Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬೊಜ್ಜು ಕರಗಿಸುವ ನೈಸರ್ಗಿಕವಾದ ಪಾನೀಯ
ತೂಕ ಕಮ್ಮಿ ಮಾಡಲು ಡಯಟ್ ಪಿಲ್ಸ್‌ನಂತೆ ಡಯಟ್ ಪಾನೀಯ ಕೂಡ ಬಂದಿದೆ. ಅದರಲ್ಲಿ ಅನೇಕ ಪಾನಿಯಗಳು ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಏಕೆಂದರೆ ಅದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುವುದಿಲ್ಲ. ಅದರ ಬದಲು ನೈಸರ್ಗಿಕವಾಗಿ ಸಿಗುವ ಈ ಕೆಳಗಿನ ಪಾನೀಯಗಳನ್ನು ಕುಡಿದರೆ ದೇಹದ ಆರೋಗ್ಯ ಹೆಚ್ಚುವುದು ಮತ್ತು ದೇಹದ ತೂಕ ಕಡಿಮೆ ಕಮ್ಮಿಯಾಗುವುದು.

ಎಳನೀರು: ಎಳನೀರು ಕುಡಿದರೆ ದೇಹಕ್ಕೆ ಶಕ್ತಿ ದೊರೆಯುವುದರ ಜೊತೆಗೆ ಹೊಟ್ಟೆ ಹಸಿವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ತೂಕ ಕಮ್ಮಿಯಾಗಲು ವ್ಯಾಯಾಮ ಮಾಡುವಾಗ ಎಳನೀರು ಕುಡಿದು ಮಾಡಿದರೆ ಬೇಗನೆ ಸುಸ್ತಾಗುವುದಿಲ್ಲ.
2. ಕಿತ್ತಳೆ ಜ್ಯೂಸ್: ಕಿತ್ತಳೆಯಲ್ಲಿ ವಿಟಮಿನ್ ಸಿ ಇರುವುದರಿಂದ ತೂಕ ಇಳಿಸುವಲ್ಲಿ ತುಂಬಾ ಸಹಕಾರಿಯಾಗಿದೆ. ಇದರ ಜ್ಯೂಸ್ ಮಾಡಿ ಅದನ್ನು ಸೋಸಿ ಕುಡಿಯುವ ಬದಲು ಹಾಗೇ ಕುಡಿದರೆ ಅದರಲ್ಲಿರುವ ನಾರಿನಂಶಗಳು ಹೊಟ್ಟೆಗೆ ಸೇರಿದರೆ ಮತ್ತಷ್ಟು ಒಳ್ಳೆಯದು.
3. ಆಪಲ್ ಸೈಡರ್ ವಿನಿಗರ್: ಇದು ತುಂಬಾ ರುಚಿಕರವಾದ ಪಾನೀಯವಲ್ಲದಿದ್ದರೂ ತೂಕ ಇಳಿಸುವಲ್ಲಿ ತುಂಬಾ ಪರಿಣಾಮಕಾರಿಯಾದ ವಸ್ತು ಆಗಿದೆ. ಒಂದು ಲೋಟ ನೀರಿಗೆ 1 ಚಮಚ ಆಪಲ್ ಸೈಡರ್ ವಿನಿಗರ್ ಹಾಕಿ ಕುಡಿಯಬೇಕು. ಈ ರೀತಿ ದಿನಕ್ಕೆ 3 ಬಾರಿ ಕುಡಿಯುವುದು ಒಳ್ಳೆಯದು.
4. ತರಕಾರಿ ಜ್ಯೂಸ್: ತರಕಾರಿಗಳಲ್ಲಿ ಅಧಿಕ ಪೋಷಕಾಂಶವಿರುವುದರಿಂದ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ತರಕಾರಿ ಜ್ಯೂಸ್ ಅನ್ನು ಊಟ ಮಾಡುವ 20 ನಿಮಿಷ ಮೊದಲು ಕುಡಿದರೆ ಹೊಟ್ಟೆ ತುಂಬುವುದರಿಂದ ಮಿತಿಯಲ್ಲಿ ಊಟ ಮಾಡುವಿರಿ. ದೇಹದ ತೂಕ ಕಡಿಮೆಯಾಗಲು ಊಟ ಮಿತಿಯಲ್ಲಿ ಮಾಡಬೇಕು.
5. ಕೊಬ್ಬಿನಂಶವಿಲ್ಲದ ಹಾಲು: ಹಾಲಿನಲ್ಲಿ ಅಧಿಕ ಕ್ಯಾಲ್ಸಿಯಂ ಅಂಶವಿದ್ದು, ಇದು ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿದರೆ ಮೂಳೆಗಳು ಬಲವಾಗುತ್ತದೆ.
ತೂಕ ಕಮ್ಮಿಯಾಗಲು ವ್ಯಾಯಾಮ ಮಾಡುವವರು ಈ ಮೇಲಿನ ಜ್ಯೂಸ್‌ಗಳಲ್ಲಿ ನಿಮ್ಮ ಇಷ್ಟವಾದ ಪಾನೀಯವನ್ನು ಆಯ್ದುಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
