Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ರಾತ್ರಿ ಊಟದ ನಂತರ ಹಸಿವಾದ್ರೆ ಯಾವ ಆಹಾರ ಸೇವಿಸಬೇಕು? ಸೇವಿಸಬಾರದು?
ರಾತ್ರಿ ಊಟದ ನಂತರ ಸಾಮಾನ್ಯವಾಗಿ ನಾವು ಮಲಗುತ್ತೇವೆ. ಆನಂತರ ಏನೇ ತಿನ್ನುವುದಿದ್ದರೂ ಕೂಡ ಅದು ಬೆಳಗ್ಗಿನ ಉಪಹಾರ ಅಷ್ಟೇ. ಆದರೆ ಕೆಲವರಿಗೆ ಊಟದ ನಂತರ ಹಸಿವಾಗೋದಕ್ಕೆ ಶುರುವಾಗುತ್ತೆ. ರಾತ್ರಿ ತಡವಾಗಿ ಮೊಬೈಲ್ ಅಥವಾ ಟಿವಿ ನೋಡ್ತಿರ್ಬೇಕಾದ್ರೆ ಹಸಿವಾಗುತ್ತೆ ಅಂತ ಕೈಗೆ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತೇವೆ.
ಆದರೆ ಅದು ಆರೋಗ್ಯಕ್ಕೆ ಒಳ್ಳೆಯದಾ ಅನ್ನೋದ್ರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ನಿಮಗೊತ್ತಾ ಸೂರ್ಯಾಸ್ತದ ನಂತರ ನಾವು ಯಾವುದೇ ರೀತಿ ಹೆಚ್ಚಿನ ಕ್ಯಾಲೋರಿ ಇರೋ ಆಹಾರಗಳನ್ನು ಸೇವಿಸಬಾರದಂತೆ. ಅಷ್ಟಕ್ಕು ರಾತ್ರಿ ಹಸಿವಾದ ಸಮಯದಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು? ಸೇವಿಸಬಾರದು ಅನ್ನೋದನ್ನು ತಿಳಿಯೋಣ.

ರಾತ್ರಿ ಹಸಿವಾದಾಗ ಈ ಆಹಾರಗಳನ್ನು ಸೇವಿಸಬಹುದು
1. ಮೊಸರು
ರಾತ್ರಿ ಹಸಿವಾದಾಗ ಮೊಸರು ತಿನ್ನೋದು ಒಂದು ಉತ್ತಮ ಆಯ್ಕೆಯಾಗಿದೆ. ಇದು ಕರುಳು-ಸ್ನೇಹಿ ಪ್ರೋಬಯಾಟಿಕ್‌ಗಳು ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸುತ್ತದೆ. ಇನ್ನೂ ಮೊಸರಿನ ಜೊತೆಗೆ ಚೆರ್ರಿ ಹಣ್ಣುಗಳನ್ನು ಒಟ್ಟಾಗಿ ಸೇವಿಸಬಹುದು.
2. ವಾಲ್ನಟ್
ವಾಲ್ನಟ್ ನಲ್ಲಿ ಆರೋಗ್ಯಕರ ನಿದ್ರೆಯನ್ನು ಉತ್ತೇಜಿಸುವ ಸಂಯುಕ್ತವಾದ ಮೆಲಟೋನಿನ್ ಅಂಶವಿದೆ. ಹೀಗಾಗಿ ರಾತ್ರಿ ಹಸಿವಾದರೆ ಯಾವುದೇ ಭಯ ಇಲ್ಲದೇ ವಾಲ್ನಟ್ ತಿನ್ನಬಹುದು. ವಾಲ್ನಟ್ ನಲ್ಲಿ ಮೆಗ್ನೀಸಿಯಮ್ನಲ್ಲಿ ಸಮೃದ್ಧವಾಗಿದೆ. ಇದು ನರಗಳ ಚಟುವಟಿಕೆಯನ್ನು ಶಾಂತಗೊಳಿಸಲು ಮತ್ತು ಆರೋಗ್ಯಕರ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
3. ಪಾಪ್ ಕಾರ್ನ್
ಪಾಪ್ ಕಾರ್ನ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆದ್ರೆ ಪಾಪ್ ಕಾರ್ನ್ ಕರಿಯುವಾಗ ಅದಕ್ಕೆ ಬೆಣ್ಣೆ ಅಥವಾ ಉಪ್ಪನ್ನು ಸೇರಿಸಬೇಡಿ. ಅದರ ಬದಲಾಗಿ ಸ್ವಲ್ಪ ಎಣ್ನೆ ಸೇರಿಸಿ ಅದನ್ನು ತಿನ್ನಿ. ಪಾಪ್‌ಕಾರ್ನ್ ಫೈಬರ್‌ನಲ್ಲಿ ಸಮೃದ್ಧವಾಗಿದೆ ಮತ್ತು ಬೆಳಿಗ್ಗೆ ತನಕ ನಿಮಗೆ ಹಸಿವಾಗೋದಿಲ್ಲ.
ರಾತ್ರಿ ಹಸಿವಾದಾಗ ಈ ಆಹಾರಗಳನ್ನು ಸೇವಿಸಬೇಡಿ
1. ಪಿಜ್ಜಾ
ರಾತ್ರಿ ಹಸಿವಾದ ಸಮಯದಲ್ಲಿ ಹೆಚ್ಚಿನವರ ಮೊದಲ ಆಯ್ಕೆ ಅಂದ್ರೆ ಅದು ಪಿಜ್ಜಾ. ಅದ್ರಲ್ಲೂ ಮಕ್ಕಳು ಹಾಗೂ ಯುವಕರಿಗಂತೂ ಪಿಜ್ಜಾ ಪ್ರಿಯವಾದ ಆಹಾರ. ರಾತ್ರಿ ಸಮಯದಲ್ಲಿ ಪಿಜ್ಜಾ ತಿನ್ನೋದು ಒಳ್ಳೆಯದಲ್ಲ. ಇದ್ರಿಂದ ಹೊಟ್ಟೆನೋವು, ಅಸ್ವಸ್ಥತೆ ಮತ್ತು ಹೊಟ್ಟೆ ಉಬ್ಬುವುದು ಈ ರೀತಿ ಸಮಸ್ಯೆ ಉಂಟಾಗುತ್ತದೆ. ಇನ್ನೂ ಚೀಸ್ ಹಾಕಿರೋದ್ರಿಂದ ಇದ್ರಲ್ಲಿ ಕೊಬ್ಬಿನ ಅಂಶ ಅಧಿಕವಾಗಿದ್ದು, ನಮ್ಮ ತೂಕ ಹೆಚ್ಚಾಗಲೂ ಕಾರಣವಾಗುತ್ತದೆ.
2. ಚಿಪ್ಸ್
ಮನೆಯಲ್ಲಿ ಚಿಪ್ಸ್ ಪ್ಯಾಕೆಟ್ ಅಂತೂ ಇದ್ದೇ ಇರುತ್ತೆ. ಹೆಚ್ಚಿನವರು ಹಸಿವಾದಾಗ ಚಿಪ್ಸ್ ಪ್ಯಾಕೆಟ್ ಹಿಡ್ಕೊಂಡು ಕೂತ್ಕೋತ್ತಾರೆ. ಟಿವಿ ನೋಡುತ್ತಾ ಎಷ್ಟು ಚಿಪ್ಸ್ ಹೊಟ್ಟೆಯೊಳಗಡೆ ಹೋಯ್ತು ಅನ್ನೋದೇ ಗೊತ್ತಾಗೋದಿಲ್ಲ. ಚಿಪ್ಸ್ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದ್ರಲ್ಲಿ ಉಪ್ಪು ಹಾಗೂ ಕಾರ್ಬೋಹೈಡ್ರೇಟ್ ಪ್ರಮಾಣ ಅಧಿಕವಾಗಿರುತ್ತದೆ. 3 ಕಪ್ ಪಾಪ್‌ಕಾರ್ನ್‌ನಲ್ಲಿ ಇರುವ ಕ್ಯಾಲೋರಿಗಳು 12 ಚಿಪ್ಸ್‌ನಲ್ಲಿ ಇರುತ್ತೆ. ಹೀಗಾಗಿ ಚಿಪ್ಸ್ ತಿನ್ನೋದನ್ನು ಆದಷ್ಟು ಕಡಿಮೆ ಮಾಡಿ.
ಇತ್ತೀಚಿಗೆ ಜನ ಜೀವನ ಶೈಲಿ ಚೆನ್ನಾಗಿ ಇಲ್ಲದೇ ಇರೋದ್ರಿಂದ ರೋಗಗಳು ಮನುಷ್ಯರನ್ನು ಬೇಗನೆ ಭಾದಿಸಿ ಬಿಡುತ್ತೆ. ಹೀಗಾಗಿ ಆರೋಗ್ಯಕರ ಆಹಾರಗಳನ್ನು ಸೇವಿಸೋದ್ರ ಬಗ್ಗೆ ಗಮನ ಕೊಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

