Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಮುಧುಮೇಹಿಗಳಿಗೆ ಯಾವ ಇನ್ಸುಲಿನ್ ಒಳ್ಳೆಯದು

ಯಾವ ಇನ್ಸುಲಿನ್ ಹಿತವು ಎನಗೆ?
ಎರಡು ಬಗೆ ಪ್ರಾಣಿಜನ್ಯ ಇನ್ಸುಲಿನ್ ಲಭ್ಯವಿದೆ, ಒಂದು ಬೊವೈನ್(bovine) ಇನ್ನೊಂದು ಪೊಸೈನ್(porcine).ಮಾನವ ಇನ್ಸುಲಿನ್ ಗಿಂತ ರಚನೆಯಲ್ಲಿ ಇವು ಕೊಂಚ ಭಿನ್ನವಾಗಿದೆ. ಇನ್ಸುಲಿನ್ ಸೇವನೆ ನಂತರದ ಪರಿಣಾಮದ ವಿಷಯಕ್ಕೆ ಬಂದರೆ, ಮಾನವ ಇನ್ಸುಲಿನ್ ನಿಂದ ಅಲರ್ಜಿ ಉಂಟಾಗುವ ಸಾಧ್ಯತೆಗಳು ತುಂಬಾ ವಿರಳ. ಆದರೆ, ಪ್ರಾಣಿಜನ್ಯ ಇನ್ಸುಲಿನ್ ನಿಂದ ಅಲರ್ಜಿ ಉಂಟಾಗಬಹುದು. ಪ್ರಾಣಿಜನ್ಯ ಇನ್ಸುಲಿನ್ ಬಳಕೆ ಹೆಚ್ಚಲು ಅದರ ದರ ಕಾರಣವಾಗಿತ್ತು. ಆದರೆ, ಈ ನಡುವೆ ಮಾನವ ಇನ್ಸುಲಿನ್ ಬೆಲೆ ಇಳಿಮುಖ ಕಂಡಿದ್ದು, ಪ್ರಾಣಿಜನ್ಯ ಇನ್ಸುಲಿನ್ ಬಳಕೆ ತಗ್ಗುತ್ತಿದೆ.
ಇನ್ಸುಲಿನ್ ಪೆನ್ ಉಪಯೋಗಗಳೇನು?
ಪೆನ್ ಇನ್ಸುಲಿನ್ ಎಲ್ಲೆಡೆ ಕೊಂಡೊಯ್ಯಲು ಸುಲಭ. ಉದ್ಯೋಗ ನಿರತ ಜನರಿಗೆ ಇದೊಂದು ಉಪಯುಕ್ತ ಸಾಧನ. ಅದೇ ಇನ್ಸುಲಿನ್ ಅನ್ನು ಬೇರೊಂದು ವಿಧಾನದಲ್ಲಿ ಸಂಗ್ರಹಿಸಿ, ತೆಗೆದುಕೊಳ್ಳಲಾಗುತ್ತದೆ. ಸಾಮಾನ್ಯ ಸಿರೆಂಜ್ ಇನ್ಸುಲಿನ್ ಗಿಂತ ಕೊಂಚ ದುಬಾರಿಯಾದರೂ ಪೆನ್ ಇನ್ಸುಲಿನ್ ಬಳಕೆ ಹೆಚ್ಚುತ್ತಿದೆ.
ಇಂಜೆಕ್ಷನ್ ತೆಗೆದುಕೊಳ್ಳುವುದು ಮರೆತರೆ ಏನು ಗತಿ?
ಗಾಬರಿಯಾಗುವುದು ಬೇಡ. ಮರೆವು ಮಾನವನ ಸಹಜ ಗುಣ. ಆದರೆ, ಹೆಚ್ಚಿನ ಡೋಸೆಜ್ ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ನಿಮ್ಮ ಇಂಜೆಕ್ಷನ್ ತೆಗೆದುಕೊಳ್ಳುವ ವೇಳಾಪಟ್ಟಿಯಲ್ಲಿ ತುಂಬಾ ಬದಲಾವಣೆ ಕಂಡು ಬಂದರೆ, ಸಕ್ಕರೆ ಪ್ರಮಾಣ ಚೆಕ್ ಮಾಡಿಸಿಕೊಂಡು ನಂತರ ಇಂಜೆಕ್ಷನ್ ತೆಗೆದುಕೊಳ್ಳಲು ಆರಂಭಿಸುವುದರಿಂದ ಸರಿಯಾದ ಇನ್ಸುಲಿನ್ ಪ್ರಮಾಣ ದೇಹಕ್ಕೆ ಸೇರುತ್ತದೆ.
ಡಯಾಬಿಟಿಸ್ ಗೆ ಹೊಸ ವೈದ್ಯಕೀಯ-ಚಿಕಿತ್ಸಾ ಪದ್ಧತಿ ಇದೆಯೇ?
ಮಧುಮೇಹಕ್ಕೆ ಹೊಸ ಔಷಧಿ ಕಂಡು ಹಿಡಿಯುವ ಸಂಶೋಧನೆ ನಿರಂತರವಾಗಿ ಸಾಗಿದೆ. incretin ಕುಟುಂಬ ವರ್ಗಕ್ಕೆ ಸೇರಿದ ಹೊಸ ಔಷಧಿ ಲಭ್ಯವಿದೆ. ಊಟದ ನಂತರ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣ ಏರಿಕೆಗೂ ಮುನ್ನ islets of Langerhans ನ ಬೀಟಾ ಸೆಲ್ ಗಳಿಂದ ಉತ್ಪತ್ತಿಯಾಗುವ ಇನ್ಸುಲಿನ್ ಗಳ ಪ್ರಮಾಣವ ನ್ನು gastrointestinal ಹಾರ್ಮೋನ್ ಗಳಾದ Incertin ಗಳು ಹೆಚ್ಚಿಸುತ್ತವೆ. ಹೆಚ್ಚಿನ ಆಹಾರ ಸೇವನೆಗೆ ಕಡಿವಾಣ ಹಾಕುವುದಲ್ಲದೆ, ರಕ್ತದಲ್ಲಿನ ಗ್ಲುಕೋಸ್ ಪ್ರಮಾಣ ನಿಯಂತ್ರಣಕ್ಕೆ ಸಹಾಯಕವಾಗಿದೆ. GLP1analogue ಹೆಸರಿನ ಈ ಔಷಧಿಯನ್ನು ಕೂಡಾ ಇಂಜೆಕ್ಷನ್ ಮೂಲಕ ತೆಗೆದುಕೊಳ್ಳಬಹುದಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications