Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಖದ ಬೊಜ್ಜು ಕರಗಿಸುವ ಸ್ಪೆಷಲ್ ಡಯಟ್ ಇದು

ಮುಖದ ಬೊಜ್ಜನ್ನು ಕಡಿಮೆ ಮಾಡುವ ಡಯಟ್:
* ಉಪ್ಪಿನಂಶ ಕಡಿಮೆಯಿರಲಿ: ಉಪ್ಪನ್ನು ಹೆಚ್ಚಾಗಿ ಸೇವಿಸುವುದೇ ಮುಖ ಊದಿಕೊಳ್ಳಲು ಮುಖ್ಯ ಕಾರಣ. ಆಹಾರವನ್ನು ಕಡಿಮೆ ಉಪ್ಪಿನೊಂದಿಗೆ ಅಥವಾ ಉಪ್ಪೇ ಇಲ್ಲದಂತೆ ತಿಂದರೆ ಆರೋಗ್ಯಕ್ಕೂ ಒಳ್ಳೆಯದು. ಸುಲಭವಾಗಿ ಜೀರ್ಣಗೊಳ್ಳಬಹುದಾದಂತಹ ಮತ್ತು ನಾರಿನಂಶ ಹೆಚ್ಚಿರುವ ಕೆಲವು ಸಾಂಬಾರು ಪದಾರ್ಥಗಳನ್ನು ಉಪಯೋಗಿಸಿದರೆ ರುಚಿಯೂ ನೀಡುತ್ತದೆ ಹೆಚ್ಚು ಉಪ್ಪಿನ ಬಳಕೆಯೂ ನಿಲ್ಲುತ್ತದೆ.
* ನೀರು ಸೇವನೆಯಿರಲಿ: ನೀರಿಗಿಂತ ದೇಹಕ್ಕೆ, ಚರ್ಮಕ್ಕೆ ಉತ್ತಮ ಟಾನಿಕ್ ಇಲ್ಲ. ಹೆಚ್ಚು ನೀರು ಕುಡಿಯುವುದರಿಂದ ಚರ್ಮವನ್ನು ಕ್ಲೆನ್ಸ್ ಮಾಡಿ ದೇಹವನ್ನು ಹಗುರಗೊಳ್ಳುವಂತೆ ಮಾಡುತ್ತದೆ. ಇದು ಹೆಚ್ಚು ತಿನ್ನುವುದನ್ನೂ ತಡೆಯುತ್ತದೆ. ಆದ್ದರಿಂದ ದಿನಕ್ಕೆ 8 ದೊಡ್ಡ ಲೋಟಗಳಷ್ಟು ನೀರು ಸೇವಿಸಿದರೆ ತೂಕವೂ ಕಡಿಮೆಯಾಗುತ್ತೆ.
* ತರಕಾರಿ ಮತ್ತು ಹಣ್ಣು: ಹಸಿ ತರಕಾರಿ, ಹಣ್ಣು, ಮೊಳಕೆಒಡೆದ ಹೆಸರುಕಾಳು ಮುಂತಾದುವು ಮುಖದಲ್ಲಿ ವಯಸ್ಸಾಗುವಂತೆ ಕಾಣುವುದನ್ನು ತಡೆಯುತ್ತದೆ. ಶಕ್ತಿ ನೀಡಿ ಒಳ್ಳೆಯ ನಿದ್ದೆಯನ್ನೂ ಕೊಡುತ್ತದೆ.
* ಸಕ್ಕರೆ ಅಂಶ ಬೇಡ: ಆರೋಗ್ಯದ ವಿಷಯಕ್ಕೆ ಬಂದರೆ ಸಕ್ಕರೆ ಅಂಶ ಹೆಚ್ಚಿರುವ ಆಹಾರದ ಸೇವನೆ ಒಳ್ಳೆಯದಲ್ಲ. ಕೆಲವು ಸಕ್ಕರೆ ಅಂಶದ ತಿನಿಸುಗಳು ಮುಖದಲ್ಲಿ ಬೊಜ್ಜು ಉಂಟುಮಾಡುತ್ತದೆ ಮತ್ತು ರಕ್ತನಾಳಗಳಲ್ಲಿ ಉರಿ ಅನುಭವವನ್ನೂ ನೀಡುತ್ತದೆ. ನೀರಿನಂಶ ಹೆಚ್ಚಿರುವ ಆಹಾರದ ಸೇವನೆಯಿಂದ ಸಕ್ಕರೆ ಅಂಶ ಹೆಚ್ಚಾಗಿ ಹೊಂದಿರುವ ಚಾಕಲೇಟ್, ಕೇಕ್ ಮುಂತಾದುವನ್ನು ಕಡಿಮೆ ಮಾಡಬೇಕು.
* ಕ್ಯಾಲ್ಸಿಯಂ: ಕ್ಯಾಲ್ಸಿಯಂ ಪೂರಿತ ಆಹಾರವೂ ಕೂಡ ಮುಖದ ಬೊಜ್ಜನ್ನು ಕಡಿಮೆ ಮಾಡುವಲ್ಲಿ ಹೆಚ್ಚು ಸಹಕಾರಿ. ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗುವುದರಿಂದ ಈ ರೀತಿ ಮುಖದಲ್ಲಿ ಬೊಜ್ಜು ಸೇರಿಕೊಳ್ಳಲು ಕಾರಣವಾಗುತ್ತದೆ. ಅದಕ್ಕಾಗಿ ಕ್ಯಾಲ್ಸಿಯಂ ಹೆಚ್ಚಿರುವ ಆಹಾರ ಸೇವನೆ ನಿಮ್ಮ ಡಯಟ್ ಲಿಸ್ಟ್ ನಲ್ಲಿರಲಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
