Latest Updates
-
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ!
ಆರೋಗ್ಯಕರ ರೀತಿಯಲ್ಲಿ ತೆಳ್ಳಗಾಗಲು 10 ಟಿಪ್ಸ್

ಇನ್ನು ಕಟ್ಟುನಿಟ್ಟಿನಡಯಟ್ ಮಾಡಿದರಂತೂ ಪಥ್ಯದಲ್ಲಿರುವಂತೆ ಅನಿಸುವುದು, ಅಲ್ಲದೆ ಬಾಯಿಗೆ ರುಚಿಕರವಿಲ್ಲದೆ ಡಯಟ್ ಬಗ್ಗೆ ಒಂಥರಾ ಬೇಸರಿಕೆ ಬಂದು ಬಿಡುತ್ತದೆ. ಆದರೆ ಈ ಕೆಳಗೆ ಸಮತೂಕಕ್ಕಾಗಿ 10 ಟಿಪ್ಸ್ ಹೇಳಲಾಗಿದೆ. ಅದನ್ನು ಪಾಲಿಸಿದರೆ ಪಥ್ಯವನ್ನು ಪಾಲಿಸಬೇಕಾಗಿಲ್ಲ, ದೇಹದ ತೂಕ ಹೆಚ್ಚಾಗುತ್ತದೆ ಎಂದು ಭಯ ಕೂಡ ಪಡಬೇಕಾಗಿಲ್ಲ, ಆದರೆ ಇಲ್ಲಿ ಹೇಳಿರುವ ಟಿಪ್ಸ್ ಗಳನ್ನು ಗಮನದಲ್ಲಿಟ್ಟು ಪಾಲಿಸಿದರೆ ಸಾಕು ಆಕರ್ಷಕ ಮೈಕಟ್ಟು ನಿಮ್ಮದಾಗುವುದು, ಗುಡ್ ಲಕ್...
1. ಬೆಳಗ್ಗೆ ಎದ್ದು ಒಂದು ಲೋಟ ಬಿಸಿ ನೀರಿಗೆ ನಿಂಬೆ ರಸ ಹಾಕಿ ಕುಡಿಯಬೇಕು. ಪ್ರತಿದಿನ 8-10 ಲೋಟ ನೀರು ಕುಡಿಯಬೇಕು.
2. ಟೀ ಬದಲು ಗ್ರೀನ್ ಟೀ ಕುಡಿಯಿರಿ. ದಿನದಲ್ಲಿ ಒಂದು ಗ್ಲಾಸ್ ಕುಡಿದರೆ ಸಾಕು.
3. ಸಕ್ಕರೆಯಂಶವಿರುವ ತಿಂಡಿಗಳನ್ನು ಮಿತಿಯಲ್ಲಿ ತಿನ್ನಿ. ಬರೀ ತಿಂಡಿ ಮಾತ್ರವಲ್ಲ ಸಕ್ಕರೆಯಂಶವಿರುವ ಆಹಾರ ಪದಾರ್ಥಗಳನ್ನು ಮಿತಿಯಲ್ಲಿ ತಿನ್ನಿ.
4. ಎಲ್ಲಾ ರೀತಿಯ ತರಕಾರಿಗಳನ್ನು ತಿನ್ನಿ, ಕ್ಯಾರೆಟ್ ಪ್ರತಿದಿನ ತಿನ್ನಬೇಕು. ಆದರೆ ಮಿತಿಯಲ್ಲಿ ತಿನ್ನಿ. ಕಡಿಮೆ ಕೊಬ್ಬಿನಂಶವಿರುವ ಹಾಲಿನ ಉತ್ಪನ್ನಗಳನ್ನು ಸೇವಿಸಿ.
5. ಆಹಾರವನ್ನು ಹೊಟ್ಟೆ ತುಂಬಾ ತಿನ್ನುವ ಬದಲು ಸ್ವಲ್ಪ-ಸ್ವಲ್ಪ ಆಹಾರವನ್ನು 6 ಬಾರಿ ತಿನ್ನಿ. ಕಾರ್ಬೋಹೈಡ್ರೇಟ್ ಆಹಾರವನ್ನು ಮಿತಿಯಲ್ಲಿ ತಿನ್ನಿ, ಪ್ರೊಟೀನ್ ಇರುವ ಆಹಾರವನ್ನು ತಿನ್ನಿ.
6. ಆರೋಗ್ಯಕರ ಕೊಬ್ಬಿನಂಶವಿರುವ ಆಹಾರವನ್ನು ತಿನ್ನಿ. ಮೀನು, ಅಗಸೆದ ಬೀಜ(flax seed), ಆಲೀವ್ ಎಣ್ಣೆ, ಫಿಶ್ ಆಯಿಲ್ ಇವುಗಳ ಸೇವನೆ ತಂಬಾ ಒಳ್ಳೆಯದು.
7. 8 ಗಂಟೆಗಳ ಮಾತ್ರ ನಿದ್ದೆ ಮಾಡಿ, ಅತೀಯಾದ ನಿದ್ದೆ ದೇಹದ ತೂಕವನ್ನು ಹೆಚ್ಚು ಮಾಡಬಹುದು.
8. ಮೊಳಕೆ ಬರಿಸಿದ ಕಾಳುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ಸೊಪ್ಪಿನಂಶವನ್ನು ಹೆಚ್ಚಾಗಿ ತಿನ್ನಿ.
9. ಸಣ್ಣಗಾಗುವ ಡಯಟ್ ಹೆಸರಿನಲ್ಲಿ ತಿನ್ನದೇ ಇರುವುದು ಅಥವಾ ಕ್ರಾಶ್ ಡಯಟ್ ಮಾಡುವುದು ಒಳ್ಳೆಯದಲ್ಲ.
10. ದಿನಕ್ಕೆ ಅರ್ಧಗಂಟೆ ವ್ಯಾಯಾಮಕ್ಕಾಗಿ ಮೀಸಲಿಡಿ. ಇಷ್ಟು ಮಾಡಿದರೆ ದಪ್ಪಗಾಗುತ್ತಿದ್ದೇವೆ ಎಂಬ ಚಿಂತೆಯಿಲ್ಲದೆ ಆಕರ್ಷಕ ಮೈಕಟ್ಟನ್ನು ಪಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications