Latest Updates
-
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು! -
ಆನ್ಲೈನ್ ಸೆಕ್ಸ್ಟಾರ್ಷನ್ ವಂಚನೆ: ಅಪರಿಚಿತ ವಿಡಿಯೋ ಕಾಲ್ ರಿಸೀವ್ ಮಾಡಿದ್ರೆ ಹುಷಾರ್, ಇಲ್ಲಿದೆ ಎಚ್ಚರಿಕೆ! -
ಮಳೆಗಾಲದ ಕಿರಿಕಿರಿ ಬೇಡವೇ? ₹999 ಒಳಗೆ ಸಿಗುವ ಈ ಸ್ಮಾರ್ಟ್ ವಸ್ತುಗಳು ನಿಮ್ಮ ಮನೆಗೆ ಮಸ್ಟ್! -
ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ: ಸುಪ್ರೀಂ ಕೋರ್ಟ್ನಿಂದ ಕಂಪನಿಗಳಿಗೆ ಖಡಕ್ ಎಚ್ಚರಿಕೆ! -
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ನೀವೂ ಡಯಟ್ ಮಾಡ್ತೀರ? ಹಾಗಾದರೆ ಇಲ್ಲೊಮ್ಮೆ ನೋಡಿ

ನಿಮ್ಮ ಡಯಟ್ ಯಶಸ್ವಿಯಾಗಬೇಕಾದರೆ ಕೆಲವೊಂದು ಟಿಪ್ಸ್ ಅಗತ್ಯವಿದೆ.
1. ಡಯಟ್ ಗೆ ಕಾರಣವಿರಲಿ: ನೀವು ಯಾವ ಕಾರಣಕ್ಕಾಗಿ ಡಯಟ್ ಕೈಗೊಂಡಿದ್ದೀರಿ ಎಂಬುದನ್ನು ಮೊದಲು ತಿಳಿದುಕೊಳ್ಳಿ. ತೆಳ್ಳಗಾಗಲು ಬಯಸಿಯೋ ಅಥವಾ ರೋಗಗಳಿಂದ ಮುಕ್ತಗೊಂಡು ದೃಡ ಆರೋಗ್ಯ ಪಡೆಯಲು ಡಯಟ್ ಮಾಡುತ್ತಿದ್ದೀರೋ ಎಂಬುದನ್ನು ಮೊದಲು ನಿರ್ಧರಿಸಿ ಆ ನಂತರ ಅದಕ್ಕೆ ಪೂರಕವಾಗಿ ಆಹಾರಕ್ರಮವನ್ನು ರೂಢಿಸಿಕೊಳ್ಳಿ.
2. ಆಹಾರ ಕ್ರಮದ ಸಂಪೂರ್ಣ ಮಾಹಿತಿಯಿರಲಿ: ನಿಮ್ಮ ಆಹಾರ ಕ್ರಮದಲ್ಲಿ ಎಲ್ಲವನ್ನೂ ತ್ಯಜಿಸಬೇಡಿ. ಡಯಟ್ ಗಾಗಿ ಯಾವುದು ನಿಮಗೆ ಅವಶ್ಯಕ ಮತ್ತು ಅವಶ್ಯಕವಲ್ಲ ಎಂದು ತಿಳಿದು ಡಯಟ್ ಕೈಗೊಳ್ಳಿ. ಪೋಷಕಾಂಶಯುಕ್ತ ಆಹಾರ ನಿಮ್ಮ ಡಯಟ್ ಪಟ್ಟಿಯಲ್ಲಿರಲಿ. ತುಂಬಾ ಕಡಿಮೆ ತಿಂದರೆ ಅದು ನಿಮ್ಮನ್ನು ಅಶಕ್ತಗೊಳಿಸಬಹುದು ಮತ್ತು ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗಬಹುದು. ಹಸಿರು ತರಕಾರಿ, ಹಣ್ಣು, ಸೊಪ್ಪುಗಳು ನಿಮ್ಮ ಡಯಟ್ ನಲ್ಲಿ ಹೆಚ್ಚಿದ್ದಷ್ಟು ಒಳ್ಳೆಯದು.
