Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಮನೆಮದ್ದು: ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಿಸಲು ಸೀಬೆಕಾಯಿ ಎಲೆಗಳನ್ನು ಹೇಗೆ ಬಳಸಬೇಕು?
ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಜನರನ್ನು ಕಾಡುತ್ತಿರುವ ಸಮಸ್ಯೆಯೆಂದರೆ ಮಧುಮೇಹ. ವಿಶ್ವದಲ್ಲಿ ಮಧುಮೇಹಿಗಳ ಸಂಖ್ಯೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. 4-5 ದಶಕಗಳ ಹಿಂದೆ ಭಾರತದಲ್ಲಿ ತುಂಬಾ ಅಪರೂಪವಾಗಿದ್ದ ಮಧುಮೇಹ, ಇದೀಗ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರತಿಯೊಂದು ಮನೆಯಲ್ಲಿ ಮಧುಮೇಹಿಗಳಿದ್ದಾರೆ. ಬದಲಾಗಿದ ಜೀವನಶೈಲಿ ಹಾಗೂ ಆಹಾರಶೈಲಿ ಮಧುಮೇಹಕ್ಕೆ ಪ್ರಮುಖ ಕಾರಣವಾಗಿದೆ.

ಮಧುಮೇಹ ಒಮ್ಮೆ ಬಂದರೆ ಅದನ್ನು ನಿಯಂತ್ರಿಸಬಹುದೇ ಹೊರತು ಅದರಿಂದ ಸಂಪೂರ್ಣ ಗುಣಮುಖರಾಗಲು ಸಾಧ್ಯವಿಲ್ಲ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ನಮ್ಮ ಪರಿಸರದಲ್ಲಿರುವ ಅನೇಕ ಸಸ್ಯಗಳು ಸಹಕಾರಿ. ಉದಾಹರಣೆಗೆ ಅಮೃತ ಬಳ್ಳಿ, ಕಹಿಬೇವು , ಸೀಬೆಕಾಯಿ ಎಲೆ ಮುಂತಾದೆವುಗಳು...
ಈ ಲೇಖನದಲ್ಲಿ ಸೀಬೆಕಾಯಿ ಎಲೆ ಮಧುಮೇಹ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲಿ ಹೇಗೆ ಸಹಕಾರಿ, ಇದನ್ನು ಹೇಗೆ ಬಳಸಬೇಕು, ಏನಾದರೂ ಅಡ್ಡಪರಿಣಾಮವಿದೆಯೇ ಎಂಬುವುದನ್ನು ವಿವರವಾಗಿ ಹೇಳಲಾಗಿದೆ ನೋಡಿ:

ಸೀಬೆಕಾಯಿ ಎಲೆ ಮಧುಮೇಹ ನಿಯಂತ್ರಣಕ್ಕೆ ಪರಿಣಾಮಕಾರಿಯೇ?
ಸೀಬೆಕಾಯಿ ಎಲೆಯನ್ನು ಹಲವು ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಹಿಂದಿನಿಂದಲೂ ಬಳಸುತ್ತಾ ಬಂದಿದ್ದಾರೆ. ಜ್ವರ, ಬೇಧಿ, ಉರಿಯೂತ ಇಂಥ ಸಮಸ್ಯೆಗಳಿಗೆ ಇದನ್ನು ಮನೆಮದ್ದಾಗಿ ಬಳಸಲಾಗುವುದು. ಸೀಬೆಕಾಯಿ ಎಲೆಯನ್ನು ಮಧುಮೇಹ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಬಳಸಬಹುದು.
ಮಧುಮೇಹ ನಿಯಂತ್ರಣಕ್ಕೆ ಸೀಬೆಕಾಯಿ ಎಲೆ ಪರಿಣಾಮಕಾರಿ ಎಂಬುವುದು ಅಧ್ಯಯನಗಳಿಂದಲೂ ಸಾಬೀತಾಗಿದೆ. Nutrition and Metabolism ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯು ಸೀಬೆಕಾಯಿ ಎಲೆ ಊಟದ ಬಳಿಕ ದೇಹದ ರಕ್ತದಲ್ಲಿ ಸಕ್ಕರೆಯಂಶ ತಡೆಗಟ್ಟಲು ಸಹಕಾರಿ ಎಂದು ಹೇಳಿದೆ.

ಮಧುಮೇಹಿಗಳಲ್ಲಿ ಈ ಸಮಸ್ಯೆಗಳನ್ನು ತಡೆಗಟ್ಟುತ್ತೆ
ಊಟವಾದ ಬಳಿಕ ಸೀಬೆಕಾಯಿ ಎಲೆ ಹಾಕಿ ಕುದಿಸಿದ ನೀರನ್ನು ಕುಡಿದರೆ ಮಧುಮೇಹಿಗಳಲ್ಲಿ ಕಂಡು ಬರುವ ಹೈಪರ್ಗ್ಲೈಸೀಮಿಯಾ, ಹೈಪರ್ಇನ್ಸುಲಿನೆಮಿಯಾ, ಇನ್ಸುಲಿನ್ ಪ್ರತಿರೋಧ ಹಾಗೂ ಹೈಪರ್ಲಿಪಿಡೆಮಿಯಾ ಲಕ್ಷಣಗಳನ್ನು ತಡೆಗಟ್ಟಲು ಸಹಕಾರಿ. ಇದು ಮಧುಮೇಹವನ್ನು ನಿಯಂತ್ರಿಸುವುದು ಮಾತ್ರವಲ್ಲ ಕೆಟ್ಟ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುವುದು.

ಸೀಬೆಕಾಯಿ ಎಲೆಯ ನೀರು ಕುಡಿಯುವುದರಿಂದ ಏನಾದರೂ ಅಡ್ಡಪರಿಣಾಮವಿದೆಯೇ?
ಸೀಬೆಕಾಯಿ ಎಲೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂಬುವುದು ಅಧ್ಯಯನಗಳಿಂದಲೂ ಸಾಬೀತಾಗಿದೆ. ಸೀಬೆಕಾಯಿ ಎಲೆಯಲ್ಲಿ ಯಾವುದೇ ವಿಷಾಂಶಗಳಿಲ್ಲ ಎಂಬುವುದು ಸಾಬೀತಾಗಿದೆ.

ಸೀಬೆಕಾಯಿ ಎಲೆಯನ್ನು ಬಳಸುವುದು ಹೇಗೆ?
* ಸ್ವಲ್ಪ ಎಲೆಗಳನ್ನು ಕಿತ್ತು ತಂದು ತೊಳೆದು ಸ್ವಚ್ಛ ಮಾಡಿ.
* ನಂತರ 2 ಕಪ್ ನೀರು ಹಾಕಿ ಕುದಿಸಿ.
* ನಂತರ ಸೋಸಿ ಊಟವಾದ ಬಳಿಕ ಕುಡಿಯಿರಿ.
ನೆನಪಿಡಿ: ಈ ಮನೆಮದ್ದು ಕೆಲ ಮಧುಮೇಹಿಗಳಲ್ಲಿ ಯಾವುದೇ ಪರಿಣಾಮ ಬೀರದೇ ಇರಬಹುದು. ನಿಮ್ಮ ಸಕ್ಕರೆಯಂಶ ಎಷ್ಟಿದೆ ಎಂದು ನಿಯಮಿತವಾಗಿ ಪರೀಕ್ಷಿಸಿ ವೈದ್ಯರ ಸಲಹೆ ಸೂಚನೆ ಪಡೆಯಿರಿ.
ಸೀಬೆಕಾಯಿ ಎಲೆ ಬೇಧಿ, ಹೊಟ್ಟೆ ನೋವು, ಮಧುಮೇಹ, ಗಾಯ ಒಣಗಲು, ಕೊಲೆಸ್ಟ್ರಾಲ್ ನಿಯಂತ್ರಿಸಲು ಅತ್ಯುತ್ತಮವಾದ ಮನೆಮದ್ದಾಗಿದೆ.
ಸೀಬೆಕಾಯಿ ಎಲೆ ಹಾಕಿದ ಟೀ ಕುಡಿಯುವುದರಿಂದ ಬೇಧಿ ನಿಲ್ಲುತ್ತೆ. ಕೆಮ್ಮು, ಕಫ ಕಡಿಮೆಯಾಗುವುದು, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ, ಮಧುಮೇಹ ನಿಯಂತ್ರಣದಲ್ಲಿರುತ್ತದೆ ಅಲ್ಲದೆ ಕ್ಯಾನ್ಸರ್ ಕಣಗಳು ಉಂಟಾಗುವುದನ್ನು ತಡೆಯುವುದು.



Click it and Unblock the Notifications
