Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಮಧುಮೇಹಿಗಳು ಸೇವಿಸಬಹುದಾದ 7 ಸಿಹಿ ಹಣ್ಣುಗಳು
ರಕ್ತದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾಗಿ ಇನ್ಸುಲಿನ್ ಉತ್ಪತ್ತಿಯು ಕಡಿಮೆಯಾದಾಗ ಮಧುಮೇಹವು ದೇಹವನ್ನು ಆವರಿಸಿಕೊಳ್ಳುತ್ತದೆ. ಮಧುಮೇಹವೆಂದರೆ ಸ್ಲೋ ಪಾಯ್ಸನ್ ಎನ್ನಬಹುದು. ಯಾಕೆಂದರೆ ಇದು ನಿಧಾನವಾಗಿಯೇ ದೇಹವನ್ನು ಕೊಲ್ಲುತ್ತಿರುತ್ತದೆ. ಆದರೆ ಮಧುಮೇಹಿಗಳು ಕೂಡ ಕಠಿಣ ಆಹಾರ ಕ್ರಮ ಅಳವಡಿಸಿಕೊಂಡರೆ ಇದನ್ನು ನಿಯಂತ್ರಣದಲ್ಲಿಡಬಹುದು. ಮಧುಮೇಹಿಗಳು ತಮ್ಮ ಆಹಾರ ಕ್ರಮದಲ್ಲಿ ಹಲವಾರು ರೀತಿಯ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಮಧುಮೇಹ ನಿಯಂತ್ರಿಸುವ ಪವರ್-ಮೆಂತೆ ಕಾಳಿನಲ್ಲಿದೆ!
ಹೆಚ್ಚಿಗೆ ಸಿಹಿ ತಿನ್ನುವುದು, ಅತಿಯಾಗಿ ತಿನ್ನುವುದು ಮಧುಮೇಹಿಗಳಿಗೆ ವರ್ಜ್ಯ. ಮಧುಮೇಹಿಗಳು ಪಥ್ಯ ಮಾಡಿಕೊಂಡರೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಹೆಚ್ಚು ಕಷ್ಟವಿಲ್ಲ. ಇಲ್ಲವೆಂದಾದರೆ ಸಕ್ಕರೆ ಅಂಶವು ಮಿತಿಮೀರಿ ಸಮಸ್ಯೆಗೆ ತುತ್ತಾಗಬೇಕಾಗುತ್ತದೆ. ಆದರೆ ಮಧುಮೇಹಿಗಳು ಹೆಚ್ಚಾಗಿ ಕೇಳುವಂತಹ ಪ್ರಶ್ನೆಯೆಂದರೆ ಹಣ್ಣುಗಳನ್ನು ತಿನ್ನಬಹುದೇ? ಯಾಕೆಂದರೆ ಹಣ್ಣುಗಳಲ್ಲಿಯೂ ಸಕ್ಕರೆ ಅಂಶವು ಇದ್ದೇ ಇರುತ್ತದೆ. ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ- ನುಗ್ಗೆ ಸೊಪ್ಪು
ಮಧುಮೇಹಿಗಳು ಹಣ್ಣುಗಳನ್ನು ತಿನ್ನಬಹುದಾದರೂ ಕೆಲವೊಂದು ಹಣ್ಣುಗಳನ್ನು ತಿನ್ನುವ ಮೊದಲು ಯೋಚಿಸಬೇಕು. ಅದರಲ್ಲು ಮಾವಿನ ಹಣ್ಣುಗಳಿಂದ ಮಧುಮೇಹಿಗಳು ಆದಷ್ಟು ದೂರವಿರುವುದೇ ಲೇಸು, ಅಲ್ಲದೆ ಸಕ್ಕರೆ ಮಟ್ಟವು (200ಎಂಜಿ/ಡಿಎಲ್) ಇದ್ದರೆ ಇದನ್ನು ದೂರವಿಡಲೇಬೇಕು. ಮಧುಮೇಹಿಗಳು ಯಾವ ಹಣ್ಣುಗಳನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬಹುದು ಎನ್ನುವ ಬಗ್ಗೆ ಇಲ್ಲಿ ವಿವರಗಳನ್ನು ನೀಡಿದ್ದೇವೆ ಮುಂದೆ ಓದಿ....

ಸೇಬು
ಮಧ್ಯಮ ಗಾತ್ರದ ಸೇಬು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಯಾಕೆಂದರೆ ಇದರಲ್ಲಿ ಕಡಿಮೆ ಕ್ಯಾಲರಿ, ಜಿಐ ಇದೆ ಮತ್ತು ನಾರಿನಾಂಶ ಅಧಿಕವಾಗಿದೆ. ಕೆಂಪು ಸೇಬಿಗಿಂತ ಹಸಿರು ಸೇಬು ಮಧುಮೇಹಿಗಳಿಗೆ ಒಳ್ಳೆಯದು.

ಕಿತ್ತಳೆ ಹಣ್ಣು
ಕಿತ್ತಳೆಯಲ್ಲಿ ವಿಟಮಿನ್ ಸಿ ಮತ್ತು ನಾರಿನಾಂಶವು ಹೇರಳವಾಗಿದೆ. ಇದು ರಕ್ತದ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಿ ಇನ್ಸುಲಿನ್ ಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿ ಹೆಸ್ಪೆರೆಟಿನ್ ಎನ್ನುವ ಅಂಶವಿದೆ. ಇದು ಬೊಜ್ಜನ್ನು ಕಡಿಮೆ ಮಾಡಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಒಂದು ಸಣ್ಣ ಗಾತ್ರದ ಕಿತ್ತಳೆ ಅಥವಾ ಕಿತ್ತಳೆಯ 5-6 ಭಾಗಗಳನ್ನು ತಿನ್ನಬಹುದು.

ಜಾಮೂನು
ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡಲು ದಿನದಲ್ಲಿ 5-6 ಜಾಮೂನುಗಳನ್ನು ತಿನ್ನಿ. ಜಾಮೂನಿನಲ್ಲಿ ಜಿಐ ಕಡಿಮೆ ಇರುವುದು ಮಾತ್ರವಲ್ಲದೆ ಗ್ಲುಕೋಸೈಡ್ ಕೂಡ ಒಳಗೊಂಡಿದೆ. ಇದು ರಕ್ತದಲ್ಲಿ ಗ್ಲೂಕೋಸ್ ಅನ್ನು ನಿಯಂತ್ರಣದಲ್ಲಿಡುತ್ತದೆ.

ಪಪ್ಪಾಯಿ
ಪಪ್ಪಾಯಿ ಸಿಹಿ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವ ಕಾರಣದಿಂದ ಹೆಚ್ಚಿನ ಮಧುಮೇಹಿಗಳು ಇದನ್ನು ಕಡೆಗಣಿಸುತ್ತಾರೆ. ಆದರೆ ಒಂದು ತುಂಡು ಪಪ್ಪಾಯಿ ಅಥವಾ ಸಣ್ಣ ಪಿಂಗಾಣಿಯಲ್ಲಿ ಪಪ್ಪಾಯಿ ತುಂಡುಗಳನ್ನು ತಿಂದರೆ ಪೋಷಕಾಂಶಗಳು ಸಿಗುವುದು.

ಸೀಬೆಹಣ್ಣು
ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಸೀಬೆಹಣ್ಣಿನಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ತುಂಬಿ ಹೋಗಿವೆ. ಇದು ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ನಾರಿನಾಂಶ ಅಧಿಕವಾಗಿರುವ ಮತ್ತು ಗ್ಲೈಸೆಮಿಕ್ ಕಡಿಮೆ ಇರುವ ಹಣ್ಣಾಗಿರುವ ಇದು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.

ಬಾಳೆಹಣ್ಣು
ಮಧ್ಯಮ ಗಾತ್ರದ ಬಾಳೆಹಣ್ಣು ಇದ್ದರೆ ಕೇವಲ ಅರ್ಧ ಮಾತ್ರ ತಿಂದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಮಧುಮೇಹವು ನಿಯಂತ್ರಣದಲ್ಲಿ ಇರದಿದ್ದರೆ ಮತ್ತು ಕಳೆದ ಮೂರು ತಿಂಗಳಿಂದ ರಕ್ತದಲ್ಲಿನ ಸಕ್ಕರೆ ಅಂಶವು ಸ್ಥಿರವಾಗಿಲ್ಲವೆಂದಾದರೆ ಬಾಳೆಹಣ್ಣು ತಿನ್ನುವುದನ್ನು ಬಿಡಿ.

ಸ್ಟ್ರಾಬೆರಿ
ಒಂದು ಕಪ್ ಅಥವಾ ಒಂದು ಪಿಂಗಾಣಿ(180 ಗ್ರಾಂ) ಸ್ಟ್ರಾಬೆರಿ ಸೇವಿಸಬಹುದು. ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ, ನಾರಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಇದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ.



Click it and Unblock the Notifications