Latest Updates
-
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ಮಧುಮೇಹ ನಿಯಂತ್ರಣಕ್ಕೆ ನೆಲ್ಲಿಕಾಯಿ ಹೇಗೆ ಬಳಸಬೇಕು?
ಮಧುಮೇಹ ಎನ್ನುವುದು ಇತರ ಕಾಯಿಲೆಗಳಿಗಿಂತ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಕೆಲ ದಶಕದ ಹಿಂದೆ ಕೆಲವೇ ಜನರಿಗೆ ಕಾಡುತ್ತಿದ್ದ ಸಮಸ್ಯೆ ಈಗ ಸರ್ವೇಸಾಮಾನ್ಯ ಎಂಬಂತೆ ಹೆಚ್ಚಿನವರನ್ನು ಕಾಡುತ್ತಿದೆ.
ಇದು ವಂಶಪಾರಂಪರ್ಯವಾಗಿ ಬರುತ್ತದೆ ಹಾಗೂ ಜೀವನಶೈಲಿಯಿಂದಲೂ ಬರುವುದು. ಮಧುಮೇಹ ಬಂದ ಮೇಲೆ ಅದನ್ನು ನಿಯಂತ್ರಣದಲ್ಲಿ ಇಡಬಹುದೇ ಹೊರತು ಸಂಪೂರ್ಣ ಗುಣಮುಖರಾಗಲು ಸಾಧ್ಯವಿಲ್ಲ.
ಮಧುಮೇಹ ಬಂದವರು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿ ಇಟ್ಟರೆ ಇತರರಂತೆ ಆರೋಗ್ಯಕರ ಜೀವನ ನಡೆಸಬಹುದಾಗಿದೆ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಹಲವು ಮನೆಮದ್ದುಗಳಿವೆ, ಅದರಲ್ಲೊಂದು ನೆಲ್ಲಿಕಾಯಿ.
ನೆಲ್ಲಿಕಾಯಿ ಮಧುಮೇಹ ನಿಯಂತ್ರಣಕ್ಕೆ ಹೇಗೆ ಸಹಕಾರಿ, ಹೇಗೆ ಸೇವಿಸಬೇಕು ಎಂಬುವುದು ಇಲ್ಲಿ ಹೇಳಲಾಗಿದೆ ನೋಡಿ:

ನೆಲ್ಲಿಕಾಯಿಯ ಪ್ರಯೋಜನಗಳು
ನೆಲ್ಲಿಕಾಯಿಯನ್ನು ನಾವು ಭಾರತೀಯರು ಹಲವಾರು ರೀತಿಯಲ್ಲಿ ಬಳಸುತ್ತೇವೆ, ಇದರಿಂದ ಉಪ್ಪಿನಕಾಯಿ ಹಾಕಿದರಂತೂ ಆಹಾ.. ಎಷ್ಟು ರುಚಿ. ಇನ್ನು ಉಪ್ಪಿನಲ್ಲಿ ಹಾಕಿ ಸವಿಯುತ್ತೇವೆ. ಆಮ್ಲ ಜ್ಯೂಸ್ ಸಿಗುತ್ತೆ, ಇದರ ಪುಡಿ ಕೂಡ ಇದೆ.'

ಇದನ್ನು ತಿನ್ನುವುದರಿಂದ ದೊರೆಯುವ ಪ್ರಯೋಜನಗಳೆಂದರೆ
* ಇನ್ಸುಲಿನ್ ಮೇಧೋಜೀರಕ ಗ್ರಂಥಿಯಲ್ಲಿ ಉಂಟಾಗುತ್ತದೆ. ಮೇಧೋಜೀರಕ ಗ್ರಂಥಿಯಲ್ಲಿ ಉರಿಯೂತ ಉಂಟಾದಾಗ ಇನ್ಸುಲಿನ್ ವಿಭಜಿಸುವ ಖಣಗಳಿಗೆ ಹಾನಿಯುಂಟಾಗಿ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು. ನೆಲ್ಲಿಕಾಯಿ ಮೇಧೋಜೀರಕ ಗ್ರಂಥಿ ಸರಿಯಾಗಿ ಕರ್ಯ ನಿರ್ವಹಿಸುವಂತೆ ಮಾಡುತ್ತದೆ.
* ಆಮ್ಲದಲ್ಲಿ ಕ್ರೋಮಿಯಂ ಎಂಬ ಖನಿಜಾಂಶ ಅಂಶವಿದೆ. ಇದು ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಗೆ ತುಂಬಾ ಸಹಕಾರಿಯಾಗಿದೆ.
* ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಇದ್ದು , ವಿಟಮಿನ್ ಸಿ ಮಧುಮೇಹ ನಿಯಂತ್ರಣಕ್ಕೆ ತುಂಬಾನೇ ಸಹಕಾರಿ ಎಂದು Archives of Internal Medicineನಲ್ಲಿ ಪ್ರಕಟವಾದ ಅಧ್ಯಯನ ವರದಿ ಹೇಳಿದೆ.
* ಇನ್ನು ಮಾನಸಿಕ ಒತ್ತಡ ಕೂಡ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗಲು ಒಂದು ಕಾರಣವಾಗಿದೆ. ಇದನ್ನು ತಡೆಗಟ್ಟುವಲ್ಲಿಯೂ ನೆಲ್ಲಿಕಾಯಿ ಸಹಕಾರಿಯಾಗಿದೆ.

ಮಧುಮೇಹ ನಿಯತ್ರಣಕ್ಕೆ ನೆಲ್ಲಿಕಾಯಿ ಬಳಸುವುದು ಹೇಗೆ?
* 2 ನೆಲ್ಲಿಕಾಯಿ
* 2-3 ತುಳಸಿ ಎಲೆ
* 1 ಲೋಟ ನೀರು
* ರಾತ್ರಿ ನೆಲ್ಲಿಕಾಯಿಯನ್ನು ಕತ್ತರಿಸಿ ಒಂದು ಲೋಟ ನೀರಿನಲ್ಲಿ ಹಾಕಿ, ಜೊತೆಗೆ ತುಳಸಿ ಎಲೆಯೂ ಹಾಕಿಡಿ.
* ಬೆಳಗ್ಗೆ ಎದ್ದು ಆ ನೀರನ್ನು ಕುಡಿಯಿರಿ. ಇದನ್ನು ಬ್ರೇಕ್‌ಫಾಸ್ಟ್‌ಗೆ ಮುಂಚೆ ಸೇವಿಸಬೇಕು.

ಈ ರೀತಿಯೂ ಬಳಸಬಹುದು
* ನೆಲ್ಲಿಕಾಯಿಯನ್ನು ಹಾಗೇ ತಿಂದು ನಂತರ ನೀರು ಕುಡಿಯಿರಿ.
* ಆಮ್ಲ ಜ್ಯೂಸ್ ಸಿಗುತ್ತದೆ, ಇದನ್ನು ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಮುಂಚೆ ಒಂದು ಲೋಟ ಕುಡಿಯಿರಿ.
* ನೆಲ್ಲಿಕಾಯಿ ಪುಡಿ ಸಿಗುತ್ತದೆ, ಇದನ್ನು ಒಂದು ಲೋಟ ನೀರಿನಲ್ಲಿ ಹಾಕಿ ಸೇವಿಸಬಹುದು.
ಏನಾದರೂ ಅಡ್ಡಪರಿಣಾವಿದೆಯೇ?
ನೆಲ್ಲಿಕಾಯಿ ತಿನ್ನುವುದರಿಂದ ಯಾವುದೇ ಅಡ್ಡಪರಿಣಾಮವಿಲ್ಲ, ಆದರೂ ನೀವು ಔಷಧ ರೀತಿಯಲ್ಲಿ ಬಳಸುವಾಗ ವೈದ್ಯರ ಸಲಹೆ ಪಡೆಯಿರಿ. ನೆಲ್ಲಿಕಾಯಿ ತಿನ್ನುವುದರಿಂದ ದೊರೆಯುವ ಮತ್ತೆ ಕೆಲ ಪ್ರಯೋಜನಗಳೆಂದರೆ ಕಣ್ಣಿನ ಆರೊಗ್ಯ , ತ್ವಚೆ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ಮೂತ್ರ ಸೋಂಕಿನ ಸಮಸ್ಯೆಯೂ ಕಾಡುವುದಿಲ್ಲ.



Click it and Unblock the Notifications