Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸೊಂಟದ ಸುತ್ತಳತೆ ಹೆಚ್ಚದಿರಲು ಈ ಸ್ನ್ಯಾಕ್ಸ್ ಬೆಸ್ಟ್
ಬೆಳಗಿನಿಂದ ಕೆಲಸ ಮಾಡಿ ದಣಿದಾಗ ಸಂಜೆ ಹೊತ್ತಿನಲ್ಲಿ ಏನಾದರೂ ತಿನ್ನಬೇಕು ಎಂದೆನಿಸುತ್ತದೆ. ಹಾಗೆಂದು ಇಷ್ಟವಾದದನ್ನೆಲ್ಲ ತಿಂದರೆ ಬೊಜ್ಜು ಬರುವುದು ಖಂಡಿತ. ದೇಹದ ತೂಕವನ್ನು ಸರಿಯಾಗಿಟ್ಟುಕೊಳ್ಳಬೇಕು ಇಲ್ಲವೇ ಹೆಚ್ಚಾದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರಯತ್ನಿಸುವವರಿಗೆ ಈ ಇಳಿ ಸಂಜೆಯ ಹಸಿವು ಬಹಳ ಸಂಕಟಕ್ಕೆ ಈಡು ಮಾಡಬಹುದು.
ಅದಕ್ಕಾಗಿ ಚಿಂತಿಸಬೇಕಾಗಿಲ್ಲ. ಆರೋಗ್ಯಯುತವಾದ ಸ್ನಾಕ್ಸ್ ಅನ್ನು ತಿನ್ನುವುದನ್ನು ರೂಡಿ ಮಾಡಿಕೊಳ್ಳಿ. ಹಸಿವನ್ನು ಇಂಗಿಸುವುದರ ಜೊತೆಗೆ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಂಡು ಆರೋಗ್ಯಯುತವಾಗಿ ಇರಬಹುದು. ನೀವು ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದು ಫಾಸ್ಟ್ ಫುಡ್ ತಿನ್ನಬಾರದು ಎಂದು ನಿರ್ಧರಿಸಿದ್ದರೂ ಇಳಿ ಸಂಜೆಯ ಹೊತ್ತಿನಲ್ಲಿ ಹಸಿವಾದರೆ ಏನು ಮಾಡುವುದು ಎಂದು ಹೆದರಬೇಕಾಗಿಲ್ಲ.
ನಿಮ್ಮ ಸೊಂಟದ ಸುತ್ತಳತೆ ಹೆಚ್ಚಬಾರದೆಂದು ಬಯಸುವುದಾದರೆ ಈ ಸ್ನ್ಯಾಕ್ಸ್ ಬೆಸ್ಟ್.

1.ಬಾದಾಮಿ
ನಿಮಗೆ ಇಳಿ ಸಂಜೆ ಹೊತ್ತಿನಲ್ಲಿ ಏನಾದರು ಸ್ವಲ್ಪ ತಿಂದು ಹಸಿವನ್ನು ತಡೆಯಬೇಕು ಎಂದೆನಿಸಿದರೆ 13 - 14 ಬಾದಾಮಿಯನ್ನು ತಿನ್ನಿ. ಇದು ಆರೋಗ್ಯಯುತವಾದುದ್ದು.ಇದರಿಂದ ನಿಮ್ಮ ತೂಕ ಹೆಚ್ಚುವುದಿಲ್ಲ ಮಾತ್ರವಲ್ಲ ಇದರಲ್ಲಿ ಒಳ್ಳೆಯ ಕ್ಯಾಲೋರಿ ಇರುತ್ತದೆ.

2.ಸೇಬು ಹಣ್ಣು
ದಿನಕ್ಕೆ ಒಂದು ಸೇಬು ಹಣ್ಣು ತಿನ್ನುವುದು ನಿಮ್ಮನ್ನು ವೈದ್ಯರಿಂದ ದೂರವಿಡುವುದು ಮಾತ್ರವಲ್ಲ ನಿಮ್ಮ ದೇಹದ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಹಕರಿಸುತ್ತದೆ. ಒಂದು ಸೇಬು ಹಣ್ಣು ಕೇವಲ 100 ಕ್ಯಾಲೋರಿ ಹೊಂದಿರುತ್ತದೆ. ಆದ್ದರಿಂದ ಹಸಿವಾದಾಗ ಒಂದು ಸೇಬು ಹಣ್ಣು ತಿನ್ನಿ ಕೊಲೆಸ್ಟ್ರಾಲ್ ಅನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ.

