Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಮಹಿಳೆಯರು ಫಿಟ್ ಆಗಿರಲು ಏನು ಮಾಡಬೇಕು?

ಮಹಿಳೆಯರಿಗೆಂದಿರುವ ಡಯಟ್ ನಲ್ಲಿ ಎರಡು ರೀತಿಯ ಅಗತ್ಯವಿರುತ್ತದೆ. ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ. ಆದ್ದರಿಂದ ಮಹಿಳೆಯರಿಗೆ ನೆರವಾಗುವ ಕೆಲವು ಆಹಾರಗಳನ್ನು ಇಲ್ಲಿ ನೀಡಲಾಗಿದೆ.
ಮಹಿಳೆಯರಿಗೆ ಅಗತ್ಯವಾದ 6 ಆಹಾರಗಳು:
* ಓಟ್ಸ್: ಸ್ಲಿಮ್ ಆಗಿರಲು ಬಯಸುವ ಮಹಿಳೆಯರಿಗೆ ಓಟ್ಸ್ ತುಂಬಾ ಸೂಕ್ತ. ನಿಮ್ಮ ಹೊಟ್ಟೆ ಖಾಲಿಯೆನಿಸಿದರೆ ನಿಮಗೆ ಹಸಿವಾಗುತ್ತದೆ, ಇದರಿಂದ ಹೆಚ್ಚು ತಿನ್ನುವ ಸಾಧ್ಯತೆಯೂ ಇರುತ್ತದೆ. ಆದರೆ ಓಟ್ಸ್ ತಿನ್ನುವುದರಿಂದ ಹೊಟ್ಟೆಯೂ ತುಂಬುತ್ತದೆ. ಪೋಷಕಾಂಶವೂ ಸಿಗುತ್ತದೆ ಮತ್ತು ನಾರಿನಂಶವೂ ದೊರಕುತ್ತದೆ. ಇದರಿಂದ ಹಸಿವೂ ಬೇಗನೆ ಆಗುವುದಿಲ್ಲ.
* ಮೊಟ್ಟೆ: ಮಹಿಳೆಯರಿಗೆ ಮೊಟ್ಟೆ ಒಳ್ಳೆ ಬ್ರೇಕ್ ಫಾಸ್ಟ್. ಇದರಲ್ಲಿ ಪ್ರೊಟೀನ್ ಮಾತ್ರ ತುಂಬಿಲ್ಲ, ಕಬ್ಬಿಣಾಂಶ ಇದ್ದು, ಹೆಚ್ಚು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
* ಪಾಲಾಕ್: ಪಾಲಾಕ್, ಬ್ರೊಕೊಲಿ ಇಂತಹ ಹಸಿರು ತರಕಾರಿಗಳು ಮಹಿಳೆಯರಿಗೆ ಹೆಚ್ಚು ಅವಶ್ಯಕ. ಪಾಲಾಕ್ ನಿಂದ ರಕ್ತದಲ್ಲಿನ ಹೀಮೊಗ್ಲೊಬಿನ್ ಅಂಶ ಹೆಚ್ಚಿದ್ದರೆ, ಕ್ಯಾಲೊರಿಗಳನ್ನು ದೇಹಕ್ಕೆ ಸೇರಿಸದೆ ಆರೋಗ್ಯವನ್ನೂ ಉತ್ತಮಗೊಳಿಸುವ ಮಾರ್ಗ ಇದಾಗಿದೆ.
* ಕೆನೆರಹಿತ ಹಾಲು: ದಿನಕ್ಕೆ ಒಂದು ಲೋಟ ಹಾಲು ಕುಡಿದರೆ ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ದೊರೆತಂತೆ. ಕೆನೆರಹಿತ ಅಥವಾ ಕಡಿಮೆ ಕೊಬ್ಬಿನ ಹಾಲನ್ನು ಕುಡಿದರೆ ಒಳ್ಳೆಯದು. ಇದರಿಂದ ಹೊಟ್ಟೆಯೂ ತುಂಬುತ್ತದೆ ಅವಶ್ಯಕ ಪೋಷಕಾಂಶವೂ ದೊರೆಯುತ್ತದೆ. ಅಷ್ಟೇ ಅಲ್ಲ, ಸೋಯಾ, ಟೋಫು, ಇವುಗಳನ್ನೂ ಸೇವಿಸಬಹುದು.
* ಕಿತ್ತಳೆ ಮತ್ತು ಕೆಂಪು ಬಣ್ಣದ ಹಣ್ಣು / ತರಕಾರಿ: ಕ್ಯಾರೆಟ್, ಬೀಟ್ ರೂಟ್ ಮುಂತಾದವುಗಳಲ್ಲಿ ಕಬ್ಬಿಣಾಂಶದಲ್ಲಿ ಹೆಚ್ಚಿರುತ್ತದೆ. ಅದರಲ್ಲೂ ಕೆಂಪು ಬಣ್ಣದ ಹಣ್ಣಿನಲ್ಲಿ ಖನಿಜಾಂಶ ಹೆಚ್ಚಾಗಿ ದೊರೆಯುತ್ತದೆ. ಇದರಲ್ಲಿರುವ ವಿಟಮಿನ್ ಸಿ ಬೊಜ್ಜನ್ನೂ ನಿಯಂತ್ರಿಸುತ್ತದೆ.
* ಮೀನು: ಮೀನಿನಲ್ಲಿನ ಒಮೆಗಾ 3 ಫ್ಯಾಟಿ ಆಸಿಡ್ ಹೆಚ್ಚಿರುತ್ತದೆ. ಬೊಜ್ಜಿಲ್ಲದೆ ಪೋಷಕಾಂಶ ಪಡೆಯುವ ವಿಧಾನವೆಂದರೆ ಮೀನು ಸೇವನೆ. ಇದರಿಂದ ಹೊಳೆಯುವ ತ್ವಚೆ ಮತ್ತು ಕೂದಲೂ ಗಟ್ಟಿ ಮುಟ್ಟಾಗುತ್ತದೆ. ಇವಿಷ್ಟೂ ಆಹಾರ ಕ್ರಮಗಳನ್ನು ಅನುಸರಿಸಿದರೆ ಮಹಿಳೆಯರು ಫಿಟ್ ಆಗುವುದು ಸುಲಭ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
