Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ನಿಮ್ಮ ತಂದೆ ತಾಯಿಗೆ ಯಾವ ಆಹಾರ ಒಳ್ಳೆಯದು?

ಪೌಷ್ಟಿಕತೆ ಕೊರತೆ ಹಿರಿಯ ಪುರುಷರಿಗಳಿಗೆ ಮಾತ್ರವಲ್ಲ ಸ್ತ್ರೀಯರಿಗೂ ಕಾಡುವ ಸಮಸ್ಯೆ. 50 ರ ನಂತರ ಮುಟ್ಟು ನಿಂತ ಮೇಲೆ ಕೈಕಾಲು ನೋವು, ಮೂಳೆ ಕೊರೆತ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ದೈನಂದಿನ ಆಹಾರ ಸೇವನೆ ಕ್ರಮದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಇರುವಷ್ಟು ಕಾಲ ನೆಮ್ಮದಿಯ ಜೀವನ ಸಾಗಿಸಬಹುದು.
* ದೇಹಾಕಾರಕ್ಕೆ ತಕ್ಕಂತೆ ಅಗತ್ಯವಾದ ಆಹಾರವನ್ನು ಮಾತ್ರ ಸೇವಿಸಿ. ನಾಲಗೆ ಚಪಲ ಹೆಚ್ಚಾದರೂ, ತಿನ್ನಲು ಹಲ್ಲು ಗಟ್ಟಿ ಇರಬೇಕು. ಸಮತೋಲನ ಆಹಾರ ಹೊತ್ತು ಹೊತ್ತಿಗೆ ಸರಿಯಾಗಿ ಹೊಟ್ಟೆಗೆ ಬೀಳುತ್ತಿರಬೇಕು. ಬೆಳೆ ಕಾಳು, ಕೆಂಪಕ್ಕಿ ಅನ್ನ, ಆಲೂಗೆಡ್ಡೆ ನಿತ್ಯಬಳಕೆಯಲ್ಲಿರಲಿ.
* ಪ್ರೋಟಿನ್ ಯುಕ್ತ ಮೊಟ್ಟೆ, ಮಾಂಸ, ಮೀನು ಹಾಗೂ ಧಾನ್ಯಗಳು, ಹಣ್ಣು ಹಾಗೂ ತರಕಾರಿ ಸಮಪ್ರಮಾಣದಲ್ಲಿ ಸೇವಿಸಿ
* ಕೊಬ್ಬಿನಾಂಶವುಳ್ಳ ಆಹಾರ, ಅಧಿಕ ಉಪ್ಪು, ಸಕ್ಕರೆ ಸೇವನೆ ನಿಮ್ಮ ಡಯೆಟ್ ಚಾರ್ಟ್ ನ ಹೊರಗಿರಲಿ. ತಿನ್ನುವ ಆಹಾರ ಸಲೀಸಾಗಿ ಅರಗುತ್ತದೆ ಎನ್ನುವ ನಂಬಿಕೆ ಇದ್ದಾರೆ ಮಾತ್ರ ಸೇವಿಸಿ.
* ನಾರು ಬೇರು: ದೇಹಕ್ಕೆ ವಯಸ್ಸಾದಂತೆ, ಪಚನ ಶಕ್ತಿ ಕ್ಷೀಣಿಸುತ್ತದೆ. ನಾರುಯುಕ್ತ ಆಹಾರ ಸೇವನೆ ಅತ್ಯಗತ್ಯ. ಹಸಿರು ತರಕಾರಿ,ಸೊಪ್ಪು, ಧಾನ್ಯಗಳು, ಬೇಳೆ, ಓಟ್ಸ್ ಸೇವಿಸಿ.
* ವಿಟಮನ್ಸ್: ಮನುಷ್ಯ ದೈಹಿಕವಾಗಿ ಬೆಳೆದಂತೆ ಕ್ಯಾಲ್ಸಿಯಂ ಮಟ್ಟ ಕ್ರಮೇಣವಾಗಿ ಕುಸಿಯುತ್ತಾ ಹೋಗುತ್ತದೆ(ಮೂಳೆಗಳಿಗೆ ಶಕ್ತಿ ತುಂಬಲು ಕ್ಯಾಲ್ಸಿಯಂ ಅತ್ಯಗತ್ಯ). ವಯಸ್ಸಾದಂತೆ ಕಾಡುವ Osteoporosis ನಂಥ ಕಾಯಿಲೆ ದೂರಾಗಿಸಲು ಕ್ಯಾಲ್ಸಿಯಂ ಅಧಿಕವಾಗಿರುವ ಆಹಾರ ಸೇವಿಸುವುದು ತುಂಬಾ ಮುಖ್ಯ. ಪ್ರತಿನಿತ್ಯ ಸೂರ್ಯದ ಕಿರಣಗಳನ್ನು ಮೈಮೇಲೆ ಹಾಯಿಸಿಕೊಂಡು ಮಿಟಮನ್ ಡಿ ಪಡೆಯುವುದನ್ನು ಮರೆಯಬೇಡಿ. ಹಾಲು, ಮೊಸರು, ಕೆನೆ, ಮೊಟ್ಟೆ ಬೆಳಗ್ಗೆಯಿಂದ ಸಂಜೆಯೊಳಗೆ ನಿಮ್ಮ ಹೊಟ್ಟೆ ಸೇರಲಿ. ರಾತ್ರಿ ಹೊತ್ತು ಹಾಲು ಕುಡಿಯುವ ಅಭ್ಯಾಸ ಬೇಡ.
* ಕಬ್ಬಿಣಾಂಶ: ಅನಿಮಿಯಾ, ರಕ್ತದ ತಟ್ಟೆಗಳು ಮುಂತಾದ ರಕ್ತ ಸಂಬಂಧಿ ಕಾಯಿಲೆಗಳು ಕೂಡಾ ವಯೋವೃದ್ಧರನ್ನೇ ಹೆಚ್ಚಾಗಿ ಬಾಧಿಸುತ್ತದೆ. ಹಾಗಾಗಿ ಕಬ್ಬಿಣಾಂಶವುಳ್ಳ ಮಾಂಸ, ಮೀನು ಹಾಗೂ ತರಕಾರಿ ಸೇವಣೆ ಅತ್ಯಗತ್ಯ. ನಿಮ್ಮ ಆರ್ ಬಿಸಿ ಸಂಖ್ಯೆ ಬಗ್ಗೆ ವೈದ್ಯರಿಂದ ಕೇಳಿ ತಿಳಿದು, ರಕ್ತಕಣಗಳ ವೃದ್ಧಿಗೆ ಪೂರಕವಾದ ಆಹಾರ ಸೇವಿಸಿ.
* Folic acid: ದೇಹಕ್ಕೆ ಫೋಲಿಕ್ ಆಮ್ಲ ಅತಿ ಮುಖ್ಯ. ಫೋಲಿಕ್ ಆಮ್ಲ ಕೊರತೆ ಎದುರಾದರೆ ಜೀವಕೋಶಕ್ಕೆ ಹಾನಿ. ಫೋಲಿಕ್ ಆಮ್ಲ ಕಮ್ಮಿಯಾದರೆ, ಹೃದ್ರೋಗ, ಕ್ಯಾನ್ಸರ್, ಸ್ಥೂಲಕಾಯ, ನೆನಪಿನ ಶಕ್ತಿ, ದೇಹಾಲಸ್ಯ, ಅಲರ್ಜಿ, ಸಂತಾನ ನಿಷ್ಫಲ, ಚರ್ಮರೋಗ ಸೇರಿದಂತೆ ಹತ್ತು ಹಲವು ಕಾಯಿಲೆಗಳಿಗೆ ದಾರಿಯಾಗುತ್ತದೆ. ಪಾಲಕ್ ಸೊಪ್ಪು, ಮೊಟ್ಟೆ, ಸೂರ್ಯಕಾಂತಿ ಬೀಜ, ಹಣ್ಣಿನ ರಸ, ಬೀನ್ಸ್ ಮುಂತಾದ ಧಾನ್ಯಗಳಲ್ಲಿ ಫೋಲಿಕ್ ಆಮ್ಲ ಹೇರಳವಾಗಿ ದೊರೆಯುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