3. ಶೇಂಗಾ
ಶೇಂಗಾ ಆರೋಗ್ಯಯುತವಾದ ಪೌಷ್ಟಿಕ ಲಘು ಆಹಾರ.ಆದ್ದರಿಂದ 10 ಶೇಂಗ ತಿಂದು ನೋಡಿ. ಇದರಲ್ಲಿ ಕೇವಲ 74 ರಷ್ಟು ಕ್ಯಾಲೋರಿ ಇರುತ್ತದೆ.ಇದರಲ್ಲಿರುವ ಕಡಿಮೆ ಜಿಐ, ನಿಧಾನವಾಗಿ ಶಕ್ತಿಯನ್ನು ನೀಡುತ್ತದೆ ಆದ್ದರಿಂದ ಇದು ನಿಮಗೆ ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದಂತೆ ಅನ್ನಿಸುತ್ತದೆ.

4.ದ್ರಾಕ್ಷಿ
ಸುಮಾರು 30 ರಷ್ಟು ದ್ರಾಕ್ಷಿ ತಿನ್ನಿ ಇದು ನಿಮ್ಮ ಕ್ಯಾಲೋರಿ ಹೆಚ್ಚದಂತೆ ನೋಡಿಕೊಳ್ಳುತ್ತದೆ. ರಕ್ತಹೀನತೆ, ಆಯಾಸ, ಸಂಧಿವಾತ, ಗೌಟ್, ಇವುಗಳಿಂದ ದೂರ ಮಾಡುತ್ತದೆ ಮತ್ತು ಇದರಲ್ಲಿ 100 ಕ್ಯಾಲೋರಿ ಹೊಂದಿರುತ್ತದೆ.

5.ಕಲ್ಲಂಗಡಿ
ಕಲ್ಲಂಗಡಿ ಹಸಿವನ್ನು ತಡೆಯಲು ಉತ್ತಮ ಹಣ್ಣು.ಇದರಲ್ಲಿ 88 ರಷ್ಟು ಕ್ಯಾಲೋರಿ ಇರುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ನೀರು ಹೆಚ್ಚಿರುವುದರಿಂದ ಹೊಟ್ಟೆ ತುಂಬಿದಂತೆ ಇರುತ್ತದೆ ಮತ್ತು ಆಯಾಸ ನೀಗಿಸುತ್ತದೆ.

6.ಟೊಮೆಟೊ ಸೂಪ್
ಟೊಮೆಟೊ ಸೂಪ್ ನಲ್ಲಿ ಕೇವಲ 78 ಕ್ಯಾಲೋರಿ ಇರುತ್ತದೆ.

7.ಚೆರ್ರಿ ಹಣ್ಣು
ಚೆರ್ರಿ ಹಣ್ಣು ಹೆಚ್ಚು ವಿಟಮಿನ್ ಅನ್ನು ಹೊಂದಿದೆ ಮತ್ತು ಇದು ಕಡಿಮೆ ಫ್ಯಾಟ್ ಇರುವ ಹಣ್ಣು.25 ಚೆರ್ರಿ ಹಣ್ಣನ್ನು ತಿಂದರೆ ಅದರಲ್ಲಿ ಕೇವಲ 100 ಕ್ಯಾಲೋರಿ ಇರುತ್ತದೆ. ಸಂಜೆಯ ಹಸಿವಿನಲ್ಲಿ ಇದನ್ನು ತಿನ್ನಬಹುದು.

ಬೆರ್ರಿ ಹಣ್ಣುಗಳು
ಒಂದು ಬೌಲ್ ಬೆರ್ರಿ ಹಣ್ಣಿನಲ್ಲಿ ಕೇವಲ 83 ರಷ್ಟು ಕ್ಯಾಲೋರಿ ಇರುತ್ತದೆ.ಇದು ಉತ್ಕರ್ಷಣ ನಿರೋಧಕಗಳನ್ನು ಹೆಚ್ಚು ಹೊಂದಿರುತ್ತದೆ.ಇದು ಹೃದಯವನ್ನು ಆರೋಗ್ಯಯುತವಾಗಿ ಇಡುವಲ್ಲಿ ಸಹಕರಿಸುತ್ತದೆ.

10.ಕಿವಿ
ಈ ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿ ಇರುತ್ತದೆ.ಸ್ನಾಕ್ಸ್ ಸಮಯದಲ್ಲಿ 2 ಕಿವಿ ಹಣ್ಣನ್ನು ತಿನ್ನಿ ಇದರಲ್ಲಿ ಕೇವಲ 58 ಕ್ಯಾಲೋರಿ ಇರುತ್ತದೆ. ಇದು ಜೀರ್ಣ ಕ್ರಿಯೆಯನ್ನು ಸುಲಭವಾಗಿಸುತ್ತದೆ ಮತ್ತು ಆರೋಗ್ಯಯುತವಾದ ಮೈಬಣ್ಣ ಹೊಂದಲು ಸಹಕರಿಸುತ್ತದೆ.



Click it and Unblock the Notifications
