Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಇವೇ ಮಧುಮೇಹದ ಮೊದಲ ಸೂಚನೆಗಳು ನಿರ್ಲಕ್ಷಿಸಬೇಡಿ
ಒಂದು ಕಾಲದಲ್ಲಿ ಕೇವಲ ಶ್ರೀಮಂತರ ಕಾಯಿಲೆಯಾಗಿದ್ದ ಮಧುಮೇಹ ಇಂದು ಬಡವ ಬಲ್ಲಿದ, ಹಿರಿಯ ಕಿರಿಯನೆಂಬ ಭೇದ ಪರಿಗಣಿಸದೇ ಎಲ್ಲರನ್ನೂ ಆವರಿಸುತ್ತಿದೆ. ಅದರಲ್ಲೂ ಭಾರತೀಯರಲ್ಲಿ ಎಪ್ಪತ್ತರ ದಶಕದಲ್ಲಿ ಅಪರೂಪವಾಗಿದ್ದ ಸಕ್ಕರೆ ಕಾಯಿಲೆ ಇಂದು ಕಾಳಜಿಗೆ ಕಾರಣವಾಗಿದೆ. ಅಲ್ಲದೇ ವಿದೇಶಗಳಲ್ಲಿರುವ ಭಾರತೀಯರಿಗೂ ಮಧುಮೇಹ ಹೆಚ್ಚಿನ ಪ್ರಮಾಣದಲ್ಲಿರುವುದು ಆತಂಕಕಾರಿಯಾಗಿದೆ. ಇದಕ್ಕೆ ಕಾರಣವನ್ನು
ಹುಡುಕಿದರೆ ಲಭ್ಯವಾದ ಸೌಲಭ್ಯಗಳ ಕಾರಣದಿಂದಾಗಿ ದೈಹಿಕ ಚಟುವಟಿಕೆ ಕಡಿಮೆಯಾಗಿರುವು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ ತಜ್ಞರು ಈ ವಾದವನ್ನು ಸುಲಭವಾಗಿ ಒಪ್ಪದೆ ಇತರ ಕಾರಣಗಳನ್ನೂ ಹೆಸರಿಸುತ್ತಾರೆ. ಅನುವಂಶೀಯ ಕಾರಣಗಳು ಮಧುಮೇಹಕ್ಕೆ ಪ್ರಮುಖವಾದರೆ, ಒತ್ತಡ, ಆಹಾರ ಸೇವನೆಯ ಅಭ್ಯಾಸ, ಆಹಾರದಲ್ಲಿ ನಾರಿನ ಕೊರತೆ, ನಡುರಾತ್ರಿಯ ಊಟ ಮೊದಲಾದವು ಇತರ ಕಾರಣಗಳಾಗಿವೆ. ತುರಿಕೆಯ ಸಮಸ್ಯೆಯೇ? ಮಧುಮೇಹದ ಸಂಜ್ಞೆಯಾಗಿರಬಹುದು!
ಮಧುಮೇಹ ಎಂದರೆ ನಮ್ಮ ಆಹಾರದ ಮೂಲಕ ಸೇವಿಸುವ ಸಕ್ಕರೆಯನ್ನು ಬಳಸಿಕೊಳ್ಳಲು ಸಾಧ್ಯವಾಗದಿರುವ ಅಸಹಾಯಕತೆ ಎಂದು ಸುಲಭ ಪದಗಳಲ್ಲಿ ಹೇಳಬಹುದು. ಇದಕ್ಕೆ ಮುಖ್ಯ ಕಾರಣ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಎಂಬ ಕಿಣ್ವ. ಮೇದೋಜೀರಕ ಗ್ರಂಥಿ ಸ್ರವಿಸುವ ಈ ಕಿಣ್ವ ಸಕ್ಕರೆಯನ್ನು ಹೀರಿಕೊಳ್ಳಲು ತುಂಬಾ ಅಗತ್ಯ. ಒಂದು ವೇಳೆ ನಮ್ಮ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗದೇ ಇದ್ದರೆ ಆಗ ಸಕ್ಕರೆ ಬಳಸಲ್ಪಡದೇ ಮೂತ್ರದ ಮೂಲಕ ಹಾಗೇ ಹೊರಹೋಗುತ್ತದೆ.
ಇದಕ್ಕೆ ಟೈಪ್ 1 ಮಧುಮೇಹ ಎಂದು ಕರೆಯುತ್ತಾರೆ. ಅದೇ ಒಂದು ವೇಳೆ ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗಿಯೂ ಬಳಸಲ್ಪಡಲು ಅಸಮರ್ಥವಾದರೆ ಇದಕ್ಕೆ ಟೈಪ್ 2 ಮಧುಮೇಹ ಎಂದು ಕರೆಯುತ್ತಾರೆ. ಇನ್ನು ಮಧುಮೇಹ ಆವರಿಸುವ ವೇಳೆಯಲ್ಲಿ ಇತರ ಸಂಜ್ಞೆಗಳು ಕೂಡ ನಿಮ್ಮಲ್ಲಿ ಕಂಡು ಬರುತ್ತದೆ, ಬನ್ನಿ ಅಂತಹ ಸಂಜ್ಞೆಗಳು ಯಾವುದು ಎಂಬುದನ್ನು ಮುಂದೆ ಓದಿ...

ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕೆನಿಸುತ್ತದೆ
ಸಾಮಾನ್ಯ ಮನುಷ್ಯರು ದಿನಕ್ಕೆ 4 ರಿಂದ 7 ಬಾರಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಮಧುಮೇಹಿಗಳು ಇದಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಏಕೆಂದರೆ ಮಧುಮೇಹವು ನಿಮ್ಮ ಆಹಾರದಲ್ಲಿರುವ ಸಕ್ಕರೆ ಅಂಶವನ್ನು ವಿಘಟನೆ ಮಾಡಲು ವಿಫಲವಾಗುತ್ತದೆ ಅಥವಾ ಕಡಿಮೆ ವಿಘಟನೆ ಮಾಡುತ್ತದೆ. ನಿಮ್ಮ ದೇಹವು ಅಧಿಕ ಸಕ್ಕರೆಯನ್ನು ಮೂತ್ರದ ರೂಪದಲ್ಲಿ ವಿಸರ್ಜನೆ ಮಾಡುತ್ತದೆ. ನೀವು ರಾತ್ರಿ ಮತ್ತು ಹಗಲು ಎಂಬ ವ್ಯತ್ಯಾಸವಿಲ್ಲದೆ ಪದೇ ಪದೇ ಮೂತ್ರ ವಿಸರ್ಜನೆ ಮಾಡಲು ಹೋಗುತ್ತಿದ್ದರೆ, ಅದು ಮಧುಮೇಹದ ಒಂದು ಸೂಚನೆಯಾಗಿರಬಹುದು ಎಂದು ಭಾವಿಸಬೇಕಾಗುತ್ತದೆ.

ನಿದ್ದೆ ಮಾಡುವಾಗ ಸಹ ಅಧಿಕ ಬಾಯಾರಿಕೆಯಾಗುತ್ತದೆ
ರಕ್ತದಲ್ಲಿ ಅಧಿಕ ಸಕ್ಕರೆ ಅಂಶ ಕಂಡು ಬಂದಾಗ ನಿಮ್ಮ ದೇಹದಲ್ಲಿ ದ್ರವವು ಕಡಿಮೆಯಾಗುತ್ತದೆ. ಆಗ ನಿಮ್ಮ ದೇಹವು ನಿರ್ಜಲೀಕರಣ ಸಮಸ್ಯೆ ಕಂಡು ಬರುತ್ತದೆ. ಆಗ ನಿಮಗೆ ಅಧಿಕ ಬಾಯಾರಿಕೆ ಕಂಡು ಬರುತ್ತದೆ. ಆಗಾಗ ನೀವು ನೀರು ಕುಡಿಯುತ್ತಲೆ ಇರುತ್ತೀರಿ, ಕುಡಿಯಲೇ ಬೇಕು ಅನಿಸುತ್ತದೆ.

ಊಟವಾದ ನಂತರ ಸಹ ಹಸಿವಾಗುತ್ತದೆ
ಈಗ ತಾನೇ ತಿಂದರು ನಿಮಗೆ ಹೊಟ್ಟೆ ಹಸಿಯುತ್ತದೆ ಎಂದರೆ ಅದು ಒಂದು ಗಂಭೀರ ಸಮಸ್ಯೆಯೇ. ಏಕೆಂದರೆ ಮಧುಮೇಹಿಗಳ ದೇಹದಲ್ಲಿ ಇರುವ ಇನ್ಸುಲಿನ್ ಅನ್ನು ಸರಿಯಾಗಿ ಬಳಸಿಕೊಂಡು ಅದನ್ನು ಗ್ಲೂಕೋಸ್ ಆಗಿ ಪರಿವರ್ತಿಸಲು ದೇಹ ವಿಫಲವಾಗುತ್ತದೆ. ಹಾಗಾಗಿ ರಕ್ತದಲ್ಲಿರುವ ಇನ್ಸುಲಿನ್ ಏರಿಕೆಯಾಗುತ್ತದೆ. ಇನ್ಸುಲಿನ್ ಅಧಿಕವಾದರೆ ಮೆದುಳಿಗೆ ಹಸಿವಿನ ಸಂದೇಶ ರವಾನೆಯಾಗುತ್ತದೆ. ಇದರಿಂದಾಗಿ ನೀವು ಹಸಿವಿನ ಪರಿಣಾಮವನ್ನು ಎದುರಿಸುತ್ತೀರಿ. ಅದರಲ್ಲೂ ಊಟವಾದ ತಕ್ಷಣ ಹಸಿವಾಗುತ್ತದೆ ಎಂದರೆ ನೀವು ನಂಬಬೇಕು. ಊಟದ ತಕ್ಷಣ ಹಸಿವಾಗುತ್ತದೆ ಎಂದರೆ ಅದು ಮಧುಮೇಹದ ಒಂದು ಸೂಚನೆಗಳಲ್ಲಿ ಒಂದಾಗಿರುತ್ತದೆ.

ದೃಷ್ಟಿ ಮಂದವಾಗುವಿಕೆ
ದೃಷ್ಟಿ ಮಂದವಾಗುವಿಕೆಯು ಮಧುಮೇಹದ ಒಂದು ಸಮಸ್ಯೆಗಳಲ್ಲಿ ಒಂದಾಗಿರುತ್ತದೆ. ರಕ್ತದಲ್ಲಿ ಅಧಿಕ ಗ್ಲೂಕೋಸ್ ಕಂಡುಬಂದಾಗ, ಅದು ದೇಹದ ಕೋಶಗಳಲ್ಲಿರುವ ದ್ರವವನ್ನು ಹೊರದಬ್ಬುತ್ತದೆ. ಆಗ ಕಣ್ಣಿನಲ್ಲಿರುವ ಕೋಶಗಳು ಸಹ ಊದಿಕೊಳ್ಳುತ್ತವೆ. ಕಣ್ಣಿನ ಮಸೂರವು ಇದರಿಂದ ಹಾನಿಗೊಳಗಾಗುತ್ತದೆ. ಆಗ ಕಣ್ಣಿನ ಸಾಮರ್ಥ್ಯವು ಕುಂದುತ್ತದೆ ಮತ್ತು ದೃಷ್ಟಿ ಮಂದವಾಗುವಿಕೆ ಸಮಸ್ಯೆ ಕಂಡು ಬರುತ್ತದೆ.

ಕೈ ಮತ್ತು ಕಾಲುಗಳು ಮರಗಟ್ಟುವಿಕೆ
ಮಧುಮೇಹಿಗಳಲ್ಲಿ ಕೈ ಮತ್ತು ಕಾಲುಗಳು ಮರಗಟ್ಟುವಿಕೆಯು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳಲ್ಲಿ ಒಂದಾಗಿರುತ್ತದೆ. ರಕ್ತದಲ್ಲಿ ಕಾಣಿಸಿಕೊಳ್ಳುವ ಅಧಿಕ ಸಕ್ಕರೆ ಅಂಶವು ನರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿ, ಅವುಗಳನ್ನು ಹಾನಿ ಮಾಡುತ್ತದೆ. ಆಗ ಕೈ ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆಯ ಪರಿಣಾಮವನ್ನು ಕಾಣುತ್ತೇವೆ.



Click it and Unblock the Notifications