Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಮಧುಮೇಹಿಗಳು ಈ 18 ರುಚಿಕರ ಆಹಾರವನ್ನು ಯಾವುದೇ ಭಯವಿಲ್ಲದೆ ಸೇವಿಸಬಹುದು
ಮಧುಮೇಹ ಬಂದರೆ ಅಯ್ಯೋ ಇನ್ಮುಂದೆ ರುಚಿಯಾದ ಆಹಾರ ಸವಿಯುವಂತಿಲ್ಲ ಎಂಬ ಚಿಂತೆ ಕೆಲವರಿಗೆ ಕಾಡುತ್ತದೆ, ಆದರೆ ಅದು ತಪ್ಪು ಕಲ್ಪನೆ, ಏಕೆಂದರೆ ಮಧುಮೇಹ ಬಂದರೆ ಕೆಲವೊಂದು ಆಹಾರಗಳನ್ನು ತಿನ್ನಬಾರದಷ್ಟೇ, ಉಳಿದಂತೆ ಬಾಯಿ ರುಚಿಗೆ ಮೋಸ ಮಾಡಬೇಕೆಂದಿಲ್ಲ. ನೀವು ರುಚಿ ರುಚಿಯಾದ ಆಹಾರವನ್ನು ಸವಿಯಬಹುದು. ನಿಮ್ಮ ಬಾಯಿ ರುಚಿಯನ್ನು ಹೆಚ್ಚಿಸಲು ಕೆಲವೊಂದು ಆಹಾರಗಳ ಬಗ್ಗೆ ಹೇಳಿದ್ದೇವೆ, ಇದನ್ನು ನೀವು ಧೈರ್ಯವಾಗಿ ಸವಿಯಬಹುದು ನೋಡಿ:

ತರಕಾರಿಗಳು
ಸೊಪ್ಪು: ಸೊಪ್ಪಿನಿಂದ ನೀವು ರುಚಿ ರುಚಿಯಾದ ಖಾದ್ಯಗಳನ್ನು ತಯಾರಿಸಬಹುದು. ನೀವು ಸೊಪ್ಪಿನಿಂದ ಖಾದ್ಯಗಳನ್ನು ಧೈರ್ಯವಾಗಿ ಸವಿಯಬಹುದು. ಏಕೆಂದರೆ ಇದರಲ್ಲಿ ಸಕ್ಕರೆಯಂಶ ಹೆಚ್ಚಿಸುವ ಗ್ಲೈಸೆಮಿಕ್ ಇಂಡೆಕ್ಸ್ 0.
ಹೂಕೋಸು: ಈ ಬಗೆಯ ತರಕಾರಿಗಳು ಅಂದರೆ ಬ್ರೊಕೋಲಿ, ಹೂಕೋಸು, ಎಲೆಕೋಸು ಈ ಬಗೆಯ ತರಕಾರಿಗಳಿಂದ ಖಾದ್ಯವನ್ನು ತಯಾರಿಸಬಹುದು.
ದುಂಡು ಮೆಣಸು: ಕೆಂಪು, ಹಳದಿ, ಹಸಿರು ದುಂಡು ಮೆಣಸು ಇವುಗಳನ್ನು ಸವಿಯುವುದು ಒಳ್ಳೆಯದು. ಇದರಲ್ಲಿ ವಿಟಮನ್ ಸಿ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
ಶತಾವರಿ: ಈ ತರಕಾರಿ ಗಿಡಮೂಲಿಕೆಯೂ ಹೌದು, ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ಫೋಲೆಟ್, ಪೊಟಾಷ್ಯಿಯಂ ಅಧಿಕವಿದೆ.
ಯಾವ ಹಣ್ಣುಗಳು ಒಳ್ಳೆಯದು
ಬೆರ್ರಿ: ಬೆರ್ರಿ ಹಣ್ಣುಗಳನ್ನು ರುಚಿಯಾಗಿ ಸವಿಯಬಹುದು. ನೀವು ಬ್ಲೂಬೆರ್ರಿ, ರಾಸ್‌ಬೆರ್ರಿ, ಸ್ಟ್ರಾಬೆರ್ರಿ ಇವುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಸಿಟ್ರಸ್ ಹಣ್ಣು: ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಅಧಿಕವಿದೆ, ಆದ್ದರಿಂದ ಈ ಹಣ್ಣುಗಳನ್ನು ಮಧುಮೇಹಿಗಳು ಸವಿಯಬಹುದು.
ಪಿಯರ್ಸ್ ಮತ್ತು ಸೇಬು: ಮಧುಮೇಹಿಗಳು ಪಿಯರ್ಸ್ ಮತ್ತು ಸೇಬು ಹಣ್ಣುಗಳನ್ನು ಮಧುಮೇಹಿಗಳು ಮಿತಿಯಲ್ಲಿ ಸವಿಯಬಹುದು.
ಕಿವಿ ಹಣ್ಣು: ಹುಳಿ-ಸಿಹಿ ಮಿಶ್ರಿತ ಹಣ್ಣಿನಲ್ಲ ವಿಟಮಿನ್ ಸಿ ಅಧಿಕವಿರಲಿದೆ. ಇದನ್ನು ಮಧುಮೇಹಿಗಳು ಧೈರ್ಯವಾಗಿ ಸವಿಯಬಹುದು.
ಧಾನ್ಯಗಳು
ನವಣೆ: ಮದುಮೇಹಿಗಳು ನವಣೆಯ ಆಹಾರ ಸೇವನೆ ಮಾಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕೆಂಪಕ್ಕಿ: ಕೆಂಪಕ್ಕಿಯಲ್ಲಿ ನಾರಿನಂಶ ಅಧಿಕವಿರುತ್ತದೆ, ಆದ್ದರಿಂದ ಕೆಂಪಕ್ಕಿ ಅನ್ನ ಸವಿಯಬಹುದು.
ಓಟ್ಸ್: ಓಟ್ಸ್ ರುಚಿಕರವಲ್ಲದ ಆಹಾರ ಎಂದು ಕೆಲವರು ಭಾವಿಸುತ್ತಾರೆ, ಆದರೆ ಓಟ್ಸ್‌ನಿಂದಲೂ ರುಚಿ ರುಚಿಯಾದ ಆಹಾರ ಮಾಡಿ ಸವಿಯಿರಿ.
ಬಾರ್ಲಿ: ಬಾರ್ಲಿಯನ್ನು ಸವಿಯುವುದು ಕೂಡ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.
ರಾಗಿ: ಮಧುಮೇಹಿಗಳು ರಾಗಿಯಿಂದ ತಯಾರಿಸಿದ ಆಹಾರ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.
ಪ್ರೊಟೀನ್ಸ್
ಚಿಕನ್, ಮೀನು: ನೀವು ಚಿಕನ್, ಮೀನಿನ ಆಹಾರ ಸೇವಿಸಬಹುದು.
ಬೀನ್ಸ್: ಬೀನ್ಸ್‌ನಲ್ಲಿಯೂ ಪ್ರೊಟೀನ್ ಅಧಿಕವಿದೆ.
ಟೋಫು: ಟೋಫು ಕೂಡ ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ.
ಆರೋಗ್ಯಕರ ಕೊಬ್ಬಿನಂಶ
ಬೆಣ್ಣೆಹಣ್ಣು: ಇದರಲ್ಲಿ ಆರೋಗ್ಯಕರ ಕೊಬ್ಬಿನಂಶ, ನಾರಿನಂಶ, ಪೊಟಾಷ್ಯಿಯಂ ಇದ್ದು ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ
* ನಟ್ಸ್: ಬಾದಾಮಿ, ವಾಲ್ನಟ್, ಪಿಸ್ತಾ ಹೀಗೆ ನಟ್ಸ್ ಸೇವಿಸಿ
ಆಲೀವ್ ಎಣ್ಣೆ: ಮಧುಮೇಹಿಗಳು ಅಡುಗೆಗೆ ಆಲೀವ್ ಎಣ್ಣೆ ಬಳಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications