Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಕ್ಯಾಲ್ಸಿಯಂ-ಕಬ್ಬಿಣಾಂಶ ಒಟ್ಟಿಗೆ ಸೇವಿಸಬಾರದು..! ಸೇವಿಸಿದರೆ ಕಾದಿದೆ ಅಪಾಯ!
ನಮ್ಮ ದೇಹಕ್ಕೆ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಅತ್ಯಂತ ಅಗತ್ಯ ಪೋಷಕಾಂಶಗಳಾಗಿವೆ. ಈ ಎರಡು ಪೋಷಕಾಂಶಗಳು ಕೊರತೆಯಾದಾಗ ದೇಹದ ಮೇಲೆ ಪರಿಣಾಮ ಬೀರಲಿದೆ. ಹಲವು ರೀತಿ ಅನಾರೋಗ್ಯಕ್ಕೆ ನಾವು ತುತ್ತಾಗುತ್ತೇವೆ. ಹೀಗಾಗಿ ಇದೆರಡು ಅಂಶಗಳಿರುವ ಆಹಾರಗಳನ್ನು ಸೇವಿಸುವುದು ಅಗತ್ಯವಾಗಿದೆ.
ನಮ್ಮ ದೇಹ ಸರಿಯಾಗಿ ಕೆಲಸ ಮಾಡಬೇಕು ಅಂದರೆ ಅಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಎರಡೂ ಅವಶ್ಯಕ. ಹಿಮೋಗ್ಲೋಬಿನ್ ರಚನೆಯಲ್ಲಿ ಕಬ್ಬಿಣವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅದೇ ರೀತಿ ನಮ್ಮ ದೇಹದಲ್ಲಿರುವ ಅತ್ಯಂತ ಸೂಕ್ಷ್ಮ ಮೂಳೆಯಿಂದ ಹಿಡಿದು ಅತೀ ಗಟ್ಟಿಯಾದ ಮೂಳೆಯ ಆರೋಗ್ಯಕ್ಕೂ ಈ ಕ್ಯಾಲ್ಸಿಯಂ ಅತ್ಯಗತ್ಯ.

ಗರ್ಭಾವಸ್ಥೆಯಲ್ಲಿ, ಹಾಲುಣಿಸುವ ಸಮಯದಲ್ಲಿ ಮತ್ತು ಋತುಬಂಧದ ಸಮಯದಲ್ಲಿ ಹೀಗೆ ಜೀವನದ ವಿವಿಧ ಹಂತಗಳಲ್ಲಿ ನಮಗೆ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶ ಅಗತ್ಯವಾಗಿ ಬೇಕಾಗುತ್ತದೆ. ಆದರೆ ಕೆಲವೊಮ್ಮೆ ನೀವು ಸೇವಿಸುವ ಆಹಾರದಲ್ಲಿ ಈ ಎರಡೂ ಅಂಶಗಳ ಕೊರತೆ ಕಾಣಬಹುದು. ಹೀಗಾದಾಗ ಮಾತ್ರೆಗಳ ಮೂಲಕ ಮೆಡಿಸಿನ್‌ಗಳ ಮೂಲಕ ಈ ಕೊರತೆಯನ್ನು ನೀಗಿಸಬೇಕಾಗುತ್ತದೆ.
ಒಂದು ವೇಳೆ ಈ ಎರಡೂ ಅಂಶಗಳನ್ನು ನೀವು ಒಟ್ಟಿಗೆ ದೇಹಕ್ಕೆ ನೀಡುತ್ತಿದ್ದರೆ, ನೀವು ದೊಡ್ಡ ತಪ್ಪು ಮಾಡುತ್ತಿದ್ದೀರಿ ಎಂದರ್ಥ, ಏಕೆಂದರೆ ಕಬ್ಭಿಣಾಂಶ ಹಾಗೂ ಕ್ಯಾಲ್ಸಿಯಂ ಒಟ್ಟಿಗೆ ತೆಗೆದುಕೊಳ್ಳುವುದು ಹಾನಿಕಾರಕ ಎಂಬುದು ನಿಮಗೆ ತಿಳಿದಿದೆಯೇ.?
ಕ್ಯಾಲ್ಸಿಯಂ ಸೇವಿಸಿದ ಬಳಿಕ ಕಬ್ಬಿಣಾಂಶ ಇರುವ ಸ್ತು ನಿಮ್ಮ ದೇಹಕ್ಕೆ ಸೇರಿದರೆ ಆ ಕಬ್ಬಿಣಾಂಶ ಹೀರಿಕೊಳ್ಳುವಿಕೆಯನ್ನು ಶೇ.40 ರಿಂದ ಶೇ.60 ರಷ್ಟು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಆದ್ದರಿಂದ, ಕ್ಯಾಲ್ಸಿಯಂ ಪೂರಕಗಳನ್ನು ಮತ್ತು ಕಬ್ಬಿಣದ ಪೂರಕಗಳೊಂದಿಗೆ ಕ್ಯಾಲ್ಸಿಯಂ ಭರಿತ ಆಹಾರಗಳನ್ನು ತಪ್ಪಿಸುವುದು ಉತ್ತಮವಾಗಿದೆ.
ನೀವು ಕಬ್ಬಿಣಾಂಶಯುಕ್ತ ಮಾತ್ರೆ ಸೇವಿಸುತ್ತಿದ್ದರೆ ಬಹುಪಾಲು ಅದನ್ನು ಊಟದ ಮುನ್ನ ಸೇವಿಸಲು ಹೇಳುತ್ತಾರೆ. ಏಕೆಂದರೆ ಖಾಲಿ ಹೊಟ್ಟೆಯಲ್ಲಿ ಕಬ್ಬಿಣವು ಉತ್ತಮವಾಗಿ ಹೀರಲ್ಪಡುತ್ತದೆ. ಆದ್ದರಿಂದ, ನೀವು ಊಟಕ್ಕೆ ಮುಂಚಿತವಾಗಿ ಅವುಗಳನ್ನು ತೆಗೆದುಕೊಳ್ಳಬಹುದು. ಅಲ್ಲದೆ, ಕಬ್ಬಿಣದ ಪೂರಕಗಳು ನಿಮ್ಮ ಜೀರ್ಣಕಾರಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ನೀವು ಕಬ್ಬಿಣಾಂಶವನ್ನು ತೆಗೆದುಕೊಳ್ಳುತ್ತಿದ್ದರೆ, ಹಾಲು, ಚೀಸ್, ಮೊಸರು, ಪಾಲಕ್, ಚಹಾ, ಕಾಫಿ ಮತ್ತು ಧಾನ್ಯಗಳನ್ನು ಸೇವಿಸುವ ಮೊದಲು ಕನಿಷ್ಠ ಎರಡು ಗಂಟೆಗಳ ಅಂತರವನ್ನು ಕಾಪಾಡಿಕೊಳ್ಳಬೇಕು. ಕಬ್ಬಿಣಾಂಶಯುಕ್ತ ಪೂರಕಗಳನ್ನು ತೆಗೆದುಕೊಂಡ ನಂತರ ನೀವು ಕೆಲವು ಗಂಟೆಗಳ ಕಾಲ ಆಂಟಿ ಆಸಿಡೆಂಟ್‌ಗಳನ್ನು ಸಹ ಸೇವಿಸಬಾರದು.
ಕಬ್ಬಿಣದ ಕೊರತೆಯನ್ನು ಹೊಂದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಸರಿಯಾಗಿ ಗುರುತಿಸಿ. ನಿಮಗೆ ಕೊರತೆಯಿದ್ದರೆ ವೈದ್ಯರು ಕಬ್ಬಿಣದ ಪೂರಕಗಳನ್ನು ಶಿಫಾರಸು ಮಾಡಬಹುದು. ಆದರೆ ನಿಮ್ಮ ಆಹಾರದಲ್ಲಿ ಬೀಜಗಳು, ಮಸೂರ, ಬೀನ್ಸ್, ಪಾಲಕ, ಧಾನ್ಯಗಳಂತಹ ಕಬ್ಬಿಣಾಂಶಯುಕ್ತ ಆಹಾರವನ್ನು ಸೇರಿಸುವ ಮೂಲಕ ಕೊರತೆಯ ಅಪಾಯವನ್ನು ನೀವು ತಡೆಯಬಹುದು.
ಇತ್ತ ಕ್ಯಾಲ್ಸಿಯಂ ಕೊರತೆಯಾಗದಂತೆ ನೋಡಿಕೊಳ್ಳಲು ನೀವು ಹಾಲು, ಮೊಸರು, ಚೀಸ್, ತೊಗರಿ ಬೇಳೆ, ಬ್ರೊಕೊಲಿ, ಬಾದಾಮಿ, ಪಾಲಕ್, ಖರ್ಜೂರ, ಆಲೂಗಡ್ಡೆ, ಎಳ್ಳು ಬೀಜ, ಮಜ್ಜಿಗೆ ಇತ್ಯಾದಿಗಳು ಕ್ಯಾಲ್ಸಿಯಂನ ಅಗತ್ಯ ಮೂಲಗಳಾಗಿವೆ. ಇವು ಮೂಳೆಗಳ ಬಲವನ್ನು ಹೆಚ್ಚಿಸುತ್ತವೆ.
ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶ ಕೊರತೆಯಿಂದ ಏನಾಗುತ್ತದೆ?
ದೇಹದಲ್ಲಿ ಕ್ಯಾಲ್ಸಿಯಂ ಕೊರತೆತಾದರೆ ಕೀಲು ನೋವು, ಚರ್ಮ, ಉಗುರು ಸಮಸ್ಯೆ ಹಾಗೂ ವಿಪರೀತವಾಗಿ ಕೂದಲು ಉದುರುವಿಕೆಗೆ ಕಾರಣವಾಗಲಿದೆ. ಇದರ ಜೊತೆಗೆ ದೇಹದಲ್ಲಿ ಸಮತೋಲನ ಕಳೆದುಕೊಳ್ಳುತ್ತದೆ.
ಇನ್ನೊಂದೆಡೆ ಕಬ್ಬಿಣಾಂಶದ ಕೊರತೆಯಾದರೆ ಮೊದಲು ಚರ್ಮದ ಮೇಲೆ ಹಾನಿಯಾಗಲು ಆರಂಭಿಸುತ್ತದೆ. ಸುಕ್ಕು ಗಟ್ಟುವಿಕೆ, ಪಾದಗಳಲ್ಲಿ ತುರಿಕೆ ಉಂಟಾಗುವುದು ಚರ್ಮದ ಸೋಂಕು ಉಂಟಾಗುವುದು ಸಂಭವಿಸಲಿದೆ. ಕೆಂಪು ರಕ್ತ ಕಣಗಳಲ್ಲಿನ ಹಿಮೋಗ್ಲೋಬಿನ್ ರಕ್ತಕ್ಕೆ ಅದರ ಬಣ್ಣವನ್ನು ನೀಡುತ್ತೆ. ಆದ್ದರಿಂದ, ಕಡಿಮೆ ಕಬ್ಬಿಣದ ಮಟ್ಟ ಅಥವಾ ಕೊರತೆಯಿಂದಾಗಿ, ರಕ್ತದ ಬಣ್ಣವು ಕೆಂಪಾಗಿರುವುದಿಲ್ಲ. ಕಣ್ಣಿನಲ್ಲಿ ರಕ್ತದ ಕೊರತೆ ಉಂಟಾದಾಗ ಕಣ್ಣಿನ ಬಣ್ಣ ಬದಲಾಗಿರುತ್ತೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
