಳಿಸಿದ್ದಾನೆ. ತೂಕ ಇಳಿಸಿರುವ 21ರ ಹರೆಯದ ಅನಂತ್ ಅಂಬಾನಿಗೆ ಈಗ ಬಾಲಿವುಡ್ ತಾರೆಯರು ಹಾಗೂ ಪ್ರತಿಯೊಬ್ಬರಿಂದಲೂ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿಯ ಕಿರಿಯ ಪುತ್ರನಾಗಿರುವ ಅನಂತ್ ಅಂಬಾನಿ ಬೊಜ್ಜು ಮತ್ತು ಬಾಲ್ಯದಲ್ಲಿ ನೀಡಿದಂತಹ ಮಾತ್ರೆಯಿಂದಾಗಿ ಅತಿಯಾದ ತೂಕ ಬೆಳೆಸಿಕೊಂಡಿದ್ದರು.
ಕಠಿಣ ಪರಿಶ್ರಮ, ಶ್ರದ್ಧೆಯಿಂದ ಏನು ಬೇಕಾದರೂ ಮಾಡಬಹುದು ಎನ್ನುವುದನ್ನು ಅನಂತ್ ತೋರಿಸಿಕೊಟ್ಟಿದ್ದಾರೆ. ಅನಂತ್ ಕಠಿಣ ಪಥ್ಯ ಮತ್ತು ವ್ಯಾಯಾಮದಿಂದಾಗಿ ಈಗ ತನ್ನ ಭಾರವನ್ನು ಇಳಿಸಿಕೊಂಡು ಹ್ಯಾಂಡ್ ಸಮ್ ಆಗಿ ಕಾಣಿಸುತ್ತಿದ್ದಾರೆ. ಬನ್ನಿ ಅನಂತ್ ಅಂಬಾನಿ ತೂಕ ಇಳಿಸಿಕೊಂಡ ಕಂಪ್ಲೀಟ್ ಸೀಕ್ರೆಟ್ ನಿಮಗೆ ತಿಳಿಸಿಕೊಡುತ್ತೇವೆ, ಮುಂದೆ ಓದಿ....

ಅನಂತ್ ಅಂಬಾನಿಗೆ ಬೊಜ್ಜು ಬರಲು ಕಾರಣವೇನು?
ಬಾಲ್ಯದಲ್ಲಿ ಅಸ್ತಮಾಕ್ಕಾಗಿ ನೀಡಿದಂತಹ ಔಷಧಿಯ ಅಡ್ಡಪರಿಣಾಮದಿಂದಾಗಿ ಅನಂತ್ ಅಂಬಾನಿ ಚಿಕ್ಕ ವಯಸ್ಸಿನಲ್ಲಿಯೇ ಅತಿಯಾದ ಬೊಜ್ಜು ಬೆಳೆಸಿಕೊಂಡಿದ್ದರು.

ಅನಂತ್ ಎಷ್ಟು ತೂಕ ಇಳಿಸಿಕೊಂಡರು?
ಅಂಬಾನಿ ಕುಟುಂಬದ ಮೂಲಗಳ ಪ್ರಕಾರ ಅನಂತ್ ಕಳೆದ 18 ತಿಂಗಳಲ್ಲಿ 108 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. ಅಂದರೆ ಅನಂತ್ ತಿಂಗಳಿಗೆ ಆರು ಕೆ.ಜಿ.ಯಂತೆ ಆರೋಗ್ಯಕರವಾಗಿ ತೂಕ ಇಳಿಸಿಕೊಂಡಿದ್ದಾರೆ. ಅತ್ಯಂತ ವೇಗವಾಗಿ ತೂಕ ಇಳಿಸಿಕೊಂಡರೆ ಅದು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು. ಇದಕ್ಕಾಗಿ ಮಧ್ಯಮ ವೇಗದಲ್ಲಿ ತೂಕ ಇಳಿಸಿಕೊಳ್ಳಬೇಕು.

ಅದನ್ನು ಹೇಗೆ ಮಾಡಿದರು?
ಕೆಲವೊಂದು ಗಾಳಿಸುದ್ದಿಗಳ ಪ್ರಕಾರ ಅನಂತ್ ಗ್ಯಾಸ್ಟ್ರಿಕ್ ಶಸ್ತ್ರಚಿಕಿತ್ಸೆ ಮೂಲಕವಾಗಿ ತನ್ನ ಭಾರ ಇಳಿಸಿಕೊಂಡಿದ್ದಾರೆ. ಆದರೆ ನಂಬಲಾರ್ಹ ಮೂಲಗಳ ಪ್ರಕಾರ ಅನಂತ ನೈಸರ್ಗಿಕ ವಿಧಾನದಿಂದ ತೂಕ ಇಳಿಸಿಕೊಂಡಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅದನ್ನು ಹೇಗೆ ಮಾಡಿದರು?
ಇದಕ್ಕಾಗಿ ಅನಂತ್ ಕಠಿಣ ಪಥ್ಯ ಹಾಗೂ ವ್ಯಾಯಾಮವನ್ನು ಅಳವಡಿಸಿಕೊಂಡಿದ್ದರು. ಅನಂತ್ ದಿನದಲ್ಲಿ 5-6 ಗಂಟೆಗಳ ಕಾಲ ವ್ಯಾಯಾಮ, 21 ಕಿ.ಮೀ. ನಡಿಗೆ, ಯೋಗ ಮತ್ತು ತೂಕ ಇಳಿಸುವ
ವ್ಯಾಯಾಮ ಮಾಡುತ್ತಿದ್ದರು. ಈ ಎಲ್ಲಾ ವ್ಯಾಯಾಮಗಳಿಂದ ದೇಹದ ವಿವಿಧ ಭಾಗಗಳಿಗೆ ನೆರವಾಗುತ್ತದೆ.

21 ಕಿ.ಮೀ. ನಡಿಗೆ
ನಮಗೆ ಒಂದು ಕಿ.ಮೀ. ನಡೆದುಕೊಂಡು ಹೋಗುವುದೆಂದರೆ ತುಂಬಾ ಆಯಾಸವಾಗುತ್ತದೆ. ಅದೇ ದಿನಲೂ 21 ಕಿ.ಮೀ. ನಡೆಯುವುದೆಂದರೆ ಅದು ದೊಡ್ಡ ಸಾಹಸವೇ ಸರಿ. ಇಂತಹ ಸಾಹಸವನ್ನು ಅನಂತ್ ಮಾಡಿತೋರಿಸಿದ್ದಾರೆ. ಅನಂತ್ ತನ್ನ ತೂಕ ಇಳಿಸುವ ಕಾರ್ಯಕ್ರಮವನ್ನು ನಡಿಗೆಯ ಮೂಲಕವೇ ಆರಂಭಿಸಿದ್ದಾರೆ. 21 ಕಿ.ಮೀ. ನಡಿಗೆಯೆಂದರೆ ಅರ್ಧ ಮ್ಯಾರಥಾನ್ ಗೆ ಸಮಾನವಾಗಿರುತ್ತದೆ. ತೂಕ ಇಳಿಸಿಕೊಳ್ಳಲು ಬಳಸುವವರಿಗೆ ಇದು ಒಳ್ಳೆಯ ಅವಕಾಶ. ಆದರೆ ಇದನ್ನು ಮಾಡುವ ಮೊದಲು ಸಲಹೆ ಪಡೆಯುವುದು ಸೂಕ್ತ.

ಯೋಗ
ಭಾರತೀಯರು ಹಿಂದಿನಿಂದಲೂ ತಮ್ಮನ್ನು ಸ್ವಸ್ಥ ಹಾಗೂ ಆರೋಗ್ಯವಾಗಿರಿಸಿಕೊಳ್ಳಲು ಮಾಡುತ್ತಿದ್ದಂತಹ ವ್ಯಾಯಾಮವೇ ಯೋಗ. ಯೋಗ ಇಂದು ವಿಶ್ವದೆಲ್ಲೆಡೆ ಪಸರಿಸಿದೆ. ಅನಂತ್ ಅಂಬಾನಿ ಕೂಡ ಇದರ
ಮೂಲಕವೇ ತೂಕ ಇಳಿಸಿಕೊಂಡಿದ್ದಾರೆ. ವೈದ್ಯಕೀಯ ತಜ್ಞರ ಪ್ರಕಾರ ಯೋಗದ ಮೂಲಕ ತೂಕ ಇಳಿಸಿಕೊಳ್ಳುವುದು ದೇಹ ಹಾಗೂ ಮನಸ್ಸಿಗೂ ಒಳ್ಳೆಯದು. ಇದು ಆಹಾರದ ಮೇಲೆ ನಿಯಂತ್ರಣ ಸಾಧಿಸಲು ನೆರವಾಗುತ್ತದೆ.

ತೂಕದ ತರಬೇತಿ
ವಿಶ್ರಾಂತಿಯಲ್ಲಿರುವಾಗಲೂ ಕ್ಯಾಲರಿ ಕಡಿಮೆ ಮಾಡಬೇಕೆಂದರೆ ಅದಕ್ಕೆ ನೇರಸ್ನಾಯುವಿನ ಸೇರ್ಪಡೆ ಅಗತ್ಯವಿರುತ್ತದೆ. ಇದು ತೂಕ ಇಳಿಸುವ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ತುಂಬಾ ನೆರವಿಗೆ ಬರುತ್ತದೆ.ಕ್ರಮಬದ್ಧವಾದ ತರಬೇತಿ ಕ್ರಮಬದ್ಧವಾದ ವ್ಯಾಯಾಮದಿಂದ ನಿಮ್ಮ ಸ್ನಾಯುಗಳು ಸಂಯೋಜಿತವಾಗಿರಲು ನೆರವಾಗುತ್ತದೆ. ಇದು ಪ್ರಾಥಮಿಕವಾಗಿ ಸ್ಥಿರತೆಗೆ ಹೆಚ್ಚಿನ ಒತ್ತು ನೀಡುವುದು. ಉಸ್ವಾಚ ನಿಸ್ವಾಚ, ಕುಳಿತುಕೊಳ್ಳುವುದು ಮತ್ತು ಚಾಚಿಕೊಳ್ಳುವುದು ಇದರಲ್ಲಿನ ಪ್ರಮುಖ ವ್ಯಾಯಾಮಗಳಾಗಿವೆ.

ತೀವ್ರ ಸ್ವರೂಪದ ಹೃದಯ ವ್ಯಾಯಾಮ
ತೀವ್ರ ಸ್ವರೂಪದ ಹೃದಯ ವ್ಯಾಯಾಮವನ್ನು ಹೇಗೆ ಮಾಡಬಹುದು ಎನ್ನುವ ಬಗ್ಗೆ ಒಳ್ಳೆಯ ಜಿಮ್ ಸಲಹೆಗಾರ ನಿಮಗೆ ಕಲಿಸಿಕೊಡಬಲ್ಲ. ಇಂತಹ ವ್ಯಾಯಾಮಗಳು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಗೆ ಮಾಡಿ ದೇಹದಲ್ಲಿರುವ ಕ್ಯಾಲರಿ ದಹಿಸುವಂತೆ ಮಾಡುತ್ತದೆ. ಇದು ಕಡಿಮೆ ಸಮಯದಲ್ಲಿ ಕೊಬ್ಬನ್ನು ಕರಗಿಸಬಲ್ಲದು.

ಪಥ್ಯ
ಕೊನೆಯದಾಗಿ ವ್ಯಾಯಾಮದೊಂದಿಗೆ ಆರೋಗ್ಯಕರವಾದ ಪಥ್ಯ ಕ್ರಮವನ್ನು ಅನುಸರಿಸಿಕೊಂಡು ಹೋಗುವುದು. ಅನಂತ್ ಅಂಬಾನಿ ಕಡಿಮೆ ಕಾರ್ಬೋಹೈಡ್ರೆಡ್ ಮತ್ತು ಕಡಿಮೆ ಸಕ್ಕರೆ ಇರುವಂತಹ ಆಹಾರ ಪಥ್ಯಕ್ರಮವನ್ನು ಅನುಸರಿಸಿದ್ದಾರೆ. ಇದರಿಂದಾಗಿ ಅನಂತ್ ಬ್ರೆಡ್, ಪಾಸ್ತಾ,ದವಸ ಧಾನ್ಯಗಳು, ಸಿಹಿ, ತಂಪುಪಾನೀಯ ಮುಂತಾದವುಗಳನ್ನು ತ್ಯಜಿಸಬೇಕಾಗಿತ್ತು. ಅವರು ಹೆಚ್ಚಾಗಿ ಆರೋಗ್ಯಕರ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿರುವ ಆಹಾರವನ್ನು ಸೇವಿಸುತ್ತಿದ್ದರು.

ತೀವ್ರ ಹೃದಯಬಡಿತದ ವ್ಯಾಯಾಮ ಅಥವಾ ಎಚ್ ಐಐಟಿ
ತೀವ್ರ ಹೃದಯಬಡಿತದ ವ್ಯಾಯಾಮದಿಂದ ಪುರುಷರಲ್ಲಿನ ಹೊಟ್ಟೆಯ ಕೊಬ್ಬು, ಮಹಿಳೆಯರಲ್ಲಿನ ತೊಡೆ ಮತ್ತು ತೋಳುಗಳ ಕೊಬ್ಬನ್ನು ಇಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದರೆ ತೀವ್ರ ವ್ಯಾಯಾಮ ಮತ್ತು ವಿಶ್ರಾಂತಿಯಿಂದ ಇದನ್ನು ಮಾಡಬೇಕಾಗುತ್ತದೆ. ಟ್ರೆಡ್ ಮಿಲ್ ನಲ್ಲಿ ಗಂಟೆಗೆ 8 ಕಿ.ಮೀ. ವೇಗದಲ್ಲಿ 15 ನಿಮಿಷ ವ್ಯಾಯಾಮ ಮಾಡುವ ಬದಲು ಕಡಿಮೆ ತೀವ್ರತೆಯ ವ್ಯಾಯಾಮ(ಎರಡು ನಿಮಿಷಗಳ ಕಾಲ ಗಂಟೆಗೆ 5 ಕಿ.ಮೀ. ವೇಗದಲ್ಲಿ ನಡಿಗೆ) ಮತ್ತು ಹೆಚ್ಚು ತೀವ್ರತೆಯ ವ್ಯಾಯಾಮ (ಗಂಟೆಗೆ 10 ಕಿ.ಮೀ. ವೇಗದಲ್ಲಿ ಓಡುವುದು) ಮಾಡಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತೀವ್ರ ಹೃದಯಬಡಿತದ ವ್ಯಾಯಾಮ ಅಥವಾ ಎಚ್ ಐಐಟಿ
ಇದು ನಿಮ್ಮ ದೇಹದ ಚಯಾಪಚಾಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ದೇಹವನ್ನು ಕೊಬ್ಬು ಕರಗಿಸುವ ಯಂತ್ರವನ್ನಾಗಿ ಮಾಡುತ್ತದೆ. ಇಂತಹ ಕ್ರಮಗಳಿಂದ ವ್ಯಾಯಾಮದ ಬಳಿಕವೂ ದೇಹವು ಕೊಬ್ಬನ್ನು ಕರಗಿಸುತ್ತಿರುತ್ತದೆ. ಅನಂತ್ ಸಕ್ಕರೆ ರಹಿತ, ಕಡಿಮೆ ಕಾರ್ಬೋಹೈಡ್ರೆಡ್, ಆರೋಗ್ಯಕರ ಕೊಬ್ಬು ಹಾಗೂ ಪ್ರೋಟೀನ್ ನ್ನು ಸೇವಿಸುತ್ತಿದ್ದರು. ಇದೇ ಅನಂತ್ ತೂಕ ಇಳಿಸಿದ ಗುಟ್ಟು.



Click it and Unblock the Notifications