Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಮಧುಮೇಹಿಗಳಿಗೆ ಮೂತ್ರ ಪರೀಕ್ಷೆ ಅಗತ್ಯತೆ ಏನು?

ಮಧುಮೇಹಿಗಳು ಸಾಮಾನ್ಯವಾಗಿ ಪಾಲಿಸಬೇಕಾದ ಗುರಿಗಳೇನು?
ಮೇಲ್ಕಂಡ ಕೋಷ್ಟಕದಲ್ಲಿ ಸೂಚಿಸಿರುವ ಗುರಿಗಳು ವೈಯಕ್ತಿಕವಾಗಿ ಬದಲಾವಣೆಗೆ ಒಳಪಟ್ಟಿರುತ್ತದೆ. ವ್ಯಕ್ತಿಯ ವಯಸ್ಸು, ದೇಹ ಸ್ಥಿತಿ ಹಾಗೂ Low sugar (Hypoglycemia) ಬಗ್ಗೆ ತಿಳುವಳಿಕೆ ಕೂಡಾ ಗಣನೆ ಬರುತ್ತದೆ.
|
ಗರ್ಭಿಣಿಯರಲ್ಲಿ ಮಧುಮೇಹ ಪರೀಕ್ಷೆ ವಿಭಿನ್ನ ಹೇಗೆ?
ಹೌದು, ಗರ್ಭಿಣಿಯರಿಗೆ ಮಧುಮೇಹ ಪರೀಕ್ಷೆ ಹಾಗೂ ಚಿಕಿತ್ಸಾ ವಿಧಾನ ಕೊಂಚ ಭಿನ್ನವಾಗಿರುತ್ತದೆ. ಸಕ್ಕರೆ ಕಾಯಿಲೆಯುಳ್ಳ ಗರ್ಭಿಣಿಯರು ಹೆಚ್ಚಿನ ಕಾಳಜಿವಹಿಸುವುದು ಅಗತ್ಯ. ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಮತೋಲನ ಆಹಾರ ಕ್ರಮ, ಮಿತವಾದ ದೈಹಿಕ ವ್ಯಾಯಾಮ ಕೂಡ ಅವಶ್ಯ.
ಸಿಹಿ ಮೂತ್ರ ಪರೀಕ್ಷೆ ಅಗತ್ಯತೆ ಏನು?
ಮೂತ್ರದಲ್ಲಿನ ಸಕ್ಕರೆ ಪ್ರಮಾಣ ತಿಳುವಳಿಕೆ ಕೂಡ ಅಗತ್ಯ. ರಕ್ತದಲ್ಲಿನ ಸಕ್ಕರೆ ಪ್ರಮಾಣ 180 mg ಗಿಂತ ಅಧಿಕವಾದಾಗ ಮೂತ್ರದಲ್ಲಿ ಸಕ್ಕರೆ ಅಂಶ ಕಂಡು ಬರುತ್ತದೆ. ರಕ್ತದಲ್ಲಿನ ಗ್ಲುಕೋಸ್ ಪ್ರಮಾಣ ತಿಳಿದ ತಕ್ಷಣ ಮೂತ್ರ ಪರೀಕ್ಷೆ ಮಾಡಿಸಿಕೊಂಡರೆ ಅರ್ಥವಿಲ್ಲದ ಕಾರ್ಯವಾಗುತ್ತದೆ. ರಕ್ತ ಪರೀಕ್ಷೆ ಸಾಧ್ಯವಾಗದಿದ್ದಾಗ, ಮೂತ್ರ ಪರೀಕ್ಷೆ ಅಗತ್ಯ ಹೆಚ್ಚಾಗಿ ಕಂಡು ಬರುತ್ತದೆ. ಮೂತ್ರದಲ್ಲಿನ ಸಕ್ಕರೆ ಪ್ರಮಾಣ ತಿಳಿಯಲು ಸ್ಟಿಪ್ ಗಳು ಲಭ್ಯವಿದೆ. ಇದರಲ್ಲಿ 'nil' ಎಂದು ಸೂಚಿಸಿದರೆ ಸಕ್ಕರೆ ಪ್ರಮಾಣ 180mg ಕಡಿಮೆ ಎಂದರ್ಥ. ಆದರೆ, ಎಷ್ಟು ಪ್ರಮಾಣದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿದೆ ಎಂಬುದನ್ನು ಸೂಚಿಸುವುದಿಲ್ಲ. Low Sugar (Hypoglycaemia) ಪರೀಕ್ಷೆ ಮಾಡಲು ಇದರಿಂದ ಸಾಧ್ಯವಿಲ್ಲ. ಆದರೆ, ಮೂತ್ರದಲ್ಲಿ ಸಕ್ಕರೆ ಪ್ರಮಾಣ ಯಾವಾಗಲೂ ಋಣಾತ್ಮಕ ಅಂಶದಲ್ಲೇ ಇರುವಂತೆ ನಿಯಂತ್ರಿಸುವುದು ಒಳಿತು.
ಇಂಜೆಕ್ಷನ್, ಇನ್ಸುಲಿನ್ ಇಲ್ಲದೆ ಬ್ಲಡ್ ಶುಗರ್ ಪರೀಕ್ಷೆ ಸಾಧ್ಯವೇ?
ಸಾಧ್ಯಕ್ಕಂತೂ ಸಾಧ್ಯವಿಲ್ಲ. ಆದರೆ ಮುಂದೊಂದು ದಿನ ಅದು ಕೂಡಾ ಸಾಧ್ಯವಾಗಬಹುದು. ಇನ್ಸುಲಿನ್ ಅಂದರೆ ಏನು ಎಂದು ಜನ ಅರಿಯದಿದ್ದ ಕಾಲವಿತ್ತು. ಆದರೆ, ಈಗ, ರೋಗಿಗಳು ಸ್ವತಃ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವುದನ್ನು ಕಾಣಬಹುದು. ಜ್ವರ ಪರೀಕ್ಷೆ ಮಾಡುವಂತೆ, ರೋಗಿಯ ಎಂಜಲು, ಬೆವರು ಅಥವಾ ಅತಿ ಕಡಿಮೆ ಪ್ರಮಾಣ ನೋವು(micro puncture) ನೀಡಿ ದೇಹದ ಸಕ್ಕರೆ ಪ್ರಮಾಣ ತಿಳಿವುದರ ಬಗ್ಗೆ ಸಂಶೋಧನೆ ಆರಂಭವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications