Latest Updates
-
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ
ದೇಹದ ತೂಕ ಇಳಿಸಲು ಇಲ್ಲಿದೆ ನೋಡಿ ಫಾರ್ಮುಲಾ!
ಸ್ಥೂಲಕಾಯವು ಈಗ ಒಂದು ಜಾಗತಿಕ ಸಮಸ್ಯೆಯಾಗಿದೆ. ಏಕೆಂದರೆ ಇದು ಇನ್ನಿತರ ಗಂಭೀರ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಸ್ಥೂಲಕಾಯ ಇರುವವರಿಗೆ ಹೃದ್ರೋಗ, ಕೀಲು ನೋವು, ಸಂತಾನ ಸಮಸ್ಯೆ (ಮಹಿಳೆಯರಲ್ಲಿ) ಇತ್ಯಾದಿಗಳು ಕಂಡು ಬರುತ್ತವೆ. ಆದ್ದರಿಂದ ಸ್ಥೂಲಕಾಯವನ್ನು ಆರಂಭದಲ್ಲಿಯೇ ಸರಿಪಡಿಸಿಕೊಳ್ಳಬೇಕು, ಇಲ್ಲವಾದಲ್ಲಿ ಅದನ್ನು ನಿಯಂತ್ರಣ ಮಾಡುವುದು ತುಂಬಾ ಕಷ್ಟ. ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?
ತೂಕ ಹೆಚ್ಚಿಸಿಕೊಳ್ಳುವುದಕ್ಕಿಂತ ತೂಕ ಇಳಿಸಿಕೊಳ್ಳುವುದು ತುಂಬಾ ಕಷ್ಟಕರ. ಅದರಲ್ಲೂ ಇಳಿಸಿದ ತೂಕ ಮತ್ತೆ ಏರದಂತೆ ನೋಡಿಕೊಳ್ಳುವುದು ಸವಾಲಿನ ವಿಷಯ. ಇಂದಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ಹಲವಾರು ವಿಧಾನಗಳಿವೆ. ಹಲವಾರು ವೃತ್ತಿಪರ ಉದ್ಯಮಗಳಿವೆ.
ಆಯುರ್ವೇದದಿಂದ ಹಿಡಿದು ಅತ್ಯಾಧುನಿಕ ಜಿಮ್ ವರೆಗೆ ವಿವಿಧ ಬೆಲೆಯ, ವಿವಿಧ ರೂಪದ ವಿಧಾನಗಳಿವೆ. ಎಲ್ಲವೂ ಒಂದು ಅವಧಿಯಲ್ಲಿ ತೂಕ ಕಳೆದುಕೊಳ್ಳಲು ಕಾರ್ಯಕ್ರಮ ರೂಪಿಸಿ ಹೆಚ್ಚಿನ ಪಕ್ಷ ಯಶಸ್ವಿಯೂ ಆಗುತ್ತವೆ. ಆದರೆ ಆ ಅವಧಿ ಕಳೆದ ಬಳಿಕ ಇಳಿದ ತೂಕವನ್ನು ಉಳಿಸಿಕೊಳ್ಳಲಾರದೇ ಮತ್ತೆ ಸ್ಥೂಲಕಾಯದತ್ತ ದೇಹ ಹೊರಳುವುದು ಮಾತ್ರ ವಿಪರ್ಯಾಸವಾಗಿದೆ.
ಬನ್ನಿ ಅದಕ್ಕಾಗಿ ಆ ಆಹಾರ ಪದಾರ್ಥಗಳು ಯಾವುವು ಎಂಬ ಪಟ್ಟಿಯನ್ನು ನಾವು ಇಂದು ನಿಮಗೆ ನೀಡುತ್ತಿದ್ದೇವೆ. ಇದನ್ನು ಸೇವಿಸಿ ನಿಮ್ಮ ಹೆಚ್ಚಿನ ತೂಕವನ್ನು ಕಳೆದುಕೊಳ್ಳಿ.

ಆಹಾರ ಕ್ರಮದಲ್ಲಿ ಸಂಪೂರ್ಣ ಧಾನ್ಯಗಳನ್ನು ಬೆಳೆಸಿ
ಇವುಗಳಲ್ಲಿ ನಾರು ಅಧಿಕವಾಗಿರುತ್ತದೆ ಮತ್ತು ಇವು ನಿಮ್ಮ ಹೊಟ್ಟೆ ತುಂಬಿದ ಅನುಭವ ನೀಡುತ್ತವೆ. ಇದನ್ನು ಸೇವಿಸಿದರೆ ನೀವು ಕಡಿಮೆ ಊಟ ಮಾಡುತ್ತೀರಿ. ಸಂಪೂರ್ಣ ಧಾನ್ಯಗಳು ಅಥವಾ ವೋಲ್ ಗ್ರೇನ್ಸ್ ಮಲಬದ್ಧತೆಯನ್ನು ಸಹ ನಿವಾರಿಸುತ್ತವೆ. ನಿಮ್ಮ ಸೊಂಟದ ಅಳತೆಯನ್ನು ಕಡಿಮೆ ಮಾಡಿಕೊಳ್ಳಲು ಇದು ಒಳ್ಳೆಯ ಆಹಾರ ಪದಾರ್ಥವಾಗಿರುತ್ತದೆ.

ಹಣ್ಣಿನಲ್ಲಿರುವ ಸ್ವಾಭಾವಿಕ ಸಕ್ಕರೆ ಅಂಶ
ಸ್ವಾಭಾವಿಕ ಸಕ್ಕರೆಗಳು ಅಂದರೆ ಹಣ್ಣಿನಲ್ಲಿ ದೊರೆಯುವ ಸುಕ್ರೋಸ್ ನಿಮ್ಮ ದೇಹದಲ್ಲಿರುವ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇವು ಸಕ್ಕರೆ ಇರುವ ಪದಾರ್ಥಗಳನ್ನು ತಿನ್ನುವಂತಹ ಚಪಲವನ್ನು ಕಡಿಮೆ ಮಾಡುತ್ತವೆ. ಹೀಗೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಹರ್ಬಲ್ ಟೀಗಳು
ಗ್ರೀನ್ ಟೀ, ಚಾಮೊಮೈಲ್ ಟೀ ಮತ್ತು ಬ್ಲಾಕ್ ಟೀಗಳಂತಹವು ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತವೆ. ಹೀಗಾಗಿ ಪ್ರತಿದಿನ ಈ ಟೀ ಸೇವಿಸಿ. ತೂಕವನ್ನು ಕರಗಿಸಿಕೊಳ್ಳಿ.

ಪ್ರೋಟೀನ್ ಪುಡಿ
ನಿಮ್ಮ ತಿನ್ನುವ ಚಪಲವನ್ನು ನಿಯಂತ್ರಿಸಿಕೊಳ್ಳಲು ನೀವು ಆಗಾಗ ಪ್ರೋಟೀನ್ ಮಿಲ್ಕ್ ಶೇಖ್‌ಗಳನ್ನು ಸೇವಿಸಬೇಕು. ಇವು, ನಿಮ್ಮ ಜೀರ್ಣ ಕ್ರಿಯೆಯನ್ನು ಸರಾಗಗೊಳಿಸುತ್ತವೆ ಮತ್ತು ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತವೆ.

ಚಕ್ಕೆ
ಚಕ್ಕೆಯನ್ನು ಆಹಾರಗಳಲ್ಲಿ ರುಚಿಗಾಗಿ ಬಳಸುತ್ತಾರೆ. ಇದು ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಟ್ಟು, ನಿಮ್ಮ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತವೆ. ಇದರಿಂದ ನಿಮ್ಮ ವಿಸರ್ಜನೆಗಳು ಸುಗಮವಾಗಿ ಆಗುತ್ತವೆ. ಆದ್ದರಿಂದ ದಿನಾಲು ಈ ಟೀಯನ್ನು ಸೇವಿಸಿ. ತೂಕ ಕಡಿಮೆ ಮಾಡಿಕೊಳ್ಳಿ.

ಒಣ ಹಣ್ಣುಗಳು
ಇವುಗಳಲ್ಲಿ ಶಕ್ತಿ ಮತ್ತು ಪ್ರೋಟಿನ್‌ಗಳು ಶೇಖರಣೆಗೊಂಡಿರುತ್ತವೆ. ಒಂದು ಹಿಡಿ ಒಣ ಹಣ್ಣುಗಳನ್ನು ಸೇವಿಸಿದರೆ, ಇಡೀ ದಿನ ಆರೋಗ್ಯಕರವಾಗಿ ಮತ್ತು ಲವಲವಿಕೆಯಿಂದ ಇರಬಹುದು. ಇದು ಹೊಟ್ಟೆ ಹಸಿವನ್ನು ನಿವಾರಿಸುತ್ತದೆ ಮತ್ತು ನಿಮ್ಮ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.

ಕಿತ್ತಳೆ ಹಣ್ಣು
ಕಿತ್ತಳೆಯಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸರಿಪಡಿಸಿ, ಉರಿಯೂತವನ್ನು ನಿವಾರಿಸುತ್ತದೆ. ಇದು ನಿಮ ದೇಹದಲ್ಲಿ ಕೊಬ್ಬನ್ನು ಕರಗಿಸಿ, ನೀವು ಸಪೂರವಾಗಿ ಕಾಣುವಂತೆ ಮಾಡುತ್ತದೆ. ಇದು ನಿಮ್ಮ ತೂಕವನ್ನು ಕರಗಿಸಿಕೊಳ್ಳಲು ಹೇಳಿ ಮಾಡಿಸಿದ ಆಹಾರವಾಗಿರುತ್ತದೆ.

ಫ್ಲಾಕ್ಸ್‌ಸೀಡ್ ಎಣ್ಣೆ
ಇದು ನಿಮ್ಮ ತಿನ್ನುವ ಚಪಲವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಇದನ್ನು ಸೇವಿಸಿದ ಹೊಟ್ಟೆ ತುಂಬಿದ ರೀತಿ ಇರುತ್ತದೆ. ಜೊತೆಗೆ ಇದು ನಿಮ್ಮ ಹೃದಯಕ್ಕೆ ಸಹ ಒಳ್ಳೆಯದು. ಫ್ಲಾಕ್ಸ್‌ಸೀಡ್ ಎಣ್ಣೆಯು ಜೀರ್ಣವಾಗುವ ವೇಗವನ್ನು ಹೆಚ್ಚಿಸುತ್ತದೆ. ಹೀಗೆ ಇದು ನಿಮ್ಮ ದೇಹದಲ್ಲಿರುವ ಗ್ಲೂಕೋಸ್ ಮತ್ತು ಕೊಬ್ಬನ್ನು ಸರಿಯಾಗಿ ಬಳಸಿಕೊಳ್ಳಲು ನೆರವಾಗುತ್ತದೆ.

ಮೊಟ್ಟೆಗಳು
ಇವುಗಳಲ್ಲಿ ಮೆಥಿಯೊನೈನ್ ಮತ್ತು ಕೊಲೈನ್ ಎಂಬ ಅಮೈನೊ ಆಮ್ಲಗಳು ಇರುತ್ತವೆ. ಇವು ನಿಮ್ಮನ್ನು ಕೊಬ್ಬು ಇರುವ ಆಹಾರಗಳನ್ನು ಸೇವಿಸಿದಂತೆ ತಡೆಯುತ್ತವೆ. ಮೊಟ್ಟೆಗಳು ಸಹ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತವೆ ಮತ್ತು ಕೊಬ್ಬನ್ನು ವಿಭಜಿಸುತ್ತವೆ.

ಅವೊಕ್ಯಾಡೊ
ಇದರಲ್ಲಿ ಗ್ಲುಟಮೈನ್ ಎಂಬ ಕಾರ್ಬೊಹೈಡ್ರೇಟ್ ಇರುತ್ತದೆ. ಇದು ತಿನ್ನುವ ಚಪಲವನ್ನು ಕಡಿಮೆ ಮಾಡುತ್ತವೆ. ನೀವು ಕಾರ್ಬೋ ಹೈಡ್ರೇಟ್ ಸೇವಿಸುವುದನ್ನು ಕಡಿಮೆ ಮಾಡಬೇಕೆಂದರೆ, ಅವೊಕ್ಯಾಡೊವನ್ನು ಸೇವಿಸಿ. ಇದು ನಿಮ್ಮ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತವೆ. ಹೀಗೆ ಇವು ನಿಮ್ಮ ತೂಕವನ್ನು ನಿಯಂತ್ರಿಸಿಕೊಳ್ಳಲು ಉತ್ತಮವಾದ ಆಹಾರವಾಗಿರುತ್ತದೆ.



Click it and Unblock the Notifications