Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಕ್ಯಾಲೊರಿ ಕರಗಿಸಲು ಈ ತರಕಾರಿ ಹೆಚ್ಚು ತಿನ್ನಿ

ಬೊಜ್ಜನ್ನು ನಿಯಂತ್ರಿಸುವ ಕೆಲವು ತರಕಾರಿಗಳನ್ನು ಇಲ್ಲಿ ನೀಡಲಾಗಿದೆ. ಅದು ಯಾವುವೆಂದು ಮುಂದೆ ತಿಳಿದುಕೊಳ್ಳಿ.
ತೂಕ ಇಳಿಸುವ ಐದು ರೀತಿಯ ತರಕಾರಿ:
* ಸೋರೆ ಕಾಯಿ: ಸೋರೆಕಾಯಿಯಲ್ಲಿ ಕಡಿಮೆ ಕ್ಯಾಲೊರಿ ಇರುವುದರಿಂದ ಈ ತರಕಾರಿಗೆ ಹೆಚ್ಚು ಪ್ರಾಮುಖ್ಯತೆಯಿದೆ. ಸೋರೆಕಾಯಿಯಲ್ಲಿ ಫೈಬರ್ ಮತ್ತು ನೀರಿನಂಶ ಹೆಚ್ಚಿದೆ. ಸೋರೆಕಾಯಿ ಜ್ಯೂಸನ್ನು ಬೆಳಗ್ಗಿನ ಜಾವ ಸೇವಿಸಿದರೆ ಹೆಚ್ಚು ಉಪಯೋಗ ಹೊಂದಬಹುದು. ಇದರಲ್ಲಿನ ಫೈಬರ್ ಅಂಶ ದೇಹದಲ್ಲಿ ಬೊಜ್ಜು ಉಳಿಯದಂತೆ ತಡೆಯುತ್ತದೆ.
* ಬೂದುಗುಂಬಳಕಾಯಿ: ಬೂದುಗುಂಬಳಕಾಯಿ ತೂಕವನ್ನು ಬೇಗ ಇಳಿಸುತ್ತೆ. ಇದರಲ್ಲಿ ಅನೇಕ ರೀತಿಯ ಪೋಷಕಾಂಶ ಮತ್ತು ಔಷಧೀಯ ಗುಣಗಳೂ ಇದೆ. ಬೂದುಗುಂಬಳ ಬೀಜ ಮತ್ತು ತಿರುಳಿನಲ್ಲಿ ಆರೋಗ್ಯಕ್ಕೆ ಅನುವಾಗುವ ಅಂಶಗಳಿದೆ. ಬೂದುಗುಂಬಳಕಾಯಿಯನ್ನು ಸೇವಿಸುವುದರಿಂದ ಹೊಟ್ಟೆ ತುಂಬುವುದಷ್ಟೇ ಅಲ್ಲ, ದೇಹದಲ್ಲಿ ನೀರಿನಂಶ ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ.
* ಸಿಹಿ ಕುಂಬಳಕಾಯಿ: ಸಿಹಿ ಕುಂಬಳಕಾಯಿಯದು ರುಚಿಯಲ್ಲೂ ಮೇಲುಗೈ. ಈ ಜ್ಯೂಸನ್ನು ಬೆಳಗ್ಗೆ ಹೊತ್ತು ಸೇವಿಸಿದರೆ ಹೆಚ್ಚು ಉಪಯೋಗ. ಸಿಹಿ ಕುಂಬಳಕಾಯಿ ಯಾವ ಕಾಲದಲ್ಲಿ ಬೇಕಾದರೂ ಸೇವಿಸಬಹುದು. ಇದರಿಂದ ತೂಕವನ್ನು ಬೇಗನೆ ಇಳಿಸಿಕೊಳ್ಳಬಹುದು. ಇದರಲ್ಲಿರುವ ಬೆಟಾ ಕೆರೊಟಿನ್ ದೇಹದಲ್ಲಿ ವಿಟಮಿನ್ ಆಗಿ ಪರಿವರ್ತನೆಗೊಳ್ಳುತ್ತದೆ. ಇದನ್ನು ಸಲಾಡ್ ಮಾಡಿ ತಿಂದರೆ ಹೊಟ್ಟೆ ಸಂಬಂಧಿ ಸಮಸ್ಯೆಗಳೂ ದೂರವಿರುತ್ತದೆ.
* ಸೌತೆಕಾಯಿ: ಸೌತೆಕಾಯಿ ಕಡಿಮೆ ಕ್ಯಾಲೊರಿ ತರಕಾರಿ. ಸೌತೆ ಕಾಯಿ ತಿನ್ನುವುದರಿಂದ ಹೊಟ್ಟೆಯೂ ತುಂಬುತ್ತದೆ ಮತ್ತು ಹೆಚ್ಚು ತಿನ್ನುವುದನ್ನು ತಡೆಯಬಹುದು. ತುಂಬಾ ಸುಲಭವಾಗಿ ದೊರೆಯುವ ಈ ತರಕಾರಿಯಲ್ಲಿ ಶೇಕಡಾ 90 ರಷ್ಟು ನೀರಿನಂಶವಿದೆ. ಇದರ ಸೇವನೆಯಿಂದ ಆರೋಗ್ಯವೂ ಹಗುರವಾಗಿರುತ್ತದೆ. ಆದರೆ ಸೌತೆಕಾಯಿ ಸಿಪ್ಪೆಯನ್ನು ತೆಗೆಯದೆ ತಿಂದರೆ ಸಂಪೂರ್ಣ ಪೋಷಕಾಂಶ ನಿಮ್ಮದಾಗುತ್ತದೆ.
* ಹಾಗಲಕಾಯಿ: ಹಾಗಲಕಾಯಿ ರುಚಿಯಲ್ಲಿ ಕಹಿ ಇದ್ದರೂ ಬೊಜ್ಜನ್ನು ಕರಗಿಸುವಲ್ಲಿ ತುಂಬಾ ಉಪಯೋಗಕ್ಕೆ ಬರುತ್ತದೆ. ಅಷ್ಟೇ ಅಲ್ಲ, ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ಇನ್ಸುಲಿನ್ ಮಟ್ಟವನ್ನೂ ನಿಯಂತ್ರಿಸುತ್ತದೆ. ಡಯಟ್ ಪಿಲ್ಸ್ ಗಿಂತ ಹಾಗಲಕಾಯಿ ರಸವನ್ನು ಬೆಳಗ್ಗೆ ಹೊತ್ತು ಸೇವಿಸಿದರೆ ತುಂಬಾ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
