Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೂಕ ಹೆಚ್ಚಿಸಿಕೊಳ್ಳುವ ಇರಾದೆಯೇ? ಇಲ್ಲಿದೆ ಸರಳ ಟಿಪ್ಸ್
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಕುರಿತು ಕಾಳಜಿ ಹೆಚ್ಚಿದೆ. ಅದರಲ್ಲೂ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಕುಗ್ಗಿದ ದೈಹಿಕ ಚಟುವಟಿಕೆಗಳಿಂದ ಹಿಗ್ಗಿದ ಸ್ಥೂಲಕಾಯವನ್ನು ಮತ್ತೆ ಹಿಂದಿನ ಆಕಾರಕ್ಕೆ ತರುವಲ್ಲೇ ಹೆಚ್ಚಿನವರ ಉದ್ದೇಶವಾಗಿದೆ. ಆದರೆ ಇದಕ್ಕೆ ವಿರುದ್ಧವಾಗಿ ದೇಹದ ತೂಕವನ್ನು ಹೆಚ್ಚಿಸಲು ಇಚ್ಛಿಸುವವರ ಸಂಖ್ಯೆಯೂ ಕಡಿಮೆಯೇನಲ್ಲ. ತೂಕ ಇಳಿಸುವ ಭರದಲ್ಲಿ ಮಾಡಬಾರದ 10 ತಪ್ಪುಗಳು
ಅದು ಏನೇ ಇರಲಿ, ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತಿನಂತೆ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಕೆಲವೊಮ್ಮೆ ತುಂಬಾ ದಪ್ಪ ಇರುವುದರಿಂದ ಸಾಕಷ್ಟು ತೊಂದರೆಗಳು ಹೇಗೆ ಕಾಣಿಸಿಕೊಳ್ಳುತ್ತವೋ ಹಾಗೆಯೇ ತೆಳು ದೇಹ ಹೊಂದಿದವರಿಗೆ ಮೈಯಲ್ಲಿ ಶಕ್ತಿ ಕಡಿಮೆಗೊಂಡು, ಬೇಗ ಕಾಯಿಲೆ ಹೊಂದಿಬಿಡುತ್ತಾರೆ. ಆದರೆ ಸಮ ತೂಕ ಕಾಪಾಡಿಕೊಂಡರೆ ಯಾವುದೇ ಸಮಸ್ಯೆ ಇಲ್ಲದೆ ಆರೋಗ್ಯಯುತವಾಗಿ ಇರಬಹುದು.
ಹಾಗಾಗಿ ದೇಹದ ತೂಕ ಹೆಚ್ಚಿಸಿಕೊಳ್ಳಲು ಮುಖ್ಯವಾದುದು ಊಟದಲ್ಲಿ ಹೆಚ್ಚಿನ ಪ್ರೋಟೀನು ಇರುವ ಪದಾರ್ಥಗಳನ್ನು ಸೇವಿಸುವುದು, ಹೊರಗಿನ ತಿಂಡಿ ತಿನ್ನದೇ ಇರುವುದು, ಕಡಿಮೆ ನೀರು ಕುಡಿಯುವುದು, ಮೊದಲಾದವುಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ... ದೇಹವನ್ನು ಧೃಢಕಾಯವನ್ನಾಗಿಸಿ ತೂಕವನ್ನು ಹೆಚ್ಚಿಸಿಕೊಳ್ಳಲು ಆರೋಗ್ಯಕರವಾದ ವಿಧಾನಗಳನ್ನು ಕೆಳಗೆ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ ಮುಂದೆ ಓದಿ..

ವ್ಯಾಯಾಮದ ಬಳಿಕವೇ ಊಟ ಮಾಡಿರಿ
ಉತ್ತಮ ದೇಹ ಹೊಂದಲು ದಿನದಲ್ಲಿ ಕನಿಷ್ಠ ಒಂದು ಗಂಟೆ ಕಾಲ ವ್ಯಾಯಾಮ ಅಗತ್ಯ. ಯಾವುದೇ ವ್ಯಾಯಾಮದ ನಿಯಮದಂತೆ ವ್ಯಾಯಾಮಕ್ಕೂ ಮೊದಲು ಊಟ ಮಾಡುವುದು ತರವಲ್ಲ. ವ್ಯಾಯಾಮದ ಬಳಿಕ ದೇಹದ ಎಲ್ಲಾ ಭಾಗಗಳಲ್ಲಿ ರಕ್ತಸಂಚಾರ ಹೆಚ್ಚಿ ದೇಹದ ಚಟುವಟಿಕೆಗಳು ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ವ್ಯಾಯಾಮದ ಬಳಿಕ ಅಲ್ಪ ವಿಶ್ರಾಂತಿ ಪಡೆದು ಊಟ ಮಾಡುವ ಮೂಲಕ ದೇಹದ ಎಲ್ಲಾ ಚಟುವಟಿಕೆಗಳಿಗೆ ಹೆಚ್ಚಿನ ಪೋಷಕಾಂಶಗಳನ್ನು ದೊರಕಿಸಿಕೊಟ್ಟಂತಾಗುತ್ತದೆ. ಕ್ರಮೇಣ ದೇಹದಲ್ಲಿ ಗಮನಾರ್ಹ ಬದಲಾವಣೆ ಕಂಡುಬರುತ್ತದೆ.

ಸಾಮಾನ್ಯಕ್ಕಿಂತಲೂ ಹೆಚ್ಚು ಊಟ ಮಾಡಿರಿ
ಸಾಧಾರಣವಾಗಿ ಕೃಶಶರೀರಿಗಳ ಊಟ ಒಂದು ಪ್ರಮಾಣಕ್ಕೆ ನಿಗದಿಯಾಗಿರುತ್ತದೆ. ತನ್ನಿಂದ ಇಷ್ಟೇ ಅರಗಿಸಿಕೊಳ್ಳಲು ಸಾಧ್ಯ ಎಂಬ ನಂಬಿಕೆ ಅವರಲ್ಲಿ ಬೇರುಬಿಟ್ಟಿರುತ್ತದೆ. ಆದರೆ ನಿಯಮಿತವಾಗಿ ವ್ಯಾಯಾಮ ಮಾಡುವ ಕಾರಣ ದೇಹಕ್ಕೆ ಹೆಚ್ಚಿನ ಆಹಾರ ಅಗತ್ಯ ಎಂಬ ವಿಚಾರವನ್ನು ಮನದಟ್ಟು ಮಾಡಿಕೊಂಡು ನಿಗದಿತ ಪ್ರಮಾಣಕ್ಕೂ ಸ್ವಲ್ಪ ಹೆಚ್ಚು ಊಟ ಮಾಡುವುದರಿಂದ ಶೀಘ್ರವೇ ದೇಹದಲ್ಲಿ ಬದಲಾವಣೆ ಕಂಡುಬರುತ್ತದೆ.ಒಂದು ದಿನಕ್ಕೆ ಮೂರು ಹೊತ್ತು ಭರ್ಜರಿ ಊಟ ಹಾಗೂ ನಡುವೆ ಎರಡು ಬಾರಿ ಅಲ್ಪ ಆಹಾರವನ್ನು ಸೇವಿಸಿದವರಲ್ಲಿ ಅತ್ಯುತ್ತಮವಾದ ಪರಿಣಾಮ ಕಂಡುಬಂದಿದೆ.

ಸರಿಯಾಗಿ ಆಹಾರ ಸೇವಿಸಿರಿ
ದಿನದ ಮೂರು ಊಟದ ಸಹಿತ ನಡುನಡುವೆ ಚಿಕ್ಕಪ್ರಮಾಣದಲ್ಲಿ ಆರೋಗ್ಯಕರ ಆಹಾರಗಳನ್ನು ಸೇವಿಸುತ್ತಾ ಇರಿ. ಈ ಆಹಾರದಲ್ಲೂ ವೈವಿಧ್ಯತೆ ಇರಲಿ. ಹಣ್ಣಿನ ರಸ, ಹಾಲಿನಿಂದ ತಯಾರಿಸಿದ ವ್ಯಂಜನಗಳು, ಮಾಂಸಾಹಾರಿ ಪದಾರ್ಥಗಳು ಮೊದಲಾದವನ್ನು ಚಿಕ್ಕ ಪ್ರಮಾಣದಲ್ಲಿ ನಡುನಡುವೆ ಸೇವಿಸುತ್ತಿರುವುದರಿಂದ ಉತ್ತಮ ಪರಿಣಾಮ ಕಂಡುಬರುತ್ತದೆ.

