Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಡಯಟ್ ಮಾಡುವವರು ಪಾಲಿಸಲೇಬೇಕಾದ 7 ಸೂತ್ರ

ನೀವು ಡಯಟ್ ಮಾಡುವವರಾದರೆಈ ಕೆಳಗಿನ 7 ಅಂಶಗಳನ್ನು ತಿಳಿದಿರುವುದು ಒಳ್ಳೆಯದು.
1. ಕ್ಯಾಲೋರಿ ಲೆಕ್ಕ ಮಾಡಿ: ಎಷ್ಟು ಪ್ರಮಾಣದ ಆಹಾರವನ್ನು ಸೇವಿಸುತ್ತೇವೆ ಅನ್ನುವುದಕ್ಕಿಂತ ಎಷ್ಟು ಕ್ಯಾಲೋರಿ ಅಂಶ ದೇಹಕ್ಕೆ ಸೇರುತ್ತದೆ ಎಂಬುದನ್ನು ಗಮನದಲ್ಲಿಡಬೇಕು. ವೈದ್ಯರನ್ನು ಸಲಹೆ ಮೇರೆಗೆ ಆರೋಗ್ಯವಾಗಿರಲು ಎಷ್ಟು ಕ್ಯಾಲೋರಿ ಅವಶ್ಯಕ ಎಂದು ಕೇಳಿ ತಿಳಿದು ಕೊಂಡು ಅದನ್ನು ಪಾಲಿಸಬೇಕು.
2. ಅವಶ್ಯಕವಾದ ತೂಕ: ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾದ ತೂಕ ಎಷ್ಟಿರಬೇಕೆಂದು ತಿಳಿದುಕೊಂಡು ನಂತರ ಡಯಟ್ ಮಾಡಬೇಕು. ಅಲ್ಲದೆ ಕ್ಯಾಲೋರಿ ಎಷ್ಟು ತೆಗೆದುಕೊಳ್ಳ ಬೇಕೆಂಬುದು ಕೆಲಸವನ್ನು ಕೂಡ ಅವಲಂಬಿತವಾಗಿರುತ್ತದೆ. ದೈಹಿಕ ಶ್ರಮ ಅಧಿಕ ಇರುವಂತಹ ಕೆಲಸ ಅಥವಾ ಅಧಿಕ ಪ್ರಯಾಣ ಮಾಡುವವರು ಕೂತು ಕೆಲಸ ಮಾಡುವವರಿಗಿಂತ ಅಧಿಕ ಕ್ಯಾಲೋರಿಯನ್ನು ತೆಗೆದುಕೊಳ್ಳಬೇಕು.
3. ಪೋಷಕಾಂಶಗಳು: ನಿಮ್ಮ ಡಯಟ್ ನಲ್ಲಿ ಸಮತೋಲನವಾದ ಪೋಷಕಾಂಶಗಳನ್ನು ಹೊಂದಿರುವಂತೆ ನೋಡಿಕೊಳ್ಳಬೇಕು. ಡಯಟ್ ನಲ್ಲಿ ಕಾರ್ಬೋಹೈಡ್ರೇಟ್, ಪ್ರೊಟೀನ್, ವಿಟಮಿನ್, ನಾರಿನಂಶ ಇರದಿದ್ದರೆ ಅದನ್ನು ಆರೋಗ್ಯಕರವಾದ ಡಯಟ್ ಎಂದು ಕರೆಯಲು ಸಾಧ್ಯವಿಲ್ಲ. ಏನೂ ತಿನ್ನದೆ ಇರುವುದು, ನೀರಿನ್ನು ಮಾತ್ರ ಕುಡಿದು ಇರುವುದು ಈ ರೀತಿಯ ಡಯಟ್ ಆರೋಗ್ಯಕ್ಕೆ ಒಳ್ಳೆಯದಲ್ಲ.
4. ಡಯಟ್ ಬಗ್ಗೆ ತಪ್ಪು ಕಲ್ಪನೆ: ಅತಿ ಬೇಗನೆ ತೂಕ ಕಡಿಮೆ ಮಾಡುತ್ತೆ ಎನ್ನುವ ಡಯಟ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಂತಹ ಆಹಾರಕ್ರಮವನ್ನು ನಿರ್ಲಕ್ಷ್ಯ ಮಾಡಬೇಕು.
6. ಮನೆ ಊಟ: ಹೋಟೆಲ್ ಆಹಾರ ತಿನ್ನುವ ಬದಲು ಮನೆಯಲ್ಲಿಯೆ ಮಾಡಿದಂತಹ ಆಹಾರವನ್ನು ಸೇವಿಸಬೇಕು.
ಇದರಿಂದ ಅಹಾರದಲ್ಲಿ ಪೋಷಕಾಂಶಗಳ ಸಮತೋಲನವನ್ನು ಕಾಪಾಡಿಕೊಳ್ಳಬಹುದು.
7. ತೂಕ: ಒಂದೇ ವಾರದಲ್ಲಿ 3-4 ಕೆಜಿ ತೂಕ ಕಡಿಮೆ ಮಾಡುವಂತಹ ಡಯೆಟ್ ದೇಹದ ಆರೋಗ್ಯವನ್ನು ಹದಗೆಡುವಂತೆ ಮಾಡುವುದು ದಿಟ. ತೂಕವನ್ನು ನಿಧಾನಕ್ಕೆ ಕಡಿಮೆ ಮಾಡುವ ಡಯೆಟ್ ಕ್ರಮ ಅನುಸರಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









