Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 9 ಟಿಪ್ಸ್ ಅನುಸರಿಸಿ ನೋಡಿ ಖಂಡಿತ ಮಧುಮೇಹ ನಿಯಂತ್ರಣದಲ್ಲಿರುತ್ತೆ
ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ, ಈ ಆರೋಗ್ಯ ಸಮಸ್ಯೆ ವಂಶವಾಹಿಯಾಗಿ ಬರುವುದಾದರೂ ಹೆಚ್ಚಿನವರಿಗೆ ಜೀವನಶೈಲಿಯಿಂದಾಗಿ ಬರುತ್ತಿದೆ. ತುಂಬಾ ಚಿಕ್ಕ ಪ್ರಾಯದಲ್ಲಿಯೇ ಮಧುಮೇಹದ ಸಮಸ್ಯೆ ಕಂಡು ಬರುತ್ತಿದೆ. ಕೆಲವರು ಮಧುಮೇಹವಿದೆ ಎಂದು ಗೊತ್ತಾಗಾದಾಗ ತುಂಬಾ ಗಾಬರಿ ಬೀಳುತ್ತಾರೆ. ಈ ರೀತಿ ಗಾಬರಿಯಿಂದಲೇ ಆರೋಗ್ಯ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳುವವವರೇ ಅಧಿಕ.
ಮಧುಮೇಹ ಒಂದು ಆರೋಗ್ಯ ಸಮಸ್ಯೆ, ಇದನ್ನು ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಾಗದೇ ನೀವು ಮನಸ್ಸು ಮಾಡಿದರೆ ನಿಯಂತ್ರಣದಲ್ಲಿ ಖಂಡಿತ ಇಡಬಹುದು, ಮಧುಮೇಹ ನಿಯಂತ್ರಣದಲ್ಲಿಟ್ಟರೆ ಮತ್ತೆ ಮಧುಮೇಹದ ಚಿಂತೆ ಏಕೆ ಅಲ್ವಾ? ಹೌದು, ನಿಮ್ಮಿಂದ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯನೇ ಇಲ್ಲ ಎಂದು ನೀವು ಭಾವಿಸಿದ್ದರೆ ಅದು ತಪ್ಪು, ಏಕೆಂದರೆ ಜೀವನದಲ್ಲಿ ಈ ಬದಲಾವಣೆ ಮಾಡಿದರೆ ಖಂಡಿತ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.
ನಿಮಗೆ ಮಧುಮೇಹವಿದ್ದರೆ ಈ 9 ಟಿಪ್ಸ್ ಟ್ರೈ ಮಾಡಿ ನೋಡಿ ಖಂಡಿತ:

1. ಪ್ರತಿದಿನ ವ್ಯಾಯಾಮ ಮಾಡಿ
ನಿಮ್ಮ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಕೆಲವೊಂದು ವ್ಯಾಯಾಮ ಅತ್ಯವಶ್ಯಕವಾಗಿದೆ. ನೀವು ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮಾಡಲೇಬೇಕು. ವಾಕಿಂಗ್, ಸೈಕ್ಲಿಂಗ್, ಜಾಗಿಂಗ್, ಯೋಗ, ಜಿಮ್ ಹೀಗೆ ಯಾವುದಾದರೂ ಸರಿ ಅರ್ಧ ಗಂಟೆ ವ್ಯಾಯಾಮ ಮಾಡಿ. ಅದರಲ್ಲೂ ನೀವೇ ಕೂತೇ ಕೆಲಸ ಮಾಡುವವರಾದರೆ ದೈಹಿಕ ವ್ಯಾಯಾಮದ ಕಡೆ ಗಮನ ನೀಡಿ.

2. ಸಾಕಷ್ಟು ನೀರು ಕುಡಿಯಿರಿ
ಮಧುಮೇಹಿಗಳು ಆಗಾಗ ಮೂತ್ರ ವಿಸರ್ಜನೆಗೆ ಹೋಗ್ತಾ ಇರುತ್ತಾರೆ. ಆದ್ದರಿಂದಾಗಿ ಅವರ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು. ಈ ಕಾರಣಕ್ಕೆ ಮಧುಮೇಹಿಗಳಿಗೆ ವಿಪರೀತ ಬಾಯಾರಿಕೆ ಇರುತ್ತದೆ. ಅದನ್ನು ತಡೆಗಟ್ಟಲು ಸಾಕಷ್ಟು ನೀರು ಕುಡಿಯಬೇಕು. ಆದರೆ ತಂಪು ಪಾನೀಯಗಳು, ಸಕ್ಕರೆ ಹಾಕಿರುವ ಪಾನೀಯಗಳಿಂದ ದೂರವಿರಿ.

3. ಚೆನ್ನಾಗಿ ತಿನ್ನಿ
ಇನ್ನು ಮಧುಮೇಹವಿದೆ ಎಂದ ತಕ್ಷಣ ಕೆಲವರು ಸಂಪೂರ್ಣ ಪಥ್ಯ ಆಹಾರ ಸೇವಿಸಬೇಕೆಂದೇ ಭಾವಿಸುತ್ತಾರೆ. ಅದು ತಪ್ಪು ನೀವು ರುಚಿಯಾದ ಆಹಾರ ತಿನ್ನಬಾರದು ಎಂದೇನಿಲ್ಲ, ಬದಲಿಗೆ ಕಾರ್ಬ್ಸ್ ಕಡಿಮೆ ಇರುವ ಆಹಾರ ತಿನ್ನಬೇಕಷ್ಟೇ. ನೀವು ತಿನ್ನುವ ಆಹಾರದಲ್ಲಿ ಸಿಹಿ ಬೇಡ, ಕಾರ್ಬ್ಸ್ ಬೇಡ, ಇರುವುದಾದರೂ ಸ್ವಲ್ಪವೇ ಸ್ವಲ್ಪ ಸಾಕು. ನಾರಿನಂಶ, ಪ್ರೊಟೀನ್ ಅಧಿಕವಿರಬೇಕು. ಗ್ಲುಟೀನ್ ಫ್ರೀ ಆಹಾರ ಒಳ್ಳೆಯದು.

4. ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಿ
ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು ಮೈ ತೂಕ ನಿಯಂತ್ರಣದಲ್ಲಿರಬೇಕಾಗುತ್ತೆ. ವರ್ಕೌಟ್ ಹಾಗೂ ಆಹಾರಶೈಲಿಯಿಂದ ಮೈ ತೂಕವನ್ನು ನಿಯಂತ್ರಣದಲ್ಲಿಡಬಹುದು.

5. ಧ್ಯಾನ ಬಿಡಬೇಡಿ
ಇನ್ನು ಮಾನಸಿಕ ಒತ್ತಡ ಕೂಡ ದೇಹದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು. ಆದ್ದರಿಂದ ದಿನದಲ್ಲಿ 15 ನಿಮಿಷ ಧ್ಯಾನ ಮಾಡಿ. ನಾಡಿ ಶುದ್ಧಿ, ಪ್ರಾಣಯಾಮ ಮಾಡಿ. ಧ್ಯಾನ ಮಾಡುವುದರಿಂದ ಮಾನಸಿಕ ಒತ್ತಡ ತುಂಬಾ ಕಡಿಮೆಯಾಗುವುದು.

6. ಮದ್ಯಪಾನ ಹಾಗೂ ಕೆಫೀನ್ ಮುಕ್ತರಾಗಿ
ಮದ್ಯಪಾನ ಮಾಡಬೇಡಿ, ಕೆಫೀನ್ ಆಹಾರಗಳಿಂದ ದೂರವಿರಿ. ಅದರಲ್ಲೂ ಮಲಗುವ ಮುನ್ನ ಇಂಥವುಗಳನ್ನು ಮುಟ್ಟಲೇಬೇಡಿ, ಇದರಿಂದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು. ಅಪರೂಪಕ್ಕೆ ಕುಡಿದರೆ ತೊಂದರೆಯಿಲ್ಲ.

7. ಬಿಸಿಲಿನಲ್ಲಿ ತುಂಬಾ ಹೊತ್ತು ನಿಲ್ಲಬೇಡಿ
ತುಂಬಾ ಹೊತ್ತು ಬಿಸಿಲಿನಲ್ಲಿ ನಿಂತರೆ ನಿಮಗೆ ಆಗಿ ಬರಲ್ಲ, ಏಕೆಂದರೆ ಇದರಿಂದ ನಿಮ್ಮ ರಕ್ತದಲ್ಲಿ ಸಕ್ಕರೆಯಂಶ ಮೇಲೆ ಪ್ರಭಾವ ಬೀರುತ್ತೆ. ಬಿಸಿಲಿನಲ್ಲಿ ತುಂಬಾ ಓಡಾಡಬೇಡಿ. ಬಿಸಿಲಿನಲ್ಲಿ ಹೋಗುವುದಾದರೆ ಕೊಡೆ ಹಿಡಿಯಿರಿ ಅಥವಾ ಟೋಪಿ ಅಥವಾ ವೇಲ್ ಧರಿಸಿ.

8. ಚೆನ್ನಾಗಿ ನಿದ್ದೆ ಮಾಡಿ
ಆರೋಗ್ಯಕ್ಕಾಗಿ ಒಳ್ಳೆಯ ನಿದ್ದೆ ಕೂಡ ಮುಖ್ಯ. ತುಂಬಾ ನಿದ್ದೆ ಕೆಡಬೇಡಿ. ದಿನದಲ್ಲಿ 8 ಗಂಟೆ ನಿದ್ದೆ ಮಾಡಿ. ಯಾವುದೋ ಸಮಯಕ್ಕೆ ಮಲಗುವುದು, ಯಾವುದೋ ಸಮಯಕ್ಕೆ ಏಳುವುದು ಬಿಡಿ, ಅದರಲ್ಲಿ ಒಂದನ್ನು ಶಿಸ್ತನ್ನು ತನ್ನಿ.

9. ನಿಯಮಿತವಾಗಿ ಶುಗರ್ ಟೆಸ್ಟ್ ಮಾಡಿ
ನಿಮ್ಮ ದೇಹದ ರಕ್ತದಲ್ಲಿ ಎಷ್ಟು ಸಕ್ಕರೆಯಂಶವಿದೆ ಎಂದು ತಿಳಿಯಲು ಶುಗರ್ ಟೆಸ್ಟ್ ಮಾಡಿಸಿ, ಶುಗರ್ ಟೆಸ್ಟ್ ಕಿಟ್‌ಗಳು ದೊರೆಯುತ್ತದೆ, ನೀವು ಮನೆಯಲ್ಲಿಯೇ ಪರೀಕ್ಷೆ ಮಾಡಿ ನೋಡಬಹುದು. ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದರೆ ಅದರ ಲಕ್ಷಣ ಗೋಚರಿಸುವುದು ತುಂಬಾ ಸುಸ್ತು ಅನಿಸುವುದು ತಡಮಾಡದೆ ವೈದ್ಯರನ್ನು ಕಂಡು ಸಲಹೆ ಪಡೆಯಿರಿ.
ಈ ಇಷ್ಟು ಟಿಪ್ಸ್ ಪಾಲಿಸಿ ನೋಡಿ ಮಧುಮೇಹ ನಿಯಂತ್ರಣದಲ್ಲಿಡುವುದು ದೊಡ್ಡ ವಿಷಯವೇನಲ್ಲ ಎಂದು ನಿಮಗೇ ತಿಳಿಯುತ್ತೆ.



Click it and Unblock the Notifications