Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ವ್ಯಾಯಾಮ, ಡಯಟ್ ಇಲ್ಲದೇ ತೂಕ ಇಳಿಸಿಕೊಳ್ಳುವುದು ಹೇಗೆ?

ಡಯಟ್ ಮತ್ತು ವ್ಯಾಯಾಮ ಇಲ್ಲದೆ ತೂಕ ಇಳಿಸಿಕೊಳ್ಳುವ 5 ಮಾರ್ಗ:
* ಮಹಡಿ ಹತ್ತಿ ಇಳಿಯಿರಿ: ಯಾವಾಗಲೂ ಲಿಫ್ಟ್ ಸಹಾಯ ತೆಗೆದುಕೊಳ್ಳುವ ಬದಲು ಮೆಟ್ಟಿಲುಗಳನ್ನು ಹತ್ತುವ ಅಭ್ಯಾಸ ಮಾಡಿಕೊಳ್ಳಿ. ಮನೆಯಲ್ಲಾಗಲೀ, ಕೆಲಸದಲ್ಲಾಗಲೀ ಮಹಡಿ ಹತ್ತಿ ಇಳಿಯುವ ಅಭ್ಯಾಸ ಇಟ್ಟುಕೊಂಡಷ್ಟು ನಿಮಗೆ ಗೊತ್ತೇ ಆಗದಂತೆ ತೂಕ ಕಡಿಮೆಯಾಗುತ್ತೆ.
* ಮನೆಯನ್ನು ನೀವೇ ಶುದ್ಧಗೊಳಿಸಿ: ತೂಕ ಇಳಿಸುವಲ್ಲಿ ಮನೆ ಒರೆಸುವುದು ಹೆಚ್ಚು ಉಪಯೋಗಕ್ಕೆ ಬರುತ್ತೆ. ಮನೆಕೆಲಸವನ್ನು ನಿಮ್ಮ ಸಮಯಕ್ಕೆ ಅನುಗುಣವಾಗಿ ಮಾಡಿಮುಗಿಸಿದರೆ ದೇಹದಲ್ಲಿನ ಅನಗತ್ಯ ಬೊಜ್ಜು ಕರಗುತ್ತದೆ. ಕೋಲು ಅಥವಾ ಇನ್ನಿತರ ಸಾಧನಗಳ ಸಹಾಯವಿಲ್ಲದೆಯೇ ಮನೆಯನ್ನು ಕೈಗಳಿಂದಲೇ ಒರೆಸಿದರೆ ಅದೇ ಉತ್ತಮ ವ್ಯಾಯಾಮವಿದ್ದಂತೆ.
* ಬಗ್ಗಿ ಕೆಲಸ ಮಾಡಿ: ಏನೇ ಮಾಡಬೇಕೆಂದರೂ ಬಗ್ಗಲು ನಾವು ಹಿಂಜರಿಯುತ್ತೇವೆ. ಆದರೆ ಬಗ್ಗುವುದರಿಂದ ಅನೇಕ ಉಪಯೋಗವನ್ನು ಪಡೆಯಬಹುದು. ಬಗ್ಗಿ ಕೆಲಸ ಮಾಡುವುದರಿಂದ ಎಲುಬುಗಳು ಗಟ್ಟಿಯಿರುವುದಲ್ಲದೆ ಸೊಂಟದ ಸುತ್ತಲಿನ ಕೊಲೆಸ್ಟ್ರಾಲ್ ಕರಗುತ್ತದೆ ಅಥವಾ ಕೂತ ಜಾಗದಲ್ಲೇ ಕೂರದೆ ಆಗಾಗ್ಗೆ ಏನಾದರೂ ಕೆಲಸ ಮಾಡುತ್ತಿದ್ದರೂ ಆಯಿತು.
* ಆದಷ್ಟು ನಡೆಯಿರಿ: ತೂಕ ಇಳಿಸಿಕೊಳ್ಳಲು ನೀವು ಜಿಮ್ ಹೋಗುವ ಅವಶ್ಯಕತೆಯೇ ಇಲ್ಲ. ದಿನಕ್ಕೆ ಅರ್ಧ ಗಂಟೆ ನಡಿಗೆಯಾದರೂ ಸಾಕು. ವಾಹನಗಳನ್ನು ಉಪಯೋಗಿಸುವ ಬದಲು ನಡಿಗೆಯನ್ನೇ ಅನುಸರಿಸಿದರೆ ಫಲಿತಾಂಶ ನಿಮಗೇ ಗೋಚರಿಸುತ್ತೆ.
* ತಿಂದದ್ದನ್ನು ಕರಗಿಸಿ: ನೀವು ತೂಕ ಇಳಿಸಿಕೊಳ್ಳಬೇಕೆಂದಿದ್ದರೆ ಆಹಾರವನ್ನು ತ್ಯಜಿಸಬೇಕೆಂದೇನಿಲ್ಲ. ತಿಂದ ಆಹಾರವನ್ನು ಕರಗಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಂಡರೆ ಸಾಕು. ತಿಂದದ್ದನ್ನು ಕರಗಿಸಿಕೊಳ್ಳಲು ಸಾಕಷ್ಟು ಕೆಲಸ ಮಾಡಿದರೆ ಆಹಾರವನ್ನು ತ್ಯಜಿಸುವ ಗೋಜು ಬರುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
