Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ತೂಕ ಹೆಚ್ಚದಿರಲು ಇಲ್ಲಿದೆ 16 ಟಿಪ್ಸ್ !
ತೂಕ ಹೆಚ್ಚಾದರೆ ಸೌಂದರ್ಯ ಹಾಳಾಗುವುದರ ಜೊತೆಗೆ ನೂರೆಂಟು ಸಮಸ್ಯೆಗಳು ಉಂಟಾಗುವುದು. ಈಗೆಲ್ಲಾ ಚಿಕ್ಕ ಮಕ್ಕಳಲ್ಲೂ ಒಬೆಸಿಟಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಇಂದಿನ ಜೀವನಶೈಲಿಯೇ ಪ್ರಮುಖ ಕಾರಣ. ಇನ್ನು ದೇಹದ ಯುವಕ/ಯುವತಿಯರಲ್ಲಿ ದೇಹದ ತೂಕ ಅಧಿಕವಿದ್ದರೆ ಅವರ ಮದುವೆಗೆ ಅದೇ ಅಡಚಣೆಯಾಗಬಹುದು. ಮಧ್ಯವಯಸ್ಸು ದಾಟಿದವರಿಗೆ ಹೃದಯಾಘಾತ, ಒಬೆಸಿಟಿ, ರಕ್ತದೊತ್ತಡ ಉಂಟಾಗುತ್ತದೆ.
ದೇಹದ ತೂಕವನ್ನು ಕಡಿಮೆಗೊಳಿಸುವುದು ಅಥವಾ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಬಹುದೊಡ್ಡ ಸಮಸ್ಯೆಯೇನಲ್ಲ. ಇಲ್ಲಿ ನಿಮ್ಮ ತೂಕವನ್ನು ಕಡಿಮೆಗೊಳಿಸಲು ಮಾಡಬೇಕಾದ ಕ್ರಮಗಳು ಹಾಗೂ ಮುಂಜಾಗ್ರತಾ ಕ್ರಮಗಳನ್ನು ನೀಡಲಾಗಿದೆ.

1. ಸಿಹಿ ತಿನ್ನುವುದನ್ನು ಕಡಿಮೆ ಮಾಡಿ
ಸಿಹಿ ತಿನಿಸಿನಲ್ಲಿ ಕ್ಯಾಲೋರಿ ಅಧಿಕವಾಗಿರುತ್ತದೆ. ಸಿಹಿ ಪ್ರಿಯರು ತಮ್ಮ ನಾಲಗೆಗೆ ಕಡಿವಾಣ ಹಾಕುವುದು ಒಳ್ಳೆಯದು.

2. ಟಿ.ವಿ ನೋಡುವಾಗ ತಿನ್ನಬೇಡಿ
ಪಾಪ್ ಕಾರ್ನ್ ಅಥವಾ ಇನ್ನಿತರ ತಿಂಡಿಗಳನ್ನು ಟಿ.ವಿ ವೀಕ್ಷಿಸುವಾಗ ತಿನ್ನುವುದು ಸಾಮಾನ್ಯ. ಆದರೆ ಹೀಗೆ ಸೇವಿಸುವುದರಿಂದ ನಮಗೇ ಗೊತ್ತಿಲ್ಲದೆ ಅಧಿಕ ತಿನ್ನುತ್ತೇವೆ. ಇದು ದೇಹದ ತೂಕ ಒಂದೇ ಸಮನೆ ಅಧಿಕವಾಗುವಂತೆ ಮಾಡುತ್ತದೆ.

3. ಆಹಾರ ಪಟ್ಟಿಯನ್ನು ತಯಾರಿಸಿ
ನೀವು ಏನು ತಿನ್ನಬೇಕು ಎನ್ನುವುದನ್ನು ಪಟ್ಟಿ ಮಾಡಿಕೊಳ್ಳಿ. ಇದರಿಂದ ನಿಮಗೆ ಕ್ಯಾಲೋರಿ ಇರುವ ಆಹಾರದ ಬಗ್ಗೆ ಗಮನವಿರುತ್ತದೆ. ಹಾಗೂ ಅಂತಹ ಆಹಾರ ಸೇವಿಸುವುದನ್ನು ನಿಯಂತ್ರಿಸಬಹುದು.

4.ಕ್ರಾಷ್ ಡಯಟ್ ಮಾಡಬೇಡಿ
ತುಂಬಾ ಹೊತ್ತು ಹಸಿವಿನಿಂದ ಇರುವುದು ಒಳ್ಳೆಯದಲ್ಲ. ಏಕೆಂದರೆ ತುಂಬಾ ಹಸಿವಿನಿಂದ ತಿನ್ನಲು ಕುಳಿತಾಗ ದಿನಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಹಾರವನ್ನು ಸೇವಿಸುತ್ತೀರಿ. ಇದರಿಂದ ದೇಹದ ತೂಕ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿರುತ್ತವೆ.

5. ಬರೀ ಹೊಟ್ಟೆಯಲ್ಲಿ ಪಾರ್ಟಿಗೆ ಹೋಗಬೇಡಿ
ಪಾರ್ಟಿ ಅಥವಾ ಯಾವುದೇ ಸಭೆ ಸಮಾರಂಭಗಳಿಗೆ ಹೋಗುವಾಗ ಖಾಲಿ ಹೊಟ್ಟೆಯಲ್ಲಿ ಹೋಗದೆ ಸ್ವಲ್ಪ ಮಟ್ಟಿಗೆ ಆಹಾರವನ್ನು ಸೇವಿಸಿ. ಇದರಿಂದ ಪಾರ್ಟಿಗಳಲ್ಲಿ ಅತಿಯಾಗಿ ತಿನ್ನುವುದು ತಪ್ಪುತ್ತದೆ.

6. ನೀರನ್ನು ಕುಡಿಯಿರಿ
ದೇಹದ ತೂಕವನ್ನು ಕಡಿಮೆ ಮಾಡುವುದಕ್ಕೆ ರಾಮಬಾಣ ನೀರು. ಆದ್ದರಿಂದ ದಿನದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.

7. ಜ್ಯೂಸ್ ಕುಡಿಯಿರಿ
ಅತೀ ಹೆಚ್ಚು ಹಣ್ಣಿನ ರಸಾಯನಗಳನ್ನು ಸೇವಿಸಿ. ಇದು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಯನ್ನು ಹೊಂದಿದ್ದು ತಾಜಾ ಹಣ್ಣು ನಿಮ್ಮ ತೂಕವನ್ನು ಇಳಿಸುವಲ್ಲಿ ಸಹಾಯವಾಗಬಲ್ಲದು.

8. ಜಂಕ್ ಫುಡ್ ಗಳಿಗೆ ಗುಡ್ ಬಾಯ್ ಹೇಳಿ !
ಫಾಸ್ಟ್ ಫುಡ್ ಗಳು ಅತ್ಯಂತ ವೇಗವಾಗಿ ದೇಹದ ತೂಕವನ್ನು ಹೆಚ್ಚಿಸುತ್ತವೆ. ಆದ್ದರಿಂದ ಪಿಜ್ಜಾ, ಬರ್ಗರ್ ಗಳಂತ ತಿಂಡಿಗಳಿಂದ ದೂರವಿರಿ.

9. ಖರೀದಿಸುವ ಮುನ್ನ ಸೂಚನೆಗಳನ್ನು ಓದಿ
ಯಾವುದೇ ಉತ್ಪನ್ನಗಳನ್ನು ಖರೀದಿಸುವಾಗ ಅದರಲ್ಲಿರುವ ಪೋಷಕಾಂಶಗಳ ಅಂಶ ಹಾಗೂ ಕ್ಯಾಲೋರಿ ಅಂಶಗಳ ಬಗ್ಗೆ ಓದಿ. ಇದು ನಿಮ್ಮನ್ನು ಇನ್ನಷ್ಟು ಜಾಗೃತರನ್ನಾಗಿಸುತ್ತದೆ.

10. ನಿರಂತರ ವ್ಯಾಯಾಮ
ದಿನದಲ್ಲಿ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಆರೋಗ್ಯಕ್ಕೂ ಒಳ್ಳೆಯದು. ನಿಮಗೆ ಜಿಮ್ ಗೆ ಹೋಗಲು ಆಗದಿದ್ದಲ್ಲಿ ಮನೆಯಲ್ಲಿಯೇ ಕೆಲವು ವ್ಯಾಯಾಮಗಳನ್ನು ಮಾಡಿ. ಇದು ನಿಮ್ಮನ್ನು ಸದೃಢರನ್ನಾಗಿ ಮಾಡುತ್ತದೆ.

11. ಸೂಪ್ ಮತ್ತು ಸಲಾಡ್
ನಿಮ್ಮ ನಿತ್ಯದ ಆಹಾರದ ಪಟ್ಟಿಯಲ್ಲಿ ಸೂಪ್ ಮತ್ತು ಸಲಾಡ್ ಗಳನ್ನೂ ಸೇರಿಸಿ. ಆದರೆ ಅದರಲ್ಲಿ ಅಧಿಕ ಕ್ಯಾಲೋರಿ ಹಾಗೂ ಕೊಬ್ಬಿನ ಅಂಶಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

12. ಮಧ್ಯರಾತ್ರಿ ಆಹಾರ ಸೇವಿಸದಿರಿ
ರಾತ್ರಿ ನಿದ್ದೆ ಮಾಡಿದ ನಂತರ ಮಧ್ಯದಲ್ಲಿ ಎದ್ದು ಆಹಾರ ಸೇವಿಸಬೇಡಿ. ನಿದ್ದೆ ಮಾಡುವ ಮೊದಲು ಆಹಾರ ಸೇವಿಸಿ. ನಿದ್ದೆ ಮತ್ತು ಆಹಾರ ಸೇವನೆಯ ನಡುವೆ ಕನಿಷ್ಠ 2 -3 ಗಂಟೆಗಳ ಅಂತರವಿರಬೇಕು.

13. ಬೆಳಗಿನ ಉಪಹಾರ ಸೇವಿಸಿ
ಬೆಳಗಿನ ಉಪಹಾರವನ್ನು ಸರಿಯಾಗಿ ಸೇವಿಸಿ. ಇದು ನಿಮ್ಮ ಇಡೀ ದಿನದ ಜೀರ್ಣಕ್ರಿಯೆ ಸರಿಯಾಗಿ ಆಗುವಲ್ಲಿ ಸಹಾಯ ಮಾಡುತ್ತದೆ.

14. ಡಿನ್ನರ್ ಮಿತವಾಗಿರಲಿ
ಬೆಳಗಿನ ಉಪಹಾರವನ್ನು ಚೆನ್ನಾಗಿ ಸೇವಿಸಿ ಮತ್ತು ರಾತ್ರಿ ಊಟ ಮಿತವಾಗಿರಲಿ. ಇದರಿಂದ ಜೀರ್ಣಕ್ರಿಯೆಯ ಸಮಸ್ಯೆಯುಂಟಾಗುವುದಿಲ್ಲ.

15. ಅತಿಯಾಗಿ ತಿನ್ನಬೇಡಿ
ತಿನ್ನುವಾಗ ನಿಮಗೆ ಸಾಕೆನಿಸಿದರೆ ಮತ್ತೆ ಮತ್ತೆ ತಿನ್ನಬೇಡಿ. ಮತ್ತು ಇದನ್ನೇ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಅಧಿಕ ಕ್ಯಾಲೋರಿಯ ಅಂಶ ನಿಮ್ಮ ದೇಹಕ್ಕೆ ಸೇರುವುದನ್ನು ತಡೆಯಬಹುದು.

16. ಖುಷಿಯಾಗಿರಿ
ಸದಾ ಖುಷಿಯಾಗಿ ಹಾಗೂ ಆರೋಗ್ಯವಾಗಿರಿ. ಹೆಚ್ಚು ಒತ್ತಡಕ್ಕೆ ಒಳಗಾಗಬೇಡಿ.
ಈ ಕೆಲವು ಮಾಹಿತಿಗಳು ನಿಮ್ಮ ತೂಕ ಹೆಚ್ಚುವುದನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತವೆ. ನಿಮ್ಮ ಆಹಾರ ಕ್ರಮಗಳು ಹಾಗೂ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಅನಗತ್ಯ ತೂಕ ಹೆಚ್ಚಿಸುವುದನ್ನು ತಪ್ಪಿಸಿ.



Click it and Unblock the Notifications
