Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬೇಗ ತೂಕ ಇಳಿಸಿಕೊಳ್ಳಬೇಕೆಂದರೆ ಈ 7 ಆಹಾರ ಸೇವಿಸಿ

ಡಯಟ್, ವ್ಯಾಯಾಮ ಏನೂ ಮಾಡದೆ ತಿನ್ನುತ್ತಾ ತೂಕ ಇಳಿಸಿಕೊಳ್ಳುವ ಮಾರ್ಗವಿದು. ದೇಹದಲ್ಲಿನ ಅಧಿಕ ಕೊಬ್ಬನ್ನು ಬೇಗನೆ ಕರಗಿಸುವ 7 ರೀತಿಯ ಆಹಾರ ಸೇವಿಸಿದರೆ ಕೊಬ್ಬು ಕರಗುವುದರೊಂದಿಗೆ ದೇಹಕ್ಕೆ ಒಳ್ಳೆ ಆಕಾರ ಕೂಡ ಸಿಗುತ್ತೆ.
ಕೊಬ್ಬನ್ನು ಸುಡುವ 7 ಬಗೆಯ ಆಹಾರ ಯಾವುದು?
* ಮೊಟ್ಟೆ: ಮೊಟ್ಟೆಯನ್ನು ಬ್ರೇಕ್ ಫಾಸ್ಟ್ ಗೆ ಸೇವಿಸಿದರೆ ಒಳ್ಳೆಯದು. ಪೋಷಕಾಂಶಯುಕ್ತ ಆಹಾರವೂ ಆದ ಮೊಟ್ಟೆ ಹೊಟ್ಟೆಯಲ್ಲಿ ಮತ್ತು ಸೊಂಟದಲ್ಲಿರುವ ಬೊಜ್ಜನ್ನು ಕರಗಿಸುತ್ತದೆ. ತೂಕ ಕಳೆದುಕೊಳ್ಳಲು ಬ್ರೇಕ್ ಫಾಸ್ಟ್ ಬಿಡುವವರು ಮೊಟ್ಟೆ ತಿನ್ನುವುದರಿಂದ ಉಪಯೋಗ ಹೊಂದಬಹುದು. ಮೊಟ್ಟೆ ಹೆಚ್ಚಿನ ಕ್ಯಾಲೊರಿ ಕರಗಿಸುವುದರೊಂದಿಗೆ ಹಸಿವನ್ನು ನಿಯಂತ್ರಿಸುತ್ತದೆ. ಇದು ಬೊಜ್ಜನ್ನು ಕರಗಿಸಿ ಅದನ್ನು ಶಕ್ತಿಯನ್ನಾಗಿ ಮಾರ್ಪಾಡು ಮಾಡುತ್ತದೆ.
* ಟೊಮೆಟೊ: ನಿಮ್ಮ ಆಹಾರದೊಂದಿಗೆ ಟೊಮೆಟೊ ಹಣ್ಣನ್ನು ಹೆಚ್ಚಾಗಿ ಬಳಸಿ. ಟೊಮೆಟೊದಲ್ಲಿ ದೇಹದಲ್ಲಿನ ಬೊಜ್ಜನ್ನು ಕರಗಿಸುವ ಅಂಶ ಹೆಚ್ಚಿದೆ. ಅಷ್ಟೇ ಅಲ್ಲ, ಕ್ಯಾನ್ಸರನ್ನೂ ನಿವಾರಿಸುತ್ತದೆ. ನಿಮಗೆ ಹಸಿವಾದಾಗ ಹಸಿ ಟೊಮೆಟೊ ತಿಂದರೆ ಹೊಟ್ಟೆ ತುಂಬುವುದರೊಂದಿಗೆ ಅನಗತ್ಯ ಆಹಾರ ಸೇವಿಸಿ ದೇಹದಲ್ಲಿ ಬೊಜ್ಜು ಸೇರುವುದನ್ನೂ ತಡೆಯಬಹುದು.
* ಜೇನು: ನೀವು ಬೇಗನೆ ದೇಹದ ಬೊಜ್ಜನ್ನು ಕರಗಿಸಿಕೊಳ್ಳಬೇಕೆಂದಿದ್ದರೆ ಬಿಸಿ ನೀರಿನೊಂದಿಗೆ ಒಂದು ಚಮಚ ಜೇನನ್ನು ಬೆರೆಸಿ ಕುಡಿಯಿರಿ. ಜೇನನ್ನು ಹಾಗೇ ತಿಂದರೂ ಪ್ರಯೋಜನವಿದೆ. ಜೇನಿನಲ್ಲಿರುವ ಕಾರ್ಬೊಹೈಡ್ರೇಟ್ ಜೀರ್ಣಕ್ರಿಯೆ ಹೆಚ್ಚಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಸಕ್ಕರೆಯ ಬದಲಿಯಾಗಿ ಜೇನನ್ನು ಉಪಯೋಗಿಸಿಕೊಂಡರೆ ತೂಕ ಕ್ರಮೇಣ ಇಳಿಕೆಯಾಗಿರುವುದು ನಿಮಗೆ ಗೋಚರಿಸುತ್ತೆ.
* ಬಾದಾಮಿ: ಬಾದಾಮಿಯಲ್ಲಿ ಆರೋಗ್ಯಕರ ಕೊಲೆಸ್ಟ್ರಾಲ್ ಇದೆ. ದೇಹಕ್ಕೆ ಅಗತ್ಯವಾದ ಕೊಲೆಸ್ಟ್ರಾಲನ್ನು ಬಾದಾಮಿ ನೀಡುವುದರಿಂದ ಮತ್ತು ಇದರಲ್ಲಿನ ಫೈಬರ್ ನಿಂದ ದೇಹ ಚೈತನ್ಯದಿಂದಿರಲು ಸಹಕಾರಿಯಾಗಿರುತ್ತದೆ. ಬಾದಾಮಿ ತಿನ್ನುವುದರಿಂದ ಹೊಟ್ಟೆ ಬೊಜ್ಜೂ ಕರಗುತ್ತದೆ. ದಿನಕ್ಕೆ 10 ಬಾದಾಮಿ ತಿಂದರೆ ಸಾಕು.
* ನಿಂಬೆಹಣ್ಣು: ಕೇವಲ ನಿಂಬೆ ಮಾತ್ರವಲ್ಲ, ವಿಟಮಿನ್ ಸಿ ಹೇರಳವಾಗಿರುವ ಆಹಾರ ಬೊಜ್ಜನ್ನು ಬೇಗನೆ ಕರಗಿಸುತ್ತದೆ. ಡಯಟ್ ಮಾಡಲು ಸಾಧ್ಯವಾಗದಿದ್ದವರು ವಿಟಮಿನ್ ಸಿ ಹೆಚ್ಚಿರುವ ಆಹಾರ ಸೇವಿಸಿದರೆ ಸಾಕು, ಒಳ್ಳೆ ಶೇಪ್ ಪಡೆದುಕೊಳ್ಳಬಹುದು. ನಿಂಬೆ, ದ್ರಾಕ್ಷಿ, ಕಿತ್ತಳೆ, ಕ್ಯಾರೆಟ್, ಎಲೆಕೋಸು, ಹೂಕೋಸು, ಕಲ್ಲಂಗಡಿ ಇವುಗಳ ಸೇವನೆ ಮಾಡಿದರೆ ಕೊಲೆಸ್ಟ್ರಾಲ್ ಬೇಗ ಕರಗುತ್ತದೆ.
* ಪಾಲಾಕ್: ಹಸಿರು ತರಕಾರಿಗಳಾದ ಎಲೆ ಕೋಸು, ಹೂಕೋಸು, ಅವಕಾಡೊ, ಕ್ಯಾರೆಟ್, ಪಾಲಾಕ್, ಇವುಗಳು ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಕಡಿಮೆ ಕೊಬ್ಬಿನಂಶವಿರುವ ಮೊಸರಿನೊಂದಿಗೆ ಇವುಗಳನ್ನು ಸಲಾಡ್ ಮಾಡಿ ಕುಡಿಯಬಹುದು.
* ನೀರು: ನೀರು ತೂಕ ಇಳಿಸಿಕೊಳ್ಳಲು ತುಂಬಾ ಉಪಯೋಗಕ್ಕೆ ಬರುತ್ತೆ. ನೀರನ್ನು ಹೆಚ್ಚು ಕುಡಿಯುವುದರಿಂದ ಹಸಿವನ್ನೂ ನಿಯಂತ್ರಿಸಿ ಅನಗತ್ಯವಾಗಿ ಹೆಚ್ಚು ಊಟ ಮಾಡುವುದನ್ನು ತಡೆಯಬಹುದು. ಊಟವಾದ ನಂತರ ಬಿಸಿ ನೀರನ್ನು ಸೇವಿಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ಫಲಿತಾಂಶವನ್ನು ನಿಮಗೆ ತಿಳಿಯುತ್ತದೆ. ಬಿಸಿ ನೀರಿನೊಂದಿಗೆ ನಿಂಬೆರಸ ಅಥವಾ ಜೇನನ್ನು ಬೆರೆಸಿ ಕುಡಿದರೂ ಬೊಜ್ಜನ್ನು ಬೇಗ ಕರಗಿಸಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
