Latest Updates
-
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್
ರುಚಿಯಿರಬೇಕು, ದಪ್ಪಗಾಗಬಾರದೆಂದರೆ ಈ ಆಹಾರ ತಿನ್ನಿ
ನಾಲಗೆ ಬಯಸುವುದು ರುಚಿಕರವಾದ ಆಹಾರವನ್ನು. ಆದರೆ ರುಚಿಕರವಾದ ಹೆಚ್ಚಿನ ಆಹಾರಗಳಲ್ಲಿ ಕ್ಯಾಲೋರಿ ಮತ್ತು ಕೊಬ್ಬಿನಂಶ ಅಧಿಕವಿರುತ್ತದೆ. ಆದ್ದರಿಂದ ಆಕರ್ಷಕ ಮೈಕಟ್ಟು ಬಯಸುವವರಿಗೆ ಅಂತಹ ಆಹಾರಗಳಿಂದ ದೂರ ಇರಬೇಕಾದ ಅನಿವಾರ್ಯತೆ. ಸಣ್ಣಗಾಗಲು ಪ್ರಯತ್ನಿಸುವವರಿಗಂತೂ ದಿನಾ ಪಥ್ಯದಂತಹ ಊಟ ತಿಂದು ಬೇಜಾರಾಗಿರುತ್ತದೆ. ಅಂತಹವವರಿಗಾಗಿ ಈ ಕೆಳಗೆ ಕೆಲ ಆಹಾರಗಳ ಪಟ್ಟಿ ನೀಡಲಾಗಿದೆ. ಈ ಆಹಾಗಳು ಬಾಯಿಗೆ ರುಚಿಕರವಾಗಿದ್ದು ಕಡಿಮೆ ಕ್ಯಾಲೋರಿ ಇರುವುದರಿಂದ ದೇಹದ ತೂಕ ಕೂಡ ಹೆಚ್ಚಾಗುವುದಿಲ್ಲ!

1. ಟೊಫು: ಇದು ಕೋಟೇಜ್ ಶೈಲಿಯ ಚೀಸ್ ಆಗಿದೆ. ಇದಕ್ಕೆ ಸ್ವಲ್ಪ ಖಾರ ಮತ್ತು ಸಾಸ್ ಹಾಕಿ ಚೈನೀಸ್ ಶೈಲಿಯಲ್ಲಿ ಅಡುಗೆಯನ್ನು ತಯಾರಿಸಿದರೆ ತಿನ್ನಲು ತುಂಬ ರುಚಿಕರವಾಗಿರುತ್ತದೆ. ಇದರಲ್ಲಿ ಕೊಬ್ಬಿನಂಶ ಕಡಿಮೆಯಿದ್ದು, ನಾರಿನಂಶ, ಪ್ರೊಟೀನ್, ಕ್ಯಾಲ್ಸಿಯಂ ಮತ್ತು ಕಾರ್ಬೋಹೈಡ್ರೇಟ್ ಅಂಶವಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
2. ವೀಟ್ ಪಾಸ್ತಾ: ವೀಟ್ ಪಾಸ್ತಾ (ಗೋಧಿಯಿಂದ ತಯಾರಿಸಿದ್ದು)ದಲ್ಲಿ ಕೊಬ್ಬಿನಂಶ ಕಡಿಮೆ ಇರುವುದರಿಂದ ದಪ್ಪಗಾಗುತ್ತೇವೆ ಎಂಬ ಯಾವುದೇ ಚಿಂತೆಯಿಲ್ಲದೆ ಇದನ್ನು ತಿನ್ನಬಹುದು.
3. ದವಸ ಧಾನ್ಯಗಳ ಬಿಸ್ಕೆಟ್: ಚಹಾ ಕುಡಿಯುವಾಗ ಏನಾದರೂ ತಿನ್ನಬೇಕು ಅನಿಸುತ್ತದೆ. ಆಗ ಕುರುಕಲು ತಿಂಡಿ ರುಚಿ ನೋಡ ಹೊರಟರೆ ದೇಹದ ತೂಕ ಹೆಚ್ಚವಾಗುವುದು. ಆದರೆ ದವಸ ಧಾನ್ಯಗಳಿಂದ ತಯಾರಿಸಿದ ಬಿಸ್ಕೆಟ್ ತಿನ್ನಬಹುದಾಗಿದ್ದು ಇದರಲ್ಲಿ ಪ್ರೊಟೀನ್ ಅಧಿಕವಾಗಿರುವುದರಿಂದ ದೇಹದ ಆರೋಗ್ಯಕ್ಕೆ ಹೆಚ್ಚುವುದು.
4. ಬೇಯಿಸಿದ ಆಲೂಗೆಡ್ಡೆ: ಹೆಚ್ಚಿನವರು ಆಲೂಗೆಡ್ಡೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಆದರೆ ಎಣ್ಣೆಯಲ್ಲಿ ಕರಿದ ಆಲೂಗೆಡ್ಡೆ ತಿನ್ನಬಾರದು. ಬೇಯಿಸಿದ ಆಲೂಗೆಡ್ಡೆ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಕಾರ್ಬೋಹೈಡ್ರೇಟ್ ದೊರೆಯುವುದು.
5. ಬೆಲ್ಲ: ಸಕ್ಕರೆ ಬಳಸುವುದರ ಬದಲು ಬೆಲ್ಲವನ್ನು ಬಳಸಿ ತಯಾರಿಸಿದ ಅಹಾರ ತಿನ್ನುವುದು ಒಳ್ಳೆಯದು. ಬೆಲ್ಲದಲ್ಲಿ ಕಾರ್ಬೋಹೈಡ್ರೇಟ್ ಮತ್ತು ಖನಿಜಾಂಶ ಅದರಲ್ಲೂ ಕಬ್ಬಿಣದಂಶ ಅಧಿಕವಾಗಿ ಇರುತ್ತದೆ.
6. ಓಟ್ಸ್ ಅಥವಾ ಕಾರ್ನ್ ಫ್ಲೇಕ್ಸ್ ಜೊತೆ ಜೇನು: ಬರೀ ಓಟ್ಸ್ ತಿಂದರೆ ಅಷ್ಟಾಗಿ ಇಷ್ಟವಾಗುವುದಿಲ್ಲ. ಅದರ ಬದಲು ಜೇನು ಹಾಕಿ ತಿಂದರೆ ಬಾಯಿಗೂ ರುಚಿ, ದೇಹದ ತೂಕ ಕೂಡ ಕಮ್ಮಿಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications