Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ತೂಕ ಇಳಿಸಿಕೊಳ್ಳಬೇಕಾ? ಹಾಗಾದ್ರೆ ನಿತ್ಯ ಈ ತಿಂಡಿಗಳನ್ನು ತಿನ್ನಿ!
ಹೆಚ್ಚಿನ ಜನ ಊಟದ ಹೊರತಾಗಿ ತಿಂಡಿಗಳನ್ನು ತಿನ್ನೋದಕ್ಕೆ ತುಂಬಾನೇ ಇಷ್ಟ ಪಡುತ್ತಾರೆ. ಬಿಡುವಿನ ಸಮಯದಲ್ಲಂತೂ ಬಾಯಿ ಸುಮ್ಮನೆ ಇರೋದೇ ಇಲ್ಲ. ಏನಾದ್ರೂ ಸರಿ ತಿಂತಿರ್ತೀವಿ. ಆದರೆ ನಿಮಗೊತ್ತಾ ಹೀಗೆ ನೀವು ಬಾಯಿಗೆ ರುಚಿಸುತ್ತೆ ಅಂತ ತಿನ್ನುವ ಆಹಾರಗಳಲ್ಲಿ ಕ್ಯಾಲೊರಿ ಅಧಿಕ ಪ್ರಮಾಣದಲ್ಲಿರುತ್ತದೆ. ಹಾಗೂ ಪೋಷಕಾಂಶ ಕಡಿಮೆ ಪ್ರಮಾಣದಲ್ಲಿರುತ್ತದೆ.
ಹೀಗಾಗಿ ಏಕಾ ಏಕಿ ನಿಮ್ಮ ತೂಕ ಜಾಸ್ತಿಯಾಗುವ ಸಾಧ್ಯತೆಗಳಿದೆ. ಹೀಗಾಗಿ ಏನಾದ್ರು ತಿನ್ನಬೇಕು ಅನ್ನಿಸಿದಾಗ ಈ ತಿಂಡಿಗಳನ್ನು ತಿನ್ನಿರಿ. ಇದ್ರಲ್ಲಿ ಹೆಚ್ಚಿನ ಪೋಷಕಾಂಶವಿದ್ದು ತೂಕ ಇಳಿಸಲು ಸಹಾಯಕಾರಿಯಾಗಿದೆ. ಅಷ್ಟಕ್ಕು ಯಾವುದು ತಿಂಡಿಗಳು ಅಂತ ತಿಳಿದುಕೊಳ್ಳೋಣ.

1. ಕತ್ತರಿಸಿದ ಸೌತೆಕಾಯಿ
ಸೌತೆಕಾಯಿ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಇದು ಡಯೆಟ್ ಆಹಾರವೂ ಹೌದು. ಸೌತೆಕಾಯಿ ಹೈಡ್ರೇಟಿಂಗ್ ಆಗಿದ್ದು, ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇದು ತೂಕ ಇಳಿಸೋದಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಹೀಗಾಗಿ ತಿಂಡಿ ತಿನ್ನಬೇಕು ಎಂದಾಗಲೆಲ್ಲಾ ಸೌತೆಕಾಯಿ ತಿನ್ನಿ. ಇದ್ರಿಂದ ತೂಕ ಹೆಚ್ಚಿಸಿಕೊಳ್ಳುವ ಅಪಾಯ ಕಡಿಮೆ.
2. ಬೇಯಿಸಿದ ಮೊಟ್ಟೆ
ಬೇಯಿಸದ ಮೊಟ್ಟೆ ಎಂದರೆ ಅನೇಕ ಜನರಿಗೆ ಇಷ್ಟ. ಬೇಯಿಸಿದ ಮೊಟ್ಟೆಗಳು ಪ್ರೋಟೀನ್-ಸಮೃದ್ಧ ತಿಂಡಿಯಾಗಿದ್ದು, ಹಸಿವಾದಾಗ ಇದನ್ನು ತಿನ್ನಬಹುದು. ಇದನ್ನು ತಯಾರಿಸೋದು ಕೂಡ ತುಂಬಾನೇ ಸುಲಭ. ಬೇಯಿಸಿದ ಮೊಟ್ಟೆಯ ಮೇಲೆ ಸ್ವಲ್ಪ ಉಪ್ಪು ಹಾಗೂ ಖಾರ ಹಾಕಿ ತಿನ್ನಬಹುದು.
3. ಹುರಿದ ಕಡಲೆಕಾಯಿ
ಹುರಿದ ಕಡಲೆಯು ಕುರುಕುಲಾದ ಮತ್ತು ಫೈಬರ್-ಭರಿತ ತಿಂಡಿಯಾಗಿದ್ದು, ಇದನ್ನು ಮೆಣಸಿನ ಪುಡಿ, ಜೀರಿಗೆ ಅಥವಾ ಬೆಳ್ಳುಳ್ಳಿ ಹಾಕಿ ಮಾಸಾಲೆ ರೀತಿ ತಯಾರಿಸಿ ತಿನ್ನಬಹುದು. ಈ ರೀತಿ ಮಾಡಿ ತಿಂದರೆ ಮನಸ್ಸಿಗೆ ತೃಪ್ತಿ ಎನಿಸುತ್ತದೆ. ಮತ್ತು ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಫೈಬರ್ ಅನ್ನು ನಿಮ್ಮ ದೇಹಕ್ಕೆ ಒದಗಿಸುತ್ತದೆ.
4. ಗೋಡಂಬಿ, ಪಿಸ್ತಾ, ಬಾದಾಮಿ ತಿನ್ನಿ
ಹಸಿವಾದಾಗ ಸುಮ್ಮನೆ ಕುರುಕಲು ತಿಂಡಿಗಳನ್ನು ತಿನ್ನೋದ್ರ ಬದಲು ಆರೋಗ್ಯಕರವಾದ ಬಾದಾಮಿ, ವಾಲ್‌ನಟ್ಸ್, ಗೋಡಂಬಿ ಅಥವಾ ಪಿಸ್ತಾಗಳನ್ನು ತಿನ್ನಿ. ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಕೊಬ್ಬುಗಳು, ಫೈಬರ್ ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ. ಆದರೆ ಸಿಕ್ಕಾಪಟ್ಟೆ ತಿನ್ನೋದಕ್ಕೆ ಹೋಗಬೇಡಿ. ಜಾಸ್ತಿ ತಿಂದರೆ ತೂಕ ಹೆಚ್ಚಾಗುವ ಸಾಧ್ಯತೆಯಿದೆ.
5. ಮೊಳಕೆ ಬಂದ ಕಾಳುಗಳು
ಮೊಳಕೆ ಬಂದ ಕಾಳುಗಳು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಇವುಗಳು ಪ್ರೋಟೀನ್ ಮತ್ತು ಫೈಬರ್‌ನ ಅದ್ಭುತ ಮೂಲವಾಗಿದೆ. ಮೊಳಕೆಯೊಡೆದ ಕಾಳುಗಳಿಗೆ ಈರುಳ್ಳಿ, ಟೊಮೇಟೊ, ಸೌತೆಕಾಯಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸವನ್ನು ಹಿಂಡಿ ಮಿಶ್ರಣ ಮಾಡಿ ತಿಂದರೆ ತುಂಬಾನೇ ರುಚಿಯಾಗಿರುತ್ತದೆ. ಅಷ್ಟೇ ಅಲ್ಲ, ತೂಕ ಇಳಿಸೋದಕ್ಕೂ ಸಹಾಯಕಾರಿಯಾಗಿದೆ.
ತೂಕ ಇಳಿಸಿಕೊಳ್ಳಬೇಕು ಅಂದುಕೊಳ್ತಿರೋರಿಗೆ ಈ ಆಹಾರಗಳು ತುಂಬಾನೇ ಒಳ್ಳೆಯದು. ಕುರುಕಲು ತಿಂಡಿಗಳನ್ನು ತಿನ್ನೋ ಬದಲು ಈ ಪೌಷ್ಠಿಕಾಂಶಯುಕ್ತ ಆಹಾರಗಳು ತೂಕ ಇಳಿಸೋದಕ್ಕೆ ಸಹಾಯ ಮಾಡೋದು ಮಾತ್ರವಲ್ಲದೇ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

