Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಒಲಿಂಪಿಕ್ಸ್‌ನಲ್ಲಿ 16 ಪದಕ ಗೆಲ್ಲಲು ಕಾರಣ ಡಯಟ್-ಪಿಲಿಪ್ಸ್

ಪ್ರತಿಯೊಂದು ಕ್ರೀಡಾಪಟುವಿನ ಗೆಲುವಿಗೆ ಕಾರಣ ತಮ್ಮಲ್ಲಿರುವ ದೈಹಿಕ ಮತ್ತು ಮಾನಸಿಕ ಶಕ್ತಿ ಮತ್ತು ಕಠಿಣ ಪರಿಶ್ರಮ. ಗಟ್ಟಿ ಮುಟ್ಟಾದ ಶರೀರವನ್ನು ಪಡೆಯಲು ದೈಹಿಕ ವ್ಯಾಯಾಮದ ಜೊತೆ ಕಟ್ಟುನಿಟ್ಟಿನ ಆಹಾರಕ್ರಮ (ಡಯಟ್) ಪಾಲಿಸುತ್ತಾರೆ.
ಮೈಕಲ್ ಪಿಲಿಪ್ಸ್ ಒಲಿಂಪಕ್ಸ್ ನಲ್ಲಿ 16 ಬಾರಿ ಪದಕಗಳನ್ನು ಗಳಿಸಿದ ವೀರ. ಅವರು ಇತ್ತೀಚಿಕೆಗೆ ತಮ್ಮ ಗೆಲುವಿಗೆ ಕಾರಣ ಕಠಿಣ ಪರಿಶ್ರಮ ಮತ್ತು ಡಯಟ್ ಅಂದಿದ್ದಾರೆ. ಎಲ್ಲರು ಹೇಳುವ ಮಾತೇ ಇವರು ಹೇಳಿದ್ದಾರೆ ಅದರಲ್ಲಿ ಏನು ವಿಶೇಷ ಎಂದು ಕೇಳಬೇಡಿ. ವಿಶೇಷ ಇದೆ, ಇವರು ದಿನಕ್ಕೆ 12,000 ಕ್ಯಾಲೋರಿ ಆಹಾರವನ್ನು ಸೇವಿಸುತ್ತಾರಂತೆ!
ಸಮತೂಕದ ಮೈಕಟ್ಟಿಗೆ 2000 ಕ್ಯಾಲೋರಿ ಮಾತ್ರ ತಿನ್ನಬೇಕೆಂದು ಹೇಳುವಾಗ ಇವರು ಬರೋಬರಿ 12,000 ಕ್ಯಾಲೋರಿಯ ಆಹಾರ ತಿನ್ನುತ್ತಾರೆ ಅನ್ನುವುದು ಸಾಮಾನ್ಯದ ವಿಷಯವೇ?
ಇವರು ಬೆಳಗ್ಗೆ ಸ್ವಿಮಿಂಗ್ ಪ್ರಾಕ್ಟೀಸ್ (ಈಜುವ ಅಭ್ಯಾಸ) ಮಾಡಿದ ನಂತರ ಘನ ಆಹಾರವನ್ನೇ ಸೇವಿಸುತ್ತಾರೆ. ಪಾನ್ ಕೇಕ್, ವೇಫೆಲ್ಸ್, ಬೇಗಲ್ಸ್, ಮೊಟ್ಟೆ ತಿಂದು, ಮಧ್ಯಾಹ್ನ ಅರ್ಧ ಕೆಜಿ ಪಾಸ್ತಾ (ವಿಟಮಿನ್ ಮತ್ತು ನಾರಿನಂಶ ಅಧಿಕವಿರುತ್ತದೆ) ಪೋರ್ಕ್ ಮತ್ತು ಚೀಸ್ ಹಾಕಿದ ಸ್ಯಾಂಡ್ ವಿಚ್, ಮಯೋನೈಸ್ ಮತ್ತು ಎನರ್ಜಿ ಡ್ರಿಂಕ್ ಆಗಿರುವ ಗಾಲೋನ್ಸ್ ಈ ಎಲ್ಲಾ ಅಧಿಕ ಕ್ಯಾಲೋರಿಯ ಆಹಾರ ಪದಾರ್ಥಗಳನ್ನು ತಿನ್ನುತ್ತಾರೆ.
ನಂತರ ಪಿಜ್ಜಾ, ಎನರ್ಜಿ ಡ್ರಿಂಕ್ ಹೀಗೆ ಅಧಿಕ ಕ್ಯಾಲೋರಿ ಇರುವ ಆಹಾರಗಳನ್ನು ತಿನ್ನುತ್ತಾರೆ. ಸಾಮಾನ್ಯವಾಗಿ ಒಂದು ಈಜು ಪಟುವಿಗೆ 6000 ಕ್ಯಾಲೋರಿಯ ಆಹಾರ ಸಾಕಾಗುತ್ತದೆ. ಆದರೆ ಪಿಲಿಪ್ಸ್ ಅದರ 12,000 ಕ್ಯಾಲೋರಿಯ ಆಹಾರ ಸೇವಿಸುತ್ತಾರೆ, ಅಲ್ಲದೆ ಆ ಆಹಾರವನ್ನು ಕರಗಿಸಲು ಅಷ್ಟೇ ಕಠಿಣ ಅಭ್ಯಾಸ ಮಾಡುತ್ತಾರೆ. ಇದರಿಂದಾಗಿ ನಿರಂತರ ಗೆಲುವು ಸಾಧಿಸಲು ಅವರಿಗೆ ಸಾಧ್ಯವಾಗಿದೆ.
ಅಧಿಕ ಕ್ಯಾಲೋರಿಯ ಆಹಾರ ಒಳ್ಳೆಯದಲ್ಲ ಅಂತ ಭಾವಿಸುತ್ತೇವೆ, ಆದರೆ ಅಧಿಕ ಕ್ಯಾಲೋರಿಯ ಆಹಾರ ತಿಂದು ಅದಕ್ಕೆ ತಕ್ಕಂತೆ ವ್ಯಾಯಾಮ ಮಾಡಿದರೆ ಗಟ್ಟಿಮುಟ್ಟಾದ ದೇಹ ಮತ್ತು ಆರೋಗ್ಯ ಪಡೆಯಬಹುದು ಎನ್ನುವುದಕ್ಕೆ ಉದಾಹರಣೆ ಈ ಕ್ರೀಡಾಪಟು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