ಊಟದಲ್ಲಿ ಮೊಸರು ಧಾರಾಳವಾಗಿರಲಿ
ದೇಹದಲ್ಲಿರುವ ಸ್ನಾಯುಗಳು ಕೊಬ್ಬಿಗಿಂತ ಹೆಚ್ಚು ಭಾರವಾಗಿರುತ್ತವೆ. ಆದುದರಿಂದ ಧೃಢವಾದ ಶರೀರಕ್ಕಾಗಿ ಮೊದಲು ಕೊಬ್ಬನ್ನು ಕಳೆದುಕೊಂಡು ಸ್ನಾಯುಗಳನ್ನು ಹೆಚ್ಚಿಸುವುದು ಅಗತ್ಯ. ಆದರೆ ಸ್ನಾಯುಗಳನ್ನು ಹೆಚ್ಚಿಸಲು ಕೊಬ್ಬು ಸಹಾ ಅಗತ್ಯ. ಆಹಾರದಲ್ಲಿ ಮೊಸರನ್ನು ಹೆಚ್ಚು ಸೇವಿಸುವುದರಿಂದ ದೇಹಕ್ಕೆ ಸುಲಭವಾಗಿ ಜೀರ್ಣವಾಗುವ ಆಹಾರ ಲಭಿಸಿ ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಜೊತೆಗೆ ಭಾರ ಎತ್ತುವಂತಹ ಕೆಲವು ಶ್ರಮಬೇಡುವ ವ್ಯಾಯಾಮಗಳಿಂದ ಹೆಚ್ಚಿನ ಕೊಬ್ಬನ್ನು ಕರಗಿಸಿ ಧೃಢಶರೀರ ಹೊಂದಲು ಸಾಧ್ಯವಾಗುತ್ತದೆ.

ಸಿದ್ಧ ಆಹಾರಗಳನ್ನು (Junk Food) ತ್ಯಜಿಸಿ
ಇಂದು ಒಂದು ಫೋನ್ ಮಾಡಿದರೆ ಮನೆಬಾಗಿಲಿಗೇ ಹಲವು ಸಿದ್ಧ ಆಹಾರಗಳು ಬಂದು ತಲುಪುತ್ತವೆ. ಆದರೆ ಈ ಆಹಾರಗಳನ್ನು ಹೆಚ್ಚು ಹೊತ್ತು ತಾಜಾತನದಲ್ಲಿರಿಸಲು ಕೆಲವು ಸಂರಕ್ಷಕ (preservative) ಗಳನ್ನು ಸೇರಿಸಬೇಕಾಗಿ ಬರುವುದರಿಂದ ಇವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು, ಕೆಟ್ಟ ಕೊಲೆಸ್ಟ್ರಾಲ್, ಹಾಗೂ ಕೊಬ್ಬು ಇರುತ್ತದೆ. ಈ ಆಹಾರ ಸೇವನೆಯಿಂದ ಅಷ್ಟೊಂದು ಕಷ್ಟಪಟ್ಟು ಕರಗಿಸಿದ್ದ ಕೊಬ್ಬು ಕ್ಷಣಮಾತ್ರದಲ್ಲಿ ಮತ್ತೆ ಪ್ರತ್ಯಕ್ಷವಾಗುತ್ತವೆ. ಇದರಿಂದ ದೇಹದ ಹೊಟ್ಟೆಯ ಭಾಗ ಬೆಳೆಯುತ್ತದೆಯೇ ವಿನಃ ದೇಹಕ್ಕೆ ಅಗತ್ಯವಾದ ಸ್ನಾಯುಗಳು ಬೆಳೆಯಲಾರವು.

ಬಾದಾಮಿ ಹಾಗೂ ಒಣಫಲಗಳನ್ನು ತಿನ್ನಿರಿ
ಬಾದಾಮಿ, ಶೇಂಗಾಬೀಜ, ಪಿಸ್ತಾ, ವಾಲ್ನಟ್ ಮೊದಲಾದವುಗಳಲ್ಲಿ ಸ್ನಾಯುಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳು ಹಾಗೂ ನಾರು ಹೇರಳವಾಗಿವೆ. ಇದರಿಂದ ಜೀರ್ಣಕ್ರಿಯೆ ಉತ್ತಮಗೊಂಡು ದೇಹದ ತೂಕ ಹೆಚ್ಚುತ್ತದೆ.



Click it and Unblock the Notifications