3. ನೀರಿನ ಪ್ರಾಮುಖ್ಯ ತಿಳಿದುಕೊಳ್ಳಿ: ಪೋಷಕಾಂಶಯುಕ್ತ ಆಹಾರದ ಹೊರತಾಗಿಯೂ ಇನ್ನೊಂದು ಮುಖ್ಯ ಅಂಶ ಡಯಟ್ ನಲ್ಲಿದೆ. ಚೆನ್ನಾಗಿ ನೀರು ಕುಡಿಯುವುದು ಎಲ್ಲ ರೀತಿಯಿಂದಲೂ ಒಳ್ಳೆಯದು. ನೀರು ಚೆನ್ನಾಗಿ ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ. ಊಟವಾದ ಒಂದು ಗಂಟೆ ನಂತರ ಬಿಸಿ ನೀರನ್ನು ಕುಡಿಯುವುದರಿಂದ ಬೇಡದೆ ಇರುವ ಬೊಜ್ಜು ಕರಗಿಹೋಗುತ್ತದೆ. ಡಯಟ್ ನಲ್ಲಿರುವವರು ಅನುಸರಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ ತಿಂದ ನಂತರವೇ ನೀರನ್ನು ಕುಡಿಯಬಾರದು. ಕುಡಿಯಲೇಬೇಕೆಂದಿದ್ದ ಪಕ್ಷದಲ್ಲಿ ಸ್ವಲ್ಪ ಮಾತ್ರ ಕುಡಿಯಿರಿ. ಅರ್ಧ ಅಥವಾ ಒಂದು ಗಂಟೆ ನಂತರ ನೀರನ್ನು ಚೆನ್ನಾಗಿ ಕುಡಿಯಬೇಕು.
4. ಡ್ರೈ ಫ್ರೂಟ್ಸ್ : ಬಾದಾಮಿ, ಪಿಸ್ತಾ ಮತ್ತು ಕಡಲೆಕಾಯಿ ನಿಮ್ಮ ಡಯಟ್ ಭಾಗವಾಗಿರಲಿ. ಡ್ರೈ ಫ್ರೂಟ್ಸ್ ತಿಂದರೆ ಹೆಚ್ಚು ಕ್ಯಾಲೋರಿಗಳನ್ನು ದೇಹಕ್ಕೆ ನೀಡಿ ದಪ್ಪಗಾಗುತ್ತೇವೆ ಎಂಬ ತಪ್ಪು ನಂಬಿಕೆಯಿದೆ. ಆದರೆ ಇವು ಶಕ್ತಿಯುತ ದೇಹಕ್ಕೆ ಅಗತ್ಯವಿರುವ ವಿಟಮಿನ್ಸ್ ಮತ್ತು ಪ್ರೊಟೀನ್ ನೀಡುತ್ತದೆ ಮತ್ತು ಹಸಿವನ್ನೂ ನಿಯಂತ್ರಿಸುತ್ತದೆ.
5. ಇಷ್ಟದ ತಿನಿಸನ್ನು ತಕ್ಷಣವೇ ತ್ಯಜಿಸಬೇಡಿ: ಡಯಟ್ ಕೈಗೊಂಡ ಮಾತ್ರಕ್ಕೆ ನಿಮ್ಮ ಫೇವರೆಟ್ ತಿಂಡಿಯನ್ನು ತಕ್ಷಣವೇ ಬಿಡಬೇಕೆಂಬ ನಿಯಮವೇನೂ ಇಲ್ಲ. ಆದರೆ ಅದು ನಿಮ್ಮ ಆರೋಗ್ಯಕ್ಕೆ ಪೂರಕವಿಲ್ಲದಿದ್ದರೆ ಅದನ್ನು ತಿನ್ನುವ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಿ. ವಾರಕ್ಕೊಮ್ಮೆ ನೀವು ಬಯಸಿದ ತಿಂಡಿಯನ್ನು ಸ್ವಲ್ಪ ಕಡಿಮೆ ತಿಂದರೆ ತೊಂದರೆಯೇನಿಲ್ಲ.
6. ರುಚಿಯಿರಲಿ: ಡಯಟ್ ಗೆ ಅಗತ್ಯವಾದ ಮತ್ತು ನಿಮಗೆ ಇಷ್ಟವೆನಿಸಿದ ಪದಾರ್ಥಗಳನ್ನು ಬೆರೆಸಿ ನಿಮ್ಮ ಆಹಾರವನ್ನು ರುಚಿಕಟ್ಟಾಗಿ ಮಾಡಿಕೊಳ್ಳಬಹುದು. ಡಯಟ್ ಎಂದರೆ ಸಪ್ಪೆ ಮತ್ತು ರುಚಿಯಿಲ್ಲದ್ದು ತಿನ್ನಬೇಕು ಎಂಬುದೇನೂ ಇಲ್ಲ. ಡಯಟ್ ಗೆ ಸಹಾಯ ಮಾಡುವ ಪದಾರ್ಥಗಳನ್ನು ಉಪಯೋಗಿಸಿಕೊಂಡೇ ಆಹಾರವನ್ನು ರುಚಿಯಾಗಿ ತಿನ್ನಬಹುದು.
ಡಯಟ್ ಮಾಡಲು ಪ್ಲಾನ್ ಮಾಡುತ್ತಿರುವವರು ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಡಯಟ್ ಯಶಸ್ವಿಯಾಗುವಂತೆ ಮಾಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications