Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಡಯೆಟ್ ಬಗ್ಗೆ ಇರುವ ತಪ್ಪು ಕಲ್ಪನೆ

ಆದರೆ ಈ ಡಯೆಟ್ ದೇಹದ ಆರೋಗ್ಯಕ್ಕೆ ಎಷ್ಟರಮಟ್ಟಿಗೆ ಒಳ್ಳೆಯದು ಮತ್ತು ಸರಿಯಾದ ಡಯೆಟ್ ಕ್ರಮವೇನು ಎಂದು ತಿಳಿಯದೆಯೆ ಡಯೆಟ್ ಮಾಡಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವ ರೀತಿಯ ಡಯೆಟ್ ಕ್ರಮ ಒಳ್ಳೆಯದು ಮತ್ತು ಡಯೆಟ್ ಬಗ್ಗೆ ಇರುವ ತಪ್ಪು ಕಲ್ಪನೆಗಳೇನು ಎಂದು ತಿಳಿಯಬೇಕಾದರೆ ಮುಂದೆ ಓದಿ.
1. ವ್ಯಾಯಾಮ ಮಾಡುವವರು ಏನೂ ಬೇಕಾದರೂ ತಿನ್ನಬಹುದು
ಇದೊಂದು ತಪ್ಪು ಕಲ್ಪನೆಯಾಗಿದೆ, ವ್ಯಾಯಾಮ ಮಾಡುತ್ತೇವೆ ಎಂದು ಹೆಚ್ಚು ಕೊಬ್ಬಿನ ಮತ್ತು ಕುರುಕುಲು ತಿಂಡಿಗಳನ್ನು ತಿನ್ನುವುದರಿಂದ ವ್ಯಾಯಾಮದ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ವ್ಯಾಯಾಮದ ಜೊತೆ ಆರೋಗ್ಯಕರ ಆಹಾರ ಸೇವನೆಯಿಂದ ಮಾತ್ರ ದೇಹದ ತೂಕ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ.
2. ಡಯೆಟ್ ಮಾಡುವವರು ವ್ಯಾಯಾಮ ಮಾಡುವ ಅಗ್ಯತವಿಲ್ಲ.
ಇದು ಮತ್ತೊಂದು ತಪ್ಪು ಕಲ್ಪನೆ ಆಗಿದೆ. ಡಯೆಟ್ ಮಾಡಿದರೆ ತೆಳ್ಳಗೆ ಆಗಬಹುದು ಆದರೆ ಒಳ್ಳೆಯ ಮೈಕಟ್ಟು ಬೇಕೆಂದರೆ ಇದರ ಜೊತೆ ವ್ಯಾಯಾಮವನ್ನು ಸಹ ಮಾಡಬೇಕಾಗುತ್ತದೆ.
3. ತೂಕ ಕಡಿಮೆ ಇತ್ತು ಅಂದರೆ ತೆಳ್ಳಗಿನ ಮೈಕಟ್ಟಿನವರು ಮತ್ತು ತೂಕ ಜಾಸ್ತಿ ಇದೆ ಅಂದರೆ ಬೊಜ್ಜು ದೇಹದವರು.
ಸಣ್ಣಗಿನ ಮೈಕಟ್ಟಿನವರು ತೂಕ ಕಡಿಮೆ ಇರುತ್ತಾರೆ ಎನ್ನುವುದು ತಪ್ಪು ಕಲ್ಪನೆ, ಉದಾಹರಣೆಗೆ ಸ್ಪೋರ್ಟ್ಸ್ ನವರು ನೋಡಲು ಸಪೂರ ಕಂಡರೂ ದೇಹ ತೂಕವನ್ನು ಹೊಂದಿರುತ್ತಾರೆ. ಆದ್ದರಿಂದ ಅಧಿಕ ತೂಕ ಹೊಂದಿರುವವರು ದಪ್ಪವೆಂದು ಹೇಳಲು ಸಾಧ್ಯವಿಲ್ಲ.
4. ತೆಳ್ಳಗಿನ ಮೈಕಟ್ಟು ಹೊಂದಿರುವವರು ದೇಹ ಫಿಟ್ ನೆಸ್ ಹೊಂದಿರುತ್ತಾರೆ.
ಮಾಡಲ್ ಗಳು ಡಯೆಟ್ ಮಾಡಿ ತೆಳ್ಳಗಿನ ಮೈಕಟ್ಟು ಹೊಂದಿರುತ್ತಾರೆ, ಆದರೆ ಅಂತಹವರ ದೇಹದಲ್ಲಿ ಕೊಬ್ಬಿನಂಶ ಅಧಿಕವೆ ಇರುತ್ತದೆ, ಆದ್ದರಿಂದಲೆ ಅನೇಕರು ಮಾಡಲಿಂಗ್, ಅಥವಾ ಡ್ಯಾನ್ಸ್ ನಿಂದ ದೂರ ಸರಿದರೆ ವಿಪರೀತವಾಗಿ ದಪ್ಪಗಾಗ ತೊಡಗುತ್ತಾರೆ.
5. ಮಾರುಕಟ್ಟೆಯಲ್ಲಿ ದೊರೆಯುವ ಕೊಬ್ಬಿನಂಶವಿಲ್ಲದ ಆಹಾರ ಪದಾರ್ಥಗಳ ಸೇವನೆ ಒಳ್ಳೆಯದು.
ಇದೊಂದು ತಪ್ಪು ಕಲ್ಪನೆ, ಮಾರುಕಟ್ಟೆಯಲ್ಲಿ ದೊರೆಯುವ ಕೊಲೆಸ್ಟ್ರಾಲ್ ಮುಕ್ತ ಆಹಾರಗಳು ದೇಹವನ್ನು ತೆಳ್ಳಗೆ ಮಾಡಿದರೂ ಸಹ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರ ಬದಲು ಮನೆಯಲ್ಲಿ ತಯಾರಿಸಿದ ಕರಿದ ಪದಾರ್ಥಗಳನ್ನು ಸೇವಿಸುವುದೇ ವಾಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
