Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಕ್ಯಾನ್ಸರ್ ರೋಗಿಗಳಿಗೆ ಬದುಕಿನ ಭರವಸೆ ತುಂಬುವ ವ್ಯಕ್ತಿಗಳಿವರು
ಜೂನ್ ತಿಂಗಳ ಮೊದಲ ಭಾನುವಾರವನ್ನು cancer survivor day ಎಂದು ಆಚರಿಸಲಾಗುವುದು. ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಕ್ಯಾನ್ಸರ್ ವಿರುದ್ಧ ಗೆಲ್ಲಬಹುದು ಎಂದು ಆತ್ಮವಿಶ್ವಾಸ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ಕ್ಯಾನ್ಸರ್ ಆಗಿದೆ ಎಂದು ಗೊತ್ತಾದ ತಕ್ಷಣ ತುಂಬಾ ರೋಗಿಗಳ ಮಾನಸಿಕ ಬಲ ಕಡಿಮೆಯಾಗುವುದು. ನಾನು ಸಾಯುತ್ತೇನೆ ಎಂದು ಭಯ ಬೀಳುತ್ತಾರೆ.

ಕ್ಯಾನ್ಸರ್ ಬಂದರೆ ಸಾವು ನಿಶ್ಚಿತ ಎಂದು ಭಯ ಬೀಳಬೇಕಾಗಿಲ್ಲ. ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಿ ಬದುಕಿಗೆ ಮರಳಿರುವ ಅನೇಕ ಸ್ಪೂರ್ತಿ ಕತೆಗಳು ನಮ್ಮ ಮುಂದಿವೆ. ನಾವಿಲ್ಲಿ ಕ್ಯಾನ್ಸರ್ ಗೆದ್ದ ಸೆಲೆಬ್ರಿಟಿಗಳ ಕತೆಯನ್ನು ಇಲ್ಲಿ ಹೇಳಿದ್ದೇವೆ. ಇವರ ಬಗ್ಗೆ ಓದಿದರೆ ನಾವು ಕೂಡ ಕ್ಯಾನ್ಸರ್ ಗೆಲ್ಲಬಹುದು ಎಂಬ ಆತ್ಮವಿಶ್ವಾಸ ಮೂಡಿಸುವಂತಿದೆ ಇವರ ಕತೆಗಳು....
ಮನಿಷಾ ಕೊಯಿರಾಲ
ಮನಿಷಾ ಕೊಯಿರಾಲ ಯಾರಿಗೆ ತಾನೆ ಗೊತ್ತಿಲ್ಲ. ಭಾರತದ ಸಿನಿ ರಂಗದಲ್ಲಿ ಟಾಪ್ ನಟಿಯಾಗಿ ಮೆರೆದವರು. ಇವರಿಗೆ 2012ರಲ್ಲಿ ಗರ್ಭಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಕ್ಯಾನ್ಸರ್‌ನಿಂದ ಸಂಪೂರ್ಣ ರೋಗಮುಕ್ತವಾಗಿರುವ ಮನಿಷಾ ಕೊಯಿರಾಲ ತುಂಬಾ ಚೆನ್ನಾಗಿ ಜೀವನ ನಡೆಸುತ್ತಿದ್ದಾರೆ. ಅವರು "Healed: How cancer gave me a new life, ಎಂಬ ಬುಕ್ ಕೂಡ ಬರೆದಿದ್ದು ಅದರಲ್ಲಿ ನಾನು ಕ್ಯಾನ್ಸರ್‌ನ ಗೆದ್ದು ಹೊಸ ಬದುಕಿಗೆ ಮರಳಲು ಯಾವೆಲ್ಲಾ ಅಂಶಗಳು ಸಹಾಯಾಯಿತು ಎಂಬುವುದಾಗಿ ಕೂಡ ಹೇಳಿದ್ದಾರೆ.
ಸೊನಾಲಿ ಬೇಂದ್ರೆ
2028ರಲ್ಲಿ ಸೊನಾಲಿ ಬೇಂದ್ರೆ ತಮಗೆ 4ನೇ ಹಂತದ ಸ್ತನ ಕ್ಯಾನ್ಸರ್ ಇರುವುದಾಗಿ ಹೇಳಿದ್ದರು. ಆ ಸಮಯದಲ್ಲಿ ತಾನು ಬದುಕನ್ನು ಹೇಗೆ ಸ್ವೀಕರಿಸಿದ್ದೇನೆ ಹಲವು ಸ್ಪೂರ್ತಿದಾಯಕ ಪೋಸ್ಟ್ ಹಾಕುತ್ತಿದ್ದರು. ಈಗ ಅವರು ಕ್ಯಾನ್ಸರ್ ಮುಕ್ತರಾಗಿ ಜೀವನ ನಡೆಸುತ್ತಿದ್ದಾರೆ.
ಸಂಜಯ್ ದತ್
ಸಂಜಯ್ ದತ್ ಅವರಿಗೆ 2020ರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಇವರು ಅನೇಕ ಕೀಮೋಥೆರಪಿಗಳನ್ನು ಮಾಡಿಸಿದ್ದಾರೆ. ಇದೀಗ ಕ್ಯಾನ್ಸರ್ ಗೆದ್ದು ಸಿನಿ ಜಗತ್ತಿನಲ್ಲಿ ಮತ್ತೆ ಬ್ಯುಸಿಯಾಗಿದ್ದಾರೆ.
ಲೀಸಾ ರೇ
ನಟಿ ಲೀಸಾ ರೇಗೆ ಕೂಡ ಅಪರೂಪದ ಅತಿ ಭಯಾನಕ ರಕ್ತ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಅವರು ಕೀಮೋಥೆರಪಿ ಬಳಿಕ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲ್ಯಾಂಟ್ ಮಾಡಿಸಿಕೊಂಡರು. ಆ ಬಳಿಕ ತಮ್ಮ ಆಹಾರಕ್ರಮದ ಕಡೆಗೆ ತುಂಬಾನೇ ಗಮನ ಹರಿಸುವ ಲೀಸಾ ರೇ ಇದೀಗ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ.
ಮಮತಾ ಮೋಹನ್‌ದಾಸ್
ಮಮತಾಮೋಹನ್‌ದಾಸ್ ದಕ್ಷಿಣ ಭಾರತದ ನಟಿ. ಇವರು 2010ರಿಂದ ಕ್ಯಾನ್ಸರ್ ವಿರುದ್ಧ ಹೋರಾಡಿ ಅದರ ಬಳಿಕ ಅಟೋಇಮ್ಯೂನೆ ಕಾಯಿಲೆ ವಿರುದ್ಧ ಹೋರಾಡುತ್ತಿದ್ದಾರೆ. ಕ್ಯಾನ್ಸರ್ ಇವರ ಹಠದ ಮುಂದೆ ಶರಣಾಗಿದೆ.
ಯುವರಾಜ್ ಸಿಂಗ್
ಭಾರತದ ಮಾಜಿ ಕ್ರಿಕೆಟ್‌ಗಾರ ಯುವರಾಜ್ ಸಿಂಗ್ ಅವರಿಗೆ 2011ರಲ್ಲಿ ಅಪರೂಪದ ಶ್ವಾಸಕೋಶದ ಕ್ಯಾನ್ಸರ್ ಉಂಟಾಗಿತ್ತು. ನಂತರ ಅವರು ಹಲವು ಕೀಮೋಥೆರಪಿ ಮಾಡಿಸಿದರು. ಅದಾದ ಬಳಿಕ ಸಂಪೂರ್ಣ ಆರೋಗ್ಯದಿಂದ ಹಲವು ಮ್ಯಾಚ್ ಕೂಡ ಆಡಿದ್ದಾರೆ. ಈಗ ಆರೋಗ್ಯವಂತರಾಗಿದ್ದಾರೆ.
ಇವರೆಲ್ಲಾ ಮನಸ್ಸಿನಲ್ಲಿ ಧೈರ್ಯವಿದ್ದರೆ, ಸೂಕ್ತ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಸೋಲಿಸುವುದು ದೊಡ್ಡ ವಿಷಯವಲ್ಲ ಎಂದು ಸ್ಪೂರ್ತಿ ತುಂಬುವ ವ್ಯಕ್ತಿಗಳು. ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದರೆ ಅವರಿಗೆ ಮಾನಸಿಕ ಧೈರ್ಯ ತುಂಬುವ ಪ್ರಯತ್ನ ಮಾಡಿ, ಅವರಿಗೂ ಸಾವನ್ನು ಸೋಲಿಸುವ ಆತ್ಮವಿಶ್ವಾಸ ಮೂಡಿದರೆ ಕ್ಯಾನ್ಸರ್ ಎಂಬ ಮಹಾಮಾರಿ ಸೋಲಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
