Latest Updates
-
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್
ತೂಕ ಇಳಿಸಿಕೊಳ್ಳುವ ಆಹಾರ ಕ್ರಮಕ್ಕೆ ಹೊಂದಿಕೊಂಡಿರುವುದು ಹೇಗೆ?
ತೂಕ ಕಳಕೊಳ್ಳುವ ಯೋಜನೆ ಹಾಕಿಕೊಂಡಿದ್ದೀರಾ? ಇದಕ್ಕಾಗಿ ನೀವು ಅತ್ಯಂತ ಆಸಕ್ತಿದಾಯಕ ಆಹಾರ ಕ್ರಮ ಅನುಸರಿಸುತ್ತಿದ್ದೀರಾ? ಇದು ತುಂಬಾ ಒಳ್ಳೆಯದು. ಅಂತಿಮವಾಗಿ ನೀವು ಆರಂಭ ಮಾಡಿದ್ದೀರಿ. ನಿಮ್ಮ ತೂಕ ಕಳಕೊಳ್ಳುವ ಗುರಿ ಮುಟ್ಟಲು. ಆದರೆ ಆರಂಭ ಮಾತ್ರ ಜನರು ಚಿಂತೆಗೀಡುಮಾಡುವ ವಿಷಯವಲ್ಲ. ತೂಕ ಕಳಕೊಳ್ಳುವ ನಿಮ್ಮ ಯೋಜನೆಯು ಇದಕ್ಕಿಂತ ಆಳವಾಗಿರಬೇಕು.
ನಿಧಾನವಾಗಿ ಮತ್ತು ಇದರತ್ತ ನೀವು ದೃಢಸಂಕಲ್ಪ ಹೊಂದಿರಬೇಕು. ಹೌದು, ಇದನ್ನು ಮಾಡುವುದು ತುಂಬಾ ಕಠಿಣ. ಆದರೆ ಒಮ್ಮೆ ನೀವು ಆರಂಭಿಸಿದ ಬಳಿಕ ಅದೇ ಉತ್ಸಾಹ ಉಳಿಸಿಕೊಳ್ಳುವುದು ತುಂಬಾ ಮುಖ್ಯ. ಕೆಲವೊಂದು ವಿಧಾನಗಳಿಂದ ನೀವು ಇದನ್ನು ಮಾಡಬಹುದಾಗಿದೆ. ನಿಮ್ಮ ಆಹಾರಕ್ರಮದ ಯೋಜನೆಗೆ ಅಂಟಿಕೊಂಡಿರಲು ಕೆಲವೊಂದು ಮಾರ್ಗಗಳು ಇಲ್ಲಿವೆ.

ಸ್ವಲ್ಪ ಉತ್ಸಾಹದ ಮಾತು
ಬೇರೆ ಯಾರೋ ಒಬ್ಬರು ನಿಮ್ಮ ಪ್ರೇರಣೆಯ ಗುರು ಆಗಿರಬೇಕೆಂದಿಲ್ಲ. ನಿಮ್ಮನ್ನೇ ನೀವು ಪ್ರೇರಣೆಯಾಗಿಸಿಕೊಳ್ಳಬಾರದೇಕೇ? ಕೆಲವೊಂದು ಪ್ರೇರಣಿಯ ಮಾತುಗಳಿಂದ ನಿಮ್ಮನ್ನು ಪ್ರಸನ್ನಗೊಳಿಸಿದರೆ ಹೇಗಿರಬೇಡ? ನಿಮಗೆ ಹೇಳಿ ಅಥವಾ ನಿಮ್ಮ ಬಗ್ಗೆ ನೀವು ಇಷ್ಟಪಡುವಂತಹ ಕೆಲವು ವಿಷಯಗಳು ಹಾಗೂ ಬದಲಾವಣೆ ಮಾಡಬೇಕಿರುವುದನ್ನು ಒಂದು ಕಾಗದದಲ್ಲಿ ಬರೆಯಿರಿ. ನಿಮ್ಮ ಗುರಿಗಳ ಬಗ್ಗೆ ಬರೆಯಿರಿ ಅಥವಾ ಅದನ್ನು ತುಂಬಾ ಗಟ್ಟಿ ಸ್ವರದಲ್ಲಿ ಹೇಳಿ. ಕೆಲವೊಂದು ಧನಾತ್ಮಕ ಪದಗಳಿಂದ ನಿಮ್ಮನ್ನು ಪ್ರೇರೇಪಿಸಿ. ಇದು ತುಂಬಾ ಕ್ಷುಲ್ಲಕವೆಂದು ಕಂಡರೂ ದೀರ್ಘ ಸಮಯದವರೆಗೆ ಕೆಲಸ ಮಾಡುತ್ತದೆ.

ಪರಸ್ಪರ ಸಹಾಯ
ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ತೂಕ ಕಳಕೊಳ್ಳುವ ಸಮುದಾಯಗಳಿವೆ. ಈ ಸಮುದಾಯದಲ್ಲಿರುವ ಪ್ರತಿಯೊಬ್ಬರು ಒಂದೇ ರೀತಿಯ ಸಮಸ್ಯೆ ಎದುರಿಸುತ್ತಾರೆ. ಅವರಿಗೆ ಪ್ರೇರಣೆ ಸಿಕ್ಕಿರುವುದಿಲ್ಲ. ನೀವು ಅವರ ನೆರವು ಪಡೆಯಬಹುದು. ನಿಮ್ಮ ಸಮಸ್ಯೆ ಬಗ್ಗೆ ಮಾತನಾಡಿ, ಅವರು ಕೂಡ ತಮ್ಮ ಸಮಸ್ಯೆ ಹೇಳಿಕೊಳ್ಳಲಿ. ನೀವು ಒಂದೇ ಪೇಜ್ ನಲ್ಲಿರುವ ಕಾರಣ ಖಂಡಿತವಾಗಿಯೂ ಇದು ಪರಸ್ಪರರನ್ನು ಪ್ರೇರೇಪಿಸಲಿದೆ. ನಿಮ್ಮ ಸಣ್ಣ ಸಾಧನೆಯನ್ನು ಅವರೊಂದಿಗೆ ಹಂಚಿಕೊಂಡು ಸಂಭ್ರಮಿಸಬಹುದು. ಪ್ರೋತ್ಸಾಹ ನಿಮಗೆ ಖಂಡಿತವಾಗಿಯೂ ನೆರವಾಗಲಿದೆ.

ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ
ನಿಮ್ಮ ಸಾಧನೆಗಳನ್ನು ಪ್ರಶಂಸಿಸುವ ಮೂಲಕ ಆತ್ಮವಿಶ್ವಾಸವನ್ನು ಉನ್ನತ ಮಟ್ಟದಲ್ಲಿಡಲು ಇದು ನೆರವಾಗುತ್ತದೆ. ನೀವು ನಿಗದಿಪಡಿಸಿರುವ ಗುರಿಯನ್ನು ಆಗಲೇ ಮುಟ್ಟಿರುತ್ತೀರಿ. ಈ ಸಾಧನೆಯ ದಿನಾಂಕವನ್ನು ಒಂದು ಆಭರಣದ ತುಂಡಿನ ಮೇಲೆ ಕೆತ್ತಿದರೆ ಹೇಗಿರಬೇಡ? ಯಾವುದಾದರೂ ಗುರಿ ಸಾಧಿಸಿದ ಬಳಿಕ ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಂಡು ಪ್ರಶಂಸಿಸಿ.

ಸಣ್ಣ ಸವಾಲುಗಳು
ಸವಾಲಿನ ವಿಶ್ವಕ್ಕೆ ನುಗ್ಗಬೇಕು. ತೂಕ ಇಳಿಸಿಕೊಳ್ಳಲು ನಿಮ್ಮಂತೆ ಕೆಲವೊಂದು ವಿಧಾನಗಳನ್ನು ಅನುಸರಿಸಿದ ಹಲವಾರು ಮಂದಿ ಇರಬಹುದು. ಅವರೊಂದಿಗೆ ಸವಾಲು ಹಾಕಿದರೆ ಹೇಗೆ? ಒಂದು ವಾರದ ಆಹಾರ ಕ್ರಮಕ್ಕಾಗಿ ನೀವು ಸವಾಲು ಹಾಕಿಕೊಳ್ಳಬೇಕು. ಇದು ನಿಮ್ಮನ್ನು ತುಂಬಾ ಪ್ರೇರೇಪಿಸಲಿದೆ.

ಸಾಕುಪ್ರಾಣಿಯ ಜತೆ
ನಿಮ್ಮ ಸಾಕುಪ್ರಾಣಿಯನ್ನು ಮನೆಯ ಹೊರಗೆ ತಿರುಗಾಟಕ್ಕೆ ಕರೆದುಕೊಂಡು ಹೋಗುವುದು ಖಂಡಿತವಾಗಿಯೂ ನಿಮಗೆ ಪ್ರೇರಣೆಯಾಗಬಹುದು. ಸಾಕುಪ್ರಾಣಿಗಳು ತುಂಬಾ ಸವಾಲಿನದ್ದು ಮತ್ತು ಅವುಗಳು ನಡಿಗೆ ಆರಂಭಿಸಿದಾಗ ನೀವು ಅದರಿಂದ ಪ್ರೇರಣೆ ಪಡೆದು ವ್ಯಾಯಾಮ ಮಾಡುವುದರಿಂದ ನಿಮ್ಮನ್ನು ಯಾರೂ ತಡೆಯಲಾರರು. ನಿಮ್ಮ ಸಾಕುಪ್ರಾಣಿ ಒಳ್ಳೆಯ ಪ್ರೇರಣೆ.

ಪರಿಶೀಲನೆಗಳು ಒಳ್ಳೆಯದು
ನಿಮ್ಮಂತೆಯೇ ಕುಟುಂಬದಲ್ಲಿ ಬೇರೆ ಯಾರಾದರೂ ತೂಕ ಇಳಿಸಿಕೊಳ್ಳುವ ಆಹಾರ ಕ್ರಮ ಅನುಸರಿಸುತ್ತಿದ್ದಾರೆಯಾ? ಅವರನ್ನು ವಾರಕ್ಕೆ ಒಮ್ಮೆ ಭೇಟಿಯಾಗಿ ಮಾಹಿತಿ ಪಡೆಯಿರಿ. ನಿಮ್ಮ ಬಗ್ಗೆ ಅವರೊಂದಿಗೆ ಹಂಚಿಕೊಳ್ಳಬಹುದು. ವಾರದ ಈ ಪರಿಶೀಲನೆ ನಿಮ್ಮನ್ನು ಫಿಟ್ ಮತ್ತು ಆರೋಗ್ಯವಾಗಿರಿಸಲಿದೆ.

ನಿಮ್ಮ ಗುರಿಗಳ ಒಂದು ಪುಸ್ತಕವನ್ನು ಇಟ್ಟುಕೊಳ್ಳಿ
ನಿಮ್ಮ ಗುರಿಗಳ ಒಂದು ಪುಸ್ತಕವನ್ನು ನಿರ್ವಹಿಸಿ. ಯಾವುದನ್ನು ಸಾಧಿಸಲು ಸಾಧ್ಯವಾಗಿಲ್ಲ ಎಂದು ಬರೆಯಿರಿ. ನಿಮ್ಮ ದೌರ್ಬಲ್ಯವೇನು ಮತ್ತು ಅದನ್ನು ನಿರ್ವಹಿಸಲು ನೀವು ಏನು ಮಾಡಿದ್ದೀರಿ? ಕಷ್ಟಗಳು, ಒಳ್ಳೆಯ ವಿಷಯಗಳು ಇತ್ಯಾದಿ. ದಾಖಲೆ ನಿರ್ವಹಿಸುವುದರಿಂದ ನಿಮ್ಮ ಗುರಿ ತಲುಪಲು ಎದುರಿಸುವ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ಪ್ರೇರಣೆ ಸಿಗಬಹುದು.



Click it and Unblock the Notifications











