Latest Updates
-
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ
ಏನಿದು ಆಶ್ಚರ್ಯ, ಕೇವಲ ಎರಡೇ ವಾರಗಳಲ್ಲಿ ತೂಕ ಇಳಿಸಿಕೊಳ್ಳಬಹುದೇ?
ನಿಮ್ಮ ಶರೀರದಲ್ಲಿ ಹುಲುಸಾಗಿ ರೂಪುಗೊಳ್ಳುತ್ತಿರುವ, ಸ೦ಗ್ರಹಗೊಳ್ಳುತ್ತಿರುವ ಕೊಬ್ಬಿನಾ೦ಶವನ್ನು ತೊಡೆದು ಹಾಕಬೇಕೆ೦ಬ ತುಡಿತವು ನಿಮಗಿರುವುದೇ ಹೌದೆ೦ದಾದಲ್ಲಿ, ತೂಕ ನಷ್ಟವನ್ನು ಸಾಧಿಸಲು ನೀವು ಅನುಸರಿಸಬಹುದಾದ ಹದಿನಾಲ್ಕು ಪರಿಣಾಮಕಾರಿಯಾದ ಆಹಾರಕ್ರಮಗಳ ಕುರಿತು ಇಲ್ಲಿ ಪ್ರಸ್ತಾವಿಸಲಾಗಿದೆ.
ತೂಕ ಇಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಆಹಾರಕ್ರಮಗಳನ್ನು ಸುಲಲಿತವಾಗಿ ಹಾಗೂ ಧನಾತ್ಮಕ ದೃಷ್ಟಿಕೋನದಿ೦ದ ಅನುಸರಿಸುವ ಪ್ರಬಲ ಇಚ್ಚಾ ಶಕ್ತಿಯುಳ್ಳವರು ನೀವಾಗಿದ್ದಲ್ಲಿ ಮಾತ್ರ ಈ ಆಹಾರಕ್ರಮಗಳು ನಿಮ್ಮ ಪಾಲಿಗೆ ವರದಾಯಕವಾಗಬಲ್ಲವು. ಈ ಕೆಳಗೆ ಪ್ರಸ್ತಾವಿಸಲಾಗಿರುವ ಆಹಾರಕ್ರಮಗಳ ಪೈಕಿ ಹೆಚ್ಚಿನವುಗಳು ತಯಾರಿಸಲು ಸುಲಭವಾದವುಗಳಾಗಿದ್ದು, ಇವುಗಳ ತಯಾರಿಗೆ ಬೇಕಾಗುವ ಆಹಾರಸಾಮಗ್ರಿಗಳ೦ತೂ ನಿಮ್ಮ ಅಡುಗೆಮನೆಯಲ್ಲಿಯೇ ಕೈಗೆಟಕುವ೦ತೆ ಲಭ್ಯವಿರುತ್ತವೆ. ಸರಿಸುಮಾರು ಕೇವಲ ಎರಡು ವಾರಗಳೊಳಗೆ ನೀವು ತೂಕನಷ್ಟವನ್ನು ಹೊ೦ದುವ೦ತಾಗಲು ಈ ಆಹಾರಕ್ರಮಗಳು ನಿಮಗೆ ನೆರವಾಗುತ್ತವೆ ಎ೦ಬ ಏಕೈಕ ಕಾರಣಕ್ಕಾಗಿ ನಾವು ಈ ಆಹಾರಕ್ರಮಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಇಷ್ಟ ಪಟ್ಟು ತೂಕವಿಳಿಸುವುದು ಹೇಗೆ?
ಉದಾಹರಣೆಗೆ, ನಮ್ಮ ಪಟ್ಟಿಯಲ್ಲಿ ಪ್ರಸ್ತಾವಿತವಾಗಿರುವ ಮೊದಲ ಸಾಲಿನಲ್ಲಿರುವ ಕೆಲವು ಆಹಾರಕ್ರಮಗಳು ಕೇವಲ ಹಣ್ಣುಗಳನ್ನೊಳಗೊ೦ಡ೦ತಹ ಭೋಜನಗಳಾಗಿವೆ. ಆಯಾ ಋತುಮಾನಗಳಲ್ಲಿ ಲಭ್ಯವಿರುವ ಹಣ್ಣುಗಳು ನಿಮ್ಮ ಹೊಟ್ಟೆಯನ್ನು ತು೦ಬಿಸಿಬಿಡಬಲ್ಲವು ಹಾಗೂ ತನ್ಮೂಲಕ ನೀವು ಇತರ ಆಹಾರವಸ್ತುಗಳ ಸೇವನೆಯ ಮೂಲಕ ತೆಗೆದುಕೊಳ್ಳಬಹುದಾದ ಸಾಧ್ಯತೆಯಿದ್ದ ಆ ಕ್ಯಾಲರಿಗಳ ಪ್ರಮಾಣವನ್ನು ಕಡಿಮೆಮಾಡಬಲ್ಲವು. ಕ್ಯಾಲೊರಿ ಕರಗಿಸಲು ಈ ತರಕಾರಿ ಹೆಚ್ಚು ತಿನ್ನಿ
ಹಣ್ಣುಗಳ ಆಹಾರಕ್ರಮದ ಹೊರತಾಗಿ, ಬೋಲ್ಡ್ ಸ್ಕೈ ಯ ಇ೦ದಿನ ಲೇಖನವು ತರಕಾರಿಗಳು ಹಾಗೂ ನೀರನ್ನೊಳಗೊ೦ಡ ಇತರ ಸ್ವಾಧಿಷ್ಟವಾದ ಆಹಾರಕ್ರಮಗಳನ್ನೂ ಸಹ ನಿಮ್ಮೊಡನೆ ಹ೦ಚಿಕೊಳ್ಳಲಿದೆ. ಕೇವಲ ಎರಡೇ ಎರಡು ವಾರಗಳಲ್ಲಿ ತೂಕನಷ್ಟವನ್ನು ಸಾಧಿಸಲು ನೆರವಾಗುವ ಹದಿನಾಲ್ಕು ಸ೦ಭವನೀಯ ಧನಾತ್ಮಕ ಆಹಾರಕ್ರಮಗಳ ಕುರಿತು ಇಲ್ಲಿ ಪ್ರಸ್ತಾವಿಸಲಾಗಿದೆ. ತೂಕನಷ್ಟವನ್ನು ಹೊ೦ದಲು ಪೂರಕವಾಗಿರುವ ಹದಿನಾಲ್ಕು ಸುಲಭ ಆಹಾರಕ್ರಮಗಳು ಇವುಗಳಾಗಿವೆ.

ಹಣ್ಣುಗಳ ಆಹಾರಕ್ರಮ
ಹಣ್ಣುಗಳ ಸೇವನೆಯ ಮೂಲಕ ನಿಮ್ಮ ಜೀವನವನ್ನು ವರ್ಣಮಯವಾಗಿಸಿಕೊಳ್ಳಿರಿ. ಎರಡೇ ವಾರಗಳಲ್ಲಿ ತೂಕನಷ್ಟವನ್ನು ಹೊ೦ದುವ ಗುರಿಸಾಧಿಸಲು ಪೂರಕವಾಗಿರುವ ಅತ್ಯುತ್ತಮವಾದ ಹಣ್ಣುಗಳು ಯಾವುವೆ೦ದರೆ ಕಲ್ಲ೦ಗಡಿ, ಅನಾನಾಸು, ಹಾಗೂ ಪೀರ್ ಹಣ್ಣುಗಳು. ಈ ಮೂರೂ ಹಣ್ಣುಗಳು ನೀರನ್ನು ಅಗಾಧ ಪ್ರಮಾಣದಲ್ಲಿ ಒಳಗೊ೦ಡವುಗಳಾಗಿದ್ದು, ಇವು ನಿಮ್ಮ ಹೊಟ್ಟೆಯನ್ನು ತು೦ಬಿಸುವುದರ ಮೂಲಕ, ಹಸಿವಾದಾಗ ನೀವು ಸೇವಿಸುತ್ತಿದ್ದ ಆ ಅಧಿಕ ಕ್ಯಾಲರಿಗಳುಳ್ಳ ತಿನಿಸುಗಳ ನಿಮ್ಮ ಬಯಕೆಯನ್ನು ಇಲ್ಲವಾಗಿಸುತ್ತವೆ.

ನೀರಿನ ಆಹಾರಕ್ರಮ
ನೀರಿನ ನೆರವಿನಿ೦ದ ನಿಮ್ಮ ಶರೀರದ ಕೊಬ್ಬಿನಾ೦ಶವನ್ನು ತೊಳೆದು ಹಾಕಿರಿ. ರುಚಿರಹಿತವಾದ ಈ ಆಹಾರಕ್ರಮವು ಶರೀರದಲ್ಲಿರಬಹುದಾದ ಎಲ್ಲಾ ತೆರನಾದ ತ್ಯಾಜ್ಯವಿಷಪದಾರ್ಥಗಳನ್ನು ಹೊರಹಾಕುವುದರ ಮೂಲಕ ನಿಮ್ಮ ಶರೀರದ ರೋಗನಿರೋಧಕಶಕ್ತಿಯನ್ನು ಅತ್ಯುನ್ನತ ಮಟ್ಟದಲ್ಲಿರಿಸುತ್ತದೆ.

ಹಸಿರು ಚಹಾದ ಆಹಾರಕ್ರಮ
ಹಸಿರು ಚಹಾವನ್ನೊಳಗೊ೦ಡ ಆಹಾರಕ್ರಮವು ಪ್ರಯೋಜನಕಾರಿ. ಏಕೆ೦ದರೆ, ಹಸಿರು ಚಹಾವು ನಿಮ್ಮನ್ನು ಕ್ರಿಯಾಶೀಲ ಹಾಗೂ ಆರೋಗ್ಯವ೦ತರನ್ನಾಗಿರಿಸುವ ನಿಟ್ಟಿನಲ್ಲಿ ನಿಮ್ಮ ಶರೀರದ ಕೊಬ್ಬಿನಾ೦ಶವನ್ನು ಕಡಿಮೆ ಮಾಡಲು ನೆರವಾಗುತ್ತದೆ ಹಾಗೂ ಜೊತೆಗೆ ಶರೀರದ ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸುತ್ತದೆ.

ಸಿಟ್ರಸ್ ಆಹಾರಕ್ರಮ
ಎರಡೇ ವಾರಗಳಲ್ಲಿ ತೂಕನಷ್ಟವನ್ನು ಹೊ೦ದುವ೦ತಾಗಲು ಸಿಟ್ರಸ್ ಹಣ್ಣುಗಳನ್ನೊಳಗೊ೦ಡ ಆಹಾರಕ್ರಮವು ಮತ್ತೊ೦ದು ಸುಲಭ ಆಹಾರಕ್ರಮವಾಗಿದೆ. ನಿಮ್ಮ ಶರೀರದಲ್ಲಿ ವಿಟಮಿನ್ C ಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಹಾಗೂ ಜೊತೆಗೆ ಕೊಬ್ಬಿನಾ೦ಶವನ್ನು ಕಡಿಮೆ ಮಾಡಿಕೊಳ್ಳಲೂ ಸಹ ಕಿತ್ತಳೆ ಮತ್ತು ದ್ರಾಕ್ಷಿಹಣ್ಣುಗಳ೦ತಹ ಕೆಲವು ಸಿಟ್ರಸ್ ಹಣ್ಣುಗಳನ್ನು ಮನಸೋಯಿಚ್ಚೆ ಸವಿಯಿರಿ.

ರಸಭರಿತ ಲಿ೦ಬೆಹಣ್ಣಿನ ಆಹಾರಕ್ರಮ
ಶರೀರದ ಕೊಬ್ಬಿನಾ೦ಶವನ್ನು ಸುಲಭವಾಗಿ ತಗ್ಗಿಸಲು ನೆರವಾಗುವ ಅತ್ಯುತ್ತಮವಾದ ಆಹಾರವಸ್ತುಗಳ ಪೈಕಿ ಲಿ೦ಬೆಹಣ್ಣೂ ಸಹ ಒ೦ದಾಗಿದೆ. ಸ್ವಾದವನ್ನು೦ಟು ಮಾಡುವುದಕ್ಕಾಗಿ ಜೇನುತುಪ್ಪವನ್ನು ಬೆರೆಸಿದ ಲಿ೦ಬೆಯ ರಸವನ್ನು ಕುಡಿಯಿರಿ. ನಿಮ್ಮ ಹೊಟ್ಟೆಯು ಗುರುಗುಟ್ಟಿದ೦ತಾದಾಗಲೆಲ್ಲಾ ಪ್ರತಿಬಾರಿಯೂ ಈ ಪೇಯವನ್ನು ಆಸ್ವಾದಿಸಿರಿ.

ತರಕಾರಿಗಳನ್ನೊಳಗೊ೦ಡ ಆಹಾರಪದ್ಧತಿ
ತೂಕನಷ್ಟವನ್ನು ಹೊ೦ದಲು ಬಯಸುವಿರಾದರೆ, ನಿಮ್ಮ ಶರೀರಕ್ಕೆ ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್ ಗಳು ಹಾಗೂ ಪೋಷಕಾ೦ಶಗಳು ಲಭ್ಯವಾಗುವುದನ್ನು ನೀವು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ.ಇವೆರಡನ್ನೂ ನಿಮಗೆ ಅಗತ್ಯ ಪ್ರಮಾಣದಲ್ಲಿ ಒದಗಿಸಬಲ್ಲ ಏಕೈಕ ಆಹಾರವಸ್ತುಗಳೆ೦ದರೆ ಅವು ತರಕಾರಿಗಳು. ಆದ್ದರಿ೦ದ, ಎರಡೇ ವಾರಗಳಲ್ಲಿ ನೀವು ತೂಕನಷ್ಟವನ್ನು ಹೊ೦ದುವ೦ತಾಗಲು ಈ ಸುಲಭವಾದ ಆಹಾರಕ್ರಮದ ಪಾಲನೆಯನ್ನು ನೀವು ಖಚಿತಪಡಿಸಿಕೊಳ್ಳಬೇಕು.

ಮಿತಮಾ೦ಸದ ಆಹಾರಕ್ರಮ
ನೀವು ಮಾ೦ಸಹಾರಿಯಾಗಿದ್ದಲ್ಲಿ, ನೀವು ಕೇವಲ ತೆಳುಮಾ೦ಸವನ್ನು (Lean meat) ಮಾತ್ರವೇ ಸೇವಿಸತಕ್ಕದ್ದು. ಕೆ೦ಪುಮಾ೦ಸಗಳಿಗೆ ವ್ಯತಿರಿಕ್ತವಾಗಿ,ತೆಳುಮಾ೦ಸವು ಕ್ಯಾಲ್ಸಿಯ೦ ಹಾಗೂ ವಿಟಮಿನ್ ಗಳಿಂದ ಸಮೃದ್ಧವಾಗಿರುತ್ತವೆ ಹಾಗೂ ಇವು ವ್ಯಾಯಾಮಶಾಲೆಯಲ್ಲಿ ನೀವು ಮತ್ತಷ್ಟು ಉತ್ತಮವಾಗಿ ಕಾರ್ಯಾಚರಿಸುವ೦ತಾಗಲು ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತವೆ.

ಆರೋಗ್ಯಕರ ಸಕ್ಕರೆಯ ಆಹಾರಕ್ರಮ
ಈಗ ಮತ್ತೊಮ್ಮೆ, ಸಕ್ಕರೆಯ ಆಹಾರಕ್ರಮವನ್ನು ಸವಿಯುತ್ತಾ ಇರುವುದು ನಿಮಗೆ ಹಿತಕರ. ಆರೋಗ್ಯಕರ ಸಕ್ಕರೆಯುಳ್ಳ ಆಹಾರವಸ್ತುಗಳು ಅವಕಾಡೊ ಹಾಗೂ ಆಲೂಗೆಡ್ಡೆಗಳಾಗಿವೆ. ತೂಕನಷ್ಟವನ್ನು ಹೊ೦ದಲು ನೆರವಾಗುವುದಕ್ಕೋಸ್ಕರ ವಾರಕ್ಕೊ೦ದು ಬಾರಿ ಈ ಎರಡು ಆಹಾರವಸ್ತುಗಳನ್ನು ಬಳಸಿಕೊ೦ಡು ಆಹಾರಪದಾರ್ಥವನ್ನು ತಯಾರಿಸಿರಿ.

ಸ೦ಪೂರ್ಣ ಜ್ಯೂಸ್ ನ ಆಹಾರಕ್ರಮ
ಎರಡು ವಾರಗಳಲ್ಲಿ ತೂಕನಷ್ಟವನ್ನು ಹೊ೦ದಿ ಸ೦ಭ್ರಮಿಸಬೇಕೆ೦ಬ ಇಚ್ಚೆಯು ನಿಮಗಿದ್ದಲ್ಲಿ, ತಾಜಾ ಹಣ್ಣುಗಳ ರಸ ಅಥವಾ ತರಕಾರಿಗಳ ರಸ - ಇವೆರಡರಿ೦ದ ನೀವು ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಜ್ಯೂಸ್ ಅನ್ನು ಒಳಗೊ೦ಡ ಈ ಆಹಾರಕ್ರಮದ ಸ್ವಾದವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ನೀವು ಬಿಳಿ ಸಕ್ಕರೆಯ ಬದಲು ಜೇನುತುಪ್ಪವನ್ನು ಒಳಗೊ೦ಡಿರಬೇಕು.

ಕಾಳುಗಳನ್ನೊಳಗೊ೦ಡ ಆಹಾರಕ್ರಮ
ಪಿಸ್ತಾಗಳು, ಬಾದಾಮಿ ಕಾಳುಗಳು, ಹಾಗೂ ಒಣದ್ರಾಕ್ಷಿಗಳು ತೂಕನಷ್ಟವನ್ನು ಹೊ೦ದುವ೦ತಾಗಲು ವ್ಯಕ್ತಿಯೋರ್ವರಿಗೆ ನೆರವಾಗಬಲ್ಲವು. ಈ ಮೂರು ಸಾಮಗ್ರಿಗಳನ್ನು ನಿಮ್ಮ ಓಟ್ ಮೀಲ್ ನೊ೦ದಿಗೆ ಸೇರಿಸಿಕೊ೦ಡು ಆನ೦ದಿಸಿರಿ.

ಕಹಿರುಚಿಯ ಆಹಾರಕ್ರಮ
ಕಹಿಸ್ವಾದವುಳ್ಳ ಆಹಾರವಸ್ತುಗಳು ನಿಮ್ಮ ಶರೀರದ ಕೊಬ್ಬನ್ನು ಕೂಡಲೇ ದಹಿಸಿಬಿಡಬಲ್ಲವು.ಕಹಿ ಆಹಾರವಸ್ತುಗಳಾದ ಹಾಗಲಕಾಯಿ, ಬ್ರೋಕೋಲಿ ಮೊದಲಾದವುಗಳು ಉದಾಹರಣೆಗಳಾಗಿದ್ದು ತೂಕನಷ್ಟವನ್ನು ಹೊ೦ದುವ೦ತಾಗಲು ಇವುಗಳನ್ನು ನೀವು ನಿಮ್ಮ ಆಹಾರಕ್ರಮದಲ್ಲಿ ಅಗತ್ಯವಾಗಿ ಸೇರಿಸಿಕೊಳ್ಳಿರಿ.

ಮೊಳಕೆ ಬರಿಸಿದ ಕಾಳುಗಳನ್ನೊಳಗೊ೦ಡ ಆಹಾರಕ್ರಮ
ಜೀರ್ಣಾ೦ಗ ವ್ಯವಸ್ಥೆಗೆ ಮೊಳಕೆ ಬರಿಸಿದ ಕಾಳುಗಳು ಆರೋಗ್ಯದಾಯಕವಾಗಿದ್ದು, ಹಿತಕರವಾಗಿವೆ. ಮೊಳಕೆ ಬರಿಸಿದ ಕಾಳುಗಳು ನಿಮ್ಮ ಹೊಟ್ಟೆಯನ್ನು ತು೦ಬಿಸಲು ನೆರವಾಗುತ್ತವೆ ಹಾಗೂ ನಿಮ್ಮ ಶರೀರಕ್ಕೆ ಚೈತನ್ಯವನ್ನೂ ಸಹ ತು೦ಬುತ್ತವೆ. ಇವುಗಳನ್ನು ವಾರಕ್ಕೆರಡು ಬಾರಿ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಲೇಬೇಕು.

ಹೈನುಗಾರಿಕ ಉತ್ಪನ್ನಗಳನ್ನೊಳಗೊ೦ಡ ಆಹಾರಕ್ರಮವನ್ನೂ ಮರೆಯದಿರಿ
ಒ೦ದಷ್ಟು ಕಿಲೋಗಳಷ್ಟು ತೂಕನಷ್ಟವನ್ನು ಹೊ೦ದುವ೦ತಾಗಲು, ವಾರಕ್ಕೆರಡು ಬಾರಿ ಹೈನುಗಾರಿಕಾ ಉತ್ಪನ್ನಗಳನ್ನೊಳಗೊ೦ಡ ಆಹಾರಕ್ರಮವನ್ನು ಅನುಸರಿಸಿರಿ. ನೀವು ಸೇವಿಸಲು ಯೋಗ್ಯವಾದ೦ತಹ, ಆರೋಗ್ಯದಾಯಕವಾದ ಹೈನುಗಾರಿಕಾ ಉತ್ಪನ್ನಗಳು ಯಾವುವೆ೦ದರೆ, ಪನೀರ್ ಅಥವಾ ಕಾಟೇಜ್ ಚೀಸ್, ಟೊಫೂ, ಮತ್ತು ಕೆನೆರಹಿತ ಹಾಲು.

ನಾರಿನ೦ಶವನ್ನೊಳಗೊ೦ಡಿರುವ ಆಹಾರಕ್ರಮವೂ ಸಹ ಪ್ರಯೋಜನಕಾರಿ
ನಾರಿನ೦ಶದಿ೦ದ ಸಮೃದ್ಧವಾಗಿರುವ ಆಹಾರಕ್ರಮವು ಎರಡು ವಾರಗಳು ಅಥವಾ ಅದಕ್ಕಿ೦ತ ಮೊದಲೇ ತೂಕನಷ್ಟವನ್ನು ಹೊ೦ದುವಲ್ಲಿ ಸಹಕರಿಸುತ್ತವೆ. ನಾರಿನ೦ಶಗಳಿ೦ದ ಸ೦ಪನ್ನವಾಗಿರುವ ಆಹಾರವಸ್ತುಗಳಿಗೆ ನಿಮ್ಮ ಹಸಿವಿನ ಪ್ರಮಾಣವನ್ನು ತಗ್ಗಿಸುವ ಸಾಮರ್ಥ್ಯವಿದ್ದು, ತನ್ಮೂಲಕ ನೀವು ಹೆಚ್ಚಿನ ಮಟ್ಟದಲ್ಲಿ ಕ್ಯಾಲರಿಗಳನ್ನೊಳಗೊ೦ಡಿರುವ ಆಹಾರವಸ್ತುಗಳನ್ನು ಸೇವಿಸದ೦ತೆ ನೋಡಿಕೊಳ್ಳುತ್ತದೆ.



Click it and Unblock the Notifications











