Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಇಷ್ಟ ಪಟ್ಟು ತೂಕವಿಳಿಸುವುದು ಹೇಗೆ?

ಈ ವಿಧಾನದಿಂದ ಅತಿ ಬೇಗನೆ ಫಲಿತಾಂಶ ದೊರಕುವುದಿಲ್ಲ. ಆದರೆ ಕ್ರಮೇಣ ತೂಕ ಇಳಿಸಿಕೊಳ್ಳಬಹುದು. ಬೊಜ್ಜು ಕರಗಿಸುವುದಷ್ಟೇ ಅಲ್ಲ, ಆರೋಗ್ಯವಾಗಿರಲು ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಈ ವಿಧಾನ ಹೆಚ್ಚು ಸಹಕಾರಿ.
ತೂಕ ಇಳಿಸುವ 5 ಸುಲಭ ಮಾರ್ಗ:
* ಬಿಸಿ ನೀರಿನ ಸ್ನಾನ/ ಉಪ್ಪು ಬೆರೆಸಿದ ನೀರಿನ ಸ್ನಾನ: ಸ್ನಾನ ಮಾಡುವುದರಿಂದ ಬೊಜ್ಜಿನ ಕಣಗಳು ಕಡಿಮೆಯಾಗುವುದು ಮಾತ್ರವಲ್ಲ, ಇದರಿಂದ ಸ್ಟ್ರೆಚ್ ಮಾರ್ಕ್ ಗಳೂ ಇಲ್ಲವಾಗುತ್ತದೆ. ಬೆನ್ನಿಗೆ, ಸೊಂಟಕ್ಕೆ ಹೊಟ್ಟೆಗೆ ಬಿಸಿ ನೀರನ್ನು ಹಾಕಿಕೊಳ್ಳುವುದರಿಂದ ಕೊಬ್ಬು ಕರಗಿ ತೂಕವೂ ಇಳಿಯುತ್ತದೆ. ಆದರೆ ಹೆಚ್ಚು ಬಿಸಿ ನೀರನ್ನು ಉಪಯೋಗಿಸಬೇಡಿ. ಬಿಸಿ ನೀರಿನೊಂದಿಗೆ ಉಪ್ಪು ಅಥವಾ ಅಡುಗೆ ಸೋಡಾ ಬೆರೆಸಬಹುದು. ಸುಸ್ತು ಮತ್ತು ಜ್ವರವಿದ್ದಾಗ ಈ ವಿಧಾನ ಅನುಸರಿಸಬಾರದು.
* ಟೀ ಸೇವನೆ: ನಿಂಬೆ, ಗ್ರೀನ್ ಟೀ, ಬ್ಲ್ಯಾಕ್ ಮುಂತಾದ ಹರ್ಬಲ್ ಟೀ ಸೇವನೆಯಿಂದ ತೂಕವನ್ನು ಕ್ರಮೇಣ ಕಡಿಮೆ ಮಾಡಿಕೊಳ್ಳಬಹುದು. ಇವುಗಳಲ್ಲಿ ಹೆಚ್ಚು ಆಂಟಿಯಾಕ್ಸಿಡಂಟ್ ಇರುವುದರಿಂದ ದೇಹದಲ್ಲಿ ಕುಳಿತ ಕೆಟ್ಟ ಬೊಜ್ಜು ಕರಗುತ್ತದೆ. ದಿನಕ್ಕೆ ಎರಡು ಕಪ್ ಬಿಸಿ ಬಿಸಿ ಟೀ ಕುಡಿಯುವುದರಿಂದ ತೂಕ ಇಳಿಸಿಕೊಂಡು ಮನಸ್ಸನ್ನೂ ಉಲ್ಲಸಿತಗೊಳಿಸಬಹುದು.
* 30 ನಿಮಿಷದ ಈಜು: ಸ್ವಿಮ್ಮಿಂಗ್ ನಿಂದ ದೇಹದಲ್ಲಿ ಬೊಜ್ಜು ಸೇರಿಕೊಳ್ಳುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದು. ಸ್ವಿಮ್ಮಿಂಗ್ ನಿಂದ ಸ್ನಾಯುಗಳು ಗಟ್ಟಿಗೊಳ್ಳುತ್ತದೆ. ನೀವು ಹೆಚ್ಚು ಬಾಗಿದಂತೆಲ್ಲಾ ಬೊಜ್ಜು ಕರಗಲು ಸಹಾಯಕವಾಗುತ್ತದೆ.
* ಆಹಾರದ ಪಟ್ಟಿ: ದಿನವಿಡೀ ನೀವು ಏನೇನನ್ನು ಸೇವಿಸಿದಿರಿ ಎಂಬುದನ್ನು ಪಟ್ಟಿ ಮಾಡಿ. ಆಗ ನಿಮ್ಮ ಆಹಾರ ಮತ್ತು ಬೊಜ್ಜಿನ ನಡುವಣ ಸಂಬಂಧ ನಿಮಗೇ ತಿಳಿಯುತ್ತದೆ. ದಿನವೂ ಪಟ್ಟಿ ಮಾಡುತ್ತ ಆದಷ್ಟು ಸಮತೋಲನ ಮತ್ತು ಆರೋಗ್ಯಕರವಾದದ್ದನ್ನು ಸೇವಿಸಲು ಯತ್ನಿಸಿ.
* 15 ನಿಮಿಷದ ನಡಿಗೆ ಅಥವಾ ಮನೆಗೆಲಸ: ಕಷ್ಟ ಪಟ್ಟು ಕರಗಿಸಿದ ಬೊಜ್ಜು ಗೊತ್ತೇ ಆಗದಂತೆ ಕೆಲವು ಬಾರಿ ಮತ್ತೆ ಸೇರಿಕೊಳ್ಳಬಹುದು. ಮಧ್ಯಾಹ್ನ ಅಥವಾ ರಾತ್ರಿ ಹೆಚ್ಚಿನ ಊಟದ ನಂತರ ಮೈಯ್ಯಲ್ಲಿ ಬೊಜ್ಜು ಉಳಿಯುವ ಸಾಧ್ಯತೆ ಹೆಚ್ಚು. ಆದ್ದರಿಂದ ಊಟವಾದ ನಂತರ 15 ನಿಮಿಷ ನಡಿಗೆ ತೂಕ ಇಳಿಸುವುದರೊಂದಿಗೆ ಜೀರ್ಣಶಕ್ತಿಯನ್ನೂ ಚುರುಕುಗೊಳಿಸುತ್ತೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
